Friday, March 8, 2024

Shivaratri -Dr.Prakash Khade














 ಶಿವರಾತ್ರಿ ವಿಶೇಷ ಲೇಖನ   :


ಜನಪದರ ಹಾಡುಗಳಲ್ಲಿ ಶಿವರಾತ್ರಿ : 


-ಡಾ.ಪ್ರಕಾಶ ಗ. ಖಾಡೆ, 

  ಬಾಗಲಕೋಟ ಮೊ. 9845500890



   ಭಾರತೀಯ ಸಂಸ್ಕøತಿಯ ಬೇರುಗಳು ನಮ್ಮ ಜನಪದರ ನಂಬುಗೆ ಮತ್ತು ಆಚರಣೆಗಳ ಮೇಲೆ ನಿಂತಿವೆ. ಆರಾಧನಾ ಸಂಸ್ಕøತಿಯ ಜನಪದರು ಋತುಮಾನಕ್ಕೆ ತಕ್ಕಂತೆ ಹಬ್ಬಗಳನ್ನು ಆಚರಿಸುತ್ತಾ ಮನಸ್ಸಿನ ಮತ್ತು ದೇಹದ ಆರೋಗ್ಯಕ್ಕೆ ಸಾಕ್ಷಿಯಾಗಿದ್ದಾರೆ. ಜನಪದರ ಹಬ್ಬಗಳು ಸಹಬಾಳ್ವೆ, ಸಮಾನತೆ ಮತ್ತು ಸೌಹಾರ್ದತೆಗೆ ಮೊದಲಾಗಿವೆ. ಮನುಷ್ಯನ ಚಲನಶೀಲ ಮತ್ತು ಕ್ರಿಯಾಶೀಲ ದೇಹ ಮನಸ್ಸುಗಳ ಜೀವಂತಿಕೆಗೆ ಒಂದರ ಮೇಲೊಂದು ಬರುವ ಹಬ್ಬಗಳೇ ಆಧಾರವಾಗಿವೆ. ಜನಪದರ ಹಬ್ಬಗಳ ಆಚರಣೆಯಲ್ಲಿ ಶಿವರಾತ್ರಿಯೂ ಒಂದು. ಋತುಮಾಕ್ಕನುಗುಣವಾಗಿ ಹಬ್ಬಗಳು ರೂಪ ಪಡೆದುಕೊಂಡಿವೆ. ಚಳಿಗಾಲ ಮುಗಿದು ಸುಡು ಸುಡು ಬಿಸಿಲು ಆರಂಭವಾಗುವ ಹೊತ್ತು ,ಸುಗ್ಗಿ ಮುಗಿಸಿ ನಮ್ಮ ರೈತಾಪಿ ಜನರ ಬಿಡುವಾಗಿರುವ ಸಮಯ. ಕೈಯಲ್ಲಿ ಒಂದಿಷ್ಟು ಕಾಸು. ಇದೇ ಹೊತ್ತಿಗೆ ವಸಂತನ ಆಗಮನದ ವಾಸನೆ, ಬೇವಿನ ಹೂದಳಗಳಿಂದ ಹೊರಹೊಮ್ಮಿದ ಘಳಿಗೆ. ಎಲೆ ಉದುರಿ ಬರಡಾದ ಗಿಡ ಮರಗಳಲ್ಲಿ ಹೊಸ ಚಿಗುರಿನ ಉದಯ. ಮೊಗ್ಗೆ, ಹೂವು, ಮಿಡಿಗಳನ್ನು ಹೊತ್ತ ವನ ಸಂಕುಲ, ಕೋಗಿಲೆಯು ಹೊಸ ಚಿಗುರು ಮೆದ್ದು ಕಂಠ ಪರಿಶುದ್ದವಾಗಿ ಪಂಚÀಮ ಸ್ವರದಲ್ಲಿ ಹಾಡುವ ಸುಯೋಗ, ಹೊಸ ದುಪ್ಪಳ ತೊಟ್ಟ ಹಕ್ಕಿ ಪಕ್ಕಿಗಳ ಚೆಲವು, ಸಕಲ ಸೃಷ್ಟಿಯೇ ಪ್ರಾಯ ತುಂಬಿ ಭೂರಮೆ ಹಸಿರು ತೊಡುವ ಹೊತ್ತಿಗೆ ಶಿವರಾತ್ರಿ ಹಬ್ಬ ಆಗಮಿಸುತ್ತದೆ. ಇದು ಶಿವಯೋಗದ ಪುಣ್ಯದಿನ.


ಶಿವಶಿವ ಅಂದರ ಸಿಡಿಲೆಲ್ಲ ಬಯಲಾಗಿ

ಕಲ್ಲ ಬಂದೆರಗಿ ಕಡಿಗಾಗಿ-ಎಲೆ ಮನವೆ

ಶಿವನೆಂಬ ಶಬುದ ಬಿಡಬ್ಯಾಡ.


    ಭರತಖಂಡದ ಎಲ್ಲ ಭಾಗಗಳಲ್ಲಿಯೂ ಆಚರಿಸಲ್ಪಡುವ ಹಬ್ಬ. ಈ ಹಬ್ಬದಂದು ದೇಶದ ತುಂಬೆಲ್ಲಾ  ಶಿವನಿಗೆ ಅಭಿಷೇಕ ಮಹೋತ್ಸವಗಳು ನಡೆಯುವವು. ಶಿವನಿಗೆ ನಮ್ಮ ಜನಪದರು ‘ಕೊಕ್ಕಾ ಬತ್ತಿ'ಗಳ ಸರಮಾಲೆಯನ್ನು, ಶಿವಪೂಜೆ ಮಾಡಿ ಬೆಳಗುವರು.


ಕೊಕ್ಕಾ ಬತ್ತಿ, ಕ್ವಾಡಾ ಬತ್ತಿ

ನಾಡಿಗೆಲ್ಲಾ ಒಂದೇ ಬತ್ತಿ.


ಇದೇ ಆ ಜನರು ಬೆಳಗುವ ಶಿವದೀಪ. ಶಿವ ತ್ರಿಮೂರ್ತಿಗಳಲ್ಲಿ ಒಬ್ಬ. ವಿಷ್ಣು, ಬ್ರಹ್ಮರು ಸೃಷ್ಠಿ ಸ್ಥಿತಿಯ ದೇವತೆಗಳಾದರೆ ಲಯದ ದೇವತೆ ಶಿವ. ಶಿವನ ಪ್ರಧಾನ ಲಕ್ಷಣವೆಂದರೆ ತಾಮಸಗುಣ. ಶಿವನಿಗೆ ಗಂಗಾ ಮತ್ತು ಪಾರ್ವತಿಯರೆಂಬ ಇಬ್ಬರು ಹೆಂಡತಿಯರು. ಶಿವ ತನ್ನ ಶಿರದಲ್ಲಿ ಗಂಗೆಯನ್ನು ಹೊಂದಿದ್ದಾನೆ. ಪಾರ್ವತಿಯ ತಪೋ ನಿಷ್ಠೆಗೆ ಮನಸೋತ ಶಿವನು ಅವಳನ್ನು ಮದುವೆಯಾದ ಬಳಿಕ ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡನೆಂಬುದೂ, ಭಗೀರಥನ ತಪಸ್ಸಿನ ಫಲದಿಂದ ಗಂಗೆ ದೇವಲೋಕದಿಂದ ಭೂಮಿಗೆ ಧುಮುಕಲಾರಂಭಿಸಿದಾಗ ಆ ವೇಗವನ್ನು ತಾಳಲು ಭೂಮಿ ಅಸಮರ್ಥಳೆಂಬುದನ್ನು ಗ್ರಹಿಸಿದ ಶಿವ ದೃಢವಾಗಿ ನಿಂತು ಆಕೆಯನ್ನು ತನ್ನ ಜಟಾ ಕಲಾಪದೊಳಗೆ ತಾಳಿಕೊಂಡನೆಂಬುದು ಪುರಾಣದಲ್ಲಿ ಪ್ರಸಿದ್ದವಾಗಿದೆ.

ಆರತಿ ಬೆಳಗೂವೆ ಅಖಂಡ ಗುರುವಿಗೆ

ಪಾರ್ವತಿದೇವಿ ರಮಣನಿಗೆ

ಮೂರು ಲೋಕಕೆ ಕಾರ್ತನನೀಸುವ

ಸಾಂಬ ಸದಾಶಿವ ಶಂಕರಗೆ.

 

ಎಂದು ಪಾರ್ವತಿಯನ್ನು ಉಲ್ಲೇಖಿಸಿ ಹಾಡಿದರೆ,


ದೇಶ ದೇಶ ತಿರುಗಿ ನಮ್ಮ ಶಿವ

ಪಾತಾಳ ಗಂಗೆ ತಂದ

ಪಾತಾಳದ ಗಂಗೆ ಬಾಯಂದು ಕರುದಾರೆ

ಜ್ಯೋತಿ ಬೆಳಗುವೆನು ನಾನುಂದಾರತಿ ಬೆಳಗುವೆನು.


     ಎಂದು ಗಂಗೆಯನ್ನು ಆರಾಧಿಸುತ್ತಾರೆ. ಸವತಿ ಮತ್ಸರ ದೇವರನ್ನೂ ಬಿಟ್ಟಿಲ್ಲ. ಗಂಗೆ ಗೌರಿಯರ ಜಗಳ ಇದ್ದದ್ದೆ, ಗಂಗೆ ಕೈ ಬೀಸಿ ಮಳೆರಾಯನನ್ನು ಕರೆಯುತ್ತಾಳೆ. ಗಂಗೆ ಮೊಳಕಾಲುದ್ದ ನೀರಿನಲ್ಲಿ ನಿಂತರೆ, ಗೌರಿ ಕೊಚ್ಚಿ ಹೋಗುತ್ತಾಳೆ. ಬೇಟೆಗೆ ಹೋಗಿದ್ದ ಶಿವ ಬರುತ್ತಾನೆ, ಗಂಗೆಯನ್ನು ಬೇಸ್ತರ ಮನೆಗೆ ಕಳಿಸುತ್ತಾ 'ವರ್ಷಕ್ಕೊಮ್ಮೆ ಮಾರಿ ಹಬ್ಬದಲ್ಲಿ ನೀನು ಬಾ, ನಡು ಊರಲ್ಲಿ ನಿನ್ನ ಪೂಜಿಸುತ್ತಾರೆ.' ಎಂದರೆ ಗೌರಿಗೆ ‘ಬ್ರಾಹ್ಮಣರ ಮನೆಯಲ್ಲಿ ಸೇರಿಕೊ, ವರ್ಷಕ್ಕೊಮ್ಮೆ ಗೌರಿ ಹಬ್ಬದಲ್ಲಿ ನೀನು ಬಾ , ಮಲ್ಲಿಗೆ ಹೂವಿನ ಪೂಜೆ ನಿನಗೆ ಮಾಡುತ್ತಾರೆ’ ಎಂದು ಹೇಳಿ ಕಳಿಸುತ್ತಾನೆ. ನಿಮ್ಮೀಬ್ಬರ ಮಧ್ಯದಲ್ಲಿ ಶಿವರಾತ್ರಿ ಹಬ್ಬ, ಆ ಹಬ್ಬದಲ್ಲಿ ನಾನು ಬರುತ್ತೀನಿ ಎಂದು ಶಿವ ಮೂವರಿಗೂ ಮೂರು ಹಬ್ಬ ನೇಮಿಸುತ್ತಾನೆ. 

       ಈ ಹಬ್ಬಕ್ಕೆ ಧಾರ್ಮಿಕ ಮಹತ್ವವು ಇದೆ.  ಬೆಳುವಲದಲ್ಲಿ ಬೇಸಗೆಯು ದಿನ ದಿನಕ್ಕೆ ಬೆಳೆಯ ಹತ್ತಲು ನಮ್ಮ ರೈತಾಪಿ ಜನ ಬಿಸಿಲಲ್ಲಿ ದುಡಿಯಲಾರದೆ ಶಿವ ಶಿವನೆಂದು ಊಟ ಮಾಡಿ ಮನೆಯಲ್ಲಿಯೇ ಉಳಿಯುವರು. ಸುತ್ತೆಲ್ಲ ಶಿವಭಜನೆ ನಡೆದು ನಾಡೇ 'ಶಿವಲೋಕ'ವೆಂಬ ಭಾವನೆ ಬರುವುದು. ಶಿವಯೋಗದ ದಿವಸ ಶಿವಪೂಜೆ ಮಾಡಿ ಕೈಲಾಸವನ್ನು ಪಡೆದ ಶಿವಶರಣರ ಕಥೆಗಳನ್ನು ಕೇಳಿದ ನಮ್ಮ ಜನಪದರು ಶಿವಶರಣರನ್ನು ಕುರಿತು ಹಾಡಿದ್ದಾರೆ.


ಬೇಡ ಬೇಟೆಗೆ ಹೋಗಿ, ಬಿಲ್ಲಪತ್ತರಿಕೊಯ್ದು

ಬೇಡಕನ್ನಯ್ಯ ಶಿವಪೂಜೆ| ಮಾಡಿದರ

ನಾಡೊಳಗ ನೋಡು ಶಿವರಾತ್ರಿ.


   ಶಿವಶರಣರ ಪ್ರಭಾವದಿಂದಲೇ ನಾಡಿನೊಳಗೆ ಬೈಗು ಬೆಳಗಾಗಿ ವರುಷ ವರುಷಕ್ಕೆ ಶಿವರಾತ್ರಿಯು ಜನಪದಕ್ಕೆ ಬರುವುದೆಂದು ಜನಪದರು ಹಂತಿಯಲ್ಲಿ ಮನತುಂಬಿ ಹಾಡಿದ್ದಾರೆ. ಬೇಡರ ಕನ್ನಯ್ಯನು ಪಡೆದ ಶಿವಯೋಗವನ್ನೂ, ಬಿಲ್ವಪತ್ರೆಯ ಮಹತ್ವವನ್ನು ಹಾಡಿನಲ್ಲಿ ತೋರಿಸಿದ್ದಾರೆ. 


ಕುಂಬಾರ ಗುಂಡಯ್ಯ ತುಂಬಿ ತಿಗರಿಗೆ ಕೆಸರ

ಶಂಬು ಹರನೆಂದು ತಿರುಗಿಸಲು-ಶಿವ ಕುಣಿದ

ಹಂಬಲಿಸಿ ಜಂಗ ಕಟಿಗೊಂಡು.


ಕಾಯಕ ನಿರತ ಶರಣರು ತಮ್ಮ ನಿತ್ಯ ಕಾಯಕದಲ್ಲಿ ಶಿವನನ್ನು ಆಹ್ವಾನಿಸಿಕೊಂಡಿದ್ದಾರೆ. ಶಿವನನ್ನು ಪರಿಪರಿಯಾಗಿ ತಮ್ಮ ರಚನೆಗಳಲ್ಲಿ ಶರಣರು ಹಾಡಿ ಹೊಗಳಿದ್ದಾರೆ.


ಶಿವನ ಹಲವು ರೂಪಗಳು.

  

        ಆರಾಧ್ಯ ದೈವ ಶಿವನನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಶಿವ ಕೆಂಪು ಬಣ್ಣವುಳ್ಳ ದಟ್ಟವಾದ ಜಡೆಗಳನ್ನು ಹೊಂದಿದ್ದಾನೆ. ಆದ್ದರಿಂದ ಇವನನ್ನು ಕಪರ್ದಿ ಎಂದು ಕರೆಯಲಾಗಿದೆ. ಶಿವನನ್ನು ಅಗ್ನಿಯೆಂದೂ ಕರೆಯಲಾಗಿದೆ. ಈತನಿಗೆ ಮೂರು ಕಣ್ಣುಗಳು, ಹಣೆಗಣ್ಣು ಬೆಂಕಿಯಿಂದ ಕೂಡಿದೆ, ಶಿವನನ್ನು ತ್ರಿನೇತ್ರ, ಪಾಲನೇತ್ರ, ಅಗ್ನಿಲೋಚನ ಎಂಬ ಮುಂತಾದ ಹೆಸರುಗಳಿಂದಲೂ ಕರೆಯಲಾಗಿದೆ. 


ಅಳುವ ಕಂದನ ತುಟಿಯು ಹವಳದ ಕುಡಿಹಂಗ

ಕುಡಿಹುಬ್ಬು ಬೇವಿನೆಸಳಂಗ-ಕಣ್ಣೋಟ

ಶಿವನ ಕೈಯಲಗು ಹೊಳದಂಗ


      ಎನ್ನುವಂತೆ ಶಿವ ಯಾವಾಗಲೂ ತನ್ನ ಕೈಯಲ್ಲಿ ಶೂಲವನ್ನು ಹಿಡಿದಿರುತ್ತಾನೆ. ಮತ್ತೊಂದು ಪಿನಾಕ ಎಂಬ ಆಯುಧವನ್ನು ಹಿಡಿದಿರುವುದರಿಂದ ಶಿವನಿಗೆ ಪಿನಾಕಪಾಣಿ ಎಂಬ ಹೆಸರು ಬಂದಿದೆ. ಶಿವ ಮತ್ತು ಶಿವನ ವಾಹನವಾದ ವೃಷಭ ಇಬ್ಬರೂ ಬಿಳಿಯ ಬಣ್ಣದವರಾಗಿದ್ದಾರೆ. ಶಿವನನ್ನು ಎರಡು, ನಾಲ್ಕು, ಎಂಟು ಮತ್ತು ಹತ್ತು ಕೈಗಳನ್ನುಳ್ಳವನು ಎಂದು ವರ್ಣಸಲಾಗಿದೆ. ಶಿವ ತನ್ನ ಪಿನಾಕದ ಜೊತೆಗೆ ಕಟ್ವಾಂಗ ಎಂಬ ಗದೆ, ಅಜಗವ ಎಂಬ ಧನಸ್ಸು, ಒಂದು ಜಿಂಕೆ, ಮಣಿ, ಬುರುಡೆ, ಢಮರುಗ ಮುಂತಾದ ಪವಿತ್ರವಾದ ವಸ್ತುಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದಾನೆ. ಗಂಗಾ ಮತ್ತು ಚಂದ್ರರು ಆ ಶಿವನ ಶಿರದಲ್ಲಿ ನೆಲೆಸಿರುವುದರಿಂದ ಗಂಗಾಧರ ಮತ್ತು ಚಂದ್ರಚೂಡ ಎಂಬ ಹೆಸರುಗಳು ಬಂದಿವೆ. ಮನುಷ್ಯರ ತಲೆಬುರುಡೆಗಳ ಸರಮಾಲೆಯನ್ನು ತನ್ನ ಶಿರದ ಸುತ್ತಲು ಧರಿಸಿಕೊಂಡಿದ್ದಾನೆ. ಶಿವ ಹುಲಿಯ ಚರ್ಮವನ್ನು ಧರಿಸಿ, ಆನೆಯ ಚರ್ಮವನ್ನು ಹೊದ್ದುಕೊಂಡಿದ್ದಾನೆ. ಎಲ್ಲ ಅಂಗಾಂಗಗಳ ಮೇಲೂ ಆಭರಣದ ರೀತಿಯಲ್ಲಿ   ಸರ್ಪಗಳು ಸುತ್ತಿಕೊಂಡಿವೆ. ಸರ್ಪಗಳನ್ನು ಕಿವಿಯಲ್ಲಿ ಧರಿಸಿದ್ದರಿಂದ ಶಿವನನ್ನು ನಾಗಕುಂಡಲ ಎಂದು ಕರೆಯಲಾಗಿದೆ.


ವಿದೇಶಗಳಲ್ಲೂ ಶಿವಾರಾಧನೆ.


       ಭಾರತವಲ್ಲದೆ ವಿದೇಶಗಳಲ್ಲೂ ಶಿವನ ಆರಾಧನೆ ನಡೆಯುತ್ತಾ ಬಂದಿದೆ. ಮೂಲತಃ ಕೃಷಿಕರು, ಪಶುಸಂಗೋಪನೆಯಲ್ಲಿ ತೊಡಗಿರುವ ನಮ್ಮ ಬುಡಕಟ್ಟು ಜನಾಂಗದಲ್ಲಿ   ಶಿವನನ್ನು ಪೂಜಿಸುವಲ್ಲಿ ನಾನಾ ರೀತಿಯ ವಿಧಾನಗಳನ್ನು ಅನುಸರಿಸುತ್ತಾರೆ. ಅವುಗಳಲ್ಲಿ ಸಾತ್ವಿಕವಾದ ಪೂಜಾಕ್ರಮಗಳು ಇರುವಂತೆ ಸಾತ್ವಿಕವಲ್ಲದ ಪೂಜಾಕ್ರಮಗಳೂ ಇವೆ. ‘ಪರಶುಪದಂ' (ಪಾಶುಪಥಂ) ಎಂಬ ಪೂಜಾಪ್ರಕಾರ ಬಹು ಪುರಾತನವಾದುದು. ‘ಗೂಢಮಿಲ್ಲಂ' ಎಂಬ ಪ್ರದೇಶದಲ್ಲಿರುವ ಶಿವಲಿಂಗವು ಕ್ರಿ.ಪೂ. ಎರಡನೆಯ ಶತಮಾನದಷ್ಟು ಹಳೆಯದು. ಶಿವನನ್ನು ಸಾಂಕೇತಿಸುವ ಅನೇಕ ಚಿನ್ಹೆಗಳಲ್ಲಿ ಶಿವಲಿಂಗವು ಬಹು ಮುಖ್ಯವಾದದ್ದು. ಅಪ್ಘಾಣಿಸ್ತಾನದ ಹಜರ ಮಂಗೋಲರಲ್ಲಿ ಗ್ರಾಮೀಣ ಬೇಸಾಯಗಾರರು ಮತ್ತು ಪಶುಸಂಗೋಪಕರು ಎಂಬ ಬುಡಕಟ್ಟುಗಳು ಶಿವನ ಆರಾಧಕರಾಗಿದ್ದಾರೆ. ದಕ್ಷಿಣ ರಾಜಸ್ತಾನದ ಬನೇಶ್ವರದಲ್ಲಿ ಬನೇಶ್ವರ ಹೆಸರಿನಲ್ಲಿ ಜಾತ್ರೆ ನಡೆಯತ್ತದೆ. ಬನೇಶ್ವರ ಎಂದರೆ ಶಿವಲಿಂಗ, ಸ್ವಯಂ ಭೂಲಿಂಗ ಎಂಬ ಪ್ರತೀತಿಯಿದೆ. ಭಿಲ್ಲರ ವರ್ಣರಂಜಿತ ಪ್ರಮುಖ ಜಾತ್ರೆ ಇದು.


ಆಡಿನ ಹಿಕ್ಕಿ ತಂದು ತೀಡಿ ಲಿಂಗವ ಮಾಡಿ

ನೋಡಿದಿರೇನ ಶಿವನ ಮಹಿಮೆ-ಗೋಲಗೇರಿ ಲಿಂಗ 

ಆಡಿನ ಹಿಕ್ಕ್ಯಾಗ ಒಲಿದಾನ.


ಲಿಂಗಗಳಲ್ಲಿ  ಎರಡು ವಿಧ. ಒಂದು, ಸ್ಥಾವರ ಲಿಂಗ, ಮತ್ತೊಂದು ಚಲಿಸುವ ಲಿಂಗ. ಸ್ಥಾವರ ಲಿಂಗವು ಮಣ್ಣು, ಕಲ್ಲು, ಮರ, ಹರಳು ಮುಂತಾದವುಗಳಿಂದ ಮಾಡಿದಂಥವು. ನಾನಾ ರೀತಿಯ ಪೀಠಗಳಮೇಲೆ ಇರಿಸಿದ ತಾತ್ಕಾಲಿಕ ಲಿಂಗಗಳನ್ನು ಗಂಡು ಕಲ್ಲುಗಳಿಂದಲೂ, ಪೀಠಗಳನ್ನು ಹೆಣ್ಣು ಕಲ್ಲುಗಳಿಂದಲೂ ಮಾಡಲಾಗುತ್ತದೆ.


ಶಿವ ಶಿವನಂದರ ಶಿವದಾರ ಕೊರಳಾಗ

ಶಿವದಾರ ನಮ್ಮ ಕೊರಳಾಗ-ಪಂಚಮುಖದ

ವಿಭೂತಿ ನಮ್ಮ ಹಣಿಮ್ಯಾಗ.


ಕಲ್ಲಿಗಿ ಮುಕ್ಹಾಕಿ ಎಲ್ಲಾರ್ನ ನೆನದೀನಿ

ಸಲ್ಲ ಕೇಳಾಕ ಶಿವಬಂದ-ಮ್ಯಾಲಿರುವ

ಮಾದೇವ ಬಂದ ಮನನೋಡಿ.


ಹರಕೀಯ ಹೊತ್ತೇನಿ ಅರಿಕುಳ್ಳ ದೇವರಿಗೆ

ಹಾದಿ ಮ್ಯಾಲಿರುವ ಶಿವನಿಗೆ -ಪರಮಾನಂದ

ಮನಸೀನ ಹರಕಿ ಇಳದೇನ.


ಆಕಾಶದಡವ್ಯಾಗ ಧೂಪದ ಹೊಗೆಯೆದ್ದು

ಆಯ್ತು ಮಲ್ಲಯ್ಯನ ಶಿವಪೂಜೆ-ಆಗಾಗ

ಆಕಾಶದ ಘಂಟಿ ಘಳಲೆಂದು.


ಮಂದೇನ ಕೊಟ್ಟೀತ ಮನವೇನು ದಣದೀತ 

ಮುಂಜಾನದಾಗ ಗಿರಿಮಲ್ಲ -ಕೊಟ್ಟರ

ಮನಿ ತುಂಬಿ ನಮ್ಮ ಮನ ತುಂಬಿ.


ಕರುಣ ಬಂದರ ಕಾಯೋ ಮರಣ ಬಂದರೆ ಒಯ್ಯೋ

ಕರುಣಿ ಕಲ್ಯಾಣ ಬಸವಣ್ಣ-ಶಿವಲಿಂಗ

ಕಡೆತನಕಕಾಯೊ ಅಭಿಮಾನ. 


ಹೀಗೆ ನಮ್ಮ ಜನಪದರು ಶಿವನನ್ನು ಕುರಿತು ಮನತುಂಬಿ ಹಾಡಿದ್ದಾರೆ.


#

ವಿಳಾಸ : ಡಾ.ಪ್ರಕಾಶ ಗ.ಖಾಡೆ, ‘ಶ್ರೀ ಗುರು’ , ಸರಸ್ವತಿ ಬಡಾವಣೆ, ಸಂಖ್ಯೆ -63, ನವನಗರ, ಬಾಗಲಕೋಟ 

       ಮೊ.9845500890


Friday, September 22, 2023

ಕಥೆ : ಯಾಗದ ಕುದುರೆ ರಚನೆ -ಡಾ.ಪ್ರಕಾಶ ಗ.ಖಾಡೆ

 ಸುಧಾದಲ್ಲಿ ಪ್ರಕಟವಾದ ಕಥೆ

ಯಾಗದ ಕುದುರೆ

ಡಾ.ಪ್ರಕಾಶ ಗ.ಖಾಡೆ


         ಮೂಡಗಲ್ಲು ಸಂಸ್ಥಾನದ ಮಹಾರಾಜರ ಕುದುರಿ ಏಕಾಏಕಿ ತಪ್ಪಿಸಿಕೊಂಡು ಕಾಡು ಸೇರಿದ ಸುದ್ದಿ ಬೆಳಗು ಮುಂಜಾನಿ ಹೊತ್ತಿಗೆ ಸುತ್ತ ಏಳೂರಿಗೆ ತಲುಪಿ ಮಹಾರಾಜರನ್ನು ಸೇರಿ, ಜನತೆಯನ್ನೂ ಚಿಂತೆಗೀಡು ಮಾಡಿತು. ಹಾಗೆ ನೋಡಿದರೆ ಅರಮನೆಯ ಹತ್ತಾರು ಕುದುರೆಗಳಲ್ಲಿ ಈಗಷ್ಟೇ ಎರಡು ದಿನಗಳ ಹಿಂದೆ ಬಂದು ಸೇರಿದ್ದ ಈ ಕುದುರೆ ತಪ್ಪಿಸಿಕೊಳ್ಳಲು ಕಾರಣವೂ ಇತ್ತು. ಕುದುರೆ ತಪ್ಪಿಸಿಕೊಂಡ ಸಂಗತಿ ಸ್ವತಃ ಮಹಾರಾಜರನ್ನೂ ಸೇರಿ ಮಹಾರಾಣಿಯವರಿಗೂ ತೀವ್ರವಾದ ಖಿನ್ನತೆಯನ್ನುಂಟು ಮಾಡಿತು. ಮಹಾರಾಜರು ತಮ್ಮ ಸಂಸ್ಥಾನದ ತೆರೆದ ಜೀಪನ್ನು ಸಿದ್ದ ಮಾಡಿಡಲು ಅರಮನೆಯ ಆಳುಗಳಿಗೆ ಹೇಳಿದರು. ಕುದುರೆ ಹುಡುಕಲು ಮಹಾರಾಜರೊಂದಿಗೆ ಮಹಾರಾಣಿಯವರೂ ಬರುವುದಾಗಿಯೂ ತಮ್ಮನ್ನೂ ಕರೆದುಕೊಂಡು ಹೋಗಬೇಕೆಂದು ಕೇಳಿಕೊಂಡಾಗ, ಮಹಾರಾಣಿಯವರ ಮನಸ್ಸನ್ನು ನೋಯಿಸುವ ಮನಸ್ಸು ಮಹಾರಾಜರಿಗೆ ಇರಲಿಲ್ಲ. ‘ಸರಿ ಸಿದ್ದರಾಗಿರಿ’ ಎಂದರು. ಜೀಪಿನಲ್ಲಿ ಬಂದೂಕು, ದಾರಿಯ ಆಯಾಸ ಕಳೆಯಲು ನೀರು, ಅಷ್ಟಿಷ್ಟು ಆಹಾರ ಎಲ್ಲವನ್ನು ಕೂಡಿಟ್ಟುಕೊಂಡು, ಬೆಳಗಿನ ಉಪಹಾರ ಮುಗಿಸಿ ಕುದುರೆ ಹುಡುಕಲು ರಾಜದಂಪತಿ ಹೊರನಡೆದರು.

*

       ಸಂಸ್ಥಾನಕ್ಕೆ ಈಗಷ್ಟೇ ಸೇರಿದ್ದ ಈ ಕುದುರೆಗೆ ಒಂದು ಇತಿಹಾಸವಿತ್ತು. ಕುದುರೆ ಸುತ್ತಮುತ್ತ ಏಳೂರಿಗೆ ಆಶ್ಚರ್ಯದ ಸಂಕೇತವಾಗಿತ್ತು. ಅದು ಒಂದು ಸಾಧಾರಣ ಕುದುರೆಯಾಗಿರದೆ, ಅದಕ್ಕಿರುವ ಹೆಚ್ಚುಗಾರಿಕೆಯಿಂದ ಕುದುರೆಯನ್ನು ಕಣ್ಣಾರೆ ನೋಡುವುದೇ ಒಂದು ಪೂಜ್ಯನೀಯ ಮತ್ತು ಖುಷಿಯ ವಿಷಯವಾಗಿತ್ತು. ಮೂಲ ಜೈಪುರ ಸಂಸ್ಥಾನಕ್ಕೆ ಸೇರಿದ್ದ ಈ ಕುದುರೆ ಅದ್ಹೇಗೋ ಕರುನಾಡಿನ ಕೆಚ್ಚೆದೆಯ ಗಂಡುಮೆಟ್ಟಿನ ನೆಲ ಮೂಡಗಲ್ಲು ಸಂಸ್ಥಾನಕ್ಕೆ ಬಂದು ಸೇರಿತ್ತು. ಈ ಸೇರುವಿಕೆಯ ಹಿಂದೆ ಒಂದು ಇತಿಹಾಸವಿದೆ. ಸಂಸ್ಥಾನದ ಸರಹದ್ದಿನಲ್ಲಿ ಬರುವ ಗುಣಸಿರಿ ಗ್ರಾಮದ ಹೊರಗೆ ಮಹಾರಾಜರ ಪೂರ್ವಿಕರು ಬೇಸಿಗೆಯಲ್ಲಿ ಉಳಿದುಕೊಳ್ಳಲು ಒಂದು ಬೇಸಿಗೆ ಅರಮನೆ ಕಟ್ಟಿದ್ದರು. ಸುತ್ತ ಹಸಿರು ಚೆಲ್ಲಿದ ಪರಿಸರದಲ್ಲಿ ತುಂಬಾ ಎತ್ತರಕ್ಕಿರುವ ಸಮತಟ್ಟಾದ ಪ್ರದೇಶದಲ್ಲಿ ಕಟ್ಟಿದ ಈ ಬೇಸಿಗೆ ಅರಮನೆಯನ್ನು ಬಹುದೂರದಿಂದಲೂ ಗುರುತಿಸಬಹುದಿತ್ತು. ಬೇಸಿಗೆ ಅರಮನೆಗೆ ರಾಜರು ಬರುವುದು ತುಂಬಾ ಕಡಿಮೆ. ಈ ಭಾಗಕ್ಕೆ ಬೇಟೆಯಾಡಲು ಬಂದಾಗ ಮತ್ತು ರಾಜ್ಯಭಾರದ ಆಯಾಸ ಕಳೆಯಲು ಮಾತ್ರ ಬರುತ್ತಿದ್ದರು. ಉಳಿದಂತೆ ಇಲ್ಲಿಯ ಅರಮನೆಯ ಕೆಲಸಗಾರರು ಮತ್ತವರ ಕುಟುಂಬವರ್ಗದವರು ಅರಮನೆಯನ್ನು ನೋಡಿಕೊಳ್ಳುತ್ತಿದ್ದರು. 

        ದೇಶÀಕ್ಕೆ ಸ್ವಾತಂತ್ರ್ಯ ಬಂದು ಸಂಸ್ಥಾನಗಳು ಒಕ್ಕೂಟ ಸರಕಾರದಲ್ಲಿ ವಿಲೀನವಾದಾಗ ಮೂಡಗಲ್ಲು ಸಂಸ್ಥಾನವೂ ಇದಕ್ಕೆ ಹೊರತಾಗಲಿಲ್ಲ. ಆವಾಗ ಆಡಳಿತವೆಲ್ಲ ಸರಕಾರದ ಕೈ ಸೇರಿದಾಗ ಸಂಸ್ಥಾನದ ಅರಸರು ಅರಮನೆಯ ಅಸ್ತಿತ್ವ ಉಳಿಸಿಕೊಂಡು ಕೆಲವರು ಇಲ್ಲಿಯೇ ಉಳಿದರೇ, ಉಳಿದಂತೆ ರಾಜ ವೈಭೋಗಕ್ಕಾಗಿ ಕೆಲವರು ಕೊಲ್ಲಾಪುರ, ನಾಸಿಕ, ಪುಣೆ, ಮುಂಬೈ ಸೇರಿದ್ದರು. ಮೂಡಗಲ್ಲು ಸಂಸ್ಥಾನದಲ್ಲಿ ಉಳಿದುಕೊಂಡಿದ್ದ ಮಹಾರಾಜರು ಕೃಷಿಕರು, ಪ್ರಕೃತಿಪ್ರಿಯರು ಮತ್ತು ಜನ ಆರಾಧಕರೂ ಆಗಿದ್ದರು. ಸಂಸ್ಥಾನದ ಕಾರುಭಾರ ಹೋದರೂ ಜನತೆಯೊಂದಿಗಿನ ತಮ್ಮ ಹಿರಿತನವನ್ನು ಅವರೆಂದೂ ಕಳೆದುಕೊಂಡಿರಲಿಲ್ಲ. ಸ್ವತಃ ಕೃಷಿಕರಾಗಿದ್ದ ಮಹಾರಾಜರು ತೋಟ ಮಾಡಿಕೊಂಡು ಕಬ್ಬು, ತೆಂಗು, ಬಾಳೆ ಮೊದಲಾದ ಹಣ್ಣುಹಂಪಲ ಬೆಳೆದು ಈ ಭಾಗದಲ್ಲಿ ಹೆಸರಾಗಿದ್ದರು. ಮಹಾರಾಜರಿಗೆ ಹಳೆಯ ಕಾಲದ ಜೀಪು ಕಾರುಗಳನ್ನು ಸಂಗ್ರಹಿಸುವುದು, ಅತ್ಯುತ್ತಮ ಕುದುರೆಗಳು ಎಲ್ಲಿಯೇ ಇರಲಿ ಅವನ್ನು ಖರೀದಿಸುವುದು ಮತ್ತು ಕಲೆ, ಕ್ರೀಡೆಗಳಿಗೆ ಪ್ರೋತ್ಸಾಹ ಕೊಡುವುದು ಅವರ ಬದುಕಿನ ಹವ್ಯಾಸವಾಗಿತ್ತು. ಮಹಾರಾಜರಿಗೆ ಪೂರಕವಾಗಿ ಮಹಾರಾಣಿಯವರೂ ಇದೇ ರೀತಿಯ ಮನೋಭಾವ ಹೊಂದಿದ್ದರು. ಹೀಗಾಗಿ ಸಂಸ್ಥಾನದ ಕುಟುಂಬವರ್ಗದವರನ್ನು ಸುತ್ತ ಹಳ್ಳಿಯವರು ತುಂಬಾ ಪ್ರೀತಿಯಿಂದ ಕಾಣುತ್ತಿದ್ದರು.

*

       ಪ್ರಜಾಪ್ರತಿನಿಧಿ ಸರಕಾರಗಳು ಬಂದು ಸಂಸ್ಥಾನದ ಆಡಳಿತ ಹೊರಟು ಹೋದಾಗ ಗುಣಸಿರಿಯ ಬೇಸಿಗೆ ಅರಮನೆಗೆ ಮಹಾರಾಜರ ಪರಿವಾರ ಬರುವುದು ಕಡಿಮೆಯಾಯಿತು. ಅರಮನೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಕೆಲಸದವರಿಗೆ ಸರಿಯಾದ ಸಂಬಳ ಸಿಗದೇ ಅವರೂ ಕಡಿಮೆಯಾಗುತ್ತಾ ಬಂದರು. ಹೀಗಾಗಿ ತುಂಬಾ ಬೆಲೆಬಾಳುವ ಅರಮನೆ, ಸುತ್ತಲಿನ ಹತ್ತಾರು ಎಕರೆ ಜಮೀನು ಉಸ್ತುವಾರಿಯಿಲ್ಲದೇ ಬಿಕೋ ಎನ್ನತೊಡಗಿತು, ಇಂಥ ಸುಸಜ್ಜಿತವಾದ ಕಟ್ಟಡ ಮತ್ತು ಆವರಣದಲ್ಲಿ ಒಂದು ಯೋಗ ಶಾಲೆಯನ್ನು ತೆರೆಯುವ ಯೋಚನೆ ಕೆಲ ಕ್ರೀಡಾಸಕ್ತರಲ್ಲಿ ಮೂಡಿತು, ಅವರು ತಡ ಮಾಡದೇ ಮಹಾರಾಜರಿಗೆ ತಮ್ಮ ಬೇಸಿಗೆ ಅರಮನೆಯನ್ನು ಬಿಟ್ಟುಕೊಡಲು ಕೇಳಿದರು. 

     ಮೊದಲೇ ಕ್ರೀಡೆ, ಕಲೆ, ಸಂಸ್ಕøತಿಯ ಪೋಷಕರಾಗಿದ್ದ ಮಹಾರಾಜರು ಮತ್ತು ಅವರ ಕುಟುಂಬವರ್ಗದವರು ಪೂರ್ಣ ಅನುಮತಿಯೊಂದಿಗೆ ಗುಣಸಿರಿಯ ಬೇಸಿಗೆ ಅರಮನೆಯನ್ನು ಅದಕ್ಕೆ ಹೊಂದಿಕೊಂಡ ಅಷ್ಟಿಷ್ಟು ಜಮೀನನ್ನು ಸಂತೋಷದಿಂದ ಬಿಟ್ಟುಕೊಟ್ಟಾಗ, ಗುಣಸಿರಿಯಲ್ಲಿ ರಾಜ್ಯದಲ್ಲಿಯೇ ಅಪರೂಪವಾದ ಒಂದು ಯೋಗ ವಿದ್ಯಾಲಯ ತೆಲೆ ಎತ್ತಿತು. ಇಲ್ಲಿ ಯೋಗ, ಕ್ರೀಡೆ, ಈಜು, ಕುದುರೆ ಸವಾರಿ ಹೀಗೆ ತರತರದ ವಿದ್ಯೆ ಹೇಳಿಕೊಡಲಾಗುವುದು, ವಸತಿಯುಕ್ತ ವಿದ್ಯಾಲಯವಾಗಿದ್ದು, ಎಂಟನೆಯ ತರಗತಿಯಿಂದ ಮೇಲಿನ ಮಕ್ಕಳು ಹೆಸರು ಹಚ್ಚಬಹುದು ಎಂದಾಗ ರಾಜ್ಯವ್ಯಾಪಿ ವಿದ್ಯಾರ್ಥಿಗಳು ಇಲ್ಲಿ ಕಲಿಯಲು ಬರತೊಡಗಿದರು.

              ನೋಡ ನೋಡುತ್ತಿದ್ದಂತೆ ವಸತಿ ಯೋಗ ವಿದ್ಯಾಲಯ ಹತ್ತಾರು ಎಕರೆ ವಿಸ್ತೀರ್ಣ, ವಿವಿಧ ಕ್ರೀಡಾಂಗಣ, ಶಾಲಾ ಕೊಠಡಿಗಳು, ವಸತಿ ನಿಲಯಗಳು, ಈಜುಗೊಳ, ಭೋಜನಾಲಯ, ಕಲಾ ಮಂದಿರ, ವಿಜ್ಞಾನ ತಂತ್ರಜ್ಞಾನ ಕೊಠಡಿಗಳು ಮೊದಲಾದವುಗಳಿಂದ ವಿದ್ಯಾಲಯ ಬೃಹದ್ದಾಕಾರವಾಗಿ ಬೆಳೆಯತೊಡಗಿತು, ಆಟೋಟಗಳಲ್ಲಿ ಇಲ್ಲಿನ ಮಕ್ಕಳು ರಾಜ್ಯ ಮತ್ತು ರಾಷ್ಠ್ರೀಯ ಪ್ರಶಸ್ತಿಗೆ ಭಾಜನರಾಗತೊಡಗಿದರು. ರಾಜ್ಯ ಮತ್ತು ಕೇಂದ್ರ ಸರಕಾರಗಳ ಗಮನ ಸೆಳೆದು ಸೈ ಎನಿಸಿಕೊಂಡಿತು. ಒಂದು ಪ್ರೇಕ್ಷಣೀಯ ಸ್ಥಳವಾಗಿ ರೂಪುಗೊಂಡಾಗ ಜನ ಇಲ್ಲಿಗೆ ಬರುವುದು ಹೆಚ್ಚಾಗತೊಡಗಿತು. ರಾಜ್ಯದ  ಬಹುತೇಕ ಜಿಲ್ಲೆಗಳ ವಿದ್ಯಾರ್ಥಿಗಳು ಇಲ್ಲಿದ್ದು ವಿದ್ಯಾಭ್ಯಾಸದೊಂದಿಗೆ ವಿವಿಧ ಆಟೋಟ, ಯೋಗ, ಈಜು, ಸೈಕ್ಲಿಂಗ್ ಮೊದಲಾದವನ್ನು ಕಲಿಯುವಂತಾಯಿತು. ಓದು ಮತ್ತು ಆಟದಲ್ಲಿ ಈ ಕೇಂದ್ರದ ಕೀರ್ತಿ ಮೊಳಗಿತು. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿಯ ಬಾಲಕರು ವಿವಿಧ ಕ್ರೀಡೆ, ಯೋಗಾಸನಗಳಲ್ಲಿ ಹೆಸರು ಮಾಡಿದರು. ಬೇರೆ ಬೇರೆ ಮಂತ್ರಿಗಳು, ಮುಖ್ಯಮಂತ್ರಿಗಳು ಈ ಕೇಂದ್ರಕ್ಕೆ ಬರುವುದು, ಭೇಟಿ ಕೊಡುವುದು ನಡೆಯಿತು. ಹೀಗೆ ಈ ಕೇಂದ್ರವನ್ನು ನೋಡಲು ಬಂದಿದ್ದ ರಾಜ್ಯದ ಕ್ರೀಡಾ ಮಂತ್ರಿ ಬಾಪುರಾಮ ಅವರು ಈ ಕೇಂದ್ರಕ್ಕೆ ಏನಾದರೂ ಕಾಣಿಕೆ ಕೊಡಬೇಕೆಂದು ಮನಸ್ಸು ಮಾಡಿ ರಾಜಧಾನಿಗೆ ಹೋದವರು ಅಲ್ಲಿಂದ ಕೇಂದ್ರದ ಮುಖ್ಯಸ್ಥರಿಗೆ ದೂರವಾಣಿ ಕರೆ ಮಾಡಿ ‘ರಾಜಧಾನಿಯಿಂದ ಒಂದು ಅತ್ಯುತ್ತಮವಾದ ಕುದುರೆಯನ್ನು ನಿಮ್ಮ ಕೇಂದ್ರಕ್ಕೆ ಕಳಿಸುತ್ತಿದ್ದೇನೆ, ಇದು ನಿಮ್ಮ ಕೇಂದ್ರದ ಮಕ್ಕಳಿಗೆ ಕುದುರೆ ಸವಾರಿ ಕಲಿಸಲು ಅನುಕೂಲವಾಗುತ್ತದೆ’ ಎಂಬ ಸಂದೇಶದೊಂದಿಗೆ ಕುದುರೆಯನ್ನು ಕಳಿಸುವ ವ್ಯವಸ್ಥೆ ಮಾಡಿದರು. 

*

           ಸಚಿವ ಬಾಪುರಾಮ ಅವರು ಕಳಿಸಿದ ಕುದುರೆ ಅಂತಿಂಥ ಕುದುರೆಯಾಗಿರಲಿಲ್ಲ. ಇಡೀ ದೇಶದ ಜನತೆಯನ್ನು ರವಿವಾರದ ಟಿ.ವಿ. ಎದಿರು ಕೂಡುವಂತೆ ಮಾಡಿದ್ದ ‘ರಾಮಾಯಣ’ ಸಿರಿಯಲ್‍ದಲ್ಲಿನ ಅಶ್ವಮೇಧಯಾಗದ ಕುದುರೆಯಾಗಿತ್ತು. ಬಾಪುರಾಮ ಅವರು ತುಂಬಾ ಖರ್ಚು ಮಾಡಿ ಈ ಕುದುರೆಯನ್ನು ಕೊಂಡಿದ್ದರು. ತಾವು ಭೇಟಿ ನೀಡಿದ ಪ್ರೀತಿಯ ನೆನಪಿಗಾಗಿ ಈ ಯೋಗ ಶಾಲೆಗೆ ಕುದುರೆ ಕೊಡಲು ತೀರ್ಮಾನಿಸಿದ್ದರು. ಈ ಸಂಗತಿಯನ್ನು ತಿಳಿದ ಶಾಲೆಯವರು ತುಂಬಾ ಅದ್ದೂರಿಯಿಂದಲೇ ಕುದುರೆಯನ್ನು ಬರಮಾಡಿಕೊಂಡರು. ಬೆಳಗು ಹರಿಯುವ ಹೊತ್ತಿಗೆ ಗುಣಸಿರಿ ಯೋಗಶಾಲೆಯ ಈ ಕುದುರೆಯನ್ನು ನೋಡಲು ಜನ ತಂಡೋಪತಂಡವಾಗಿ ಬರತೊಡಗಿದರು. ಕುದುರೆಯ ವಿಶೇಷ ಆಹಾರಗಳು ಜಿಲ್ಲಾ ಕೇಂದ್ರದಿಂದ ರವಾನೆಯಾದವು. ನೋಡ ನೋಡುತ್ತಿದ್ದಂತೆ ಕುದುರೆ ಸುತ್ತೇಲ್ಲ ಊರಿನ ಆಕರ್ಷಣೀಯ ವಸ್ತುವಾಯಿತು. 

      ಹೀಗೆ ಜನ ಬರುವುದು ಶಾಲೆಯವರಿಗೆ ಕಿರಿಕಿರಿಯಾಯಿತು. ಜೊತೆಗೆ ಅಶ್ವಮೇಧಯಾಗದ ಈ ಕುದುರೆಗೆ ಇಲ್ಲಿನ ಬಿರು ಬಿಸಿಲು ಹಾಗೂ ರುಚಿಸದ ಆಹಾರದಿಂದ ಯಾರೊಂದಿಗೂ ಸರಳವಾಗಿ ಬೆರೆÉಯಲಿಲ್ಲ. ಮಾನ್ಯ ಮಂತ್ರಿಗಳು ಕುದುರೆಯೊಂದಿಗೆ ಇದರ ಉಸ್ತುವಾರಿ ನೋಡಿಕೊಳ್ಳಲು ಇರಲೆಂದು ತಮ್ಮೂರಿನ ಒಬ್ಬ ಆಳುಮನುಷ್ಯ ಸಂಗಪ್ಪನನ್ನು ಕೊಟ್ಟು ಕಳಿಸಿದ್ದರು. ಕುದುರೆಯ ರ ಠ ಈ ಕ ಬಲ್ಲ ಈ ಸಂಗಪ್ಪ ಅದರ ಮೈಮೇಲೆ ಕೈ ಸವರಿ ಆತ್ಮೀಯತೆ ಬೆಳೆಸಿಕೊಂಡಿದ್ದ, ಹೀಗಾಗಿ ಅವನಿಗಷ್ಟೇ ಅದು ಸಹಕರಿಸತೊಡಗಿತು. ಸವಾರಿಗೆ ಬಳಸಿಕೊಳ್ಳಬೇಕೆಂದರೆ ಹತ್ತಿದವರನ್ನು ಕೆಡವಿ, ಹಿಂಗಾಲಿನಿಂದ ಒದ್ದು ಎಂತಿಂಥವರನ್ನೂ ಹಿಗ್ಗಾ ಮುಗ್ಗಾ ಝಾಡಿಸಿ ಬಿಡುತಿತ್ತು.

       ಹೀಗೆ ಹತ್ತಾರು ದಿನಗಳು ಕಳೆದ ಮೇಲೆ ಹವಾಮಾನದ ವೈಪರಿತ್ಯದಿಂದಾಗಿಯೋ, ಆಹಾರದ ಬದಲಾವಣೆಯಿಂದಾಗಿಯೋ ಕುದುರೆ ತನ್ನ ಮುಂಚಿನ ಗತ್ತುಗಾರಿಕೆಯನ್ನು ಕಳೆದುಕೊಳ್ಳತೊಡಗಿತು. ಬಾಲಕರಿಗೆ ಕುದುರೆ ಸವಾರಿ ಮಾಡಿಸಬೇಕೆಂದರೆ ಅದರ ವಿದ್ಯೆ ಬಲ್ಲ ತರಬೇತುದಾರರ ಅಗತ್ಯವಿತ್ತು. ಯಾರೂ ಎಲ್ಲೂ ಸಿಗದಿದ್ದಾಗ ಅನಿವಾರ್ಯವಾಗಿ ಅದನ್ನು ನೆನೆ ಹಾಕಿದ ಕಾಳುಗಳಿಂದ ಮೇಯಿಸಿವುದೇ ಆಯಿತು. ಕುದುರೆಗೆ ಯಾವಾಗ ಕೆಲಸವಿಲ್ಲದಾಯಿತೋ, ಕುದುರೆ ನೋಡಿಕೊಳ್ಳುತ್ತಿದ್ದ ಸಂಗಪ್ಪನಿಗೂ ಅದರ ಆಹಾರ, ಸ್ನಾನ, ಸ್ವಚ್ಛತೆ ಬಿಟ್ಟರೆ ಬೇರೆ ಕೆಲಸವಿಲ್ಲದಾಯಿತು. ಅಷ್ಟಿಷ್ಟು ಸೆರೆ ಕುಡಿಯುವ ಚಟ ಹೊಂದಿದ್ದ ಸಂಗಪ್ಪ ಗುಣಸಿರಿಗೆ ಹೋಗಿ ಪಾಕೀಟು ಹಾಕಿ ಬರುತ್ತಿದ್ದ. ಅಲ್ಲಿ ಪಾಕೀಟು ಹೊಟ್ಟೆ ತುಂಬಾ ಹಾಕಿ ಕಂಠಪೂರ್ತಿಯಾದ ಮೇಲೆ ಕೂಡಿದ ಜನರೆದಿರು ಕುದುರೆಯ ವರ್ಣನೆ ಮಾಡುತ್ತಿದ್ದ. ‘ದೇವ ಲೋಕದಿಂದ ಬಂದ ಕುದುರೆಯನ್ನು ಸ್ವತಃ ದೇವರು ಮಾತ್ರ ನಡೆಸಬಲ್ಲ. ಆ ದೇವರು ನಾನು’ ಎಂದು ಹೇಳಿಕೊಳ್ಳುತ್ತಿದ್ದ. ಇದರಿಂದಾಗಿ ಸಹಪಾಠಿ ಪಾಕೀಟು ಪ್ರಿಯರು ಸಂಗಪ್ಪನಿಗೆ ವಿಶೇಷವಾದ ಗೌರವ ಕೊಡುತ್ತಿದ್ದರು. ಪಾಕೀಟು ದಾಸನಾದ ಸಂಗಪ್ಪನಿಗೆ ಬರುಬರುತ್ತಾ ಹಣದ ಅಗತ್ಯ ಹೆಚ್ಚಾಯಿತು. ಅವನ ಸಂಬಳದಲ್ಲಿ ಇದೆಲ್ಲಾ ಸಾಲದಾಯಿತು. ಕುದುರೆಯನ್ನು ಒಂದೇ ಕಟ್ಟಿದರೆ ಕುದುರೆ ಹೋಗಿ ಕತ್ತೆಯಾದೀತೆಂದು ಆಟದ ಮಾಸ್ತರರ ಸಲಹೆಯಂತೆ ಅದನ್ನು ಸವಾರಿ ಮಾಡಿಕೊಂಡು ಬರಲು ಸಂಗಪ್ಪ ಶಾಲೆಯಿಂದ ಐದಾರು ಕಿಲೋ ಮೀಟರು ತೆಗೆದುಕೊಂಡು ಹೋಗಿ ಬರುತ್ತಿದ್ದ. 

  ಮುಂಚಿನ ಗತ್ತುಗಾರಿಕೆಯನ್ನು ಕಳೆದುಕೊಂಡಿದ್ದ ಕುದುರೆಯನ್ನು ಈಗ ಯಾರು ಬೇಕಾದರೂ ಹತ್ತಿ ಸವಾರಿ ಮಾಡಬಹುದಾಗಿತ್ತು. ಗುಣಸಿರಿಗೆ ಹೋಗುತ್ತಿದ್ದ ಸಂಗಪ್ಪನಿಗೆ ಊರ ಹುಡುಗರು ಐದು, ಹತ್ತು ನೀಡಿ ಸಂಗಪ್ಪನೊಂದಿಗೆ ಕುದುರೆ ಸವಾರಿ ಮಾಡಿಕೊಂಡು ಬರುತ್ತಿದ್ದರು. ಆ ರೂಪಾಯಿಗಳಲ್ಲಿ ಸಂಗಪ್ಪನಿಗೆ ಪಾಕೀಟಿನ ಚಿಂತೆ ದೂರವಾಯಿತು. ಒಂದೆಡೆ ಕುದುರೆಯ ಉಸ್ತುವಾರಿ ಖರ್ಚು ಹೆಚ್ಚುತ್ತಾ ಹೋಗಿದ್ದು, ಮತ್ತೊಂದೆಡೆ ಸಂಗಪ್ಪ ತನ್ನ ಪಾಕೀಟು ಚಟಕ್ಕಾಗಿ ಕುದುರೆಯನ್ನು ಬಳಸಿಕೊಳ್ಳುತ್ತಿರುವುದು ತಿಳಿದು ಜಿಲ್ಲಾ ಕೇಂದ್ರದಲ್ಲಿದ್ದ ಕೇಂದ್ರದ ಆಡಳಿತ ಮಂಡಳಿಯ ಪಿತ್ತ ನೆತ್ತಿಗೇರುವಂತಾಯಿತು. ಒಂದು ರವಿವಾರ ಕೇಂದ್ರ ಅರಮನೆ ಸಭಾಂಗಣದಲ್ಲಿ ಅವರೆಲ್ಲ ಮೀಟಿಂಗು ಸೇರಿ ಮೊದಲು ಸಂಗಪ್ಪನಿಗೆ ಗೇಟ್ ಪಾಸ್ ಕೊಟ್ಟು ಕಳಿಸಿದರು. ಕುದುರೆಗಳನ್ನು ಸಾಕಿಕೊಳ್ಳುವ ಹವ್ಯಾಸವಿದ್ದ ಮೂಡಗಲ್ಲು ಸಂಸ್ಥಾನದ ಮಹಾರಾಜರಿಗೆ ನಮ್ಮದೊಂದು ಕುದುರೆಯನ್ನು ತಮ್ಮ ಕುದುರೆಗಳೊಂದಿಗೆ ಸಾಕಿಕೊಳ್ಳಬೇಕೆಂದು ವಿನಂತಿ ಮಾಡಿದಾಗ ಮಹಾರಾಜರು ಒಲ್ಲೆ ಎನ್ನಲಿಲ್ಲ. ‘ಕಳಿಸಿ ಕೊಡಿ, ತುಂಬಾ ಒಳ್ಳೆಯದಾಯಿತು’ ಎಂದರು.

      ಕೇಂದ್ರದ ಅಡುಗೆ ಸಿಬ್ಬಂದಿಯವರು ಹತ್ತು ಕಿಲೋಮೀಟರು ದೂರವಿರುವ ಮೂಡಗಲ್ಲು ಅರಮನೆಗೆ ಕುದುರೆಯನ್ನು ಬಿಟ್ಟು ಬರಲು ಸಿದ್ದರಾದರು. ಯಾಗದ ಕುದುರೆ ಸಿದ್ದವಾಗಿ ಗುಣಸಿರಿಯಿಂದ ಮೂಡಗಲ್ಲಿಗೆ ಪ್ರಯಾಣಕ್ಕೆ ಹೊರಟು ನಿಂತಾಗ ಶಾಲೆಯ ಬಾಲಕರು ವಿಶೇಷ ಆದರಾಭಿಮಾನಗಳಿಂದ ಬಿಳ್ಕೊಟ್ಟರು. ಇಲ್ಲಿ ಇರುವಷ್ಟು ಕಾಲ ಉಣ್ಣಲು, ತಿನ್ನಲು ಎಳಷ್ಟೂ ಕಡಿಮೆ ಮಾಡಿರದ ಕಾರಣವಾಗಿ ಕುದುರೆ ತುಂಬಾ ಚೆನ್ನಾಗಿಯೇ ಬೆಳೆದಿತ್ತಾದರೂ, ಅದರ ತಕ್ಕುದಾದ ಕೆಲಸವಿಲ್ಲದ ಕಾರಣ ಕುದುರೆ ಒಂದರ್ಥದಲ್ಲಿ ಕತ್ತೆಯಾಗಿ ಪರಿವರ್ತನೆಯಾಗಿತ್ತು. ವೇಳೆಗೆ ಸರಿಯಾಗಿ ತಿನ್ನುವುದನ್ನು ಬಿಟ್ಟರೆ, ಅದಕ್ಕೆ ಕೆಲಸ ಮತ್ತು ತಿರುಗಾಡುವುದೆಂದರೆ ಅಲರ್ಜಿಯಾಗಿತ್ತು. ಶಾಲೆಯನ್ನು ಬಿಟ್ಟು ಮೂಡಗಲ್ಲು ಸಂಸ್ಥಾನಕ್ಕೆ ಹೊರಟ ಕುದುರೆ ತುಂಬಾ ನೋವಿನಿಂದಲೆ ತನ್ನ ಪಯಣ ಬೆಳೆಸಿತು.

*

     ಸಂಸ್ಥಾನಕ್ಕೆ ಕುದುರೆಯನ್ನು ಬರಮಾಡಿಕೊಂಡ ಮಹಾರಾಜರು ಅಪರೂಪವಾದ ಈ ಕುದುರೆ ತಮ್ಮ ವಾಡೆಯನ್ನು ಸೇರಿದ್ದು ತಂಬಾ ಸಂತೋಷದಿಂದಲೆ ಸ್ವಾಗತಿಸಿದರು. ವಾಡೆಯ ಇತರ ಕುದುರೆಗಳೊಂದಿಗೆ ಬೆರೆಯಬೇಕಾದ ಯಾಗದ ಈ ಕುದುರೆ ಅಲ್ಲೂ ತನ್ನ ಮೊಂಡಾಟ ಹಿಡಿಯಿತು. ಶಾಲೆಯಲ್ಲಿದ್ದಾಗ ವೇಳೆಗೆ ಸರಿಯಾಗಿ ಉಣ್ಣಲು ತಿನ್ನಲು ಸಾಕಷ್ಟು ಬರುತ್ತಿದ್ದ ಕುದುರೆಗೆ ಇಲ್ಲಿಯ ನಿಯಮಿತತನ, ಸವಾರಿಯ ಅಭ್ಯಾಸಕ್ಕೆ ಹೊಂದಿಕೊಳ್ಳದೇ ಹೋಯಿತು. ಬಂದ ಇಡೀ ದಿನವಂತೂ ತನ್ನ ಮೊಂಡಾಟ ಹಿಡಿಯಿತು. ಹಗ್ಗ ಜಗ್ಗಿ ತಪ್ಪಿಸಿಕೊಳ್ಳಲು ನೋಡಿತು. ಮಾಹಾರಾಜರು ಎಷ್ಟೇ ಕಾಳಜಿ ಮಾಡಿದರೂ ಅದರ ಲಕ್ಷ್ಯವೆಲ್ಲಾ ಶಾಲೆಯ ಕಡೆಗೆ ಇದ್ದೀತು. ವಾಡೆಯ ಆಳುಗಳಿಗೆ ಈ ಕುದುರೆಯ ಮೊಂಡಾಟ ಸಹಿಸದಾಯಿತು. ಗುಣಸಿರಿಯಲ್ಲಿ ಇರುವಷ್ಟು ಕಾಲ ಏಟಿನ ರುಚಿ ನೋಡಿರದಿದ್ದ ಕುದುರೆಗೆ ಇಲ್ಲಿ ತಹಬದಿಗೆ ತರಲು ಪ್ರಯೋಗಿಸಿದ್ದ ಛಾಟಿ ಏಟುಗಳು ಕುದುರೆಯನ್ನು ತಲ್ಲಣಗೊಳಿಸಿದವು. ಈ ಎಲ್ಲ ತಲ್ಲಣಗಳ ಮುಕ್ತತೆಗಾಗಿ ರಾತ್ರಿ ಯಾವಾಗಲೋ ಹಗ್ಗ ಹರಿದುಕೊಂಡು ಯಾಗದ ಕುದುರೆ ವಾಡೆ ಬಿಟ್ಟು ತಪ್ಪಿಸಿಕೊಂಡು ಹೋಗಿತ್ತು.

*

        ಸಂಸ್ಥಾನದ ಮಹಾರಾಜರು ಗುಣಸಿರಿ ಯೋಗ ಶಾಲೆಗೆ ಫೋನಾಯಿಸಿ, ‘ನಿಮ್ಮ ಕುದುರೆ ತಪ್ಪಿಸಿಕೊಂಡು ಹೋಗಿದೆ, ಶಾಲೆಗೇನಾದರೂ ಬಂದಿದ್ದರೆ ತಿಳಿಸಿ’ ಎಂದರು. ಬೆಳಗು ಮುಂಜಾನೆ ಬಂದ ಈ ಬರ ಸಿಡಿಲಿನ ವಾರ್ತೆ ವಸತಿ ಶಾಲೆಯ ಸಿಬ್ಬಂದಿಯ ತೆಲೆ ಕೆಡಿಸಿತು. ನೂರು ಎಕರೆ ವಿಶಾಲ ವಿಸ್ತೀರ್ಣದ ವಸತಿ ಶಾಲೆಯ ಪ್ರತಿ ಇಂಚಿಂಚೂ ಹುಡುಕಿಕೊಂಡು ಬಂದ ಶಾಲೆಯ ಸಹಾಯಕ ಸಿಬ್ಬಂದಿ ‘ಇಲ್ಲಿ ನಮ್ಮಲ್ಲಿ ಬಂದಿಲ್ಲ’ ಎಂದರು. ಹಾಗಾದರೆ ಎಲ್ಲಿ ಹೋಗಿರಬಹುದೆಂಬ ಚಿಂತೆ ಶಾಲೆಯವರನ್ನೂ ಕಾಡಿತು. ಜಿಲ್ಲಾ ಕೇಂದ್ರಕ್ಕೆ ಫೋನಾಯಿಸಿ ಆಡಳಿತಗಾರರಿಗೆ ಈ ಆಘಾತಕಾರಿ ಸುದ್ದಿ ಮುಟ್ಟಿಸಲಾಯಿತು. ತೀವ್ರ ಕಾಳಜಿ ಹೊಂದಿದ್ದ ಅವರು ‘ಕುದುರೆ ಎಲ್ಲಿಯೇ ಇರಲಿ, ಮಹಾರಾಜರೊಂದಿಗೆ ಹುಡುಕುವುದು ನಮ್ಮ ಕರ್ತವ್ಯವಾಗಿದೆ.’ ಎಂದರು. ಶಾಲೆಯ ಪಾಠ ಹೇಳುವ ಸಿಬ್ಬಂದಿ ಶಾಲೆಯಲ್ಲಿಯೇ ಉಳಿದು ಆಟದ ತರಬೇತುದಾರರೆಲ್ಲರೂ ಉಳಿದ ಸಿಬ್ಬಂದಿಯೊಂದಿಗೆ ತಂಡವಾಗಿ ಎಲ್ಲ ದಿಕ್ಕುಗಳಲ್ಲೂ ಕುದುರೆಯನ್ನು ಹುಡುಕುವುದು ಎಂದು ತೀರ್ಮಾನವಾಗಿ ಮೆಸ್ಸಿನಲ್ಲಿ ಸಿದ್ದವಾದ ಬೆಳಗಿನ ಅವಲಕ್ಕಿ, ಹಾಲು, ತತ್ತಿ, ಬಾಳೆಹಣ್ಣು ಹೊಟ್ಟೆಗೆ ಹಾಕಿಕೊಂಡು ಶಾಲಾ ಕ್ರೀಡಾ ಸಿಬ್ಬಂದಿ ಹೊರಡಲನುವಾಯಿತು. ಮಹಾರಾಜರಿಗೆ ಕರೆ ಮಾಡಿ ನಮ್ಮ ಶಾಲಾ ಸಿಬ್ಬಂದಿಯೂ ಯಾಗದ ಕುದುರೆ ಹುಡುಕಲು ಅಣಿಯಾಗಿದ್ದು, ನಮ್ಮ ಜಿಲ್ಲಾ ಆಡಳಿತಗಾರರು ತೀವ್ರವಾಗಿ ಸ್ಪಂದನ ನೀಡಿದ್ದು ನೀವೇನು ಕಾಳಜಿ ಮಾಡದಿರಿ ಅಂದಾಗ, ಮಹಾರಾಜರು ತಾವೂ ಕುದುರೆ ಹುಡುಕಲು ಹೊರಟಿದ್ದಾಗಿ ತಿಳಿಸಿದರು. ಪೂರ್ವ ದಿಕ್ಕಿನಿಂದ ಮಹಾರಾಜರು, ಪಶ್ಚಿಮ ದಿಕ್ಕಿನಿಂದ ಶಾಲಾ ಸೈನ್ಯ ಕುದುರೆ ಅರಸಿ ಕಾಡಿಗೆ ಬಿದ್ದರು.

*

      ಯಾಗದ ಕುದುರೆ ಹುಡುಕಲು ಸ್ವತಃ ಹೊರಟ ರಾಜದಂಪತಿಗಳನ್ನು ಊರಜನ ಕೋಟೆ ದ್ವಾರದ ವರೆಗೂ ಬಂದು ಬಿಳ್ಕೊಟ್ಟು ಶುಭ ಹಾರೈಸಿದರು. ಸ್ವತಃ ಜೀಪು ಚಾಲನೆ ಮಾಡುತ್ತಿದ್ದ ಮಹಾರಾಜರು ಹಿಂದೆ ವಯಸ್ಸಿನಲ್ಲಿ ಮುಂಬೈ ,ಕೊಲ್ಲಾಪುರ, ಹೈದರಾಬಾದಗಳಲ್ಲಿ ನಡೆದ ಜೀಪು ರೇಸಿನಲ್ಲಿ ಪಾಲ್ಗೊಂಡು ಬಹುಮಾನ ಪಡೆದುಕೊಂಡು ಬಂದಿದ್ದರು. ಮಹಾರಾಜರ ಜೀಪಿನಲ್ಲಿ ಪಯಣಿಸುವುದೆಂದರೆ ಮಹಾರಾಣಿಯವರಿಗೂ ರೂಢಿಯಾಗಿ ಹೋಗಿತ್ತು. ಏಳು ಸುತ್ತಿನ ಕೋಟೆ ದಾಟಿ ಬಂದಾಗ ಸುತ್ತ ಹಸಿರು ತುಂಬಿದ ಕಬ್ಬು, ತೆಂಗು, ಬಾಳೆ, ಪೇರಲ, ಚಿಕ್ಕು ತೋಟಗಳಿಂದ ಭೂರಮೆ ಶೃಂಗಾರಗೊಂಡಿದ್ದಳು. ಕುದುರೆಯ ಜಾಡು ಹಿಡಿದು ಹೊರಟ ಮಹಾರಾಜರು ದಾರಿಯೆಲ್ಲಿ ಸಿಕ್ಕವರನ್ನೇಲ್ಲ ‘ಕುದುರೆ ಕಂಡೀರಾ, ನಮ್ಮ ವಾಡೆ ಕುದುರೆ ಕಂಡೀರಾ?’ ಎಂದು ಕೇಳುತ್ತಿದ್ದರು. ಇಳೆಮಾವು ಕಾಲುವೆ ಬಳಿ ನೀರು ಕುಡಿಯಲು ಕುದುರೆಯೊಂದು ಹವಣಿಸುತ್ತಿದ್ದುದನ್ನು ಕಂಡಿದ್ದ ಒಬ್ಬ ರೈತ ಮಹಾರಾಜರಿಗೆ ನಿಖರ ಮಾಹಿತಿಯನ್ನು ನೀಡಿದಾಗ ಮಹಾರಾಜರು ತಮ್ಮ ಜೀಪು ಇಳಿದು ಮಹಾರಾಣಿಯವರೊಂದಿಗೆ ಕಾಲ್ನಡಿಗೆಯಲ್ಲಿಯೇ ಪಯಣ ಬೆಳೆಸಿದರು. ಮಹಾರಾಜರೊಂದಿಗೆ ಅಲ್ಲಲ್ಲಿ ಕೆಲಸ ಮಾಡುತ್ತಿದ್ದ ರೈತರೂ ಸೇರಿಕೊಂಡರು.

*

        ಇತ್ತ ಪೂರ್ವಾಭಿಮುಖವಾಗಿ ಸಾಗಿದ್ದ ಶಾಲಾ ಸೈನ್ಯ ಯಾವ ವಾಹನಗಳಿಗೂ ಮೊರೆ ಹೋಗದೇ ಕಾಲ್ನಡಿಗೆಯಿಂದಲೇ ತಮ್ಮ ಪಥ ಸಂಚಲನದಿಂದ ರವಿಪುರ, ಕಡೇಗೊಳ್ಳ, ವೀರಭದ್ರ ಊರುಗಳನ್ನು ದಾಟಿ ಆರ್ಧ ದಾರಿ ಸವೆಸಿದ್ದರು. ಕಂಡ ಕಂಡ ಎಮ್ಮೆ, ಆಕಳು, ಕತ್ತೆ ಒಂದೂ ಬಿಡದೇ ಎಲ್ಲ ಪ್ರಾಣಿಗಳನ್ನು ಜಾಲಾಡಿದರೂ ‘ಯಾಗದ ಕುದುರೆ’ ಕಣ್ಣಿಗೆ ಕಾಣಲಿಲ್ಲ. ಅಲ್ಲಲ್ಲಿ ಬೀದಿ ತಿರುಗಿ ಹುಲ್ಲು ಮೇಯುತ್ತಿದ್ದ ಹೆಳವರ ಕುದುರೆಗಳನ್ನು, ಕುರಿಗಳೊಂದಿಗೆ ಕುದುರೆ ಸಾಕಿಕೊಂಡಿದ್ದ ಚಿಕ್ಕೋಡಿ ಭಾಗದ ಕುರಿಗಾರರ ಕುದುರೆಗಳನ್ನು ಸ್ವತಃ ಮುಟ್ಟಿ ನೋಡಿ ಇದು ತಮ್ಮದಲ್ಲವೆಂದು ಖಾತ್ರಿ ಮಾಡಿಕೊಂಡು ಮುಂದೆ ಸಾಗಿದರು. 

*

    ಮಹಾರಾಜರು ಮಾಹಿತಿ ಸಂಗ್ರಹ ಮಾಡಿಕೊಂಡು ಕಾಲ್ನಡಿಗೆ ಬಿಟ್ಟು ಮತ್ತೆ ಜೀಪು ಹತ್ತಿದರು. ಈ ಬಾರಿ ಅವರಿಗೆ ಹಸಿರಸಿರಿ ಕಡಿಮೆಯಾಗಿ ಗರಸು ಮಣ್ಣಿನ ಮತ್ತು ಅಲ್ಲಲ್ಲಿ ಶೇಂಗಾ ಬೆಳೆದ ಹೊಲಗಳು ಹತ್ತಿದವು. ಜೀಪಿನ ಪ್ರಯಾಣವನ್ನು ಅವರು ಮುಖ್ಯ ರಸ್ತೆ ಬಿಟ್ಟು ಒಳದಾರಿಯಲ್ಲಿ ಮುಂದುವರೆಸಿದರು. ಹೊಲಗಳ ಒಡ್ಡು, ಏರಿ ಇಳಿದು ಅವರ ಜೀಪು ಪಯಣಿಸತೊಡಗಿತು. ಅಲ್ಲಲ್ಲಿ ಗುಡಿಸಲವಾಸಿಗಳು ಮೂಡಗಲ್ಲು ಸಂಸ್ಥಾನದ ರಾಜದಂಪತಿಗಳು ತಮ್ಮ ಬಳಿ ಬಂದಿರುವುದನ್ನು ಕಂಡು ಹೌಹಾರಿ ಹರ್ಷಚಿತ್ತರಾದರು. ಬಂದ ಸಂಗತಿಯನ್ನು ಮಹಾರಾಜರು ಅರುಹಿ ಕುದುರೆ ಇರುವಿಕೆಯ ಬಗ್ಗೆ ಕೇಳಿದರು. ಈ ಹೊತ್ತಿಗೆ ನೆತ್ತಿಯ ಮೇಲೆ ಬಂದ ಸೂರ್ಯ ತನ್ನ ಸುಡುಬಿಸಿಲಿನಿಂದ ಮಹಾರಾಣಿಯವರಿಗೆ ತೀವ್ರ ಆಯಾಸವನ್ನುಂಟು ಮಾಡಿದನು. ಗುಡಿಸಲ ಬಳಿಯ ಬೇವಿನ ಮರದ ತಂಪಿನಲ್ಲಿ ವಿಶ್ರಮಿಸಿಕೊಂಡು ಮಹಾರಾಣಿಯವರು ರೈತಾಪಿ ಜನರ, ಸಾಮಾನ್ಯ ಸರಳ ಬದುಕನ್ನು ಕಂಡು ತುಂಬಾ ಖುಷಿ ಅನುಭವಿಸಿದರು.

*

  ಪ್ರಖರ ಸುಡುಬಿಸಿಲಿನಲ್ಲಿ ಸೋತು ಸುಣ್ಣವಾಗಿ ಹೋಗಿದ್ದ ಇತ್ತ ಕೇಂದ್ರ ಸೈನ್ಯ ಯಾಗದ ಕುದುರೆಯ ಅನ್ವೇಷಣೆಗೆ ಬರುವಾಗ ಪೂರ್ವ ತಯಾರಿಯಿಲ್ಲದೇ, ಹುಂಬು ನಿರ್ಣಯದಿಂದ ಬಂದಿದ್ದ ಕಾರಣವಾಗಿ ಕುಡಿಯಲು ನೀರು, ತಿನ್ನಲು ಆಹಾರ ಜೊತೆಯಲ್ಲಿ ತಂದಿರಲಿಲ್ಲ. ಹೊತ್ತೇರಿದಂತೆ ಹೊಟ್ಟೆಯ ಹಸಿವು ಜಾಸ್ತಿಯಾಗಿ ಕಣ್ಣಲ್ಲಿ ಚುಕ್ಕೆ ಮೂಡಿ ತಮ್ಮ ಆಹಾರದ ಕುರಿತು ಚಿಂತಿಸತೊಡಗಿದರು. ತದಲಬಾಗಿ ಲಕ್ಕವ್ವ ನಮ್ಮ ಹೊಟ್ಟಿ ತುಂಬಸ ಎಂದು ಬೇಡಿಕೊಂಡರು. ಸಮೀಪದಲ್ಲಿಯೇ ಗೊಡದಳ್ಳಿ ಇರುವದಾಗಿಯೂ ಅಲ್ಲಿ ಹಳ್ಳಿ ಹೊಟೇ¯ದಲ್ಲಿ ಸಿಕ್ಕಷ್ಟು ತಿಂದರಾಯ್ತೆಂದು ಹೊಟ್ಟೆಯ ಹಸಿವಿನಿಂದ ದಿಕ್ಕು ಬದಲಿಸಿ ಗೊಡದಳ್ಳಿ ಕಡೆಗೆ ಹೆಜ್ಜೆ ಹಾಕಿದರು.

      ರಾಜ ದಂಪತಿಗಳ ಪಯಣ ಸುಡುಬಿಸಿಲು ಲೆಕ್ಕಿಸದೇ ಮುಂದುವರೆದಿತ್ತು. ಒಮ್ಮೆ ಜೀಪಿನಲ್ಲಿ ಮಗದೊಮ್ಮೆ ಕಾಲ್ನಡಿಗೆಯಲ್ಲಿ ಸಾಗುತ್ತಾ ಕುದುರೆಯ ಅನ್ವೇಷಣೆಯಲ್ಲಿ ತೊಡಗಿದ್ದ ಸಂಸ್ಥಾನದ ಈ ಕುಟುಂಬಕ್ಕೆ ಹುಚ್ಚು ನಾಯಿಯೊಂದರ ರೌದ್ರಾತಾರ ದರ್ಶನವಾಯಿತು. ನಾಯಿ ಕಚ್ಚುವ ರೀತಿಯಲ್ಲಿ ಮಹಾರಾಜರ ಮೈಮೇಲೆ ಏರಿ ಬರುವುದು ಮಹಾರಾಜರಿಗೆ ಸಹಿಸಿಕೊಳ್ಳಲಾಗಲಿಲ್ಲ. ರಾಣಿಯವರ ಪಿತ್ತ ನೆತ್ತಿಗೇರಿತು. ಜೀವದ ಮೇಲಿನ ಭಯದಿಂದ ಮಹಾರಾಜರು ಹಾರಿಸಿದ ಬಂದೂಕಿನ ಗುಂಡಿಗೆ ನಾಯಿಯು ಬ್ರಹ್ಮಾಂಡ ವ್ಯಾಪಿಸುವ ಹಾಗೆ ಚೀರಿ ಹೊಕ್ಕ ಗುಂಡನ್ನು ಹೊಟ್ಟೆಯಲ್ಲಿಟ್ಟುಕೊಂಡು ಸುರಿಯುವ ರಕ್ತವನ್ನು ಲೆಕ್ಕಿಸದೇ ಓಡತೊಡಗಿತು. ಅದುವರೆಗೂ ತಮ್ಮ ಪಾಡಿಗೆ ತಾವು ದೂರದಲ್ಲಿ ಹೊಲಗದ್ದೆಗಳಲ್ಲಿ ಕೆಲಸ ಮಾಡಿಕೊಂಡಿದ್ದ ರೈತಾಪಿ ಜನ ಈ ಗುಂಡಿನ ಸಪ್ಪಳ ಮತ್ತು ನಾಯಿಯ ಚೀರಾಟಕ್ಕೆ ಬೆಚ್ಚಿಬಿದ್ದು ಕೊಡಲಿ ಬಡಿಗೆಗಳೊಂದಿಗೆ ಓಡಿ ಬಂದರು. ಸ್ವತಃ ಮೂಡಗಲ್ಲು ರಾಜದಂಪತಿಗಳನ್ನು ಕಂಡ ಅವರು ಈ ಹುಚ್ಚುನಾಯಿ ಬಹಳ ದಿನಗಳಿಂದ ನಮಗೆಲ್ಲಾ ಕಾಡುತ್ತಿದ್ದು, ನಮಗೆಂದು ಸಿಗಲಿಲ್ಲ, ನಿಮ್ಮ ಕೈಯಲ್ಲಿ ಸಿಕ್ಕು ಅವಸಾನವಾಗಿದ್ದು ನಾವೆಲ್ಲಾ ನೆಮ್ಮದಿಯಿಂದ ಇರುವಂತಾಯಿತು ಎಂದು ಕೃತಜ್ಞತೆ ಹೇಳಿದರು, ಸತ್ತೇನೋ ಬಿದ್ದೇನೋ ಎಂದು ಓಟ ಕಿತ್ತಿದ ನಾಯಿಯ ಚೀರಾಟ  ನಿಧಾನಕ್ಕೆ ಸ್ಥಬ್ಧವಾಯಿತು, ರಾಜ ದಂಪತಿಗಳ ಪಯಣಕ್ಕೆ ಜೀಪು ಮುನ್ನಡೆಯಿತು..

*

   ಒಂದೆಡೆ ನೆತ್ತಿ ಸಡುವ ಉರಿಬಿಸಿಲು, ಖಾಲಿ ಹೊಟ್ಟೆಯಲ್ಲಿ ಕಂಗಾಲಾಗಿದ್ದ ಕೇಂದ್ರ ಸೈನ್ಯಕ್ಕೆ ಊರುಗೋಲವೆಂಬಂತೆ ಒಂದು ಗುಡಿಸಲು ಸಿಕ್ಕಿತು. ಒಳಹೊಕ್ಕು ನೋಡಿದಾಗ ಮುದುಕಿಯೊಬ್ಬಳು ಕಬ್ಬಿಣದ ಕಾಟದ ಮೇಲೆ ಒರಗಿದ್ದಳು. ಮನೆಯ ಇತರೆ ಸದಸ್ಯರು ದುಡಿಯಲಿಕ್ಕೆ ಹೊರಗೆ ಹೋಗಿದ್ದರು. ಹಾಕಿ ಮಾಸ್ತರರು ಗುಡಿಸಿನಲ್ಲಿ ಹಣುಕಿ ಹಾಕಿ ‘ಎಮ್ಮಾ ನಾವು ಮಾಸ್ತರ ಅದೀವು, ದೂರದಿಂದ ಬಂದೇವು. ನಮ್ಮ ಕುದುರೆ ಕಳಕೊಂಡಿತ್ತು, ಹುಡುಕಿಕೊಂಡು ಬಂದೇವ, ಈ ಕಡೆ ಏನಾರ ಬಂದೀತೇನ’ ಎಂದು ವಿಚಾರಿಸಿದರು. ಸರಿಯಾಗಿ ಕಣ್ಣು ಕಾಣದ, ಕಿವಿಯೂ ಕೇಳದ ಮುದುಕಿಗೆ ಯಾರು ಬಂದು ಏನು ಹೇಳಿದರು ಎಂದು ತಿಳಿಯದೇ ನಿದ್ದೆಗಣ್ಣಿಂದ ಎದ್ದು, ಕಣ್ಣು ಪಿಳಿ ಪಿಳಿ ಬಿಡತೊಡಗಿತು. ಇದು ಇತರ ಮಾಸ್ತರರಿಗೆ ಅರ್ಥವಾಯಿತು. ಮುದುಕಿಗೆ ನಾವು ಏನೇ ಹೇಳಿದರೂ ತಿಳಿಯುವದಿಲ್ಲ, ಎಂದು ಖಾತ್ರಿ ಮಾಡಿಕೊಂಡು, ಕೈ ಸೊನ್ನೆ ,ಬಾಯಿ ಸೊನ್ನೆ ಮಾಡಿ ಕುಡಿಯಲು ನೀರು ಕೇಳಿದರು. ‘ಆಯ್ತು.. ಆಯ್ತು ಎಂದು ಮುದುಕಿ ಅವರಿಗೆ ಕೂಡ್ರಲು ಹೇಳಿ ಸೀದಾ ಇನ್ನೊಂದು ಗುಡಿಸಿಲಿಗೆ ಹೋಗಿ ಒಂದ ಗಡಗಿ. ಒಂದ ಗ್ಲಾಸು ತಂದು ಮುಂದಿಟ್ಟಳು. ಹೋ.. ಅಜ್ಜಿ ಮಜ್ಜಿಗಿ ತಂದಾಳ ಎಂದು ತಿಳಿದು ಕಬ್ಬಡ್ಡಿ ಮಾಸ್ತರು ಎತ್ತಿ ಸುರುವಿಕೊಂಡು ಗ್ಲಾಸು ಬಾಯಿಗೆ ಹಚ್ಚಿದಾಗಲೇ ಗೊತ್ತಾಗಿದ್ದು, ಇದು ಮಜ್ಜಿಗೆ ಅಲ್ಲ ಸೇಂದಿ ಎಂದು. ಥೂ..ಥೂ ಎಂದು ಉಗುಳುತ್ತಾ ‘ಏನಬೇ ಮುದುಕಿ ನೀನು ನೀರ ಕೇಳಿದ್ರ ಮಜ್ಜಿಗಿ ಕೊಟ್ಟಿ ಅಂತಾ ಮಾಡಿದ್ವಿ, ನೀ ನೋಡಿದರ ಈ ಹೊಲಸ ಸೆರೆ ಕುಡಿಯಾಕ ಕೊಟ್ಟಿಯೆಲ್ಲ’ ಎಂದು ಗ್ಲಾಸು ಇಟ್ಟು ಮಾರುದೂರ ಜಿಗಿದು ನಿಂತರು. ಈ ಎಲ್ಲ ಸನ್ನಿವೇಶಗಳನ್ನು ದೂರದಲ್ಲಿ ಮರದ ಮೇಲೆ ಹುಣಸೇಕಾಯಿ ಹರಿಯುತ್ತಿದ್ದ ಧಡೂತಿ ಆಸಾಮಿ ಒಬ್ಬ ನೋಡಿ ಕೆಳಗಿಳಿದು ಬಂದು, ‘ರೀ ಸಾಹೇಬ್ರಾ.. ಯಾರ ಅದೀರಿ ನೀವು, ನಮ್ಮದು ಇಲ್ಲಿ ಸೇಂಧಿ ಮಾರು ಅಂಗಡಿ ಐತಿ. ನೀವು ಸೆರೆ, ಸೇಂಧಿ ಕುಡಿಯಾಕ ಬಂದೀರೇಂತ ತಿಳಿದು ನಮ್ಮವ್ವ ಸೇಂಧಿ ಕೊಟ್ಟಾಳ, ನೀವು ನೋಡಿದರ ಗರಿಗರಿ ಅಂಗಿ ಮಂದಿ ಅದಿರಿ, ಮುದುಕಿಗಿ ಏನ ತಿಳಿಬೇಕ, ಕ್ಷಮಾ ಮಾಡರಿ’ ಎಂದನು. 

    ಬಂದ ಮಾಸ್ತರು ಧಡೂತಿ ಆಸಾಮಿಗೆ ತಾವು ಬಂದ ಕಾರಣ ಅರುಹಿ ನಮ್ಮ ಕುದುರೆ ಎಲ್ಲಿಯಾದರೂ ಕಂಡರೆ ತಿಳಿಸಿ ಎಂದರು. ನಿಮ್ಮ ಕುದುರಿ ಸಿಕ್ಕರ ಎಲ್ಲಿ ತರಬೇಕ ಹೇಳ್ರೀ ತಂದ ಒಪ್ಪಿಸ್ತಿನೀ ಎಂದು ಭರವಸೆ ಕೊಟ್ಟ. ಧಡೂತಿ ಆಸಾಮಿಯಲ್ಲಿ ಒಂದು ಬಗೆಯ ಆತ್ಮೀಯತೆ ಬೆಳೆಯಿತು, ನಿಧಾನಕ್ಕೆ ಹಾಕಿ ಮಾಸ್ತರು ‘ಯಜಮಾನ ನಮಗ ಹೊಟ್ಟಿ ಹಸಿದು ಹೊಟ್ಟ್ಯಾಗ ಬೆಂಕಿ ಬಿದ್ದಾಂಗ ಆಗೈತಿ, ಇಲ್ಲಿ ಎಲ್ಲೇರ ಊಟ ಸಿಗತೈತೇನ, ರೊಕ್ಕಾ ಕೊಡತೀವ ಊಟಾ ಕೊಟ್ಟರ ಸಾಕು’ ಎಂದು ಹಲುಬಿದರು.

     ಶಾಲೆಯಲ್ಲಿದ್ದಾಗ ಅಗದಿ ಟೈಮ್ ಟೈಮ್‍ಗೆ ಊಟಾ, ನಾಷ್ಟಾ, ಹಾಲು, ಹಣ್ಣು ತಿಂದಿದ್ದ ಈ ಮಾಸ್ತರ ಮಂದೀಗಿ ಈ ಅಡವ್ಯಾಗ ಏನ ಸಿಕ್ಕರೂ ತಿನಬೇಕಂತ ಅನಿಸಿತು. ಆವಾಗ ಧಡೂತಿ ಹೇಳಿದಾ ‘ಮೊದಲ ಹೇಳಬೇಕಲ್ಲರಿ, ಸಾಹೇಬ್ರ, ಎಷ್ಟ ಆರ ಮಂದಿ ಅದಿರೆಲ್ಲಾ. ಅರ್ಧತಾಸ ಟೈಮ್ ಕೊಡ್ರಿ, ಬಿಸಿ ಬಕ್ರಿ, ಅಂಡಾಕರಿ ಮಾಡಿಕೊಡ್ತೇವಿ’ ಎಂದಾಗ ಅರ್ಧ ಊಟ ಮಾಡಿದ ತೃಪ್ತಿ ಮಾಸ್ತರರಿಗಾಯ್ತು. ದೂರದಲ್ಲಿ ಬಾಳೆಗೆ ನೀರುಣಿಸುತ್ತಿದ್ದ ತನ್ನ ಹೆಂಡತಿಯನ್ನು ಕೂಗಿ ಧಡೂತಿ ಕರೆಸಿಕೊಂಡ. ಅಡವಿಯಲ್ಲಿದ್ದರೂ ಬಹಳ ಚೆಲುವೆಯಾದ ಹೆಂಡತಿ ಬಂದು, ಬಂದವರಿಗೆ ನಮಸ್ಕರಿಸಿ ಒಳ ಹೋದಳು. ಅವರಿವರ ಗುಡಿಸಲು ತಿರುಗಿ ತತ್ತಿ ಗ್ವಾಳೆ ಮಾಡಿ, ಬ್ಯಾಡಗಿ ಕೆಂಪ ಒಣ ಮೆಣಸಿನಕಾಯಿಂದ ಮಾಡಿಟ್ಟ ಮಸಾಲಿ ಖಾರ ಹಾಕಿ ಘಮ ಘಮಾ ಅನ್ನಾಂಗ ಅಂಡಾಕರಿ ಸಾರ ಮಾಡಿ, ಬಿಸಿ ಬಕ್ರಿ ಬಡಿದು ಬಂದವರಿಗೆ ಹೊಟ್ಟೆ ತುಂಬಾ ಉಣಿಸಿದರು.

         ಮಾಸ್ತರ ಮಂದೀಗಿ ತುಂಬಾ ಖುಷಿಯಾಯ್ತು. ಈಗ ಮನೆಯವರೆಲ್ಲಾ ಪರಿಚಯಸ್ತರಂತಾದರು. ಸಣ್ಣಗೆ ಧಡೂತಿ ಮಾಸ್ತರರಿಗೆ ಕೈ ಮುಗಿದು ‘ಎಪ್ಪಾ ನಮ್ಮದೊಂದ ಹುಡುಗಿ ಕೊಡೋದು ಐತಿ, ಎಲ್ಲೇರ ವರಾ ಇದ್ರ ನೋಡ್ರಿ’ ಎಂದಾ. ಆಗ ಕಬ್ಬಡ್ಡಿ ಮಾಸ್ತರು ‘ಬೇಸಾಯ್ತು ಬಿಡು, ವರಕ್ಕೇನು ಕಡಿಮಿ, ಕನ್ಯಾನ ಸಿಗವಲ್ಲು’ ಎಂದು ಹೇಳಿ ಅವರ ಮಗಳ ಮಾಹಿತಿ ಪಡಕೊಂಡರು. ‘ನಮ್ಮ ಹುಡುಗಿ ಡಿಗ್ರಿ ಮುಗಿಸಿ, ಈಗ ಸಾಂಗ್ಲಿ ಮಹಾರಾಣಿ ಸೈನಿಕ ಸ್ಕೂಲದಾಗ ಕುದುರಿ ಸವಾರಿ ಕಲಸ್ತಾಳ, ಗಾಡಿ ಹೊಡಿತಾಳ, ಕುದುರಿ ಓಡಿಸ್ತಾಳ, ಕರಾಟೆ  ಆಡತಾಳ, ಇಂಥ ವಿದ್ಯಾ ಬರಾಂಗಿಲ್ಲ ಅನಾಂಗ ಇಲ್ಲರಿ ಭಾಳಾ ಶ್ಯಾಣ್ಯಾ ಅದಾಳ್ರಿ. ಅವಳದಟ ಮದವಿ ಮಾಡಿ ಬಿಟ್ಟರ ನಮ್ಮ ಜವಾಬ್ದಾರಿ ಮುಗೀತ ನೋಡ್ರಿ.’ಎಂದು ವಿವರಣೆ ನೀಡುತ್ತಿದ್ದಾಗ, ಇನ್ನೂ ಮದುವೆಯಾಗಿರದ ಹಾಕಿ ಮಾಸ್ತರ ಸೂರ್ಯಕಾಂತ ಕಡೆ ಎಲ್ಲರೂ ನೋಡಿ ನಸು ನಕ್ಕರು. ಸೂರ್ಯಕಾಂತನೂ ತನ್ನ ಕುಡಿ ಮೀಸೆಯಲ್ಲಿಯೇ ಸಣ್ಣಗೆ ನಕ್ಕು ಕನಸಿನ ಲೋಕಕ್ಕೆ ಬಿದ್ದನು. ಸೂರ್ಯಕಾಂತ ಮಾಸ್ತರರಿಗೂ ಇನ್ನೂ ಲಗ್ನ ಆಗಿರಲಿಲ್ಲ, ಕನ್ಯಾ ಹುಡುಕುತಿದ್ದರು. ಬಹುಶಃ ರೊಟ್ಟಿ ಜಾರಿ ತುಪ್ಪದಾಗ ಬಿದ್ದಂಗ ಆಯ್ತು. ಮಾಸ್ತರ ಮಂದೀಗಿ ಬಂದ ಜವಾಬ್ದಾರಿ ನೆನಪ ಆಗಿ ‘ನಾವ ಮತ್ತ ಬರತಿವರಿ ಹಿರ್ಯಾರ, ಪರಿಚಯ ಆಗಿ ಭಾಳ ಚಲೋ ಅಯ್ತು, ನಮ್ಮ ಕುದುರಿ ಸಿಕ್ಕರ ತಿಳಿಸ್ರೀ, ಎಂದು ಎದ್ದು ದುಡ್ಡು ಕೊಡಲು ಹೋದರು. ತ್ವಾಟದ ದಂಪತಿ ‘ಬ್ಯಾಡ್ರಿ ಮಾಸ್ತರ ಮಂದಿ ಅದಿರಿ, ನಿಮ್ಮ ಕಡೆ ದುಡ್ಡು ಇಸಕೊಳ್ಳೋದು ಸರಿ ಬರಾಂಗಿಲ್ಲರೀ’ ಎಂದು ಹೇಳಿ ಗಂಡ ಹೆಂಡತಿ ಮಾಸ್ತರರಿಗೆ ಕೈ ಮುಗಿದು ಬಿಳ್ಕೊಟ್ಟರು.

*

       ಇತ್ತ ಮೂಡಗಲ್ಲು ಸಂಸ್ಥಾನದ ದಂಪತಿಗಳ ಪಯಣ ಕುದುರೆಯನ್ನರಸಿ ಮುಂದೆ ನಡೆದಿತ್ತು. ಯಾವ ಪ್ರಗತಿದಾಯಕ ಫಲಿತಾಂಶ ಲಭ್ಯವಾಗದೇ ದಂಪತಿಗಳಿಗೆ ನಿರಾಸೆಯಾಯಿತು, ಪಾಪ ಯಾಗದ ಕುದುರೆ ತಪ್ಪಿಸಿಕೊಂಡು ಯಾವ ಪರಿಸ್ಥಿತಿ ಅನುಭವಿಸುತ್ತಿದೆಯೋ ಎಂದು ಮರುಗಿದರು. ಸಂಜೆಯಾಗುತ್ತಾ ಬಂದಿತ್ತು, ಇನ್ನು ಹುಡುಕುವುದು ತರವಲ್ಲ ಎಂದು ತಮ್ಮ ಅರಮನೆ ಕಡೆಗೆ ವಾಪಸ್ಸು ಪ್ರಯಾಣ ಹೊರಟರು. ಇತ್ತ ಗುಣಸಿರಿ ಮಾಸ್ತರ ಮಂದಿಗೂ ನಿರಾಸೆಯಾಗಿ ಮರಳಿದರು, ಆಗಿನ್ನೂ ಮೊಬೈಲ್ ಸಂಪರ್ಕವಿರಲಿಲ್ಲ. ರಾತ್ರಿ ಬಂದು ಲ್ಯಾಂಡ್ ಫೋನ್‍ನಿಂದ ಕರೆ ಮಾಡಿ ನಿರಾಸೆ ಹಂಚಿಕೊಂಡರು. ನಾಳೆಗೆ ಏನಾದರೂ ಮಾಡಿದರಾಯ್ತೆಂದು ಇಂದಿನ ದಿನವನ್ನು ಹುಡುಕುವುರಲ್ಲೇ ಕಳೆದು ರಾತ್ರಿ ಊಟ ಮಾಡಿ ನಿದ್ರೆಯಲ್ಲಿ ಕಳೆದು ಹೋದರು.

*

      ಮರುದಿನ ರವಿವಾರ ಬೆಳ್ಳಂ ಬೆಳಿಗ್ಗೆ ಜಿಲ್ಲಾ ಕೇಂದ್ರದಿಂದ ಕೇಂದ್ರದ ಆಡಳಿತ ಮಂಡಳಿ ದೌಡಾಯಿಸಿ ಬಂದರು. ಅರಮನೆಯ ಆವರಣದಲ್ಲಿ ಸಭೆ ಜರುಗಿತು. ಪಾಠ ಮಾಡುವ ಮಾಸ್ತರು, ಆಟದ ಮಾಸ್ತರು ಹಾಗೂ ಉಳಿದ ಸಿಬ್ಬಂದಿ ಎಲ್ಲರೂ ಸಭೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲರಲ್ಲೂ ಆತಂಕ ಮನೆ ಮಾಡಿತ್ತು. ಮಂತ್ರಿಗಳು ಕೊಟ್ಟ ಯಾಗದ ಕುದುರೆ ಎಲ್ಲಿಯೇ ಇರಲಿ ಅದನ್ನು ಹುಡುಕುವದೆಂದು ಮತ್ತು ಸಿಗದಿದ್ದರೆ ಪೊಲೀಸ್ ಸ್ಟೇಷನ್‍ಗಳಿಗೆ ತಿಳಿಸಿ ಹುಡುಕಲು ಹಚ್ಚುವದೆಂದು ಸಭೆ ತೀರ್ಮಾನ ತೆಗೆದುಕೊಂಡು, ಜವಾಬ್ದಾರಿಗಳ ಹಂಚಿಕೆ ಮಾಡುತ್ತಿದ್ದಾಗ ಹೊರಗೆ ಮಕ್ಕಳು ಜೋರಾಗಿ ಮುಗಿಲು ಕತ್ತರಿಸಿ ಬೀಳುವ ಹಾಗೆ ಹೋ ಎಂದು ಚೀರತೊಡಗಿದರು, ಯಾರಿಗೆ ಏನಾಯಿತೆಂದು ಎಲ್ಲರೂ ತಡಬರಿಸಿ ಹೊರ ಓಡಿ ಬಂದರು. ಮಕ್ಕಳು ಸಂಭ್ರಮದಿಂದ ಕುಣಿಯುತ್ತಾ ಜೈಕಾರ ಹಾಕುತ್ತಾ ‘ನಮ್ಮ ಕುದುರೆ ಬಂತು ನಮ್ಮ ಕುದುರೆ ಬಂತು’ ಎಂದು ಚೀರತೊಡಗಿದರು. ಎಲ್ಲರೂ ಮೂಕ ವಿಸ್ಮಿತರಾಗಿ ಗೇಟಿನ ಕಡೆ ನೋಡಿದರು. ಕಣ್ಣು ಮೂಗಿನಿಂದ ಚೆಲುವೆಯಾದ, ಎತ್ತರ ನಿಲುವಿನ ಹುಡುಗಿಯೊಬ್ಬಳು ಝಾನ್ಸಿರಾಣಿ ರೀತಿಯಲ್ಲಿ ಕುದುರೆಯನ್ನು ಹತ್ತಿ ಅದನ್ನು ಓಡಿಸಿಕೊಂಡು ಬಂದಿದ್ದಳು. ನೇರ ಆಡಳಿತ ಕಛೇರಿ ಮುಂದೆ ಬಂದು ಕುದುರೆ ಮೇಲಿಂದ ಜಿಗಿದು ತಮ್ಮ ಕುದುರೇನ ತಂದೀನಿ ತೆಗೆದುಕೊಳ್ಳಿ ಎನ್ನುವ ರೀತಿಯಲ್ಲಿ ಕೈ ಮುಗಿದು ಆಡಳಿತಗಾರರಿಗೆ ಒಪ್ಪಿಸಿದಳು. ಎಲ್ಲರಲ್ಲೂ ಆಶ್ಚರ್ಯ ಇವಳಾರು ಎಂದು. ಎಲ್ಲರೂ ಬಹಳ ಸಂತೋಷ ಬಾರಮ್ಮ ಎಂದು ಅವಳನ್ನು ಅತ್ಯಂತ ಆಪ್ತವಾಗಿ ಮಾತನಾಡಿಸಿ ಅವಳಿಗೆ ಕೃತಜ್ಞತೆ ಹೇಳಿದರು. ಅದೇ ಹೊತ್ತಿಗೆ ಹಿಂದೆ ಬೈಕಿನಲ್ಲಿ ನಿನ್ನೆ ಊಟ ಕೊಟ್ಟ ಧಡೂತಿಯೂ ಮತ್ತು ಅವನ ಹೆಂಡತಿಯೂ ಬಂದರು. ಬಂದವರೇ ಆಡಳಿತ ಮಂಡಳಿ ಅವರಿಗೆ ಕೈ ಮುಗಿದು ‘ಇವಳು ನನ್ನ ಮಗಳು ಸಿರಿವಂತೆ, ನಿನ್ನೆ ಸಂಜೆ ಹೊತ್ತಿಗೆ ಸಾಂಗ್ಲಿಯಿಂದ ಬಂದು, ಬಸ್ಸಿನಿಂದ ಇಳಿದು  ನಮ್ಮ ತ್ವಾಟಕ್ಕೆ ಬರುವಾಗ ದಾರಿಯಲ್ಲಿ  ಮುಳ್ಳು ಕಂಟಿಯ ಹಳೆ ಬಾವಿಯಲ್ಲಿ ಈ ಕುದುರೆ ಬಿದ್ದದ್ದನ್ನು ಗಮನಿಸಿ ನಮ್ಮನ್ನೆಲ್ಲಾ ಕರೆದಳು. ನಾವೆಲ್ಲಾ ಸೇರಿ ಅದನ್ನು ಮೇಲೆ ತಂದು ಆರೈಕೆ ಮಾಡಿದೆವು. ನಿನ್ನೆಯಷ್ಟೇ ತಮ್ಮ ಮಾಸ್ತರ ಮಂದಿ ತಮ್ಮ ಕುದುರೆ ಕಳೆದದ್ದು ಹೇಳಿದ್ದರು, ಸ್ವತಃ ಕುದುರೆ ಸವಾರಿ ಬಲ್ಲ ನಮ್ಮ ಮಗಳು ತಮ್ಮ ಕುದುರೆ ತಂದಿದ್ದಾಳೆಂದು ವಿವರಿಸಿದರು. ದಂಪತಿಯ ಕಾಳಜಿಗೆ ಮತ್ತು ಅವರ ಮಗಳ ಸಾಹಸಕ್ಕೆ ಮೆಚ್ಚಿ ಆಡಳಿತ ಮಂಡಳಿಯವರು ತುಂಬಾ ಖುಷಿಗೊಂಡರು. ಅರಮನೆಯ ಆವರಣದಲ್ಲಿ ಕರೆದು ಸತ್ಕರಿಸಿದರು. ಮಹಾರಾಜರಿಗೆ ಸುದ್ದಿ ಮುಟ್ಟಿಸಿ ಸಂತಸ ಹಂಚಿಕೊಂಡರು. ಮತ್ತೆ ಅವಳಿಗೆ ಇಂದಿನಿಂದ ನೀನು ನಮ್ಮ ಶಾಲೆಯಲ್ಲಿಯೇ ಮಕ್ಕಳಿಗೆ ಕುದುರೆ ತರಬೇತಿ ನೀಡಲು ಸೇರಿಕೊಳ್ಳಬೇಕೆಂದು ನಾವು ಅತ್ಯಂತ ಸಂತೋಷದಿಂದ ನೇಮಕ ಮಾಡಿಕೊಳ್ಳುತ್ತಿದ್ದೇವೆಂದು ಘೋಷಿಸಿದರು. ದಂಪತಿಗಳ ಹರುಷಕ್ಕೆ ಪಾರವೇ ಇರಲಿಲ್ಲ, ಈ ಎಲ್ಲ ಘಟನೆಗಳನ್ನು ಕಣ್ಣು ಬಿಡದೇ ಗಮನಿಸುತ್ತಿದ್ದ ಹಾಕಿ ಮಾಸ್ತರರ ಖುಷಿ ಇಮ್ಮಡಿಯಾಗಿತ್ತು. ಉಳಿದ ಮಾಸ್ತರು ಹಿಂದಿನ ದಿನದ ಸಂಗತಿಯನ್ನು ಆಡಳಿತ ಮಂಡಳಿಯವರಿಗೆ ವಿವರಿಸಿದಾಗ ಅವರೆಲ್ಲಾ ಇದೊಂದು ಬೊನಸ್ ಖುಷಿಯೆಂದು ಬೀಗರನ್ನು ಒಪ್ಪಿಸಿ, ಹಾಕಿ ಮಾಸ್ತರಗೆ ಅವಳನ್ನು ತೆಗೆದುಕೊಳ್ಳವ ತೀರ್ಮಾನವಾಯಿತು. ಕುದುರೆಯೊಂದಿಗೆ ಬಂದವಳು ಇಲ್ಲಿಯೇ ಒಂದಾಗಿ ಉಳಿದಳು.

#


ವಿಳಾಸ : 

ಡಾ.ಪ್ರಕಾಶ ಗ.ಖಾಡೆ 

ಮನೆ ನಂ .ಎಸ್.135,  ಸೆಕ್ಟರ್ ನಂ. 63, ನವನಗರ, ಬಾಗಲಕೋಟೆ-587103

ಮೊ. 9845500890

Tuesday, September 19, 2023

ಧಾರವಾಡ ಗೆಳೆಯರ ಗುಂಪು - ಡಾ.ಪ್ರಕಾಶ ಗ.ಖಾಡೆ

 ವಿಶೇಷ ಲೇಖನ:

ಧಾರವಾಡ ಗೆಳೆಯರ ಗುಂಪು

- ಡಾ.ಪ್ರಕಾಶ ಗ.ಖಾಡೆ


( ಕಳೆದ ಶತಮಾನದ ಆರಂಭದಲ್ಲಿ ಧಾರವಾಡದಲ್ಲಿ ಹುಟ್ಟಿಕೊಂಡ ‘ಗೆಳೆಯರ ಗುಂಪು’ ಹುಟ್ಟು ಹಾಕಿದ ಸಾಹಿತ್ಯ,ಸಾಂಸ್ಕೃತಿಕ ಅನನ್ಯತೆ ಮಾದರಿಯಾದುದು,ಈಗ ಅದನ್ನು ನೆನೆಸಿಕೊಳ್ಳುವುದೇ ಒಂದು ಸಾರ್ಥಕ ಭಾವ,ಅದರ ಬಹುಮುಖಿ ನೆಲೆಯ ಒಂದು ನೋಟ ಈ ಬರಹ.)


ಕನ್ನಡ ಸಾಹಿತ್ಯದ ಮುಖ್ಯ ಸಾಂಸ್ಕೃತಿಕ ಕೇಂದ್ರಗಳಲ್ಲಿ ಧಾರವಾಡವೂ ಒಂದು. ನವೋದಯದ ನಾಲ್ಕು ಕೇಂದ್ರಗಳಾದ ಧಾರವಾಡ,ಮೈಸೂರು,ಮಂಗಳೂರು ಮತ್ತು ಹಲಸಂಗಿ ಈ ನಾಲ್ಕು ಕೇಂದ್ರಗಳು ರೂಪಿಸಿದ ಸಾಹಿತ್ಯವು ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಭೌಗೋಳಿಕೆ ಕಾರಣಗಳಿಂದಾಗಿ ಬೇರೆ ಬೇರೆಯಾಗಿತ್ತು. ದೇಶದ ಸ್ವಾತಂತ್ರ್ಯ ಚಳವಳಿ, ಗಾಂದಿsೀವಾದ, ಕರ್ನಾಟಕ ಏಕೀಕರಣ, ಭಾಷೆ ಸಂಸ್ಕೃತಿಗಳ ಪುರುಜ್ಜೀವನ, ಸುಧಾರಣವಾದ, ಇಂಗ್ಲಿಷ್ ರೊಮ್ಯಾಂಟಿಕ ಕಾವ್ಯದ ಪ್ರಭಾವ ಇತ್ಯಾದಿಗಳು ಆ ಕಾಲದ ಸಾಹಿತ್ಯಕ್ಕೆ ಒಟ್ಟಿನಲ್ಲಿ ವಿಶಾಲವಾದ ಏಕತೆಯನ್ನು ಒದಗಿಸಿದವು. ಆದರೆ ಈ ಉದ್ದೇಶ ಪ್ರಕಟವಾದ ರೀತಿಗಳು ಮಾತ್ರ ಆಯಾ ಭಾಗಗಳಿಗೆ ವಿಶಿಷ್ಟವಾಗಿದ್ದವು. ಆಯಾ ಭಾಗಗಳು ಎದುರಿಸಿದ ಕರ್ಷಣಗಳ ತೀವ್ರತೆಯೂ ಬೇರೆಯಾಗಿತ್ತು. ಹಾಗೆಯೇ ಅಬಿsವ್ಯಕ್ತಿಯ ಪ್ರೇರಣೆಗಳೂ ಬೇರೆಯಾಗಿದ್ದವು. ಈ ಬಿsನ್ನತೆಯಿಂದಾಗಿ ಅವುಗಳ ಕಾವ್ಯಸತ್ವ ಹಾಗೂ ಒಳರಚನೆಗಳೆಲ್ಲ ಸೂಕ್ಷ್ಮವಾದ ಹಲವಾರು ವ್ಯತ್ಯಾಸಗಳು ಕಾಣಿಸಿಕೊಂಡಿವೆ. ಇಂಥ ವ್ಯತ್ಯಾಸಗಳಲ್ಲಿ ಧಾರವಾಡ ಕೇಂದ್ರಕ್ಕೆ ಇರುವ ವಿಶಿಷ್ಟತೆ ಜಾನಪದೀಯ ಹಿನ್ನೆಲೆಯ ಸತ್ವಯುತ ಕಾವ್ಯ ರಚನೆಯ ಪ್ರಧಾನ ಬಿsತ್ತಿಯಾಗಿದೆ.

‘ರಾಜಕೀಯವಾಗಿ ಈ ಕಾಲದಲ್ಲಿ ಈ ಭಾಗ ಬ್ರಿಟಿಷರ ನೇರ ಆಡಳಿತಕ್ಕೆ ಒಳಪಟ್ಟಿತ್ತು. ಈ ಚೌಕಟ್ಟಿನೊಳಗೆ ಹಲವು ಭಾಗಗಳು ಮರಾಠರ ಸಂಸ್ಥಾನಗಳಾಗಿದ್ದವು.ಧಾರವಾಡ ಭಾಗವು ಮುಂಬಯಿ ರಾಜ್ಯಕ್ಕೆ ಸೇರಿದ್ದರಿಂದಾಗಿ ಇಲ್ಲಿಯ ರಾಜಕೀಯ, ಶೈಕ್ಷಣಿಕ ಸಂಪರ್ಕಗಳು ಮರಾಠಿ ಸಂಸ್ಕøತಿಯ ಪ್ರಾಬಲ್ಯದಲ್ಲಿದ್ದ ಪುಣೆ ಮುಂಬಯಿಗಳಿಗೆ ನಿಕಟವಾಗಿದ್ದವು. ಹೀಗಾಗಿ ಧಾರವಾಡ ಕೇಂದ್ರವು ಬ್ರಿಟಿಷ್ ರಾಜಸತ್ತೆ ಮತ್ತು ಮರಾಠಿ ಸಾಂಸ್ಕøತಿಕ ಸತ್ತೆಗಳೆರಡರ ಜೊತೆಗೂ ಏಕಕಾಲಕ್ಕೆ ಸೆಣಸಿ ತನ್ನ ಅಸ್ತಿತ್ವ ಗುರುತಿಸಿ ಕೊಳ್ಳಬೇಕಾಯಿತು. ಒಂದೆಡೆ ಕನ್ನಡ ಕಟ್ಟುವ ಕೆಲಸ ಮತ್ತೊಂದೆಡೆ ಆ ಕಾಲಕ್ಕೆ ತೀವ್ರವಾಗಿದ್ದ ರಾಷ್ಟ್ರೀಯ ಚಳವಳಿಗೆ ಪ್ರೇರಕ ಶಕ್ತಿಯಾಗಿ ನಿಲ್ಲುವ ಕಾರ್ಯ ಎರಡನ್ನೂ ಈ ಕೇಂದ್ರದ ಕವಿಗಳು ಒಟ್ಟಿಗೇ ತೋರಿದರು. ಹೀಗಾಗಿ ಬೇರೆ ಭಾಗದ ಕಾವ್ಯಗಳಿಗಿಂತ ಧಾರವಾಡ ಕೇಂದ್ರದಲ್ಲಿ ರಾಷ್ಟ್ರಪ್ರೇಮದ ಗೀತೆಗಳು, ನಾಡಗೀತೆಗಳು, ಭಾವಗೀತಗಳಾಗಿ, ಲಾವಣಿಗಳಾಗಿ ವ್ಯಾಪಕವಾಗಿ ರಚಿತವಾದವು ಮತ್ತು ಅವುಗಳನ್ನು ಹಾಡಿಕೊಂಡು ಬರಲಾಯಿತು.

ಅಖಂಡ ಕರ್ನಾಟಕದ ಪರಿಕಲ್ಪನೆಯನ್ನಿಟ್ಟುಕೊಂಡು ಕನ್ನಡಿಗರೆಲ್ಲರೂ ಕೊಡವರು, ತುಳುವರು, ಬಡಗರು, ಸಾರಸ್ವತರು, ಮೈಸೂರವರು, ಉತ್ತರದವರು ಹಾಡಬೇಕಾದ ‘ನನ್ನದು ಈ ಕನ್ನಡ ನಾಡು’ ಸಂಪಾದಿತ ಕವನ ಸಂಕಲನವನ್ನು ಧಾರವಾಡದ ಗೆಳೆಯರ ಗುಂಪಿನ ಕವಿಗಳು 1928ರಲ್ಲಿ ತಂದರು. ಇದು ಶ್ರೀ ಅವರು ಮೈಸೂರು ಭಾಗದಲ್ಲಿ ಸಂಪಾದಿಸಿದ ‘ಕನ್ನಡ ಬಾವುಟ’ (1938) ಬರುವುದಕ್ಕೆ ಹತ್ತು ವರ್ಷ ಮೊದಲೇ ಬಂದಿತ್ತು. ಕರ್ನಾಟಕ ಏಕೀಕರಣಕ್ಕೆ ಮುನ್ನುಡಿಯಾಗಿ ಬಂದ ‘ನನ್ನದು ಈ ಕನ್ನಡ ನಾಡು’ ಸಂಕಲನದಲ್ಲಿ ಚಿಕುಪಾಧ್ಯಾಯ, ನೃಪತುಂಗ, ಬಿ.ಎಂ.ಶ್ರೀ, ಕವಿಶಿಷ್ಯ, ಮಂ. ಕಾಮತ, ಆದಿಪಂಪ, ಸರ್ವಜ್ಞ, ಆಂಡಯ್ಯ ಇವರೊಂದಿಗೆ ಅಂಬಿಕಾತನಯದತ್ತ, ಆನಂದ ಕಂದ, ರಸಿಕ ರಂಗ (ರಂ.ಶ್ರೀ.ಮುಗಳಿ) ಹಾಗೂ ವಿನಾಯಕ ಅವರ ಕವಿತೆಗಳು ಭಾಷಾ ಪ್ರೀತಿಯೊಡನೆ, ಕಾವ್ಯ ಪ್ರೀತಿಯನ್ನು ಹುಟ್ಟು ಹಾಕಿದವು. ಗೆಳೆಯರ ಗುಂಪಿನ ಈ ಸಾಂಘಿಕ ಸಾಹಿತ್ಯಕ ಕಾರ್ಯ ಆ ಕಾಲಕ್ಕೆ ಒಟ್ಟಿಗೆ ಅನೇಕ ಕವಿಗಳನ್ನು ರೂಪಿಸಿತು. 1929ರಲ್ಲಿ ಆಲೂರು ವೆಂಕಟರಾಯರು ‘ಜಯಕರ್ನಾಟಕ’ ಪತ್ರಿಕೆಯ ಸಂಪೂರ್ಣ ಜವಾಬ್ದಾರಿಯನ್ನು ಗೆಳೆಯರ ಗುಂಪಿಗೆ ವಹಿಸಿದರು. 1930 ರಲ್ಲಿ ‘ಹಕ್ಕಿ ಹಾರುತಿದೆ’ ಎಂಬ ಕವನ ಸಂಕಲನವನ್ನು ಗುಂಪಿನ ಗೆಳೆಯರು ಪ್ರಕಟಿಸಿದರು. ‘ಕನ್ನಡ ನವೋದಯ ಕಾಲದಲ್ಲಿ ಹೊಸ ಕಾವ್ಯದ ಹೊಸ ಸಾಹಿತ್ಯದ ಪ್ರಾರಂಭ ಮಾಡಿದ ಗೆಳೆಯರ ಗುಂಪು ಬೇಂದ್ರೆಯವರ ನೇತೃತ್ವದಲ್ಲಿ ಹಿರಿದಾದ ಕಾರ್ಯ ಮಾಡಿತು. ಈ ಗುಂಪಿನ ಪ್ರೇರಣೆ, ಪ್ರಭಾವ ಸಮಗ್ರ ಕನ್ನಡ ಸಾಹಿತ್ಯ ಪಡೆದದ್ದನ್ನು ಅಲ್ಲಗಳೆಯಲಾಗದು. ಸಾಹಿತ್ಯಿಕವಾಗಿ ಈ ಭಾಗದ ಕಾವ್ಯ ಪಡೆದುಕೊಂಡ ಪ್ರೇರಣೆಗಳು ಮತ್ತು ತಾಳಿದ ರೂಪಗಳು ಕೂಡ ಬಿsನ್ನವಾಗಿವೆ. ಇಂಗ್ಲಿಷ್ ಕಾವ್ಯದ ಪ್ರಭಾವ ಇಲ್ಲಿ ಅಷ್ಟಾಗಿ ಹೇಳಿಕೊಳ್ಳುವಷ್ಟಿರಲಿಲ್ಲ, ಇಲ್ಲಿಯ ಕಾವ್ಯ ಜಾನಪದ ಮೂಲವನ್ನೇ ಅವಲಂಬಿಸಿತು.

‘ಗೆಳೆಯರ ಗುಂಪಿ’ನವರ ಕನ್ನಡ ಕಾಯಕಕ್ಕೆ ಇಲ್ಲಿ ಶಾಂತ ಕವಿಗಳು, ಕಾವ್ಯಾನಂದ ಪುಣೇಕರ, ಶ್ರೀಧರ ಖಾನೋಳಕರ ಮುಂತಾದವರು ಮುಂಬೆಳಗಿನ ಕಾಲದಲ್ಲಿ ಹಳೆಯ ರೀತಿಯಲ್ಲಿಯೇ ಹೊಸತವನ್ನು ತರಲು ಪ್ರಯತ್ನಿಸಿ ಕನ್ನಡ ಮತ್ತು ದೇಸೀ ಮೂಲ ವಾತಾವರಣವನ್ನು ನಿರ್ಮಾಣ ಮಾಡಿದ್ದರು. ಕಾವ್ಯ ಹೊಸತನದ ಕಡೆಗೆ ಮುಖ ಮಾಡಿತು. ಪದ್ಯಗಳಿಗಾಗಿಯೇ ‘ಪ್ರಭಾತ’ ಎಂಬ ಪತ್ರಿಕೆ ಆರಂಭವಾಯಿತು. ಇದು ಎರಡು ವರ್ಷ ನಡೆದು 1920ರಲ್ಲಿ ನಿಂತು ಹೋಯಿತು. ಇದೇ ಕಾಲಕ್ಕೆ “ಮರಾಠಿ, ಹಿಂದೂಸ್ಥಾನಿ ಮುಂತಾದ ಅನ್ಯ ಭಾಷೆಗಳೊಳಗಿನ ಕವಿತೆಗಳನ್ನು ಕನ್ನಡ ಕವಿತೆಗಳನ್ನೂ ಬೆರೆಸಿಕೊಂಡು ಭತ್ತ ಮೊಸರು ಕೂಡಿಸಿ ಕಲಸಿದಂತೆ” ಕೀರ್ತನಗಳನ್ನು ನಡೆಸುವುದನ್ನು ಖಂಡಿಸಲು ಶಾಂತ ಕವಿಗಳು ಅಚ್ಚಗನ್ನಡದಲ್ಲಿ ಬರೆದ ಕೀರ್ತನಗಳು ಜನರ ಮಾತಿನ ಹತ್ತಿರ ಭಾಷೆಯಲ್ಲಿದ್ದು ಜನಪ್ರಿಯವಾದವು. ಒಂದು ರೀತಿಯಲ್ಲಿ ಈ ಭಾಗದಲ್ಲಿ ಜನಪದ ಗೀತೆಗಳಲ್ಲಿ ಆಸಕ್ತಿ ಹೆಚ್ಚಲು ಈ ಕೀರ್ತನೆಗಳ ಪ್ರಕಟಣೆಯೂ ಕಾರಣವಾಯಿತು. ಇಲ್ಲಿ ಮುಖ್ಯವಾಗಿ ಹಲವಾರು ಅನುಭಾವಿಗಳು ಹುಟ್ಟು ಹಾಕಿದ್ದ ಅನುಭಾವ ಕಾವ್ಯ ಪರಂಪರೆ ಇಲ್ಲಿನ ಕವಿಗಳಿಗೆ ದೇಸೀಯತೆಯ ಸಂದರ್ಭವನ್ನು ಕಟ್ಟಿಕೊಟ್ಟಿತ್ತು. 

ಜಾನಪದದ ಸೆಳೆತ :

ಗೆಳೆಯರ ಗುಂಪಿನ ಆಶಯಗಳು ಆರಂಭಕ್ಕೆ ಹೊಸ ಕಾವ್ಯ ಕಟ್ಟುವ ಪರಿದಿsಯಲ್ಲಿ ಹಲವಾರು ವಿಷಯಗಳು ಸೇರಿಕೊಂಡಿದ್ದವು. ಪ್ರತಿಯೊಬ್ಬರೂ ಕವನ ರಚನೆಯ ಸಾಧನೆಯನ್ನು ಮಾಡಬೇಕು, ಕವಿತ್ವ ಎಂಬುದು ಕೇವಲ ಮಾನವ ಸೃಷ್ಟಿಯಲ್ಲ. ಅದು ಪರಮಾತ್ಮನ ಅನುಗ್ರಹದ ಅನುಭಾವ ಮಾರ್ಗ ಎಂದು ಒಂದು ಚೌಕಟ್ಟು ಹಾಕಿಕೊಂಡು ಕಾವ್ಯ ಕೃಷಿಗೆ ಇಳಿದಿದ್ದ ಕವಿಗಳ ಗುಂಪಿನಲ್ಲಿ ಹಲಸಂಗಿ ಗೆಳೆಯರ ಗುಂಪಿನ ಮಧುರಚೆನ್ನರು ಮತ್ತು ಅವರ ಗೆಳೆಯರು ಸೇರಿಕೊಳ್ಳುವ ಮೂಲಕ ‘ಜಾನಪದ ಚಿಂತನೆ’ ಆರಂಭವಾಯಿತು. ಮರೆತು ಹೋಗುತ್ತಿದ್ದ ಜನಪದ ಗೀತೆಗಳನ್ನು ಸಂಗ್ರಹಿಸಿ, ಆ ಜಾನಪದ ಮಟ್ಟುಗಳನ್ನು ಸಾಹಿತ್ಯಕ್ಕೆ ಉಪಯೋಗಿಸುವ ಕಾರ್ಯವನ್ನು ಆರಂಬಿsಸಿದರು. ಇದಕ್ಕೆ ಹಿನ್ನೆಲೆಯಾಗಿ ‘ಹಲಸಂಗಿ ಗೆಳೆಯರ’ ಗುಂಪು ‘ಜಯ ಕರ್ನಾಟಕ’ ಪತ್ರಿಕೆಯಲ್ಲಿ ಪ್ರತಿ ತಿಂಗಳೂ ಬೇರೆ ಬೇರೆ ಭಾಗಗಳಲ್ಲಿ ಸಂಗ್ರಹಿಸಿದ ಜನಪದ ಹಾಡು, ತ್ರಿಪದಿ, ಕಥನ ಕವನ, ಲಾವಣಿಗಳನ್ನು ಪ್ರಕಟಿಸಿದರು. ಮುಂದೆ ಕಾವ್ಯಗುಣದ ದೃಷ್ಟಿಯಿಂದ ಅದ್ವಿತೀಯವೆನಿಸಿದ ‘ಗರತಿಯ ಹಾಡು’, ‘ಜೀವನ ಸಂಗೀತ’, ‘ಮಲ್ಲಿಗೆ ದಂಡೆ’ ಜನಪದ ಗೀತ ಸಂಕಲನಗಳು ಪ್ರಕಟವಾದವು. ಈ ಜನಪದ ಕಾಯಕದ ಪ್ರಭಾವದಿಂದ ಉತ್ತರ ಕರ್ನಾಟಕದ ಯಾವ ಕವಿಯೂ ಜಾನಪದ ಸೆಳೆತದಿಂದ ಪಾರಾಗಲಿಲ್ಲವೆನ್ನುವುದು ಮಹತ್ವದ ಸಂಗತಿಯಾಗಿದೆ. ಬೇಂದ್ರೆ, ಮಧುರಚೆನ್ನ, ಆನಂದ ಕಂದ, ಶ್ರೀಧರ ಖಾನೋಳ್ಕರ, ವಿನಾಯಕ, ರಂ.ಶ್ರೀ.ಮುಗಳಿ, ಡಿ.ಎಸ್.ಕರ್ಕಿ, ಎಸ್.ಡಿ.ಇಂಚಲ, ಚೆನ್ನವೀರ ಕಣವಿ, ಚಂದ್ರಶೇಖರ ಕಂಬಾರ ಮೊದಲಾದ ಅನೇಕರು ಈ ಜಾನಪದವನ್ನು ತಮ್ಮದೇ ರೀತಿಯಲ್ಲಿ ಬಳಸಿಕೊಂಡರು. “ಬೇಂದ್ರೆ, ಖಾನೋಳ್ಕರ, ಆನಂದ ಕಂದ, ಕಂಬಾರರಂತೂ ಜನಪದ ಕಾವ್ಯ ಛಂದಸ್ಸಿನ ಮೂಲಾಂಶವಾದ ಅಂಶಗಣವನ್ನು ವ್ಯಾಪಕವಾಗಿ, ವೈವಿಧ್ಯಪೂರ್ಣವಾಗಿ ಬಳಸಿಕೊಂಡು ಆಧುನಿಕ ಕಾವ್ಯದ ಲಯಕ್ಕೆ ಹೊಸದೊಂದು ಬೀಸನ್ನು, ಚೆಲುವನ್ನು ತಂದರು. ಆಡುಮಾತಿನ ಬಳಕೆ ಈ ಭಾಗದ ಅನೇಕ ಕವಿಗಳ ಅಂಕಿತವಾಯಿತು. ಉಳಿದ ಭಾಗಗಳ ಕನ್ನಡ ಕವಿಗಳ ಮೇಲೆ ಜನಪದ ಕಾವ್ಯ ಇಂಥ ಪ್ರತ್ಯಕ್ಷ ಮತ್ತು ದಟ್ಟ ಪ್ರಭಾವವನ್ನು ಬೀರಲಿಲ್ಲ” ಎಂಬ ಗಿರಡ್ಡಿ ಗೋವಿಂದರಾಜ ಅವರ ಮಾತು ನಿಚ್ಚಳವಾಗಿದೆ.

ಧಾರವಾಡ ಕೇಂದ್ರದ ‘ಗೆಳೆಯರ ಗುಂಪು’ ಕಾವ್ಯಕ್ಷೇತ್ರದಲ್ಲಿ ಉಂಟು ಮಾಡಿದ ಶ್ರದ್ಧಾಪೂರ್ಣ ಕಾಯಕ ಕನ್ನಡಕ್ಕೇ ಹೊಸತಾದುದು. 1921-1933ರ ಹನ್ನೆರಡು ವರ್ಷಗಳು ‘ಗೆಳೆಯರ ಗುಂಪಿನ’ ಮಹತ್ವದ ವರ್ಷಗಳು.

ಗೆಳೆತನದ ಹೊಸ ಹೊಳವು, ನನ್ನ ಕನ್ನಡ ಕುಲದ

ಕನಸೊಂದು ಹೊಳೆದಾಡಿ ಸೆಳೆದಾಡಿತು

ಹೊಸ ಗೆಳೆಯನೊಬ್ಬನ ಎಡೆಬಿಡದ ಸಹವಾಸ

ಆ ಕಣಸ ಕನ್ನಡಿ ತೊಳೆದಾಡಿತು

ಎಂದು ಹಾಡಿದ ಬೇಂದ್ರೆ ಅವರು ಸಾಹಿತ್ಯದ ಗುಂಪು ಕಟ್ಟಿ ತಮ್ಮ ಅಯಸ್ಕಾಂತದ ವ್ಯಕ್ತಿತ್ವದಿಂದ ಎಲ್ಲರನ್ನೂ ಸೆಳೆದುಕೊಂಡರು. ಹೊಸ ಸಾಹಿತ್ಯದ ಅರಿವು ಅಗತ್ಯ ಇವುಗಳನ್ನು ಸುವ್ಯವಸ್ಥಿತ ರೀತಿಯಲ್ಲಿ ಗೆಳೆಯರ ಗುಂಪಿನ ಕವಿಗಳು ಅರಿತುಕೊಂಡರು. “ತಮಗೆ ವ್ಯವಸ್ಥಿತವಾದ ಕನ್ನಡ ಅಭ್ಯಾಸ ನಡೆದುದು ಗುಂಪಿನ ನಡುವೆ” ಎಂದು ಬೆಟಗೇರಿ ಕೃಷ್ಣಶರ್ಮರು ಹೇಳಿದ್ದಾರೆ. “ಗುಂಪಿನ ಮೂಲಕ ಇಂದಿನ ಕನ್ನಡ ಸಾಹಿತ್ಯದ, ಕರ್ನಾಟಕದ ಪರಿಚಯ ನನಗಾಯಿತು” ಎಂದರು ಗೋಕಾಕರು, “ಸ್ಫೂರ್ತಿ ಉತ್ಸಾಹಗಳನ್ನು ತುಂಬಿ ಹೊಸ ದರ್ಶನವನ್ನು ಇನ್ನೊಬ್ಬರಲ್ಲಿ ಸಂಚಾರಗೊಳಿಸುವುದಲ್ಲದೆ ಅದರ ದೌರ್ಬಲ್ಯವನ್ನರಿತು ಯೋಗ್ಯ ವಿಮರ್ಶೆಯಿಂದ ಅದನ್ನು ಕಳೆಯುವ ಅದ್ಭುತ ಶಕ್ತಿ ಬೇಂದ್ರೆಯವರಲ್ಲಿದೆ” ಎಂದು ಮುಗಳಿಯವರು ಹೇಳಿದ್ದಾರೆ. ಗೆಳೆಯರ ಗುಂಪಿನ ಒಡನಾಡಿಯಾಗಿದ್ದ ಸಿಂಪಿ ಲಿಂಗಣ್ಣನವರು “ಕವಿತಾ ವಾಚನದಲ್ಲಿ ಒಂದೇ ಧಾಟಿ, ಬರಹಗಳಲ್ಲಿ ಒಂದೇ ಶೈಲಿ” ಎಂದು ಬಣ್ಣಿಸಿದ್ದಾರೆ. ಈ ಗೆಳೆಯರ ಸವಿ ಅನುಭವಿಸಿದ ಬೇಂದ್ರೆಯವರು “ನಾಡಿನ ಜೀವನವನ್ನು ಹಬ್ಬವನ್ನಾಗಿ ಮಾರ್ಪಡಿಸಿಕೊಳ್ಳುವ ಯೋಗದಲ್ಲಿ ಮೆಟ್ಟುಗಳಾದವು. ಅನೇಕ ಹಿರಿಕಿರಿಯರೊಡನೆ ನನ್ನ ಜೀವ ಸೇರಿಕೊಂಡಿತು. ಗೆಳೆಯರ ಗುಂಪು ಒಂದು ಸ್ವಾಭಾವಿಕ ಬೆಳವಣಿಗೆಯಲ್ಲಿತ್ತು. ಅದು ಹೊರಗಣ್ಣಿಗೆ ಗುಂಪಾಗಿಯೂ ಒಳಗಣ್ಣಿಗೆ ಮೂರ್ತಿಶಿಲ್ಪ ಶಾಲೆಯಾಗಿಯೂ ರೂಪುಗೊಳ್ಳುತ್ತಿತ್ತು” ಎನ್ನುವಲ್ಲಿ ಗೆಳೆಯರ ಗುಂಪಿನ ಸಾರ್ಥಕತೆ ಅರಿವಾಗುತ್ತದೆ.

ಇದೇ ವೇಳೆಯಲ್ಲಿ 1918-19ರ ಹೊತ್ತಿನಲ್ಲಿ ಮಧುರಚೆನ್ನರು ಹಲಸಂಗಿಯಲ್ಲಿ ಸಾಹಿತ್ಯ ಮಂಡಲ ಸ್ಥಾಪಿಸಿ, ಅದಕ್ಕೆ ‘ಶಾರದಾ ಮಂಡಲ’ ಎಂದು ಹೆಸರಿಟ್ಟಿದ್ದರು. ಆಗ ಬೇಂದ್ರೆ ಮತ್ತು ಮಧುರಚೆನ್ನರ ಪರಿಚಯವಿರಲಿಲ್ಲ. ಇಬ್ಬರೂ ಸ್ಥಾಪಿಸಿದ ಸಾಹಿತ್ಯ ಮಂಡಲಕ್ಕೆ ‘ಶಾರದಾ ಮಂಡಲ’ ಎಂಬ ಒಂದೇ ಹೆಸರು ಇದ್ದದ್ದು ಅಪೂರ್ವಯೋಗಾಯೋಗ. ಇಬ್ಬರಿಗೂ ಭೇಟಿಯಾದದ್ದು 1923ರಲ್ಲಿ. ಇಬ್ಬರ ತಾಯಿಯ ಹೆಸರು ಅಂಬವ್ವ. ಇವರಿರ್ವರು ಗೆಳೆಯರು ‘ನನ್ನ ನಿನ್ನ ಬೆನ್ನ ಬಳಿ ವಿಶಾಲ ವೃಕ್ಷ ಬೆಳೆದಿದೆ’ ಎಂಬಂತೆ ಕೊನೆಯವರೆಗೂ ಗೆಳೆಯರಾಗಿದ್ದರು. ಹಲಸಂಗಿ ಗೆಳೆಯರ ಗುಂಪು ಮತ್ತು ಧಾರವಾಡ ಗೆಳೆಯರ ಗುಂಪು ಒಂದೇ ರೀತಿಯಲ್ಲಿ ಒಂದೇ ಕಾಲಕ್ಕೆ ಉದಯವಾಗುವುದರೊಂದಿಗೆ ಗುಂಪಿನ ನಾಯಕರಾದ ಬೇಂದ್ರೆ, ಮಧುರಚೆನ್ನರಲ್ಲಿ ಕಾವ್ಯ, ಅನುಭಾವ ಮತ್ತು ಜಾನಪದದ ಬೆಸುಗೆ ಬಿಡಿಸಲಾರದಷ್ಟು ಗಟ್ಟಿಯಾಗಿತ್ತು.

‘ಮಧುರ ಗೀತ’ವ ಹಾಡಿ, ‘ನನ್ನ ನಲ್ಲ’ನ ಒಲಿಸಿ

ಹಲಸಂಗಿ ನಾಡಿನಲಿ ನೆಲಿಸಿ ನಿಂತ,

ನನ್ನ ‘ಚೆನ್ನ’ನಿಗೆಣೆಯ ಗೆಣೆಯರಾರಾರಿಹರು

ಅವನೆ ಅವನಿಗು ಹೆಚ್ಚು ಅವನಿಗಿಂತ

ಉತ್ತು ನೆಲಹೊಲಗಳನು ಬಿತ್ತಿದನು ಬೀಜಗಳ

ಉತ್ತಮಿಕೆ ಬೆಳೆ ಬರಲಿ ಎಂದು ಬಯಸಿ,

ಊರಿಗೂ ಅಡವಿಗೂ ನಡುವೆ ನೆಲೆ ಮಾಡಿದನು

ಎಡತಾಕಿ ಬೆವರಿಟ್ಟು ಬಯಲ ತೋಯಿಸಿ

ಮಧುರಚೆನ್ನರಗಿಂತ ಮಿಗಿಲಾದ ಗೆಳೆಯರಿಲ್ಲ ಎಂದು ಹೇಳಿದ ಬೇಂದ್ರೆಯವರು “ಊರಿಗೂ ಅಡವಿಗೂ ನಡುವೆ ನೆಲೆ ಮಾಡಿದನು” ಎಂಬಲ್ಲಿ ನಗರ-ಗ್ರಾಮೀಣ, ಶಿಷ್ಟ-ಜಾನಪದವನ್ನು ಬೆಸೆದ ರೂಪ ಸಾದೃಶ್ಯವಿದೆ. ಈ ಕಾರ್ಯದಲ್ಲಿ ಎಡತಾಕಿ ಬೆವರಿಟ್ಟು ಬಯಲ ಬೆಳವಲನಾಡ ತೋಯಿಸಿ ಸಾಧನೆ ಮೆರೆದ ಮಧುರಚೆನ್ನರ ಸಿದ್ಧಿಯನ್ನು ಪ್ರಕಟಪಡಿಸಿದೆ. 

ಧಾರವಾಡದ ‘ಗೆಳೆಯರ ಗುಂಪಿ’ನಲ್ಲಿ ಆರಂಭದಲ್ಲಿ ಬೇಂದ್ರೆಯವರ ವಿದ್ಯಾರ್ಥಿಗಳು, ಸಹಪಾಠಿಗಳು ಇದ್ದರು. ಶ್ರೀಧರ ಖಾನೋಳಕರ, ಚಿದಂಬರ ನಗರ, ಬ್ಯಾಳಿ, ಶಾಂತಗಿರಿ, ಬಾಗಲವಾಡಿ, ತಿವಾರಿ, ರಾಮು ಅಭ್ಯಂಕರ, ಪ್ರಲ್ಹಾದ ನರೇಗಲ್, ಗೋವಿಂದ ಚುಳಕಿ, ವಸಂತರಾವ್ ಹುರಳೀಕೊಪ್ಪಿ, ರಾಯದುರ್ಗ, ಶ್ರೀಮತಿ ರೇವಡಿ ನಾಡಗೌಡ, ಶ್ರೀಮತಿ ಲೀಲಾವತಿ ಮಾಗಡಿ, ಕೃಷ್ಣಕುಮಾರ ಕಲ್ಲೂರ, ನಾರಾಯಣ ಸಂಗಮ, ಶೇ.ಗೋ. ಕುಲಕರ್ಣಿ. ನಂತರ ಈ ಗುಂಪಿಗೆ ವಿನೀತ ರಾಮಚಂದ್ರರಾವ್, ಬೆಟಗೇರಿ ಕೃಷ್ಣಶರ್ಮ, ಶಂ.ಬಾ.ಜೋಶಿ, ಸಾಲಿ ರಾಮಚಂದ್ರರಾಯರು, ಬೇಂದ್ರೆ ಲಕ್ಷ್ಮಣರಾವ್, ಬುರ್ಲಿ ಬಿಂದುಮಾಧವ ಮೊದಲಾದವರ ಸೇರ್ಪಡೆಯಾಯಿತು. ನಂತರ ವಿ.ಕೃ. ಗೋಕಾಕ, ರಂ.ಶ್ರೀ. ಮುಗಳಿ, ಜಿ.ಬಿ. ಜೋಶಿ, ಮಕ್ತಾಲಿ, ಮಳೆಯೆ ಗೋವರ್ಧರಾಯರು, ಎನ್.ಕೆ.ಕುಲಕರ್ಣಿ, ಎಸ್.ಆರ್.ಮಳಗಿ, ಶ್ರೀನಿವಾಸ ಕುಲಕರ್ಣಿ, ಟಿ.ರುಬೆನ್, ಸಿದ್ಧವನಹಳ್ಳಿ ಕೃಷ್ಣಶರ್ಮ ಹಲಸಂಗಿ, ವಿಜಾಪುರ, ಹೈದರಾಬಾದ್, ಸಂಡೂರು, ಕೊಪ್ಪಳ, ಅಥಣಿ, ಮೈಸೂರು, ಬೆಂಗಳೂರು ಮೊದಲಾದ ಊರುಗಳಿಗೆ ಗೆಳೆಯರ ಗುಂಪಿನವರು ಮಾಡಿದ ಉಪನ್ಯಾಸ, ಕವಿತಾ ವಾಚನ, ಸಾಹಿತ್ಯಿಕ ಚರ್ಚೆಗಳ ಮೂಲಕ ಗೆಳೆಯರ ಗೆಳೆಯರು ಸೇರುತ್ತಾ ಹೋಗಿ ಗುಂಪು ವಿಶಾಲವಾಯಿತು.

ಹೀಗೆ ಒಂದು ಧ್ಯೇಯವನ್ನಿಟ್ಟುಕೊಂಡು ಹುಟ್ಟಿಕೊಂಡು ಬಂದ ಗೆಳೆಯರ ಗುಂಪು ಧಾರವಾಡ ಕೇಂದ್ರದ ಸಾಂಸ್ಕøತಿಕ ವ್ಯಾಪ್ತಿಯನ್ನು ಭೌಗೋಲಿಕವಾಗಿಯೂ, ಸಾಹಿತ್ಯಿಕವಾಗಿಯೂ ವಿಸ್ತರಿಸಿತು. ಈ ವಿಸ್ತರಣೆಯಲ್ಲಿ ಹೊಸ ಕಾವ್ಯವನ್ನು ಜನಪ್ರಿಯಗೊಳಿಸುವುದರೊಂದಿಗೆ, ಜನಪದ ಸತ್ವದ ಪುನರುಜ್ಜೀವನಕ್ಕೆ ಗೆಳೆಯರ ಗುಂಪು ಕನ್ನಡ ನವೋದಯದ ಸಂದರ್ಭದಲ್ಲಿ ಪ್ರಧಾನವಾದ ಕೆಲಸ ಮಾಡಿತು. ಕಾವ್ಯದಲ್ಲಿ ಆ ಕಾಲಕ್ಕೆ ಕಾಣಿಸಿಕೊಂಡ ಲಾವಣಿ ಮಟ್ಟುಗಳನ್ನು, ತಮ್ಮ ಕವಿತೆಗಳಲ್ಲಿ ಬಳಸಿಕೊಂಡರು.ಮರೆತು ಹೋಗುತ್ತಿದ್ದ ಜನಪದ ಗೀತೆಗಳನ್ನು ಸಂಗ್ರಹಿಸಿ, ಪ್ರಕಟಿಸಲು ಉತ್ತೇಜನ ನೀಡುವ ಮೂಲಕ, ಜನಪದ ಗೀತೆಗಳಲ್ಲಿನ ಲಯ, ಭಾಷೆ, ನುಡಿಗಟ್ಟು ಸಮೃದ್ಧವಾಗಿ ತಮ್ಮ ಕಾವ್ಯಕ್ಕೆ ತಂದರು. ಹೊಸ ಕವಿತೆಗೆ ಬೇಕಾದ ಹೊಸ ಛಂದೋರೂಪಗಳ ಸಲುವಾಗಿ ಜಾನಪದ ಧಾಟಿಗಳನ್ನು ಅಳವಡಿಸಿಕೊಂಡರು.ಶಂಬಾ ಜೋಶಿ, ರಂ.ಶ್ರೀ. ಮುಗಳಿ ಮೊದಲಾದವರು ಸಂಶೋಧನೆ ಕಡೆಗೆ ದೃಷ್ಟಿಕೊಟ್ಟರೆ, ವಿ.ಕೃ.ಗೋಕಾಕ, ಶ್ರೀಧರ ಖಾನೋಳಕರ ಕಾವ್ಯರಚನೆಗೆ ದೃಷ್ಟಿಕೊಟ್ಟು ಅಭ್ಯಾಸ ನಡೆಸಿದರು.ಬೆಟಗೇರಿ ಕೃಷ್ಣಶರ್ಮ, ಬೇಂದ್ರೆ, ಮಧುರಚೆನ್ನ ಜಾನಪದ ರೀತಿಗಳನ್ನು ಕಲೆಹಾಕಿ ಅವುಗಳ ಸತ್ವವನ್ನು ಅರಿತು ಅವುಗಳನ್ನು ಸಾಹಿತ್ಯ ರೀತಿಯೆಂದು ಗುರುತಿಸಿ ಬಳಸಿದರು.‘ಜಯ ಕರ್ನಾಟಕ’ ಮೂಲಕ ಕನ್ನಡ ಭಾಷೆಗೆ ಸಾಹಿತ್ಯ ಸಂಸ್ಕಾರ ತಂದು ಕೊಡುವುದರ ಜೊತೆಗೆ ಹೊಸ ರೀತಿಯ ಬರವಣಿಗೆ ಈ ಗುಂಪು ಪ್ರಾರಂಬಿsಸಿತು. ಒಟ್ಟಾರೆ ಧಾರವಾಡ ಕೇಂದ್ರವು ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಒಂದು ಬಹು ಮುಖ್ಯವಾದ ಸಾಸ್ಕೃತಿಕ ಕೇಂದ್ರವಾಗಿ ಗುರುತಿಸಿಕೊಂಡಿತು.

-ಡಾ.ಪ್ರಕಾಶ ಗ.ಖಾಡೆ


ವಿಳಾಸ : ಡಾ.ಪ್ರಕಾಶ ಗ.ಖಾಡೆ, ‘ಶ್ರೀ ಗುರು’, ಸರಸ್ವತಿ ಬಡಾವಣೆ,ಸಂಖ್ಯೆ 63,ನವನಗರ,ಬಾಗಲಕೋಟ

ಮೊ. 9845500890

Monday, September 18, 2023

ಜನಪದ ಚಿತ್ರಕಲೆ

 ಜನಪದ ಚಿತ್ರಕಲೆ

ಡಾ.ಪ್ರಕಾಶ ಗ. ಖಾಡೆ


ಜಾನಪದ ಎಂಬುದು ಬರೀ ಹಾಡು, ಕುಣಿತವಲ್ಲ. ಅದು ಬದುಕಿನ ಎಲ್ಲ ಮಗ್ಗುಲಗಳನ್ನು ಒಳಗೊಂಡ ವಿಶ್ವವ್ಯಾಪಿ ಅನಾವರಣ. ಜಾನಪದ ಜಗದಗಲ ಮುಗಿಲಗಲ ವ್ಯಾಪಕತೆ ಹೊಂದಿದೆ. ಯಾವ ಮಡಿವಂತಿಕೆ ಇಲ್ಲದೇ ದೇಸಿ ಬದುಕಿನ ಅಕ್ಷಯ ನಿಧಿ ಜಾನಪದ. ಇಂದು ಜಾನಪದ ಬಗೆಗಿನ ಅಧ್ಯಯನ ಕ್ಷೇತ್ರ ವ್ಯಾಪಕಗೊಳ್ಳುತ್ತಿರುವ ಹೊತ್ತಿನಲ್ಲಿ ಆಧುನಿಕ ಸಂದರ್ಭದಲ್ಲೂ ಜಾನಪದದ ಮಹತಿಯ ಅರಿವಾಗುತ್ತಿದೆ. ನೆಲ ಮುಗಿಲ ಸಕಲ ಚರಾಚರ ವಸ್ತುಗಳಲ್ಲೂ ಜಾನಪದವಿದೆ. ಬಹು ಶಿಸ್ತಿನ ಅಧ್ಯಯನ ನೆಲೆಗಳೆಲ್ಲ ಇವತ್ತು ಜಾನಪದದ ನೆಲೆಗಟ್ಟಿನಿಂದ ಆರಂಭವಾಗುತ್ತಿರುವುದು ಜಾನಪದ ಹಿರಿಮೆಯನ್ನು ಸಾರುತ್ತಿದೆ.

 ಜನಪದ ಕಲೆಗಳು ಜನಾಂಗದಿಂದ ಜನಾಂಗಕ್ಕೆ ಕೊಡುಗೆಗಳಾಗಿ ಬಂದಿವೆ. ಕೈಗಾರಿಕಾ ಕ್ರಾಂತಿಯಿಂದ ಜನರು ಹಳ್ಳಿಗಳನ್ನು ತೊರೆದು ನಗರದತ್ತ ಮುಖ ಮಾಡಿದಾಗ ಜಾನಪದದ ಅಳಿವು ಆರಂಭವಾಯಿತೆಂದೇ ಭಾವಿಸಲಾಗಿತ್ತು. ಈ ಆತಂಕವನ್ನು ನಮ್ಮ ಪಂಡಿತ ಜನ ಬುಗಿಲೆಬ್ಬಿಸಿ ಜಾನಪದವನ್ನು ಸಂಕುಚಿತವಾಗಿ ಕಾಣುವ ಸಂದರ್ಭ ತಂದಿಟ್ಟರು. ಆದರೆ, ಜಾನಪದವೆಂಬುದು ಸಾಯುವ ಸರಕಲ್ಲ, ಅದು ಪರಂಪರೆಯಿಂದ ಪರಂಪರೆಗೆ ಕಾಲಕ್ಕನುಗುಣವಾಗಿ ಬದಲಾಗುತ್ತ ಹೊಸರೂಪ ತಾಳುತ್ತ ಉಳಿದುಕೊಂಡು ಬಂದಿದೆ. ಬರುತ್ತಿದೆ. ಹೀಗಾಗಿ ಜಾನಪದವು ಗತಕಾಲದ ಪ್ರತಿಧ್ವನಿ ಮಾತ್ರವಲ್ಲ, ಸಮಕಾಲೀನ ಸಂದರ್ಭದ ಸಶಕ್ತ ಧ್ವನಿಯಾಗಿದೆ.

 ಜಾನಪದ ಬಳಕೆ ಇಂದು ದ್ವಿಮುಖಿಯಾಗಿದೆ. ಸಹಜ ಮತ್ತು ಕೃತಕ ಜೀವನದ ನಡೆಯಲ್ಲಿ ನಾವು ಜಾನಪದವನ್ನು ಬಳಸಿಕೊಳ್ಳುತ್ತಿದ್ದೇವೆ. ಈ ಕಾರಣವಾಗಿ ಆಧುನಿಕರ ಕೈಯಲ್ಲಿ ಜಾನಪದವೆಂಬದು ಬಳಸಿ ಬೀಸಾಕುವ ಸಂಸ್ಕøತಿ ಎನ್ನಿಸಿದೆ. ಹಾಡು ಕಟ್ಟುವುದು. ಚಿತ್ರ ಬಿಡಿಸುವುದು, ಗಾದೆ, ಒಗಟು, ಒಡಪು ಹೇಳುವುದು ಎಲ್ಲ ಸಹಜ ಕಲೆಗಳಾದರೆ, ಇವು ಪ್ರದರ್ಶನ ಸಂದರ್ಭದಲ್ಲಿ ವ್ಯಾಪಾರೀಕಣದ ಬಾಹುಗಳಲ್ಲಿ ತುಂಬಾ ಕೃತಕವಾಗಿ ಬಿಡುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಜಾನಪದವನ್ನು ಸಹಜ, ಸರಳ ಹಾಗೂ ತಾಜಾತನದ ಅನುಭವಗಳಿಂದ ಗ್ರಹಿಸಬಲ್ಲ ಮನಸ್ಸುಗಳು ಮಾತ್ರ ಜಾನಪದವನ್ನು ಅರಿಯಬಲ್ಲ ಭೂಮಿಕೆಗಳಾಗಿವೆ.

 ಜನಪದ ಚಿತ್ರಕಲೆಗೆ ಪ್ರಾಚೀನ ಕಾಲದ ಇತಿಹಾಸವಿದೆ. ಜನಪದದ ಬಹುಪಾಲು ಕಲೆಗಳಿಗೆ ಲಿಖಿತ ಆಧಾರ ಗುರುತಿಸುವುದು ಕಷ್ಟ. ಮಾನವನ ಬದುಕಿನಲ್ಲಿ ರೇಖೆಗಳ ಬಳಕೆಯೊಂದಿಗೆ ಚಿತ್ರಕಲೆ ಮೊದಲಾಯಿತು. ಭಾಷೆಗೆ ಮುನ್ನ ಸಂಜ್ಞೆಗಳಿದ್ದಂತೆ, ಲಿಪಿಗೆ ಮುನ್ನ ಚಿತ್ರಕಲೆ ಬಳಕೆಯಲ್ಲಿತ್ತು. ಮಾನವನ ಸಂವಹನ ಮಾಧ್ಯಮವಾಗಿ ರೇಖೆಗಳ ಸಂಕೇತಗಳು ಬಳಕೆಯಲ್ಲಿದ್ದವು. ಜಗತ್ತಿನ ಅತ್ಯಂತ ಪ್ರಾಚೀನ ಚಿತ್ರಕಲೆಯ ಕುರುಹುಗಳು ಸ್ಪೇನಿನ ಗುಹೆಗಳಲ್ಲಿ ಹಾಗು ಫ್ರಾನ್ಸಿನ ಡೊರಡೊನ್ ಪ್ರಾಂತ್ಯದ ಲಾಗ್ರೀಜ್ ಎಂಬ ಗವಿಗಳಲ್ಲಿ ದೊರೆತಿವೆ. ಹಾಗೆನೇ ಸುಮಾರು ಇಪ್ಪತ್ತೇಳು ಸಾವಿರ ವರ್ಷಗಳ ಹಿಂದೆ ಅರಿನೇಷಿಯನ್ ನಾಗರಿಕತೆಯ ಕಾಲದಲ್ಲಿ ದೊರೆತ ಮನುಷ್ಯಾಕೃತಿಯ ಚಿತ್ರಗಳೇ ಹಳೇಯವು ಎಂಬ ಅಭಿಪ್ರಾಯವಿದೆ.

 ಆದಿ ಮಾನವನ ಬದುಕಿನ ಘಟನಾವಳಿಗಳನ್ನು ಅವರು ಬಿಟ್ಟುಹೋದ ಚಿತ್ರಕಲೆಯಿಂದ ಅರಿಯುತ್ತೇವೆ. ಪ್ರಾಚೀನ ಮಾನವರು ಬಂಡೆ, ಗುಹೆಗಳಷ್ಟೇ ಅಲ್ಲದೇ, ವೃಕ್ಷಗಳ ತೊಗಟೆ, ಚರ್ಮ, ಎಲುಬು, ಕೊಂಬು ಇತ್ಯಾದಿ ವಸ್ತುಗಳ ಮೇಲೆ ಚಿತ್ರ ಬಿಡಿಸುತ್ತಿದ್ದರು. ಇವುಗಳ ಮೇಲೆ ಪ್ರಾಣಿ, ಪಕ್ಷಿ, ಕೃಷಿ, ಯುದ್ಧ, ಮಾಟ ಮಂತ್ರಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಬಿಡಿಸುತ್ತಿದ್ದರು.

 ಭಾರತದ ಪ್ರಾಚೀನ ಚಿತ್ರಕಲೆಯ ಕುರುಹುಗಳು ಕರ್ನಾಟಕದ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ "ಗೊಂಬಿಗುಡ್ಡ"ದಲ್ಲಿ ಕಾಣುತ್ತೇವೆ. ಪ್ರಾಗೈತಿಹಾಸಿಕ ಕಾಲದ ಈ ಗುಡ್ಡದ ಬಂಡೆಗಳ ಮೇಲಿರುವ ಚಿತ್ರಗಳು ಆ ಕಾಲದವರ ಕಲಾಭಿಜ್ಞತೆಗೆ ಸಾಕ್ಷಿಯಾಗಿವೆ. ಇಲ್ಲಿ ಪಲ್ಲಕ್ಕಿ, ಜಿಂಕೆ, ಆನೆ, ಸಾರಂಗ ಮುಂತಾದ ಪ್ರಾಣಿಗಳ ಒಂಟಿ ಚಿತ್ರಗಳಲ್ಲದೇ, ಒಂಟಿ ಸವಾರರು, ಹೋರಿ ಕಾಳಗ, ಬೇಟೆಯಾಡುವ ಮನುಷ್ಯರು ಈ ಮೊದಲಾದ ಚಿತ್ರಗಳಿವೆ. ಹೀಗೆ ಬಂಡೆಗಳ ಮೇಲೆ ಚಿತ್ರ ಬಿಡಿಸಿದ ನಮ್ಮ ಜನಪದರು ಕಾಲಕ್ರಮದಲ್ಲಿ ಭಿತ್ತಿ ಚಿತ್ರಗಳು, ಹಬ್ಬದ ಸಂದರ್ಭದ ಚಿತ್ರಗಳನ್ನು ಬಿಡಿಸುತ್ತ ಮನೆ, ಮಠ, ದೇವಾಲಯ, ಅರಮನೆಗಳಲ್ಲೂ ಸ್ಥಾನ ಪಡೆದು ಜನಪದ ಚಿತ್ರಕಲೆಗೆ ತುಂಬಾ ವ್ಯಾಪಕವಾದ ಕ್ಯಾನವಾಸ್ ರೂಪಿಸಿದರು.

ಆರಾಧನಾ ಸಂಸ್ಕøತಿಯೇ ಮೂಲ:

 ಜನಪದ ಚಿತ್ರಕಲೆ ಕೇವಲ ಗೃಹಾಲಂಕಾರದ ಚಿತ್ರ ವಿನ್ಯಾಸಕ್ಕೆ ವಸ್ತುವಾಗದೇ ಆರಾಧನಾ ಮೂಲ ಸಂಸ್ಕøತಿಯಿಂದ ರೂಪಿತವಾದವು. ನಾಗರ ಪಂಚಮಿ, ದೀಪಾವಳಿ, ಯುಗಾದಿ ಮೊದಲಾದ ಹಬ್ಬಗಳ ಸಂದರ್ಭಗಳಲ್ಲಿ ಜನಪದರು ಬಿಡಿಸುವ ಚಿತ್ರಗಳು ಪರಂಪರಾಗತ ಕಲೆಯ ಮುಂದುವರಿಕೆಯಾಗಿವೆ. ಜನಪದರ ಮನೆಯ ಗೋಡೆ, ಮಾಳಿಗೆಗಳಿಗೆ ಮಾಡಿದ ಅಲಂಕರಣ ಚಿತ್ರಗಳು "ಬಿತ್ತಿ ಚಿತ್ರ"ಗಳಾಗಿ ಹೆಸರಾಗಿವೆ. ಕರ್ನಾಟಕದ ಹಿರಿಯೂರು, ಸಿರಾ, ಶ್ರೀರಂಗಪಟ್ಟಣ, ಶ್ರವಣಬೆಳಗೂಳ, ಗುಳೇದಗುಡ್ಡ, ಇಳಕಲ್ಲು ಮೊದಲಾದ ಕಡೆಯ ಬಿತ್ತಿ ಚಿತ್ರಗಳು ತುಂಬಾ ಜನಪ್ರಿಯವಾಗಿವೆ. ರಾಮಾಯಣ, ಮಹಾಭಾರತ ದೃಶ್ಯಗಳು ಶಿವ, ವಿಷ್ಣು ಪರವಾದ ಕಥಾನಕಗಳು ಇಲ್ಲಿ ಚಿತ್ರರೂಪ ಕಂಡಿವೆ.

 ಮನೆಗೆ ಸುಣ್ಣ ಹಚ್ಚುವುದು, ಹೊಸ್ತಿಲನ್ನು ಕೆಮ್ಮಣ್ಣಿನಿಂದ ಸಾರಿಸುವುದು. ಅಲ್ಲಲ್ಲಿ ಚಿತ್ರ ಬಿಡಿಸುವುದು ಜನಪದ ಚಿತ್ರಕಲಾ ನೈಪುಣ್ಯಕ್ಕೆ ಸಾಕ್ಷಿಯಾಗಿದೆ. ಮನೆ, ದೇವಾಲಯ ಮೊದಲಾದ ಕಡೆಗಳಲ್ಲಿ ಬಿಡಿಸುವ ರಂಗೋಲಿ ಕಲೆಯು ಜನಪದರ ಗೃಹಾಲಂಕಾರಕ್ಕೆ ಸಂಬಂಧಿಸಿದ ಒಂದು ಮಹತ್ವಪೂರ್ಣ ಚಿತ್ರಕಲೆಯಾಗಿದೆ. ಹೊಸ್ತಿಲು ಮುಂದಿನ ಬೆಳಗಿನ ಬೆಳದಿಂಗಳಾದ ರಂಗೋಲಿಯು ನಮ್ಮ ಹಳ್ಳಿ ಹೆಣ್ಣುಮಕ್ಕಳ ಕಲಾ ನೈಪುಣ್ಯಕ್ಕೆ, ಕಲ್ಪನಾ ಶಕ್ತಿಗೆ ಪ್ರತೀಕವಾಗಿದೆ. ಶಿವರಾಮ ಕಾರಂತರು "ರಂಗೋಲಿ" ಎಂದರೆ ಮನೆಯ ಮುಂದೆ ಬರೆಯುವ ಚಿತ್ರ ಕೆಲಸ ಎಂದಿದ್ದಾರೆ. ಆರನೆಯ ಶತಮಾನದಲ್ಲಿ ಬದುಕಿದ್ದ ಬಾಣಕವಿ ತನ್ನ "ಕಾದಂಬರಿ" ಯಲ್ಲಿ ಸೂತಿಕಾಗೃಹದ ಮುಂದೆ ರಂಗೋಲಿ ಹಾಕುವುದನ್ನು ವಿವರಿಸಿದ್ದಾನೆ. ಶುಭ ಹೆರಿಗೆ, ಬಾಣಂತಿ ರಕ್ಷಣೆಯ ಆಶಯದ ಹಿನ್ನೆಲೆಯಲ್ಲಿ ಈ ಕಲೆಯ ಬಳಕೆ ಕಾಣುತ್ತೇವೆ. ರಂಗೋಲಿಯ ಉಲ್ಲೇಖವು ಜನಪದ ಗೀತೆ, ಕಥೆ, ಒಗಟು, ಒಡಪು, ಗಾದೆಗಳಲ್ಲಿ ಕಾಣುತ್ತೇವೆ.

 ಒಡಪು : ಅಂಗಳದಾಗ ರಂಗೋಲಿ ಹಳಕ 

 ಆಕಾಶದಾಗ ಚಂದ್ರನ ಬೆಳಕ

 ನನ್ನ ಜೀವನದಾಗ ನನ್ನ ರಾಯರ ಥಳಕ


 ಗಾದೆ : ಆತ ಚಾಪೆ ಕೆಳಗೆ ತೂರಿದರೆ

 ನಾನು ರಂಗೋಲಿ ಕೆಳಗೆ ತೂರುತ್ತೇನೆ.


 ರಂಗೋಲಿಯು ಭಾರತದ ಪ್ರಾಚೀನ ಜನಪದ ಕಲೆಯಾಗಿದೆ.

ಸೌಂದರ್ಯ ಪ್ರಜ್ಞೆಯ ಜೀವಾಳ:

 ಜನಪದ ಚಿತ್ರಕಲೆ ಸೌಂದರ್ಯ ಪ್ರಜ್ಞೆಯ ಜೀವಾಳವಾಗಿದೆ. ಜನ್ಮಜಾತವಾಗಿ ಬಂದ ರೂಪದೊಂದಿಗೆ ಕಲೆಯ ಸೊಬಗನ್ನು ತಮ್ಮ ಮೈಮೇಲೆ ಬಿಡಿಸಕೊಂಡು ಇಮ್ಮಡಿ ಸೌಂದರ್ಯದ ಸಿರಿವಂತಿಕೆಯಿಂದ ನಮ್ಮ ಜನಪದರು ಗುರುತಿಸಿಕೊಳ್ಳುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಜನಪದ "ಹಚ್ಚೆ" ಚಿತ್ರಕಲೆ ನಮ್ಮ ಕಣ್ಣ ಮುಂದಿದೆ.

 ಜನಪದರ ದೃಶ್ಯಕಲೆಗೆ ಸೇರಿದ "ಹಚ್ಚೆ" ವಿಶ್ವದ ಅನೇಕ ಕಡೆಗೆ ಈಗಲೂ ಉಳಿದುಕೊಂಡು ಬಂದಿದೆ. ಹಚ್ಚೆ, ಅಚ್ಚೆ, ಹಂಚೆ, ಹಂಚಿಬಟ್ಟು, ಹಣಚಿ, ಅಣಚಿ, ಅಣ್ಣಿ ಈ ಮೊದಲಾದ ಹೆಸರುಗಳಿಂದ ಈ ಕಲೆಯನ್ನು ಕರೆಯುತ್ತೇವೆ. ಗಿಡಮೂಲಿಕೆಗಳಿಂದ ಸಿದ್ಧಪಡಿಸಿದ ರಸ ದೇಹದ ಮೇಲಿನ ಚಿತ್ರಗಳಿಗೆ ಹಳದಿ ಮಿಶ್ರಿತ ಹಸಿರು ಬಣ್ಣದ ಛಾಯೆಯನ್ನು ಕೊಡುವುದರಿಂದ ಈ ಕಲೆಗೆ ಹಚ್ಚೆ ಎಂದು ಹೆಸರು ಬಂದಿದೆ. ಗರತಿತನದ, ಸೌಭಾಗ್ಯದ ಸಂಕೇತವಾದ ಹಚ್ಚೆಯ ಬಗೆಗೆ ರೂಢಿ ಮಾತೊಂದು ಹೀಗಿದೆ "ಸತ್ತಾಗ ನಮಕೂಟ ಬರುವುದು ಹಚ್ಚೆ, ಬಂಗಾರ, ಬೆಳ್ಳಿ ಯಾವ ಒಡವೆಗಳಲ್ಲ" ನೋಟಕ್ಕೆ ಕಾಣುವ ದೇಹದ ಎಲ್ಲ ಭಾಗಗಳ ಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಹೂವು, ಚಂದ್ರ, ನಕ್ಷತ್ರ, ಶಿಲುಬೆ, ಕಮಲ, ಚುಕ್ಕೆ, ಶಂಖ, ಮುತ್ತಿನ ಬಳ್ಳಿ, ಒಡವೆ, ಬಾಸಿಂಗ, ನವಿಲು, ಕುದುರೆ, ಬಾಳೆಗಿಡ, ತಾವರೆ ಹೂ, ನಿಂಬೆ ಸಸಿ, ನಂದಿಕೋಲು, ಜೋಗಿ ಜಡೆ, ಸೀತೆ ಸೆರಗು, ಶಿವನ ಬಾಸಿಂಗ, ಹಂಪಿ ತೇರು ಹೀಗೆ ಹಲವು ರೂಪಗಳಲ್ಲಿ ಹಚ್ಚೆ ಚಿತ್ರಗಳನ್ನು ಕಾಣುತ್ತೇವೆ. ಜನಪದ ಗೀತೆಗಳಲ್ಲಿ ಹಚ್ಚೆಯ ಹಾಡುಗಳು ಸಾಕಷ್ಟಿವೆ. ಹಚ್ಚೆ ಕಲಾವಿದರು ಜನಪದ ಗೀತೆಗಳನ್ನು ಹೇಳುತ್ತ ಹಚ್ಚೆ ಹಾಕುತ್ತಾರೆ. ಹಚ್ಚೆ ಉಲ್ಲೇಖದ ಒಂದು ಜನಪದ ಗೀತೆ ಹೀಗಿದೆ.

 ಹಂಚಿ ಬೊಟ್ಟಿನ ಕೈಯ ಒತ್ತಿ ಹಿಡಿಯಲು

 ಬ್ಯಾಡ, ನನರಾಯ ನೆತ್ತರಿಳಿದಾವ

 ಕಿರಿಬಳ್ಳಿ

 ಆಧುನಿಕ ಕಾಲದ ಮಹಿಳೆಯರ ಬದಲಾಗುತ್ತಿರುವ ಸೌಂದರ್ಯ ಪ್ರಜ್ಞೆಯ ಆತಂಕಕಾರಿ ಬೆಳವಣಿಗೆಯ ನಡುವೆಯೂ ಅನೇಕ ದೇಶಗಳಲ್ಲಿ "ಹಚ್ಚೆ" ಕಲೆ ಮಾಯವಾಗುತ್ತ ನಡೆದಿದೆ. ಆದರೂ ವಿಶ್ವದ ಹಿರಿಯಣ್ಣನಾದ ಅಮೇರಿಕೆಯೊಂದರಲ್ಲಿಯೇ ಮುನ್ನೂರು ಕೋಟಿ ಜನ ಹಚ್ಚೆ ಕಲೆ ಬಿಡಿಕೊಂಡಿರುವುದು ಈ ಕಲೆಯ ವಿಶ್ವಮಾನ್ಯತೆಯನ್ನು ಸಾರುತ್ತದೆ.

ಕಲೆಯ ಸಿರಿವಂತಿಕೆಯ ಬೆಡಗು :

 ಜನಪದ ಚಿತ್ರಕಲೆ ಕಲಾತ್ಮಕತೆಗೆ ಮಿಗಿಲಾದುದು. ಸಹಜತೆ, ಸರಳತೆ ಹಾಗೂ ಮೋಹಕತೆಯಿಂದ ಯಾರನ್ನೂ ಸೆಳೆಯುವಂಥದು. ಜನಪದರ ಮದರಂಗಿ ಕಲೆ ಈ ಬಗೆಯ ಮೋಹಕತೆಯಿಂದ ತನ್ನ ಜನಪ್ರಿಯತೆ ಉಳಿಸಿಕೊಂಡು ಬಂದಿದೆ. ಮದುವೆ ಸಂದರ್ಭದಲ್ಲಿ ಶಾಸ್ತ್ರ ರೂಪವಾಗಿ ಮದರಂಗಿ ಕಲೆಯನ್ನು ಅಂಗೈ ಮತ್ತು ಪಾದಗಳ ಮೇಲೆ ಚಿತ್ರಿಸುವ ಆಚರಣೆ ಜನಪದರಲ್ಲಿ ರೂಢಿಗತವಾಗಿದೆ. ಮದರಂಗಿ ಕಲೆಯಲ್ಲಿ ಹಲವು ಬಗೆಯ ಚಿತ್ತಾರಗಳನ್ನು ಕಾಣುತ್ತೇವೆ. ಮಾನವ, ಪ್ರಾಣಿ, ಪಕ್ಷಿ ಆಕೃತಿಯ ಚಿತ್ರಗಳಿಗಿಂತ ಹೆಚ್ಚಾಗಿ ಬಳ್ಳಿ, ಆಕೃತಿ, ಸುಳುಹುಗಳ ಚಿತ್ರಗಳನ್ನು ಬಿಡಿಸುತ್ತಾರೆ. ಆರಾಧನಾ ಮೂಲ ಸಂಕೇತ ಪ್ರಧಾನ ಆಕೃತಿಗಳಾದ ಸ್ವಸ್ತಿಕ, ಓಂ, ಶ್ರೀ, ಸೂರ್ಯ, ಚಂದ್ರ ಮೊದಲಾದ ಕಲೆ ಕಾಣುತ್ತೇವೆ. ಹೆಣ್ಣು ಮಕ್ಕಳಿಗೆ ಹಬ್ಬದ ಸಂಭ್ರಮದ ಸಂಕೇತವಾಗಿ ಮದರಂಗಿ ಕಲೆ ಉಳಿದುಕೊಂಡು ಬಂದಿದೆ. ಸಣ್ಣ ಸಣ್ಣ ಚುಕ್ಕೆಗಳ ಮೂಲಕ ಹೂವಿನ, ಎಲೆಯ, ಬಳ್ಳಿಗಳ ಚಿತ್ರ ಬಿಡಿಸುತ್ತಾರೆ. ಅಂಗೈ, ಮುಂಗೈಗಳ ಮೇಲೆ ಬಿಡಿಸಿದ ಮದರಂಗಿಯ ಕೆಂಪನೆಯ ಚಿತ್ರಗಳು ಹೆಂಗಳೆಯರ ಸೌಂದರ್ಯವನ್ನು ಇಮ್ಮಡಿಗೊಳಿಸುವುದರ ಜೊತೆಗೆ ಆರೋಗ್ಯ ಮತ್ತು ತಾರುಣ್ಯವನ್ನು ಸಂಕೇತಿಸುತ್ತವೆ. ಮದರಂಗಿ ಕಲೆ ಬಿಡಿಸುವಾಗ ಹೆಣ್ಣುಮಕ್ಕಳು ಸೋಬಾನೆ ಮೊದಲಾದ ಜನಪದ ಗೀತೆಗಳನ್ನು ಹಾಡುತ್ತಾರೆ.

 ಹಳೆಯ ಬಟ್ಟೆಗಳನ್ನು ಕಲಾತ್ಮಕವಾಗಿ ಕತ್ತರಿಸಿ, ವಿಶಿಷ್ಟ ಹೆಣಿಕೆಯ ಮೂಲಕ ಮೋಹಕ ಕಲೆಯನ್ನು ಎಳೆಗಳ ಮೂಲಕ ಬಿಡಿಸುವ ಜನಪದರ "ಕೌದಿ ಚಿತ್ರಕಲೆ" ತುಂಬಾ ಪ್ರಾಚೀನವಾದುದು. ಕ್ರಿ.ಶ. ಸುಮಾರು ಎರಡನೆಯ ಶತಮಾನದ ಆಯುರ್ವೇದ ಶಾಸ್ತ್ರ ಕೃತಿ "ಚರಕ ಸಂಹಿತಾ" ಕೌದಿಯನ್ನು ಉಲ್ಲೇಖಿಸುವ ಪ್ರಾಚೀನ ದಾಖಲೆಯಾಗಿದೆ. ನಮ್ಮ ಜನಪದರು ಕೌದಿಯಲ್ಲಿ ವೈವಿದ್ಯತೆಯ ಚಿತ್ತಾರಗಳನ್ನು ಬಿಡಿಸುತ್ತಾರೆ. ಹೀಗಾಗಿ ಕೌದಿಯು ಜನಪದ ಸ್ತ್ರೀಯರ ಸೌಂದರ್ಯ ಪ್ರಜ್ಞೆಯ ಅಭಿವ್ಯಕ್ತಿಯಾಗಿದೆ.

 ಕೌದಿಗಳಲ್ಲಿ ನಮ್ಮ ಜನಪದರು ರಾಮಾಯಣ, ಮಹಾಭಾರತ ಪ್ರಸಂಗಗಳ ರಾಮನ ತೊಟ್ಟಿಲು, ಸೀತೆ, ಲವಕುಶ, ಮಾಯಾಮೃಗ, ರಾವಣ, ಹಣಮಂತ, ಪಗಡೆಯಾಟ ಮೊದಲಾದ ಚಿತ್ರಗಳನ್ನು ಐತಿಹಾಸಿಕ ಘಟನೆಗಳಾದ ಉಳುವಿ, ಹಂಪಿ, ಶ್ರೀಶೈಲ ಜಾತ್ರೆಗಳ ತೇರು, ಗುಡಿ, ಸಿದ್ಧಾರೂಢರು, ಶಿವಶರಣರು, ಏಸು, ಬುದ್ಧ, ಮಹಾವೀರ, ಪೈಗಂಬರ ಚಿತ್ರಗಳನ್ನು ಕೌದಿಗಳಲ್ಲಿ ಬಿಡಿಸುತ್ತಾರೆ. ಕೃಷಿಗೆ ಸಂಬಂಧಿಸಿದ ಕೃಷಿ ಸಲಕರಣೆಗಳು, ನಿಸರ್ಗ ಸೌಂದರ್ಯದ ಚಿತ್ರಗಳು, ಪಗಡೆ ಬಜಾರ, ಐದರ ಪಗಡಿ, ನಾಲ್ಕರ ಪಗಡಿ, ಕೊಳಲು, ಭಾವಿ ತೇರು, ಬಾಸಿಂಗ, ದಂಡೆ, ಗೆಳತಿಯರು, ಸೂರ್ಯ, ಚಂದ್ರ, ನಕ್ಷತ್ರ, ನವಿಲು, ಗಿಳಿ, ಆನೆ, ಒಂಟಿ, ಎಲೆಬಳ್ಳಿ, ಬಾಳೆಗೊನೆ, ಗುಬ್ಬಿ ಕಾಲು, ಹಕ್ಕಿಕಾಲು, ಪ್ರಾಣಿಯ ಹೆಜ್ಜೆ, ಸ್ವಸ್ತಿಕ ಮೊದಲಾದ ಚಿತ್ರಗಳು ಕೌದಿಯಲ್ಲಿ ಗ್ರಾಮೀಣರು ಬಿಡಿಸುತ್ತಾರೆ.

 ಆಧುನಿಕ ಕಲಾ ಪ್ರಕಾರವಾದ ಕೋಲಾಜ್‍ದಲ್ಲಿ ಬಣ್ಣದ ಕಾಗದ ಹಾಗೂ ಬೇರೆ ಬೇರೆ ವಸ್ತುಗಳನ್ನು ವಿನ್ಯಾಸಗಳಿಗನುಗುಣವಾಗಿ ಕತ್ತರಿಸಿ ಹಾಳೆಗೆ ಅಂಟಿಸುವ ಮೂಲಕ ಸಾಂಕೇತಿಕ ಚಿತ್ರ ನಿರೂಪಿಸುತ್ತಾರೆ. ಹಾಗೆನೇ ನೇರವಾಗಿ ಬಣ್ಣ, ಕುಂಚ ಬಳಸದೇ ಬಣ್ಣ ಬಣ್ಣದ ಕೌದಿ ತುಂಡು ಬಟ್ಟೆಗಳಿಂದ ಚಿತ್ರ ಬಿಡಿಸುವ ಜನಪದದ ಚಿತ್ರಕಲೆಯು ಆಧುನಿಕ ಕೋಲಾಜ್ ಚಿತ್ರಕಲೆಯ ಹುಟ್ಟಿಗೆ ಕಾರಣವಾಗಿದೆ ಎನ್ನಬಹುದು.

 ತುಂಬಾ ಜನಪ್ರಿಯವಾಗಿರುವ ಕಸೂತಿ ಕಲೆಯು ಜನಪದ ಚಿತ್ರಕಲೆಯ ಮತ್ತೊಂದು ಕೊಡುಗೆ. ಬಟ್ಟೆಯ ಮೇಲೆ ಸೂಜಿ ಬಳಸಿ ದಾರಗಳಿಂದ ಬಿಡಿಸುವ ಅಲಂಕಾರಿಕ ಕಲೆಯು ಸೂಜಿಯ ಹುಟ್ಟಿನೊಂದಿಗೆ ಬೆಳೆದು ಬಂದಿದೆ. ಕ್ರಿ.ಶ.ಪೂ. 3000 ದ್ದೆನ್ನಲಾದ ಮೊಹೆಂಜೊದಾರೊದಲ್ಲಿನ ಕಂಚಿನ ಸೂಜಿ ಕಸೂತಿ ಕಲೆಯ ಇತಿಹಾಸವನ್ನು ತುಂಬಾ ಪ್ರಾಚೀನಕ್ಕೆ ಕರೆದೊಯ್ಯುತ್ತದೆ. ನಮ್ಮ ಹಳ್ಳಿಗಳಲ್ಲಿ ಹೆಣ್ಣುಮಕ್ಕಳು ಕಸೂತಿ ಕಲೆಯ ಕುಶಲತೆಯಲ್ಲಿ ತಮ್ಮ ಜಾಣ್ಮೆ ಮೆರೆದಿದ್ದಾರೆ. ಹೂಬಳ್ಳಿಗಳು, ಪಕ್ಷಿಗಳು, ಮನುಷ್ಯನಾಕೃತಿಗಳು, ನಿಸರ್ಗದ ಚಿತ್ರಗಳು, ಪೂಜಾ ಸಲಕರಣೆಗಳು, ಪ್ರೀತಿಯ ಸಂಕೇತಗಳು ಮೊದಲಾದವನ್ನು ಕಸೂತಿ ಕಲೆಯಲ್ಲಿ ಹೆಣಿಕೆ ಮಾಡುತ್ತಾರೆ.

 ಜನಪದ ಕಲೆಗೆ ಆಕಾಶದಷ್ಟು ವ್ಯಾಪ್ತಿ, ಸಾಗರದಷ್ಟು ಆಳವಿದೆ. ನಮ್ಮ ಬದುಕಿನ ಎಲ್ಲ ಬಗೆಯ ಸೃಜನಶೀಲ ಸೃಷ್ಠಿಯು ಜನಪದ ಕಲೆಯಾಗಿ ಪರಿಣಮಿಸಿದೆ. ಆರಾಧನಾ ಸಂಸ್ಕøತಿಯ ಮನೋಭಾವದಿಂದ ಹುಟ್ಟಿಕೊಂಡ ಜನಪದ ಚಿತ್ರಕಲೆಯು ಜನಪದದ ಸೌಂದರ್ಯಪ್ರಜ್ಞೆ, ಕಲಾ ಶ್ರೀಮಂತಿಕೆಗೆ ಸಾಕ್ಷಿಯಾಯಿತು. ಜನಪದ ಚಿತ್ರಕಲೆಯ ಮೂಲಕ ಮಾನವ ಸಂಸ್ಕøತಿಯು ಕಾಲ ಕ್ರಮೇಣ ಹೇಗೆ ರೂಪಗೊಂಡಿತು ಎಂಬುದನ್ನು ಅರಿಯಲು ಮಹತ್ವಪೂರ್ಣವಾದ ದಾಖಲೆಯಾಗಿ ನಿಲ್ಲುತ್ತದೆ. ಆದರಿಂದು ಆಧುನಿಕ ಸಂದರ್ಭದಲ್ಲಿ ಜನಪದಕ್ಕೆ ಅದರಲ್ಲೂ ಜನಪದ ಚಿತ್ರಕಲೆ ಮರೆಯಾಗುತ್ತಿದೆ. ಚಿತ್ರಕಲೆಯ ಅಳಿಗಾಲದಿಂದ ಪರ್ಯಾಯವಾಗಿ ನಮ್ಮ ಜನಪದರ ಹಾಡು ಸಂಸ್ಕøತಿ ಅವಸಾನವಾಗುತ್ತಿದೆ. ಅವಿಭಕ್ತ ಕುಟುಂಬ ವ್ಯವಸ್ಥೆ ಛಿದ್ರ ಛಿದ್ರವಾಗಿದೆ. ಆರೋಗ್ಯದಲ್ಲಿ ಆತಂಕ ಸೃಷ್ಠಿಯಾಗಿದೆ. ಧಾರ್ಮಿಕ ಆಚರಣೆಗಳು ಯಾಂತ್ರೀಕೃತವಾಗಿದೆ. ಮನುಷ್ಯ ಮನುಷ್ಯರ ನಂಬುಗೆಗಳು ಕಡಿಮೆಯಾಗಿವೆ. ಕಲೆಯನ್ನು ಪ್ರೀತಿಸುವ ಗೌರವಿಸುವವರ ಸಂಖ್ಯೆ ವಿರಳವಾಗಿದೆ. ಕೈಕುಶಲತೆಗಿಂತ ಯಂತ್ರ ಬಿಡಿಸುವ ಕಲೆಗೆ ಯುವ ಪೀಳಿಗೆ ಮೋಹಿತವಾಗಿದೆ. ಈ ಎಲ್ಲ ಆತಂಕಗಳು ಜನಪದ ಚಿತ್ರಕಲೆಯ ಅವಸಾನಕ್ಕೆ ಮೊದಲಾಗಿವೆ. ಪರಂಪರೆಯ ಜ್ಞಾನವನ್ನು ಆಧುನಿಕತೆಗೆ ಒಗ್ಗಿಸಿಕೊಳ್ಳುವುದಷ್ಟೇ ನಮ್ಮ ಮುಂದಿರುವ ಒಂದು ಪರ್ಯಾಯ ಅವಕಾಶ, ಹೀಗಾಗಿ ಆಧುನಿಕ ಚಿತ್ರ ಕಲಾಕಾರರು ಪರಂಪರೆಯ ಕೊಂಡಿಯಿಂದ ಕಳಚಿಕೊಳ್ಳದೇ ಇದನ್ನು ರೂಢಿಸಿಕೊಳ್ಳುವ ಮೂಲಕ ತಮ್ಮ ಸೃಜನಶೀಲತೆಯ ಹೊಸ ಸೃಷ್ಠಿಯನ್ನು ತೆರೆದಿಡಬೇಕಾಗಿದೆ.


- ಡಾ. ಪ್ರಕಾಶ. ಗ. ಖಾಡೆ


ವಿಳಾಸ

ಡಾ. ಪ್ರಕಾಶ ಗ. ಖಾಡೆ, 

                ಎಂ.ಎ. ಪಿಎಚ್.‍ಡಿ.

ಶ್ರೀ ಗುರು ನಿಲಯ,

ಸೆಕ್ಟರ್ ನಂ.63 , ನವನಗರ, ಬಾಗಲಕೋಟ

: 9845500890

Monday, August 28, 2023

 ಉಮೇಶ ತಿಮ್ಮಾಪುರ ಅವರ 

‘ಹೆಜ್ಜೆ ಊರದ ಬಯಲು’

ಕವನ ಸಂಕಲನಕ್ಕೆ ಬರೆದ ಮುನ್ನುಡಿ


- ಡಾ. ಪ್ರಕಾಶ ಗ. ಖಾಡೆ

ಕಾಲಘಟ್ಟ ಬದಲಾಗಿದೆ. ಬದುಕು ಮತ್ತೊಂದು ಮಗ್ಗಲು ಬದಲಿಸಿದೆ. ಇಡೀ ಜಗತ್ತನ್ನೇ ಕಾಡಿದ ಕೋವಿಡ್ ಹತ್ತೊಂಬತ್ತು ಕೊರೊನಾ ವೈರಸ್ಸು ಮಾನವ ಜೀವ ಜಗತ್ತಿನಲ್ಲಿ ಉಂಟು ಮಾಡಿದ ತಲ್ಲಣ, ಆತಂಕ, ಅವಘಡ, ಅನಾಹುತವನ್ನೆಲ್ಲ ದಾಟಿ ಮತ್ತೆ ಎಂದಿನ ಬದುಕಿಗೆ ತೆರೆದುಕೊಂಡಿದ್ದೇವೆ. ಕೊರೊನಾ ವೈರಸ್ಸು ಹಬ್ಬುವುದನ್ನು ತಡೆಯಲು ಉಂಟು ಮಾಡಿದ ಪ್ರಯತ್ನಗಳಲ್ಲಿ ಲಾಕ್‍ಡೌನ್‍ವೂ ಒಂದು. ಎಲ್ಲವೂ ಸ್ಥಬ್ದವಾದ ಕಾಲ ಅದು. ಮನೆಯಲ್ಲಿಯೇ ಇರಬೇಕಾದ ಸ್ಥಿತಿ. ಮನುಷ್ಯ ಮನುಷ್ಯರು ಮುಖಾಮುಖಿಯಾಗದ ದುರಂತ. ಬಸ್ಸು, ವಿಮಾನ, ರೈಲು ಎಲ್ಲ ಸಾರಿಗೆಯೂ ಬಂದ್. ಹೊರಗಡೆ ಪಶು ಪಕ್ಷಿಗಳ ಕಲರವ ಬಿಟ್ಟರೆ ಬೇರೆ ಯಾವ ಸದ್ದೂ ಇಲ್ಲ. ಅದೊಂದು ದಿನಮಾನ ಕಟ್ಟಿಹಾಕಿದಂತೆ ಬದುಕು ನಮಗೆ ನಾವೇ ಬಂಧಿಯಾದ ಅನುಭವ. ಇಂಥ ಸಂದರ್ಭದಲ್ಲಿ ಸೃಜನಶೀಲ ಮನಸ್ಸಿನ ಹೊಸತನ್ನು ಕಟ್ಟಿಕೊಡುವ ಕವಿಗಳು, ಕಥೆಗಾರರು, ಕಲಾವಿದರು, ಗಾಯಕರು ತಮ್ಮದೇಯಾದ ನೆಲೆಯಲ್ಲಿ ಹೊಸದನ್ನು ಹೊಸೆದು ಕಟ್ಟುವ ಸೃಜನಶೀಲ ಕ್ರಿಯೆಯಲ್ಲಿ ಮುಂದಾದರು. ಇಂಥದೊಂದು ಸಂದರ್ಭದಲ್ಲಿ ಮನೆಯಲ್ಲಿಯೇ ಕುಳಿತು ಕವಿ ಉಮೇಶ ತಿಮ್ಮಾಪುರ ಅವರು ಬರೆದ ಕವಿತೆಗಳ ಸಂಕಲನ ‘ಹೆಜ್ಜೆ ಊರದ ಬಯಲು’ ಈಗ ನಮ್ಮ ಮುಂದಿದೆ. ಇದರ ಮೊದಲ ಓದುಗನಾಗಿ ಒಂದಿಷ್ಟು ಮಾತುಗಳನ್ನು ಹಂಚಿಕೊಳ್ಳಲು ನನಗೆ, ತುಂಬಾ ಹೆಮ್ಮೆ ಎನಿಸುತ್ತಿದೆ. ಯಾಕೆಂದರೆ ಕವಿ, ಕತೆಗಾರ ಉಮೇಶ ತಿಮ್ಮಾಪುರ ಅವರು ನನ್ನ ಪರಮ ಆಪ್ತರಲ್ಲಿ ಒಬ್ಬರು. ಗ್ರಾಮೀಣ ಸೊಗಡಿನ ಭಾಷಿಕ ಶೈಲಿಯಲ್ಲಿ ಬರೆದ ಅವರ ಕತೆಗಳು ಹಳ್ಳಿಗರ ಬದುಕು ಬವಣೆ, ರಂಜೆಗಳನೆನಲ್ಲವನ್ನು ಯಥಾವತ್ತಾಗಿ ಕಟ್ಟಿಕೊಟ್ಟವರು ಗುಡ್ಡ ಬೆಟ್ಟಗಳಿಂದ, ಹಸಿರ ಸೊಬಗಿನಿಂದ ಕೂಡಿದ ಕಪ್ಪತ್ತುಗುಡ್ಡ ಪರಿಸರದ ಕೆಲೂರು ಎಂಬ ಸಣ್ಣ ಹಳ್ಳಿಯ ಈ ಅಪ್ಪಟ ಗ್ರಾಮೀಣ ಪ್ರತಿಭೆ, ಧಾರವಾಡ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಅಧ್ಯಯನ ಮಾಡಿ ಸ್ನಾತಕೋತ್ತರ ಪದವಿ ಪೂರೈಸಿ, ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಂಶೋಧನಾ ಮಹಾಪ್ರಬಂಧ ಮಂಡಿಸಿ ಇನ್ನಷ್ಟೇ ‘ಡಾಕ್ಡರೇಟ್’ ಪದವಿಗೆ ಪಾತ್ರರಾಗಲಿರುವ ಅಪ್ಪಟ ಪ್ರತಿಭಾವಂತ ಗೆಳೆಯ ಉಮೇಶ ತಿಮ್ಮಾಪುರ.

ಕಥೆ, ಕಾವ್ಯ, ವಿಮರ್ಶೆ ಸಂಬಂಧಿಸಿದಂತೆ ಈಗಾಗಲೇ ಇವರ ಬಿರಿದ ನೆನಪುಗಳು, ಮೇಘಧ್ವನಿ, ಸಮುಕ್ಷಾ, ತೊಯ್ದ ಬದುಕಿನ ಸಾಲು, ಕಾಡು ದಾರಿಯ ಕಂದೀಲು ಹಾಗೂ ನಡುಹಗಲ ಸಂಜೆ ಕೃತಿಗಳು ಪ್ರಕಟವಾಗಿ ಕನ್ನಡ ಓದುಗರ ಪ್ರೀತಿಗೆ ಪಾತ್ರವಾಗಿವೆ. ಈಗ ಈ ‘ಹೆಜ್ಜೆ ಊರದ ಬಯಲು’ ಕವನ ಸಂಕಲನವು ಅವರ ಪ್ರತಿಭೆಯ ಏರುಸ್ತರದ ಹೆಜ್ಜೆಗಳನ್ನು ಇನ್ನಷ್ಟು ವಿಸ್ತರಿಸಿದ ಭಾವಸಂಕುಲವಾಗಿದೆ.

ಮುಖ್ಯವಾಗಿ ಹೆಜ್ಜೆ ಊರದ ಬಯಲಿನಲ್ಲಿ ಮೂರು ಬಗೆಯ ರಚನೆಗಳು ತುಂಬಾ ದಟ್ಟವಾಗಿ ಬಂದಿವೆ. ಒಂದು ಕವಿಗೆ ಕಾಡಿದ ಹೆಣ್ಣು, ಕವಿಗೆ ತಟ್ಟಿದ ಶೋಷಿತರ ಭಾವಣೆ ಹಾಗೂ ಮೂರನೆಯದು ಸಾಮಾಜಿಕ ನ್ಯಾಯದ ತುಡಿತ. ಹೀಗಾಗಿ ಕವಿ ತನ್ನ ನೆಲದ ಮೇಲೆ ನಿಂತು ಒಮ್ಮೆ ಹೂವಾಗಿ, ಒಮ್ಮೆ ಉಕ್ಕೇರುವ ಸಮುದ್ರವಾಗಿ ಸುಡುವ ಕೆಂಡವಾಗಿ ತೋರುತ್ತಾಳೆ. ಇವೆಲ್ಲ ಕವಿ ವಾಸ್ತವದೊಂದಿಗೆ ಮುಖಾಮುಖಿಯಾದುದರ ಸಂಕೇತವಾಗಿದೆ.

ಕಾಯ ಕಲ್ಲು ಮಾಡಿದ ದೇವ

ಕಾಯ ದಂಡಿಗೆಯಲಿ

ಜ್ಞಾನದ ತಿರುಳು ಹೊಡಮರಳಿ

ಅನುದಿನಕೆ ತನುವರಳಿಸಿದ ತಥಾಗತ

‘ಬುದ್ಧನ ಕರುಣೆ’ ಯ ಈ ಕವಿತೆಯಲ್ಲಿ ಕವಿಗೆ ಜ್ಞಾನದ ತಿರುಳು ಹುಡುಕಿ ಸಾಗುವ ದಾರಿಯಲ್ಲಿ ಉಂಟಾಗುವ ಕಷ್ಟ ಕೋಟಲೆಗಳ ಅರಿವಿದೆ. ಹಾಗಾಗಿ ಕವಿಗೆ ಅನುದಿನವೂ ಹೊಸತಾಗುವ ಹಂಬಲದ ಚೇತನ ಕಾಪಿಟ್ಟುಕೊಂಡು ಬರುವ ಕಸಿವು ಇದೆ.

ಇಲ್ಲಿನ ‘ಜೀವಯಾಣದ ಪಯಣ’ ಕವಿತೆಯೂ ಒಟ್ಟು ಸಂಕಲನದ ಪ್ರವೇಶಿಕೆಯಂತಿದೆ. ಏಕೆಂದರೆ ಹೆಣ್ಣು ದಾರಿಯ ಹೆಜ್ಜೆಗಳೇ ಬಹುಮುಖಿಯಲ್ಲಿ ಸಂಕಲನದ ಬಯಲಿನಲ್ಲಿ ಮೂಡಿ ಮತ್ತೆ ಮತ್ತೆ ಕವಿಗೆ ಕಾಡಿವೆ. ಕವಿ ದಾಂಪತ್ಯದ ಚಿತ್ರಣದಲ್ಲಿ ಪುರಾಣ ಕಾಲದ ಮಹಾಪುರುಷರ ಪತ್ನಿಯರ ಹೆಸರಿಸುತ್ತಾ ನಿರಂತರ ಹೊಂದಾಣಿಕೆಯ ಪಯಣದ ಅರ್ಥ ಸಾರುತ್ತಾರೆ. ಇಲ್ಲಿ ಮಾದ್ರಿ, ಕುಂತಿ, ಕೌಶಲ್ಯ, ಗಾಂಧಾರಿ, ಚಂದ್ರಮತಿ, ಸೀತೆ ಹೀಗೆ ಪುರಾಣ ಪಾತ್ರಗಳು ಮತ್ತು ಅವರು ಪತಿಯೊಂದಿಗಿನ ಬದುಕಿನ ಚಿತ್ರಣದ ಒಟ್ಟು ನಡೆಯನ್ನು ಚಿತ್ರಿಸುತ್ತಾ ‘ದಾಂಪತ್ಯವೆಂದರೆ ಬಂಧುಗಳ ಒತ್ತಾಯಕ್ಕೆ, ಮತ್ತ್ಯಾವುದೋ ಸ್ಥಿತಿಗೆ ಕೊರಳೊಡ್ಡುವ ಕ್ರಿಯೆ ಅಲ್ಲ. ಅದು ಅಪರಿಚಿತ ಜೀವ ಜಗತ್ತಿಗೆ ಅನುಸಂಧಾನಗೊಳ್ಳುವ ಕ್ರಿಯೆ’ ಎಂದು ಸಾರುತ್ತಾರೆ. ಇಲ್ಲಿ ಕವಿ ಸಂಬಂಧಗಳ ಬೆಸುಗೆಯ ಸಂಯಮ, ಮಮತೆ, ನಿಷ್ಠೆ, ಸತ್ಯ ಈ ಎಲ್ಲ ಮಾನವೀಯ ನೆಲೆಗಳ ಪದಗಳನ್ನು ಬಳಸಿ ‘ಎರಡು ಜೀವಗಳ ನಿರಂತರ ಹೊಂದಾಣಿಕೆಯ ಪಯಣಕ್ಕೆ ದಾರಿ ರೂಪಿಸುತ್ತಾರೆ.

ಸಂಕಲನದ ‘ನೀಲಾಂಜನೆಯ ಧ್ಯಾನ’ ಕವಿತೆ ಹೆಚ್ಚು ಹಿಡಿಸುತ್ತದೆ. ಇಲ್ಲಿ ‘ಅವಳು’ ಕಾಯುವಲ್ಲಿ ಕನಸು ಕಟ್ಟುವಲ್ಲಿ ಕನವರಿಕೆಯಲ್ಲಿ, ಚಡಪಡಿಕೆಯಲ್ಲಿ ಕವಿ ತೋಡುವ ಪದಗಳ ಗುಂಡಿಗೆ ಯಾರೂ ಬೀಳದಾದೀತೆ?

ಬರಲಿಲ್ಲವೇಕೆ

ಹದವೇರಿದ ಎದೆಗೆ

ಕೈ ಕೊಳಲು ಮಾಡಿ

ತೊಡೆಯ ನಡುದಾರಿಯಲಿ

ಇಳಿದು ಹೋಗುವ ಪುಂಡ

ಹೀಗೆ ಕವಿತೆಯ ಸಾಲುಗಳಲ್ಲಿ ‘ನಾಚಿಕೆಯ ಸೋಪಾನ’ ‘ಲೋಲಾಕಿನ ಗಿಲುಕಿ’ ಮಲೆಯ ಹೆಗಲೇರಿ, ಮಳೆಯಿಂದ ನೆಲ, ಹೀಗೆ ಒಂದೊಂದು ಪದವನ್ನು ರಸಿಕತೆಯಿಂದ ಹರಿದು ಬಿಡುವ ಕವಿ.

ಜಿನುಗಿ ತೊಟ್ಟಿಕ್ಕುವ ಹನಿಗೆ

ಮೊಳೆಕೆಯೊಡೆಯುವ ಉನ್ಮಾದ

ತುಟಿ ಕಚ್ಚಿ ಮುಡಿ ಬಿಚ್ಚಿ

ಭೂಮಿಯಾಗುವ ಬಯಕೆ

ಎಂಬಲ್ಲಿ ಫಲವಂತಿಕೆಯ ನಿರಂತರತೆಯನ್ನು ಕವಿ ಸಾರುತ್ತಾರೆ. ‘ಅವಳು’ ಕವಿಗೆ ಕಾಡಿದಷ್ಟು ಕವಿತೆಗೂ ಕಾಡಿದ್ದಾಳೆ. ಅವಳು ಎದುರಿಸಿದ್ದರೆ ನಾನು ಅನಂತ ಹವಣಿಕೆಗಳ ಅದುಮಿಟ್ಟುಕೊಂಡ ಸಂತ, ಅವಳ ಸ್ಪರ್ಶವೆಂದರೆ, ಮತ್ತೆ ನನ್ನ ಮರುಹುಟ್ಟು ಎನ್ನುವ ಕವಿ.

ಅವಳ ನೆನಪೆಂದರೆ

ಕುಡಿದಿಟ್ಟ ಗ್ಲಾಸು

ಮತ್ತೆ ಮತ್ತೆ

ತುಂಬಬೇಕೆಂಬ ಹಂಬಲ

ಎಂಬಲ್ಲಿ ಕವಿ ನಿಶಾಧರೆಯ ಭರ್ತಿಗೆ ಹಂಬಲಿಸುತ್ತಾ ಹೊಸಲೋಕದ ಅನುಸಂಧಾನಕ್ಕೆ ಕಾವ್ಯವನ್ನು ‘ಅನುಸಂಧಾನ’ ಕವಿತೆಯಲ್ಲಿ ಹುರಿಗೊಳಿಸುತ್ತಾರೆ. ‘ಭೂಮಿಯಾದಳು ಪ್ರತಿಮೆ’ ಕವಿತೆಯು ಹೆಣ್ಣು ಕುಲದ ಶೋಷಣೆಯ ಚಿತ್ರಣ ನೀಡಿದರೆ, ಕೆಂಡ ಸಂಪಿಗೆ ಕವಿತೆಯಲ್ಲಿ ಹೋರಾಟದ ಬೇಗುದಿ ಇದೆ. ‘ಮುತ್ತುಗದ ಹೂ’ ಕವಿಗೆಯು ಚೈತನ್ಯದ ಜೀವಜಲವನ್ನು ಹೊಮ್ಮಿಸುತ್ತದೆ. ಸುಡುವ ಕೆಂಡಗಳ ನಡುವೆ ಕವಿತೆಯಲ್ಲಿ ನೀಲಿ ಕಣ್ಣಿನ ಹುಡುಗಿಯ ಕನವರಿಕೆ ಇದೆ. ಇಂಥ ಹಲವು ಕವಿತೆಯಲ್ಲಿ ಕಾಡುವ ಸಾಲುಗಳು ಇಂತಿವೆ.

ಅಲ್ಲಿ ಬೆಳಕಿನ ಬೇಲಿ ಕಟ್ಟಿ

ಬಿಂಬವಾಗುವ ಬಯಕೆ

(ಮರೆಯಾದಳು ಬಿಂಬ)

ಅವಳ ಮೈಸಿರಿಯಲ್ಲಿ ತೇಲಿ

ಕಣ್ಣು ನೋಟದಲ್ಲಿ ಕಳೆದು ಹೋಗುವೆ (ನೀಲ ಜಲ)

ಪ್ರಕೃತಿ ಪರಿಶುದ್ಧವಾದರೇನು

ಮನಸ್ಸುಗಳು ಮಲೀನವಾಗಿರುವಾಗ

ನನ್ನ ಸಲುಗೆಯಲಿ

ಮಾತು ಟಿಸಿಲೊಡೆದು

ಅದೆಷ್ಟು ಸಾಮ್ರಾಜ್ಯಗಳನ್ನು

ಕಟ್ಟಿ ಕೆಡವಿದೆವು (ನೆನಪಿದೆಯೇ ನಿನಗೆ)

ಒಡಲು ತುಂಬಿ ಹರಿವ

ಸಮುದ್ರ 

ನನ್ನಂತೆಯೇ ಬರಿದಾದ ಬಂಡೆಗಲ್ಲು

(ಕಡಲ ಒಡಲಿನ ಕರುಣೆ)


ಹೀಗೆ ಕವಿತೆಗಳ ಒಡಲಲ್ಲಿ ಅಡಗಿರುವ ಇಂಥ ಅನೇಕ ಸಾಲುಗಳ ಹಲವು ಅರ್ಥಗಳನ್ನು ಸ್ಫುರಿಸುತ್ತವೆ. ಹೀಗಾಗಿ ಕವಿಯ ರಚನೆಯ ಸಾರ್ಥಕತೆ ಕಾಣುತ್ತೇವೆ. ಪ್ರತಿ ಸಾಲೂ, ಪ್ರತಿ ಕವಿತೆಯೂ ತನ್ನ ರಾಜನಿಕತೆ ಮತ್ತು ವಸ್ತು ವಿಷಯದ ನೆಲೆಯಲ್ಲಿ ಹೊಸತನದಿಂದ ಕೂಡಿರುವುದು ತಿಮ್ಮಾಪುರರ ಕವಿತೆಗಳ ಹೆಚ್ಚುಗಾರಿಕೆಯಾಗಿದೆ.

ಮತ್ತೆ ಮತ್ತೆ ಕಾಡುವ ಹಲವು ರಚನೆಗಳು ಇಲ್ಲಿವೆ. ‘ಬೆರಗುಗೊಂಡ ಬಯಲು’ ಕವಿತೆಯಲ್ಲಿ ಗೆಳತಿಯ ಜೊತೆಗಿನ ಅನುಸಂಧಾನವಿದೆ. ‘ನಿನ್ನ ತುಂಬು ಎದೆಯ ಮೇಲೆ ತಲೆಯಿಟ್ಟು ಕೇಶರಾಶಿಯಲಿ ಮರೆಯಾಗುವ ತುಡಿತ’ ಹೊಂದಿದ ಕವಿ.

ಗರಿಬಿಚ್ಚಿ ಹಾರಾಡುವ ನಿನ್ನ

ಹದಮೀರಿದ ಹರೆಯದಲಿ

ತುಳುಕಿ ಪುಳಕಗೊಳ್ಳುವ ಹುಚ್ಚು

ಎಂಬಲ್ಲಿ ಬಿಡಿಸಲಾಗದ ಬೆರಕೆಯ ಅನುಸಂಧಾನದಲ್ಲಿ ಬಯಲಾಗುವ ಬಯಲಿನ ಬೆರಗಿದೆ.

ಕವಿ ಉಮೇಶ ತಿಮ್ಮಾಪುರರ ಕವಿತೆಗಳ ರಾಚನಿಕ ಶೈಲಿ ವಿಶಿಷ್ಟವಾದುದು. ಪದಗಳನ್ನು ಅಳೆದು ತೂಗಿ ನೋಡದೇ ಹೊಸತನದಿಂದ ಕೂಡಿದ ಪದಗಳನ್ನು ತಾವೇ ಸೃಜಿಸಿ, ಠಂಕಿಸಿ, ಸರಿಜೋಡಿಸುವಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಇಂಥಲ್ಲಿ ಕವಿಗಿರುವ ಭಾಷಾ ಪದಗಳ ಶಕ್ತಿ ಅರ್ಥವಾಗುತ್ತದೆ. ಇಲ್ಲಿನ ಭಾವಗೀತಾತ್ಮಕ ಕವಿತೆಗಳೂ ಇಂಥ ಶಕ್ತಿಯನ್ನೇ ಪಡೆದಿವೆ. ಇಲ್ಲಿನ ‘ನೀಲ ನಭ’ ಒಂದು ಭಾವಗೀತೆ. ಗೆಳತಿಯನ್ನೂ ಕವಿ ನೀಲನಭದಲ್ಲಿ ಹೊಳೆವ ಕೋಲ್ಮಿಂಚಿನ ಝಳಪಿಗೆ ಕಾಜಾಣದ ಮಧುರ ಧ್ವನಿಗೆ, ಚೆಲ್ಲುವರೆದ ಮಂಜು ಹನಿಗೆ ಹೀಗೆ ಹಲವು ವಿಧದಲ್ಲಿ ಬಣ್ಣಿಸುತ್ತಾರೆ. ಭಾವಗೀತೆಗಳಾಗಿ ಮೊಗ್ಗಿನ ಮಾಲೆ, ತೇವ ತುಂಬಿದ ಮೋಡ, ಜೀವ ಕಾಯುವ ಮಾಯೆ, ಕಾಂಚಾಣ ಮೊದಲಾದವು ಹಾಡುಬಲ್ಲ ರಚನೆಗಳಾಗಿ ಗೆಲ್ಲುತ್ತವೆ.

ನಾಳೆಗಳಿವೆ ಎಂದು

ಹಾಳೆಯಲಿ ಗೀಚುವೆನು

ನೆನಪುಗಳ ಹಾದಿಯಲಿ ಬಂದು ಹೇಳು

ಏನು ಬರೆಯಲಿ

‘ಕಾಂಚಾಣ’ ಈ ಕವಿತೆಯಲ್ಲಿ ಕವಿಯು ಭರವಷೆಯ ಜಾಡಿನಲ್ಲಿ ತನ್ನದೇ ದಾರಿ ರೂಪಿಸಿಕೊಳ್ಳುತ್ತಾರೆ.

ಉಮೇಶ ತಿಮ್ಮಾಪುರರ ಕವಿತೆಗಳು ಬಂಡಾಯದ ಧ್ವನಿ ಹೊಂದಿದ ರಚನೆಗಳನ್ನು ದಟ್ಟವಾಗಿ ಕಾಣುತ್ತೇವೆ.

ಸಿಡಿಲು ಬಾಯಿ ಬಿರಿದು

ಮಿಂಚು ಕಣ್ಣು ತೆರೆದು

ಗುಡಿಸಲು ನಡುಗಿದಾಗ

ಜೀವಹೋದಂತೆ ಬದುಕು

ಕೂಗಿಲ್ಲದ ಕೊರಳು ಕವಿತೆಯಲ್ಲಿ ಬಯಲಲ್ಲಿ ಬದುಕ ಕಟ್ಟಿಕೊಂಡವರ ನೋವಿದ್ದರೆ, ‘ಬೇಲಿಯ ಮೇಲಿನ ಬದುಕು’ ‘ಕವಿತೆ ನೊಂದವರ, ದೌರ್ಜನ್ಯಕ್ಕೆ ಒಳಗಾದವರ ಧ್ವನಿಯಾಗಿದೆ. ‘ಕೆನೆಗಟ್ಟಿದ ಒಡಲ ವೇದನೆಯಲಿ ಗಾಂಧಿ ಮಂತ್ರ ಜಪಿಸುವ ಇವರು ಭರವಸೆಯ ಬೆಂಕಿಯಲ್ಲಿ ಬೆಂದು ಹೆಣವಾಗಿಸಿದವರ ಹೆಸರಲ್ಲಿ ಕೂಗು ಕಳೆದುಕೊಳ್ಳುತ್ತಾರೆ.’ ಎಂಬಲ್ಲಿ ಕವಿ ಆಕ್ರೋಶ ವ್ಯಕ್ತಪಡಿಸುತ್ತಾರೆ. ‘ಲೋಕ ಚಿತ್ತ’ ಕವಿತೆಯು ಬದುಕಿನ ಜಂಜಾಟದಲ್ಲಿ ಕಳೆದುಹೋಗುವ ಅಮಾಯಕರ ದಾರಿಯ ಚಿತ್ರಣಗಳಿವೆ. ನೋವು, ಅಪಮಾನ, ರೋಪ, ಇಂಥ ಅನಿಯಮಿತತೆಯಲ್ಲಿ ಚಿಗುರೊಡೆವ ಜೀವ ಕನಸಿನಲ್ಲಿ ‘ಕಣ್ಣಿಗೆ ಕಟ್ಟಿತು ಊರಿನ ನೂರು ಗಂಟು’ ಎಂಬಲ್ಲಿ ಕವಿಯ ಆಶಾವಾದವಿದೆ.

ಈ ಸಂಕಲದಲ್ಲಿ ಕೊರೊನಾ ಮಾಹಾಮಾರಿಗೆ ಮಹಾ ವಲಸೆಯ ಮನುಕುಲದ ಹಾಡು-ಪಾಡು ತುಂಬಾ ನೋವಿನಿಂದ ಕಟ್ಟಿಕೊಟ್ಟಿದ್ದಾರೆ. ದಿನದ ದುಡಿಮೆಗೆ ಕಲ್ಲು ಬಿದ್ದು ಕಾರ್ಮಿಕರಿಗಿಲ್ಲ ಕೆಲಸ. ದಿನಗೂಲಿಗಳಿಗೆ ಅರ್ಧ ಚಂದ್ರ, ಹೀಗೆ ಭೀಕರ ನರಕ ದೃಶ್ಯಗಳನ್ನು ದಾಖಲಿಸಿದ್ದಾರೆ. ಕಾಲನ ಲೀಲೆಗೆ ಮನಸ್ಸು ಕಲ್ಲು ಮಾಡಿದವರ ಕಥನ ಇಲ್ಲಿದೆ.

ತುಂಬಾ ಭರವಸೆಯ ಕಾವ್ಯ ಸಂಕಲನವಿದು. ಕನ್ನಡದಲ್ಲಿ ಹೊಸತನದಿಂದ ಬರೆಯುತ್ತಿರುವ ಕವಿಗಳಲ್ಲಿ ಉಮೇಶ ತಿಮ್ಮಾಪುರ ಅವರ ಈ ಸಂಕಲನವು ಹೆಚ್ಚು ಚರ್ಚೆಗೆ ತೆರೆದುಕೊಳ್ಳುವ ಎಲ್ಲ ಲಕ್ಷಣಗಳನ್ನೂ ಹೊಂದಿದೆ. ಹೇಳಬಲ್ಲ ವಸ್ತು ಸಂಗತಿಗಳಿಗೆ ಬಣ್ಣ ಬಳಿದು ಓರುಗನ ಲಕ್ಷ್ಯ ಸೆಳೆಯುವ ಯಾವ ಮಡಿವಂತಿಕೆಯೂ ಇಲ್ಲದೇ ಇಲ್ಲಿನ ಕವಿತೆಗಳು ನಿರಾಡಂಬರವಾಗಿ ಸಾಗಿ ಕವಿಯ ಶಕ್ತಿಯನ್ನು ಪ್ರಕಟಪಡಿಸುತ್ತವೆ.

ಎಷ್ಟು ದಿನ ಬದುಕಿದ್ದರೇನು

ಬೆಳಕಿಗೆ ಬೇಲಿ ಕಟ್ಟುವವರ ನಡುವೆ

ಎಂಬ ಆತಂಕದ ಸಾಲುಗಳ ನಡುವೆಯೂ ‘ಕಣ್ಣು ಬಿಡುವ ಬದುಕಿಗೆ, ಭರವಸೆಯೇ ಸಾಕಲ್ಲವೇ’ ಎಂಬ ಸಮಾಧಾನದಿಂದಲೇ ಕಾವ್ಯದ ಹಿರಿಮೆಗೆ ಸಾಧ್ಯತೆಗಳನ್ನ ತೋರುವ ಗೆಳೆಯ ಕವಿ ಉಮೇಶ ತಿಮ್ಮಾಪುರ ಅವರ ಈ ‘ಹೆಜ್ಜೆ ಊರದ ಬಯಲು’ ಕವಿತಾ ಸಂಕಲನವನ್ನು ಕನ್ನಡ ಮನಸ್ಸುಗಳ ತುಂಬಾ ಆಪ್ತವಾಗಿ ತಮ್ಮದಾಗಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. 

- ಡಾ. ಪ್ರಕಾಶ ಗ. ಖಾಡೆ

Thursday, July 27, 2023

ಬಾಳುಕುನ ಪುರಾಣ -ಕಥಾ ಸಂಕಲನ

 


ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಪ್ರಕಾಶ ಗ.ಖಾಡೆ
ಪ್ರಕಾಶಕರು
ಅನಿಕೇತನ ಪ್ರಕಾಶನ, ನವನಗರ, ಬಾಗಲಕೋಟೆ
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ: ೨೦೨೩

ಡಾ. ಪ್ರಕಾಶ ಗ ಖಾಡೆ ಇವರ ನೂತನ ಕಥಾ ಸಂಕಲನ ‘ಬಾಳುಕುನ ಪುರಾಣ'. ತಮ್ಮ ಕಥಾ ಸಂಕಲನದ ಕುರಿತಾಗಿ, ತಮ್ಮ ಕಥೆಗಳ ಬಗ್ಗೆ ಲೇಖಕರು ತಮ್ಮ ಮಾತಿನಲ್ಲಿ ಹೇಳುವುದು ಹೀಗೆ...

“ಕಾರಣಗಳಿಲ್ಲದೇ ಕಥೆ ಹುಟ್ಟಿತೇ? ಕಥೆಗಳಿಗಿರುವ ಮೋಹಕತೆ ಎಂಥದು? ಕಥೆ ಕಟ್ಟುವ ಕುಶಲತೆಯೂ ಕಲ್ಲಲ್ಲಿ ಒಂದು ಮೂರುತಿಯನ್ನು, ಕಟ್ಟಿಗೆಯಲ್ಲಿ ಒಂದು ಆಕೃತಿಯನ್ನು ರೂಪಿಸಿದಂತೆ. ಕಥೆ ಎಲ್ಲ ವಯೋಮಾನದವರಿಗೂ ಬೇಕು. ವ್ಯಕ್ತಿ ತಾನೇ ಒಂದು ಕಥೆಯಾಗುವ, ತನ್ನ ಸುತ್ತಲ ಘಟನೆಗಳೇ ಆಕಾರಗಳಾಗುವ, ತನ್ನ ಕಾಲದ ಜನರ ಮನೋಭಾವಗಳು ದಾಖಲಾಗುವ ಇಂಥ ವಿಸ್ಮಯಗಳನ್ನು ತನ್ನ ಒಡಲಲ್ಲಿ ತುಂಬಿಟ್ಟುಕೊಂಡು ಎಲ್ಲವನ್ನು ತೋಡಿ ಬಯಲಾಗುವ ಮತ್ತೇ ಹೊಸತನಕ್ಕೆ ತೆರೆದುಕೊಳ್ಳುವ ಕಥಾ ಪಯಣ ಒಂದು ಜೀವಂತಿಕೆಯ ಲಕ್ಷಣ. ನಾನು ಕಥೆ ಬರೆಯುವುದೇ ಸಾಹಿತ್ಯದ ಅದರಲ್ಲೂ ಸೃಜನಶೀಲ ಸಾಹಿತ್ಯದ ಒಂದು ಶಕ್ತಿಯೆಂದು ಭಾವಿಸಿಕೊಂಡವನು. ನಮ್ಮ ತಂದೆ ಜಿ.ಬಿ.ಖಾಡೆಯವರ ಅಪಾರ ಜಾನಪದದ ಆಸಕ್ತಿಯ ಕಾರಣವಾಗಿ ಅವರು ಕಳೆದ ಶತಮಾನದ ಅರವತ್ತರ ದಶಕದಲ್ಲಿ ಡೊಳ್ಳಿನ ಮೇಳದವರು ತಮ್ಮ ಹಾಡುಗಳ ಮೂಲಕ ಹೇಳುತ್ತಿದ್ದ ಜನಪದ ಕಥೆಗಳನ್ನು ಸಂಗ್ರಹಿಸಿ ಸಂಪಾದಿಸಿದ್ದರು. ನಾನು ಅವನ್ನು ಓದಿಕೊಂಡು ಬೆಳೆದವನು. ಮುಂದೆ ವಿದ್ಯಾರ್ಥಿದೆಸೆಯಲ್ಲಿ ಮಾಸ್ತಿ, ತೇಜಸ್ವಿ, ಲಂಕೇಶ. ದು.ನಿಂ.ಬೆಳಗಲಿ, ಸತ್ಯಕಾಮ, ರಾವಬಹದ್ದೂರ, ಬಿ.ಟಿ.ಲಲಿತಾ ನಾಯಕ, ಕುಂವೀ ಅವರ ಕಥೆಗಳನ್ನು ಓದುತ್ತಾ ಕಥಾ ಸಾಹಿತ್ಯದ ಆಸಕ್ತಿಯನ್ನು ಒಂದು ತಪಸ್ಸನ್ನಾಗಿ ಸ್ವೀಕರಿಸಿಕೊಂಡೆ.

ಮೊದಲ ಕಥೆ 'ಸೂರ್ಯ ಚಂದ್ರರು ಕಾವಲೋ' ೧೯೯೯ ರಲ್ಲಿ ಬರೆದೆ, ಅದು ಅದೇ ವರ್ಷ ಕನ್ನಡ ಪ್ರಭದಲ್ಲಿ ಪ್ರಕಟವಾಯಿತು, ಅದೇ ಖುಷಿಯಲ್ಲಿ ಬರೆದ 'ನಮ್ಮೂರ ನಮಗ ಪಾಡ' ಕಥೆ ಪ್ರಜಾವಾಣಿಯಲ್ಲಿ, 'ಭೂಮಿ ತಲ್ಲಣಿಸ್ಯಾವ' ಕಥೆ ವಿಜಯ ಕರ್ನಾಟಕದ ವಿಜಯ ನೆಕ್ಷದಲ್ಲಿ ಪ್ರಕಟವಾದಾಗ ಆದ ಖುಷಿಯೇ ಬೇರೆ. ಹೀಗೆ ಇಪ್ಪತ್ತು ವರ್ಷಗಳ ಪಯಣದಲ್ಲಿ ಬರೆದುಕೊಂಡು ಬಂದ ಕಥೆಗಳನ್ನೆಲ್ಲ ಸೇರಿಸಿ ೨೦೨೧ರಲ್ಲಿ ಹತ್ತು ಕಥೆಗಳನ್ನೊಳಗೊಂಡ 'ಚೆಲುವಿ ಚಂದ್ರಿ' ಕಥಾ ಸಂಕಲನವನ್ನು ಹೊರತಂದೆ. ಅದು ನೀಡಿದ ಸಂತಸ ಅಪಾರ, ಕಥಾ ಬರವಣಿಗೆಯನ್ನು ಒಂದು ತಪಸ್ಸಿನಂತೆ ಬರೆಯುತ್ತ ಹೋದೆ, ಈ ಎರಡು ವರ್ಷಗಳಲ್ಲಿ ಮತ್ತೆ ಎಂಟು ಕಥೆಗಳು ಹುಟ್ಟಿಕೊಂಡವು. ಅದರ ಒಂದು ಕಟ್ಟು ಈ 'ಬಾಳುಕುನ ಪುರಾಣ' ಕಥಾ ಸಂಕಲನ, ಈಗ ೨೦೨೩ರಲ್ಲಿ ಹೊರಬಂದಿದೆ. ಇಲ್ಲಿಯ ಕಥೆಗಳೂ ನಾಡಿನ ಗಣ್ಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಥಾ ಪ್ರಶಸ್ತಿಗಳನ್ನು ಪಡೆದು ಕಥೆಗಾರನಿಗೆ ಹೆಸರು ಮತ್ತು ಒಂದಿಷ್ಟು ಕೀರ್ತಿಯನ್ನೂ ಪ್ರಾಪ್ತ ಮಾಡಿವೆ. ಈ ಸಂಕಲನದ 'ಬಾಳುಕುನ ಪುರಾಣ' ಹಾಗೂ ಯಾಗದ ಕುದುರೆ ಕಥೆಗಳು ಸುಧಾದಲ್ಲೂ, 'ಇಲ್ಲಿಂದ ಮೇಲೆ ಶಬ್ದವಿಲ್ಲ' ಕಥೆ ಪ್ರಜಾವಾಣಿಯಲ್ಲೂ ಪ್ರಕಟವಾಗಿವೆ. 'ಸಧ್ಯಕಿದು ಜಮಖಂಡಿ ಸಂತಿ' ಕಥೆ ಮುಂಬಯಿಯ ಮೊಗವೀರ ಪತ್ರಿಕೆಯವರು 'ಅಕ್ಕರ ತಾಯವ್ವ' ಕಥೆಗೆ ಬೆಳಗಾವಿಯ ಕಲ್ಯಾಣರಾವ ಮುಚಳಂಬಿ ಪ್ರಶಸ್ತಿ ದೊರೆತಿದೆ. ಪ್ರತಿ ವರ್ಷ ನಡೆಸುವ ರಾಷ್ಟ್ರಮಟ್ಟದ ಕಥಾ ಸ್ಪರ್ಧೆಯಲ್ಲಿ ಪ್ರಶಸ್ತಿಗೆ ಭಾಜನವಾಗಿದೆ, ಈ ಕಥೆ ಕರ್ಮವೀರ ೪ ಜೂನ ೨೦೨೩ ರ ಸಂಚಿಕೆಯಲ್ಲಿ ಪ್ರಕಟವಾಗಿದೆ.

ಈಗ ಬಾಗಲಕೋಟೆಯಲ್ಲಿ ನೆಲೆಸಿದ್ದರೂ, ಗ್ರಾಮೀಣ ಪ್ರದೇಶದ ನನ್ನೂರು ಜಮಖಂಡಿ ತಾಲೂಕಿನ ತೊದಲಬಾಗಿ, ಇಲ್ಲಿಯ ಪರಿಸರದಲ್ಲಿಯೇ ನನ್ನ ಬಾಲ್ಯವನ್ನು ಕಳೆದೆ, ಮುಂದೆ ತಂದೆಯವರ ಕಂದಾಯ ಇಲಾಖೆಯ ವೃತ್ತಿ ಕಾರಣವಾಗಿ ಬಾದಾಮಿ ತಾಲೂಕಿನ ಕೆರೂರು, ಇಳಕಲ್ಲಿಗಳಲ್ಲಿ ಬದುಕಿನ ಪಯಣ ಮುಂದುವರೆಯಿತು, ಏಳೂರು ಸುತ್ತಿ ಏಳೂರು ಕೆರೆಯ ನೀರು ಕುಡಿದು ಅಲ್ಲಿನ ಪರಿಸರದ ಸಂದರ್ಭಗಳು, ಪಾತ್ರಗಳು ನನಗರಿವಿಲ್ಲದೇ ಇಲ್ಲಿನ ಕಥೆಗಳಲ್ಲಿ ಜೀವ ಪಡೆದಿವೆ. ಕೆರೂರಿನಲ್ಲಿ ಕಂಡ ಮೋಡಿಯಾಟದವರು ನನ್ನ 'ಬುದ್ಧ ಪ್ರಿಯೆ ಶಾಂತಿ' ಕಥೆಯಲ್ಲಿ ಬಂದರೆ, ನಮ್ಮೂರು ತೊದಲಬಾಗಿಯಲ್ಲಿ ಕಂಡ ಬಹಿರೂಪಗಾರರು 'ಬಾಳುಕುನ ಪುರಾಣ' ಕಥೆಯಲ್ಲಿ ಬರುತ್ತಾರೆ. ಬಾದಾಮಿ ಮಹಾಕೂಟದ ಬೆಟ್ಟ, ನಮ್ಮೂರು ತದಲಬಾಗಿ ಲಕ್ಕವ್ವ ದೇವಿ, ಒಂದು ಪಾತ್ರಗಳಾಗಿಯೇ ಕಥೆಗಳಲ್ಲಿ ತೂರಿಕೊಳ್ಳುತ್ತಾರೆ. ಕನ್ನಡ ಮರಾಠಿ ಭಾಷಾ ಬಾಂಧವ್ಯದ ಜಮಖಂಡಿ ಸುತ್ತಿನ ಭಾಷೆಗೆ ಪ್ರೀತಿಯ ಗಡಸುತನ, ಕಠೋರತೆಯ ಮೃದುತ್ವತನವಿದೆ. ಕೃಷ್ಣೆ, ಘಟಪ್ರಭೆಯರ ಪೆರ್ದೊರೆಯ ನಾಡು ನಮ್ಮದು, ಈ ಜೀವನದಿಗಳ ತಟಾಕದ ಭಾಷಾ ಸಮೃದ್ಧಿ ನನ್ನ ಇಲ್ಲಿನ ಕಥೆಗಳಲ್ಲಿ ಗುಡ್ಡೆಲ್ಲಾ ಹೈನಾಗುವಂತೆ ಚೆಲ್ಲುವರಿದಿದೆ. ಈ ಪರಿಸರದಲ್ಲಿ ಬದುಕಿದ್ದ ದು.ನಿಂ.ಬೆಳಗಲಿ ಅವರ ಕೃಷ್ಣಾ ತೀರದ ವಸ್ತು ಸಂಗತಿಗಳು, ಸತ್ಯಕಾಮರ ಅಮೂರ್ತ ತಂತ್ರಗಾರಿಕೆಗಳು, ರಾವಬಹಾದ್ದೂರ ಅವರ ಗ್ರಾಮೀಣ ಸಂವೇದನೆಗಳು ನಾನು ಈ ಪರಿಸರದ ಕೂಸಾಗಿರುವುದರಿಂದ ಸಹಜವಾಗಿಯೇ ಇಲ್ಲಿನ ಕಥೆಗಳೆಲ್ಲಾ ಅವರ ಮುಂದುವರಿಕೆಯಾಗಿರಬಹುದೆಂಬ ಒಂದು ಅಗೋಚರ ಕನವರಿಕೆ ನನ್ನದು, ಇದನ್ನು ಓದುಗ ದೊರೆಗಳಷ್ಟೇ ಪ್ರಮಾಣೀಕರಿಸಬೇಕು.

ಬಾಗಲಕೋಟೆ ಅದರಲ್ಲೂ ಜಮಖಂಡಿ ಸುತ್ತಿನ ಪರಿಸರದ ಘಟನೆ, ವಸ್ತು, ಸನ್ನಿವೇಶ ಮತ್ತು ಹಬ್ಬ ಆಚರಣೆ ನಂಬುಗೆ ನಡಾವಳಿ, ಸತ್ಯ, ಪ್ರಾಮಾಣಿಕತೆ, ಮಾತುಕತೆ, ಜಾತ್ರೆ ಜಾನಪದ ಎಲ್ಲವೂ ನನ್ನ ಕಥೆಗಳಲ್ಲಿ ಹೆಡೆಮುರಿದು ಬಿದ್ದಿವೆ. ಜಮಖಂಡಿ ಸುತ್ತಿನ ಭಾಷಾ ಕುಶಲತೆ ನನ್ನ ಕಥೆಗಳ ಜೀವ ದ್ರವ್ಯ. ಇಲ್ಲಿನ ಕಥೆಗಳ ಬಗ್ಗೆ ನಾನು ಮಾತನಾಡಬಾರದು, ಕಥೆಗಳೇ ಎಲ್ಲ ಹೇಳುವಾಗ ಕಥೆಗಾರನ ಕೆಲಸವೇನೂ ಇರುವುದಿಲ್ಲ. ಈಗ ನನ್ನ ಕಥೆಯಾಯ್ತು, ಮತ್ತೆ ಏನಿದ್ದರೂ ಇವೆಲ್ಲಾ ನಿಮ್ಮ ಕಥೆಗಳು, ನನ್ನ ಕಥೆಗಳೊಂದಿಗೆ ತಾವು ಸದಾ ಜೊತೆಯಾಗಿರಿ ಎಂಬ ಪ್ರೀತಿಯನ್ನಷ್ಟೇ ನಾನು ಬಯಸಬಲ್ಲೆ.” ೧೦೦  ಪುಟಗಳ ಈ ಪುಟ್ಟ ಕಥಾ ಸಂಕಲನದ ೮ ಕಥೆಗಳು ಬಹಳ ಸೊಗಸಾಗಿ ಓದಿಸಿಕೊಂಡು ಹೋಗುತ್ತವೆ.

Wednesday, July 12, 2023

 ಪರಿಚಯ ಪತ್ರ


ಡಾ. ಪ್ರಕಾಶ ಗ. ಖಾಡೆ



 

ಬಾಗಲಕೋಟೆಯಲ್ಲಿ ಅಧ್ಯಾಪಕರಾಗಿರುವ ಡಾ. ಪ್ರಕಾಶ ಗ. ಖಾಡೆ ಅವರು ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ 10 ನೇ ಜೂನ 1965 ರಂದು ಜನಿಸಿದರು. ಎಂ.ಎ.,ಪಿಎಚ್.ಡಿ ಪದವೀಧರರು. ಕಾವ್ಯ, ಕಥೆ, ನಾಟಕ, ಜೀವನಚರಿತ್ರೆ, ಸಂಶೋಧನೆ, ಸಂಪಾದನೆ, ಜಾನಪದ ಹಾಗೂ ವಿಮರ್ಶೆಗಳು ಸೇರಿದಂತೆ 51 ಕೃತಿಗಳನ್ನು ರಚಿಸಿದ್ದಾರೆ. ಪ್ರೀತಿ ಬಟ್ಟಲು, ಕೃಷ್ಣಾ ತೀರದ ಜನಪದ ಒಗಟುಗಳು, ನೆಲಮೂಲ ಸಂಸ್ಕøತಿ, ಜಾನಪದ ಲೋಕ, ಜನಪದ ಕೋಗಿಲೆ ಚಲವಾದಿ ಗೌರಮ್ಮ, ಮೌನ ಓದಿನ ಬೆಡಗು, ಜಾನಪದ ಹೆಬ್ಬಾಗಿಲು, ಸಾಹಿತ್ಯ ಸಂಗತಿ, ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ, ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ. ಶಾಂತಿ ಬೀಜಗಳ ಜತನ, ಕೊರೊನಾ ಕಾಲದ ಕವಿತೆಗಳು, ಬೇಂದ್ರೆ ಕಾವ್ಯದ ದೇಸಿಯತೆ, ಬಾಗಲಕೋಟೆ ಹೋಳಿ, ಕಾವ್ಯ ನಾದದ ಧ್ಯಾನ, ಚೆಲುವಿ ಚಂದ್ರಿ, ಬಾಳುಕುನ ಪುರಾಣ ಕಥಾ ಸಂಕಲನ ಮುಂತಾದವು ಪ್ರಕಟಿತ ಕೃತಿಗಳು. ಕನ್ನಡ ಸಾಹಿತ್ಯ ಪರಿಷತ್ತಿನ ಮುದ್ದಣ ಕಾವ್ಯ ಪ್ರಶಸ್ತಿ, ಬೇಂದ್ರೆ ಸಾಹಿತ್ಯ ಪ್ರಶಸ್ತಿ, ಹುಬ್ಬಳ್ಳಿಯ ಬೊಮ್ಮಾಯಿ ಪ್ರತಿಷ್ಠಾನ ಪ್ರಶಸ್ತಿ, ಆಜೂರ ಪ್ರತಿಷ್ಠಾನ ಪ್ರಶಸ್ತಿ, ಹರಿಹರಶ್ರೀ ಸಾಹಿತ್ಯ ಪ್ರಶಸ್ತಿ, ಮುಂಬಯಿಯ ಮೊಗವೀರ ಕಥಾ ಪ್ರಶಸ್ತಿ ಹಾಗೂ ಸಂಕ್ರಮಣ ಸಾಹಿತ್ಯ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಆಕಾಶವಾಣಿ, ದೂರದರ್ಶನಗಳಲ್ಲಿ ಸಾಹಿತ್ಯಿಕ ಕಾರ್ಯಕ್ರಮಗಳು ಪ್ರಸಾರವಾಗಿವೆ. 25 ಜೂನ 2023 ರವಿವಾರ ಬೆಂಗಳೂರಿನಲ್ಲಿ ನಡೆದ ಮೇಘಮೈತ್ರಿ ಆರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.


ವಿಳಾಸ : ಡಾ.ಪ್ರಕಾಶ ಖಾಡೆ, ಮನೆ ನಂ. ಎಸ್. 135,

       ಸೆಕ್ಟರ್ ನಂ. 63, ನವನಗರ, ಬಾಗಲಕೋಟೆ – 587103

       ಮೊ. 9845500890


ಈ ಮೇಲ್ -  ಞhಚಿಜeಠಿಡಿಚಿಞಚಿshbgಞ@gmಚಿiಟ.ಛಿom





ಡಾ.ಪ್ರಕಾಶ ಗ.ಖಾಡೆ ಅವರ ಪ್ರಕಟಿತ ಕೃತಿಗಳು

( 1986 ರಿಂದ 2023 )


ಅ,

ನಂ.

ಕೃತಿಗಳ ಹೆಸರು

ಸಾಹಿತ್ಯದ ಪ್ರಕಾರ ಪ್ರಕಟವಾದ ವರ್ಷ

ಪ್ರಶಸ್ತಿ ಮತ್ತು ಪ್ರಕಾಶನದ ವಿವರ

1 ಗೀತ ಚಿಗಿತ ಸಂಪಾದಿತ

ಕವನ ಸಂಕಲನ 1986 ನಾಡಿನ ನೂರೈವತ್ತು ಕವಿಗಳ ಕವಿತೆಗಳ ಸಂಪಾದನಾ ಕೃತಿ, ಇಳಕಲ್ಲದಿಂದ ಪ್ರಕಟ.


2 ತೂಕದವರು ನಾಟಕ 1993 ಅನಿಕೇತ ಪ್ರಕಾಶನ, ಬಾಗಲಕೋಟೆ


3 ಪ್ರೀತಿ ಬಟ್ಟಲು ಕವನ ಸಂಕಲನ 1997 ಅನಿಕೇತ ಪ್ರಕಾಶನ, ಬಾಗಲಕೋಟೆ


4 ಸಾಲು ಹನಿಗಳು ಕವನ ಸಂಕಲನ 2004 ಅನಿಕೇತ ಪ್ರಕಾಶನ ,ಬಾಗಲಕೋಟೆ


5 ಕೃಷ್ಣಾತೀರದ ಜನಪದ ಒಗಟುಗಳು ಜಾನಪದ ಗದ್ಯ 2005 ಹುಬ್ಬಳ್ಳಿ ಬೊಮ್ಮಾಯಿ ಪ್ರತಿಷ್ಠಾನ ಪ್ರಶಸ್ತಿ

ಅನಿಕೇತ ಪ್ರಕಾಶನ, ಬಾಗಲಕೋಟೆ


6 ಜನಪದ ಕೋಗಿಲೆ ಗೌರಮ್ಮ ಚಲವಾದಿ ಜೀವನ ಚರಿತ್ರೆ 2005 ಗದಗ ತೋಂಟದಾರ್ಯ ಸಂಸ್ಥಾನಮಠದ ಲಿಂಗಾಯತ ಪುಣ್ಯ ಪುರುಷರು ಮಾಲಿಕೆಯಲ್ಲಿ ಪ್ರಕಟ.

ದ್ವಿತೀಯ ಮುದ್ರಣ -2007

ತೃತೀಯ ಮುದ್ರಣ-2023

7 ನಮ್ಮೂರ ಶಾಲೆ ನಮ್ಮೂರ ಮಕ್ಕಳು

ಲೇಖನಗಳು 2006 ಶೈಕ್ಷಣಿಕ ಚಿಂತನ ಲೇಖನಗಳು

8 "ಜಿ.ಬಿ. ಖಾಡೆಯವರ ನಕ್ಕು ನಗಿಸುವ ಹಾಸ್ಯ ಪ್ರಸಂಗಗಳು"

ಸಂಪಾದನೆ 2006 ಅನಿಕೇತ ಪ್ರಕಾಶನ, ಬಾಗಲಕೋಟೆ

9 ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ

ಸಂಶೋಧನೆ 2007 ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಪಿಎಚ್.ಡಿ. ಮಹಾ ಪ್ರಬಂಧ


10 ಬಸವ ಸಿರಿ ಪ್ರಧಾನ ಸಂಪಾದಕ 2008 ಬಾಗಲಕೋಟೆ ಬಸವೇಶ್ವರ ಬ್ಯಾಂಕಿನ ಸ್ಮರಣ ಸಂಚಿಕೆ.


11 ಕೃಷಿ ಋಷಿ ಪ್ರಧಾನಸಂಪಾದಕ 2009 ಬಾಗಲಕೋಟೆ ಡಿ.ಸಿ.ಸಿ.ಬ್ಯಾಂಕಿನಸ್ಮರಣ ಸಂಚಿಕೆ.


12 ಮುನ್ನುಡಿ ತೋರಣ ವಿಮರ್ಶೆ 2009 ಬೇರೆ ಬೇರೆ ಲೇಖಕರ ಕೃತಿಗಳಿಗೆ ಬರೆದ 23 ಮುನ್ನುಡಿಗಳು.


13 ಜತ್ತಿ ಕಾವ್ಯಾಭಿವಂದನ ಸಂಪಾದಿತ ಕವನ ಸಂಕಲನ 2009 ಉಪರಾಷ್ಟ್ರಪತಿ ಡಾ. ಬಿ. ಡಿ. ಜತ್ತಿರವರ ಕುರಿತು ನಾಡಿನ ಕವಿಗಳು ಬರೆದ ಕವಿತೆಗಳ ಸಂಕಲನ.ಪ್ರಕಾಶನ-ಬಸವಸಮಿತಿ,ಬೆಂಗಳೂರು.


14 ಸಾಹಿತ್ಯ ಸಂಗಾತಿ ಅಂಕಣ ಬರಹ ಸಂಕಲನ 2010 ಲಡಾಯಿ ಪ್ರಕಾಶನ ,ಗದಗ



15 ನೆಲಮೂಲ ಸಂಸ್ಕøತಿ ಜನಪದ ಲೇಖನಗಳು 2010 ಈ ಕೃತಿಯಲ್ಲಿ ಪ್ರಕಟವಾದ 1.‘ಭಾರತೀಯ ಗ್ರಾಮೀಣ ಕ್ರೀಡೆ ಮಲ್ಲಕಂಬ’ ಲೇಖನ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ (2022-25 ನೇ ಸಾಲಿಗೆ) ಪಠ್ಯವಾಗಿದೆ. 2. ಆಟ್ಯಾಪಟ್ಯಾ ಲೇಖನ ವಿಜಯಪುರ ಅಕ್ಕಮಹಾದೇವಿ ವಿಶ್ವವಿದ್ಯಾಲಯಕ್ಕೆ ಪಠ್ಯವಾಗಿದೆ. ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ.


16 ಜಾನಪದ ಲೋಕ ಜನಪದ ಲೇಖನಗಳ ಸಂಪಾದನೆ 2010 ಕನ್ನಡ ಸಾಹಿತ್ಯ ಪರಿಷತ್ತು,

ಜಿಲ್ಲಾ ಘಟಕ ಬಾಗಲಕೋಟೆಯ ಪ್ರಕಟಣೆ.


17 ಆರೂಢ ಸಂಪದ ಸ್ಮರಣ ಸಂಚಿಕೆ 2010 ಮಂಟೂರು ಮಠದ ಸ್ಮರಣ ಸಂಚಿಕೆ.


18 ಕನ್ನಡ ಪತ್ರಿಕೆ ಮತ್ತು ಸಾಹಿತ್ಯ ಲೇಖನ ಸಂಕಲನ 2010 ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳ ಸಂಕಲನ.


19 ಕೋಟಿ ಕಾರಂಜಿ ಸ್ಮರಣ ಸಂಚಿಕೆ 2011 ಸಾರ್ವಜನಿಕ ಶಿಕ್ಷಣ ಇಲಾಖೆ ,ಬಾಗಲಕೋಟೆ ಪ್ರಕಾಶನ.


20 ಹತ್ತರ ಹೊತ್ತಿಗೆ ಸ್ಮರಣ ಸಂಚಿಕೆ 2011 ಇಳಕಲ್ಲ ಚಿತ್ರಕಲಾ ಮಹಾವಿದ್ಯಾಲಯದ ಪ್ರಕಟಣೆ.


21 ಬಾಗಲಕೋಟ ಜಿಲ್ಲೆಯ 

ಜನಪದ ಹಾಡುಗಳು ಜನಪದ ಗೀತ ಸಂಕಲನ ಕನ್ನಡ ಸಾಹಿತ್ಯ ಪರಿಷತ್ತು,ಜಿಲ್ಲಾ ಘಟಕ ಬಾಗಲಕೋಟೆಯ ಪ್ರಕಟಣೆ.


22 ಶರಣ ಲೋಕ ಲೇಖನ ಸಂಕಲನ

2012 ಹಂಬಲ ಪ್ರಕಾಶನ, ಬಾಗಲಕೋಟೆ.


23 ಮೌನ ಓದಿನ ಬೆಡಗು ವಿಮರ್ಶಾ ಸಂಕಲನ 2012 ವಿವಿಧ ಕೃತಿಗಳಿಗೆ ಬರೆದ ವಿಮರ್ಶೆಗಳು.


24 ಜಾನಪದ ಹೆಬ್ಬಾಗಿಲು ಜನಪದ ಲೇಖನಗಳು

2013 ಕಿಟಕಿ ಪ್ರಕಾಶನ ,ಮೈಸೂರು


25 ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ ಪದ್ಯಗಳ ಸಂಕಲನ 

2016 ಕ.ಸಾ.ಪ. ಪುಸ್ತಕ ದತ್ತಿ ಪ್ರಶಸ್ತಿ


26

ಬೆಳಗುತಿದೆ ಬಸವ ಬ್ಯಾಂಕ

ನಾಟಕ

2017 ಬಸವೇಶ್ವರ ಬ್ಯಾಂಕ ಕುರಿತು ನಾಟಕ. ಬ್ಯಾಂಕಿನ ಶತಮಾನೋತ್ಸವ ಸಂದರ್ಭದಲ್ಲಿ ಪ್ರದರ್ಶನ.


27 ಕನ್ನಡ ದೇಸಿ ಕಾವ್ಯ ಅಧ್ಯಯನ ವಿಮರ್ಶಾ

ಸಂಕಲನ 2017 ರೂಪಾ ಪ್ರಕಾಶನ ,ಮೈಸೂರು

28 ಶಾಂತಿ ಬೀಜಗಳ ಜತನ ಕವನ ಸಂಕಲನ 2018 1. ಕ.ಸಾ.ಪ. ಮುದ್ದಣ ಕಾವ್ಯ ಪ್ರಶಸ್ತಿ

2. ಹರಿಹರಶ್ರೀ ಪ್ರಶಸ್ತಿ, ಹರಿಹರ

3.ಆಜೂರ ಪ್ರತಿಷ್ಠಾನ ಪ್ರಶಸ್ತಿ, ಹಾರೂಗೇರಿ


29 ನೂರೆಂಟು ಕವಿಗಳ 

ಕೊರೊನಾ ಕಾಲದ ಕವಿತೆಗಳು ಸಂಪಾದಿತ ಕವನ ಸಂಕಲನ 2020 ಯಾಜಿ ಪ್ರಕಾಶನ,

ಹಂಪಿ ಹೊಸಪೇಟ.


30 ಬೇಂದ್ರೆ ಕಾವ್ಯದ ದೇಸಿಯತೆ ವಿಮರ್ಶೆ ಸಂಕಲನ 2020 ಯಾಜಿ ಪ್ರಕಾಶನ, ಹಂಪಿ, ಹೊಸಪೇಟ.


31 ಬಾಗಲಕೋಟೆ ಹೋಳಿ ಲೇಖನಗಳ ಸಂಕಲನ 2021 ಅನಿಕೇತ ಪ್ರಕಾಶನ, ಬಾಗಲಕೋಟೆ

32 ಚೆಲುವಿ ಚಂದ್ರಿ ಕಥಾ ಸಂಕಲನ 2021 ಯಾಜಿ ಪ್ರಕಾಶನ , ಹಂಪಿ ಹೊಸಪೇಟ.

ಗವಿಮಠ ಪ್ರತಿಷ್ಠಾನ ಸಾಹಿತ್ಯ ಪ್ರಶಸ್ತಿ

33 ಕಾವ್ಯ ನಾದದ ಧ್ಯಾನ

ವಿಮರ್ಶಾಸಂಕಲನ 2022 ಅನಿಕೇತ ಪ್ರಕಾಶನ, ಬಾಗಲಕೋಟೆ

34 ಹಲಸಂಗಿ ಸಾಹಿತ್ಯದ ದೇಸಿಯತೆ

ವಿಮರ್ಶಾಸಂಕಲನ 2022 ಬೆರಗು ಪ್ರಕಾಶನ, ಕಡಣಿ, ಆಲಮೇಲ.

35 ಸ್ವಾತಂತ್ರ್ಯ ಹೋರಾಟದಲ್ಲಿ ಬಾದಾಮಿ

ಚರಿತ್ರೆ 2022 ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು.

36 ಸ್ವಾತಂತ್ರ್ಯ ಹೋರಾಟದಲ್ಲಿ ಸಿಂದಗಿ

ಸಂಪಾದಕ 2022 ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು.

37 ಸ್ವಾತಂತ್ರ್ಯ ಹೋರಾಟದಲ್ಲಿ ಮಸಬಿನಾಳ ಸಂಪಾದಕ 2022 ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು.

38 ಸ್ವಾತಂತ್ರ್ಯ ಹೋರಾಟದಲ್ಲಿ ಸಾರವಾಡ

ಸಂಪಾದಕ 2022 ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು.

39 ಸ್ವಾತಂತ್ರ್ಯ ಹೋರಾಟದಲ್ಲಿ ಹಲಸಂಗಿ

ಸಂಪಾದಕ 2022 ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು.

40 ಸ್ವಾತಂತ್ರ್ಯ ಹೋರಾಟದಲ್ಲಿ ನರಗುಂದ

ಸಂಪಾದಕ 2022 ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು.

41 ಸ್ವಾತಂತ್ರ್ಯ ಹೋರಾಟದಲ್ಲಿ ಮುಂಡರಗಿ

ಸಂಪಾದಕ 2022 ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು.

42 ಸ್ವಾತಂತ್ರ್ಯ ಹೋರಾಟದಲ್ಲಿ ಹಲಗಲಿ

ಸಂಪಾದಕ 2022 ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು.

43 ಸ್ವಾತಂತ್ರ್ಯ ಹೋರಾಟದಲ್ಲಿ ಬಿಸನಾಳ

ಸಂಪಾದಕ 2022 ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು.

44 ಸ್ವಾತಂತ್ರ್ಯ ಹೋರಾಟzಲ್ಲಿÀ ಬಾಗಲಕೋಟೆ

ಸಂಪಾದಕ 2022 ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು.

45 ಸ್ವಾತಂತ್ರ್ಯ ಹೋರಾಟದಲ್ಲಿ ಸುರಪುರ

ಸಂಪಾದಕ 2022 ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು.

46 ಸ್ವಾತಂತ್ರ್ಯ ಹೋರಾಟದಲ್ಲಿ ಕೆಂಭಾವಿ

ಸಂಪಾದಕ 2022 ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು.

47 ಸ್ವಾತಂತ್ರ್ಯಹೋರಾಟದಲ್ಲಿ ರಾಜನಕೋಳೂರ

ಸಂಪಾದಕ 2022 ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು.

48 ಸ್ವಾತಂತ್ರ್ಯ ಹೋರಾಟದಲ್ಲಿ ಭಾಲ್ಕಿ

ಸಂಪಾದಕ 2022 ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು.

49 ಸ್ವಾತಂತ್ರ್ಯ ಹೋರಾಟದಲ್ಲಿ ಗೋರಟಾ

ಸಂಪಾದಕ 2022 ಕರ್ನಾಟಕ ಸಾಹಿತ್ಯ ಅಕಾಡೆಮಿ,ಬೆಂಗಳೂರು.

50 ‘ಅಪ್ಪಾಸಾಹೇಬ’ ಅಭಿನಂದನಾ ಗ್ರಂಥ

ಪ್ರಧಾನ ಸಂಪಾದಕ 2023 ಎ.ಎಸ್.ಬಳಗಾನೂರ ಅಭಿನಂದನ ಸಮಿತಿ.

51 ಬಾಳುಕುನ ಪುರಾಣ

ಕಥಾ ಸಂಕಲನ 2023 ಅನಿಕೇತ ಪ್ರಕಾಶನ, ಬಾಗಲಕೋಟೆ



ಡಾ.ಪ್ರಕಾಶ ಗ.ಖಾಡೆ , ಮನೆ ನಂ. ಎಸ್.135, ಸೆಕ್ಟರ್ ನಂ. 63, ನವನಗರ, ಬಾಗಲಕೋಟೆ.-587103, ಮೊ.9845500890






ಡಾ.ಪ್ರಕಾಶ ಗ.ಖಾಡೆ ಅವರ ಪ್ರಬಂಧ ಮಂಡನೆ, ಕವಿಗೋಷ್ಠಿ ಮತ್ತು ಅಧ್ಯಕ್ಷತೆ


1)ಕನ್ನಡ ಸಾಹಿತ್ಯ ಮತ್ತು ಪತ್ರಿಕೆ, ಪ್ರಬಂಧ ಮಂಡನೆ

      ವಿಜಾಪೂರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಇಂಡಿ, 1991


2)"ಕನ್ನಡದಲ್ಲಿ ಚುಟುಕು ಸಾಹಿತ್ಯ ಒಂದು ಅವಲೋಕನ"

  ಚುಟುಕು ಸಾಹಿತ್ಯ ಸಮ್ಮೇಳನ ಮುದ್ದೇಬಿಹಾಳ 1998


3)"ಮಕ್ಕಳ ಸಾಹಿತ್ಯ ಮತ್ತು ಕನ್ನಡ ಪತ್ರಿಕೆ"

ಮಕ್ಕಳ ಸಾಹಿತ್ಯ ರಚನಾ ಶಿಬಿರ, ಬಾಗಲಕೋಟ 1998.


4)"ಕನ್ನಡ ಸಾಹಿತ್ಯ ಮತ್ತು ಭಾವೈಕ್ಯತೆ" ಬಿ.ವಿ.ವ. ಸಂಸ್ಥೆ ಶತಮಾನೋತ್ಸವ

  ಉಪನ್ಯಾಸ ಮಹಿಳಾ ಕಾಲೇಜು, ಬಾಗಲಕೋಟ 2006.


5)"ಸದ್ಭಾವನಾ ಕವಿಗೋಷ್ಠಿ" ಇಂಡಿ ಅಧ್ಯಕ್ಷತೆ 1997


6)"ಕನ್ನಡ ಸಾಹಿತ್ಯ ಮತ್ತು ಸಂಸ್ಕøತಿ" ಗ್ರಾಮೀಣ ಸಾಹಿತ್ಯ ವೇದಿಕೆ ಶಿರೂರ 2006



7)"ಕೋಮುವಾದ ನಿವಾರಣೆ ಮತ್ತು ಸಾಹಿತ್ಯ" ಗುಳೇದಗುಡ್ಡ ಕ.ಪು.ಪ. 2006


8)"ಚುಟುಕು ಕಾವ್ಯಗೋಷ್ಠಿ" ಹುನಗುಂದ ಅಧ್ಯಕ್ಷತೆ 2006.


9)"ರಾಷ್ಟ್ರೀಯ ವಿಚಾರ ಸಂಕಿರಣ" ಕಾಸರಗೋಡು (ಕೇರಳ) ಉಪನ್ಯಾಸ, 2006


10)"ಬಾಗಿಲುಕೋಟೆ ಹೋಳಿ ಉತ್ಸವ" 

   ಉದ್ಘಾಟನಾ ಸಮಾರಂಭದಲ್ಲಿ ವಲ್ಲಭಭಾಯಿ ಚೌಕದಲ್ಲಿ ಉಪನ್ಯಾಸ 21-03-2008.


11)ಹಂಪಿ ಕನ್ನಡ ವಿ.ವಿ. ವಾಲ್ಮೀಕಿ ಅಧ್ಯಯನ ಪೀಠ, 

   ಹಲಗಲಿ ಬಂಡಾಯ ಮತ್ತು ಸಾಂಸ್ಕøತಿಕ ಅನನ್ಯತೆ" 

   ವಿಚಾರ ಸಂಕಿರಣದಲ್ಲಿ "ಸಿಂಧೂರ ಲಕ್ಷ್ಮಣ ಮತ್ತು ಜಾನಪದ" 

   ಕುರಿತು ಉಪನ್ಯಾಸ 18-02-2008 (ನಾಗರಾಳ, ಬೀಳಗಿ ತಾಲೂಕ)


12)ಅಂತರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ, ಕೂಡಲಸಂಗಮ, ಹಂಪಿ ವಿ.ವಿ.  ಸಹಯೋಗದಲ್ಲಿ "ವಚನ ಸಾಹಿತ್ಯ; ಅನನ್ಯತೆ" ವಿಚಾರ ಸಂಕಿರಣದಲ್ಲಿ ವಿಶೇಷ ಆಮಂತ್ರಿತ.


13) ಕರ್ನಾಟಕ ಸರಕಾರ ಪ್ರಾಚ್ಯವಸ್ತು ಸಂಶೋಧನಾ ಇಲಾಖೆ ವತಿಯಿಂದ 

  ಬಾಗಲಕೋಟ ಜಿಲ್ಲಾ ಪಂಚಾಯತ ಸಭಾಭವನದಲ್ಲಿ

  ‘ಬಾಗಲಕೋಟ ಜಿಲ್ಲೆಯ ಜಾನಪದ’ ಕುರಿತು ಉಪನ್ಯಾಸ ಡಿಸೆಂಬರ 2010

14) ಬೆಂಗಳೂರಿನಲ್ಲಿ ನಡೆದ ಮೇಘಮೈತ್ರಿ 6 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ 29.6.2023





ಡಾ.ಪ್ರಕಾಶ ಗ.ಖಾಡೆ ಅವರ ಕಾರ್ಯ ನಿರ್ವಹಣೆ


1) ಅಧ್ಯಕ್ಷ ರಾಮದುರ್ಗ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು, 1992 ರಿಂದ 1995ರವರೆಗೆ.


2) ಸದಸ್ಯ ಕನ್ನಡ ಜಾಗೃತಿ ಸಮಿತಿ (ಕನ್ನಡ ಅಭಿವೃದ್ಧಿ ಪ್ರಾಧಿಕಾರ)

         ಬಾಗಲಕೋಟ 1997 ರಿಂದ 2002.


3) ಪ್ರಧಾನ ಕಾರ್ಯದರ್ಶಿ, "ಜಾನಪದ ಉಳಿಸಿ ವೇದಿಕೆ" ಲೋಕಾಪೂರ 1997 ರಿಂದ...


4) ಪ್ರಧಾನ ಕಾರ್ಯದರ್ಶಿ "ಪಾರಿಜಾತ ಪ್ರತಿಷ್ಠಾನ" ಲೋಕಾಪೂರ 1997 ರಿಂದ....


5) ಸಂಘಟನಾ ಕಾರ್ಯದರ್ಶಿ, ಬಾಗಲಕೋಟ ಜಿಲ್ಲಾ ಚು.ಸಾ.ಪ. 1998 ರಿಂದ 2005


6) ಪ್ರಧಾನ ಸಂಚಾಲಕ, ಬಾಗಲಕೋಟ ಜಿಲ್ಲಾ ಚು.ಸಾ.ಪ. 2006 ರಿಂದ....


7) ಅಧ್ಯಕ್ಷ, ಸೃಷ್ಠಿ ಸೃಜನ ವೇದಿಕೆ, ಬಾಗಲಕೋಟ 1997 ರಿಂದ.....


8) ಅಧ್ಯಕ್ಷ, ಶರಣ ಚೇತನ, ವೇದಿಕೆ, ಬಾಗಲಕೊಟ 2005 ರಿಂದ....


9) ಪ್ರಧಾನ ಸಂಚಾಲಕ, "ರಂಗಕೋಟೆ ಬಾಗಿಲುಕೋಟೆ" 2006 ರಿಂದ....

.

10) ಕಾರ್ಯದರ್ಶಿ, ತಾ. ಕನ್ನಡ ಸಾಹಿತ್ಯ ಪರಿಷತ್ತು, ಬಾಗಲಕೊಟ 2006 ರಿಂದ 2007


11)     ಗೌರವ ಕಾರ್ಯದರ್ಶಿ,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,ಬಾಗಲಕೋಟ 2008-2011


12)     ಸಂಚಾಲಕರು,ಸಂಶೋಧನಾ ಸಾಹಿತಿಗಳ ಒಕ್ಕೂಟ,ಬಾಗಲಕೋಟ


13)     ಜಿಲ್ಲಾ ಅಧ್ಯಕ್ಷ,ಕನ್ನಡ ಜಾನಪದ ಪರಿಷತ್ತು,ಬಾಗಲಕೋಟ

14)    ಸದಸ್ಯರು,ಪಿ.ಬಿ.ದುತ್ತರಗಿ ಪ್ರತಿಷ್ಠಾನ, ಕರ್ನಾಟಕ ಸರಕಾರ, ಬಾಗಲಕೋಟ





ಡಾ.ಪ್ರಕಾಶ ಗ.ಖಾಡೆ ಅವರ ರಂಗಭೂಮಿ ಕ್ಷೇತ್ರದ ಸಾಧನೆಗಳು


1) "ಬರ್ರೆಪೋ ಗಲ್ಲಿಗೇರಿಸ್ರಿ" ನಾಟಕ ರಂಗ ಸಮೂಹ ಬಾಗಲಕೋಟ ಅವರಿಂದ ಮಲ್ಲಿಕಾರ್ಜುನ ಸೊನ್ನದ ನಿರ್ದೇಶನದಲ್ಲಿ 25ಕ್ಕೂ ಹೆಚ್ಚು ಬೀದಿ ನಾಟಕವಾಗಿ ಪ್ರದರ್ಶನ 20-04-1984 ರಿಂದ

2) ಹುನಗುಂದ ತಾಲೂಕ ಸೂಳೆಭಾವಿಯಲ್ಲಿ ನಡೆದ ಹವ್ಯಾಸಿ ವೃತ್ತಿ ರಂಗೋತ್ಸವ (25-07-1990 ರಿಂದ 29-07-1990)ದಲ್ಲಿ ಕಾರ್ಯನಿರ್ವಹಣೆ.

3)"ಸ್ನೇಹರಂಗ ಸಾಧನೆ ತುಂಬಿದ ದಶಕ" ಲೇಖನ ಸುಧಾ 21-10-1990ರಲ್ಲಿ   ಪ್ರಕಟ.

4)"ನಾ ಹೆಚ್ಚೋ ನಿನ್ನ ತವರ ಹೆಚ್ಚೋ" (ಜನಪದ ಸಂಗೀತ ನಾಟಕ) ಆಕಾಶವಾಣಿ     ಧಾರವಾಡ ಕೇಂದ್ರದಿಂದ ದಿ. 11-02-1993 ರಲ್ಲಿ ಪ್ರಸಾರ.

5) ಕೇಂದ್ರ ಮಾನವ ಸಂಪನ್ಮೂಲ ಇಲಾಖೆ, ಸಾಂಸ್ಕøತಿಕ ವಿಭಾಗ, ನವದೆಹಲಿ ಶ್ರೀ ಮಂಜುನಾಥ ಶ್ರೀ ಕೃಷ್ಣ ಪಾರಿಜಾತ ಬಯಲು ಕಂಪನಿ, ದಾದನಟ್ಟಿ, ಸಹಯೋಗದಲ್ಲಿ ನಡೆದ "ಶ್ರೀ ಕೃಷ್ಣ ಪಾರಿಜಾತ ರಂಗ ತರಬೇತಿ ಶಿಬಿರ"ದಲ್ಲಿ ಉಪನ್ಯಾಸ. ಉತ್ತರ ಕರ್ನಾಟಕದಲ್ಲಿ ಪಾರಿಜಾತ ಕಲೆಯ ಬೆಳವಣಿಗೆ ಹಾಗೂ ಪ್ರಚಾರ 06-08-1998, ಸ್ಥಳ: ಕಡಪಟ್ಟಿ, ತಾ: ಜಮಖಂಡಿ.

6) ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಹಾಗೂ ನಟರಾಜ ಹವ್ಯಾಸಿ ಕಲಾ ತಂಡ, ಲೋಕಾಪೂರ ಸಹಯೋಗದಲ್ಲಿ ನಡೆದ "ಗ್ರಾಮೀಣ ರಂಗೋತ್ಸವ 99" ದಲ್ಲಿ ಕಾರ್ಯನಿರ್ವಹಣೆ (ಸಂಚಾಲಕತ್ವ) (25-04-1999 ರಿಂದ 27-04-1999).

7) ಅಧ್ಯಕ್ಷತೆ: ಜಾನಪದ ಸಂರಕ್ಷಣಾ ಪರಿಷತ್ ಯಂಡಿಗೇರಿ (ಬದಾಮಿ) ಸಂಸ್ಥೆಯಿಂದ ನಡೆದ ಬಯಲಾಟ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ, ಸ್ಥಳ: ಯಂಡಿಗೇರಿ, ತಾ: ಬದಾಮಿ ದಿ. 12-08-2000.

8) ರಂಗ ಕೃತಿ ಪ್ರಕಟ: "ಪಾರಿಜಾತದ ಗಾರುಡಿಗ" ಕೃಷ್ಣಾಜಿ ದೇಶಪಾಂಡೆ ಕೃತಿ ಬಿಡುಗಡೆ, ಸಂಸ್ಕøತಿ ರಂಗಮಂದಿರ ಲೋಕಾಪೂರ 14-10-1997, ಪಾರಿಜಾತ ಪ್ರತಿಷ್ಠಾನ ಲೋಕಾಪೂರ, ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಣೆ.

9) ರಂಗ ಸಂಗೀತ: ಅಧ್ಯಕ್ಷತೆ, ಕರ್ನಾಟಕ ನಾಟಕ ಅಕಾಡಮಿ, ಬೆಂಗಳುರು ವತಿಯಿಂದ ಶ್ರೀ ಮಹಾಲಿಂಗೇಶ್ವರ ಅನುಭವ ಮಂಟಪ ರನ್ನ ಬೆಳಗಲಿಯಲ್ಲಿ ನಡೆದ ರಂಗಭೂಮಿ ಕಲಾವಿದರಿಂದ ರಂಗ ಸಂಗೀತ ಮತ್ತು ಪಾರಿಜಾತ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ, ಸ್ಥಳ: ರನ್ನ ಬೆಳಗಲಿ (ಮುಧೋಳ), ದಿ. 14-02-1997.

10) ರಂಗ ಉಪನ್ಯಾಸ: ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಮತ್ತು ಶ್ರೀ ಮಂಜುನಾಥ ಪಾರಿಜಾತ ಕಂಪನಿ, ದಾದನಟ್ಟಿ, ಸಹಯೋದಲ್ಲಿ "ಶ್ರೀ ಕೃಷ್ಣ ಪಾರಿಜಾತ ರಂಗೋತ್ಸವದಲ್ಲಿ" ಉಪನ್ಯಾಸ, ಸ್ಥಳ: ಬಾಲಕಿಯರ ಸರಕಾರಿ ಪ.ಪೂ. ಕಾಲೇಜು ಜಮಖಂಡಿ ದಿನಾಂಕ 01-10-1997.

11) ಪ್ರಚಾರ ಸಮಿತಿ ಅಧ್ಯಕ್ಷ: "ಗಿರಿಜನ ಕಲಾ ಮೇಳ 98" ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಮತ್ತು ನಟರಾಜ ಹವ್ಯಾಸಿ ಕಲಾ ತಂಡ ಲೋಕಾಪುರ ವತಿಯಿಂದ ನಡೆದ "ಗಿರಿಜನ ಕಲಾ ಮೇಳ 98"ರ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ, ದಿನಾಂಕ 12-04-98.

12) ರಂಗ ಉಪನ್ಯಾಸ : ಕೇಂದ್ರ ಮಾನವ ಸಂಪನ್ಮೂಲ ಇಲಾಖೆ, ಸಾಂಸ್ಕøತಿಕ ವಿಭಾಗ ನವದೆಹಲಿ ಹಾಗೂ ಮಂಜುನಾಥ ಶ್ರೀ ಕೃಷ್ಣ ಪಾರಿಜಾತ ಬಯಲು ಕಂಪನಿ ದಾದನಟ್ಟಿ ಸಹಯೋಗದಲ್ಲಿ ನಡೆದ "ಶ್ರೀ ಕೃಷ್ಣ ಪಾರಿಜಾತ" ರಂಗ ತರಬೇತಿ ಶಿಬಿರದಲ್ಲಿ ಉತ್ತರ ಕರ್ನಾಟಕದಲ್ಲಿ ಪಾರಿಜಾತ ರಂಗ ಕಲೆಯ ಬೆಳವಣಿಗೆ ಹಾಗೂ ಪ್ರಚಾರ ಕುರಿತು ಉಪನ್ಯಾಸ.

13) ಗ್ರಾಮೀಣ ರಂಗೋತ್ಸವ ಸಂಚಾಲಕತ್ವ, ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ, ಬೆಂಗಳೂರು ಹಾಗು ನಟರಾಜ ಹವ್ಯಾಸಿ ಕಲಾ ತಂಡ, ಲೋಕಾಪುರ ವತಿಯಿಂದ ನಡೆದ 

"ಗ್ರಾಮೀಣ ರಂಗೋತ್ಸವ 99" ರ ಕಾರ್ಯನಿರ್ವಹಣೆ. ಸ್ಥಳ: ಲೋಕಾಪುರ ದಿ. 25-04-1999 ರಿಂದ 27-04-1999.

14) ಅಧ್ಯಕ್ಷತೆ: ಜಾನಪದ ಸಂರಕ್ಷಣಾ ಪರಿಷತ್ ಯಂಡಿಗೇರಿ (ಬಾದಾಮಿ) ಅವರಿಂದ ನಡೆದ ಬಯಲಾಟ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಪಾತ್ಯಕ್ಷಿಕೆ ಹಾಗೂ ಕಲಾವಿದರೊಂದಿಗೆ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ, ಸ್ಥಳ: ಯಂಡಿಗೇರಿ (ಬದಾಮಿ) ದಿನಾಂಕ 12-08-2000.

15) ಕಮ್ಮಟದ ನಿರ್ದೇಶಕ: ಬಾಗಲಕೋಟ ಜಿಲ್ಲಾ ಶಿಕ್ಷಕರಿಗಾಗಿ ಕರ್ನಾಟಕ ನಾಟಕ ಅಕ್ಯಾಡಮಿ, ಡಯಟ್, ಇಲಕಲ್ಲ ಸಹಯೋಗದಲ್ಲಿ ನಡೆದ 5 ದಿನಗಳ ಮಕ್ಕಳ ನಾಟಕ ರಚನಾ ಮತ್ತು ಅಭಿನಯ ಕಮ್ಮಟದ ನಿರ್ದೇಶಕರಾಗಿ ಕಾರ್ಯ ನಿರ್ವಹಣೆ, ಸ್ಥಳ: ಬಾಗಲಕೋಟ, ದಿನಾಂಕ 16-12-2002.

16) ರಂಗ ಉಪನ್ಯಾಸ: ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬಾಗಲಕೋಟ ವತಿಯಿಂದ ಪಾರಿಜಾತ ಉತ್ಸವ ಲೋಕಾಪೂರ 2003ರಲ್ಲಿ ಲೋಕಾಪೂರ ಪಾರಿಜಾತ ಪರಂಪರೆ ಕುರಿತು ಉಪನ್ಯಾಸ.


17) "ರಂಗಕೋಟೆ ಬಾಗಲಕೋಟೆ" ತಂಡದ ಸ್ಥಾಪನೆ, ತಂಡದ ಪ್ರಧಾನ ಸಂಚಾಲಕ, ಈ ತಂಡದಿಂದ ಬಾಗಲಕೋಟೆ ನಗರದಲ್ಲಿ ದಿನಾಂಕ 25-02-2006 ರಂದು "ಮುಟ್ಟಿದರೆ ಶಿವನಾಣೆ" ನಾಟಕ ಪ್ರದರ್ಶನ, ನಾಟಕದಲ್ಲಿ ಸನ್ಯಾಸಿ ರೂಪದ ನಾರದನಾಗಿ ಅಭಿನಯ. ಸ್ಥಳ: ಜಿಲ್ಲಾ ಕಲಾಭವನ, ನವನಗರ, ಬಾಗಲಕೋಟ.

18) ದಿನಾಂಕ 15-08-2006ರಂದು ಜಿಲ್ಲಾ ಆಡಳಿತ, ಬಾಗಲಕೋಟೆಯ ವತಿಯಿಂದ ಸ್ವಾತಂತ್ರ್ಯೋತ್ಸವ ಅಂಗವಾಗಿ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ "ಗಾಂಧಿ ಎದುರಿನಲ್ಲಿ" ನಾಟಕ ಪ್ರದರ್ಶನ. ನಿರ್ದೇಶನ: ಡಾ. ಪ್ರಕಾಶ ಖಾಡೆ.

19) "ರಂಗಕೋಟೆ ಬಾಗಲಕೋಟೆ" ತಂಡದಿಂದ ಎರಡನೆಯ ನಾಟಕ "ಶ್ರೀ ಬೀಳೂರು ಗುರುಬಸವ ಜ್ಯೋತಿ" ನಾಟಕದಲ್ಲಿ ಘನಮಠದ ಶಿವಯೋಗಿಗಳ ಪಾತ್ರ ಅಭಿನಯಿಸಿದ್ದು. ನಾಟಕ ಪ್ರದರ್ಶನ ದಿನಾಂಕ 04-11-2007, ಸ್ಥಳ: ಜಿಲ್ಲಾ ಕಲಾಭವನ, ನವನಗರ, ಬಾಗಲಕೋಟ.

20)ಜಲಜಮಿತ್ರ ರಂಗವೇದಿಕೆ ತಂಡದಿಂದ ಬೆಂಗಳೂರು ಕುವೆಂಪು ಕಲಾಮಂದಿರದಲ್ಲಿ 26                 ಜನೆವರಿ 2010 ರಂದು ಗಣರಾಜ್ಯೋತ್ಸವ ಅಂಗವಾಗಿ ‘ರಂಗ ಸುಂದರಿ’ (ರಚನೆ,ನಿರ್ದೆಶನ :ಬಸವರಾಜ ಮಠ) ಪ್ರದರ್ಶನ, ನಾಟಕದಲ್ಲಿ ಟಿ.ವಿ.ನಿರೂಪಕನ ಪಾತ್ರ ಅಭಿನಯ. 

21)ಜಲಜಮಿತ್ರ ರಂಗವೇದಿಕೆ ತಂಡದಿಂದ ಬಾಗಲಕೋಟದ ಜಿಲ್ಲಾ ಕಲಾ ಭವನದಲ್ಲಿ ಜನೇವರಿ 2011 ರವಿವಾರ ‘ಬಿತ್ತದೆ ಬೆಳೆದ ಇಳಿಹಾಳ ಬೊಮ್ಮಯ್ಯ’ನಾಟಕ ಪ್ರದರ್ಶನ,ನಾಟಕದಲ್ಲಿ ‘ಸುಗ್ರೀವಯ್ಯ’’ ಪಾತ್ರ ಅಭಿನಯಿಸಿದ್ದು.


22)ಬೆಳಗುತಿದೆ ಬಸವ ಬ್ಯಾಂಕ ನಾಟಕ ರಚನೆ ಮತ್ತು ಪ್ರದರ್ಶನ,ಬಾಗಲಕೋಟ.16.11.2017






ಡಾ.ಪ್ರಕಾಶ ಗ.ಖಾಡೆ ಅವರಿಂದ ಕವನಗಳ ವಾಚನ :



1)ಅಖಿಲ ಭಾರತ 64ನೇ ಕನ್ನಡ ಸಾಹಿತ್ಯ ಸಮ್ಮೇಳನ, ಮುಧೋಳ 1995


2)ರಾಜ್ಯ ಮಟ್ಟದ ಯುವ ಕವಿಗೋಷ್ಠಿ, ಕರ್ನಾಟಕ ಸಾಹಿತ್ಯ ಅಕ್ಯಾಡಮಿಯಿಂದ 

ಧಾರವಾಡದಲ್ಲಿ 1989


3)ರಾಜ್ಯ ಮಟ್ಟದ ಯುವ ಕವಿಗೋಷ್ಠಿ, ಮೈಸೂರು 1990. ಮೈಸೂರು ವಿ.ವಿ. 

ಕನ್ನಡ ಅಧ್ಯಯನ ಸಂಸ್ಥೆಯಿಂದ


4)ನವರಸಪುರ ಕವಿಗೋಷ್ಠಿ 1997 ಜಿಲ್ಲಾ ಆಡಳಿತ, ವಿಜಾಪೂರ


5)"ಕಿತ್ತೂರ ಉತ್ಸವ" ಕವಿಗೋಷ್ಠಿ 1997 ಜಿಲ್ಲಾ ಆಡಳಿತ, ಬೆಳಗಾವಿ


6)ಕೇರಳ ರಾಜ್ಯ ದ್ವಿತೀಯ ಕನ್ನಡ ಸಮ್ಮೇಳನ, ರಾಷ್ಟ್ರೀಯ ಕವಿಗೋಷ್ಠಿ ಕಾಸರಗೋಡು 2006


7) ಅಖಿಲ ಭಾರತ 73ನೇ ಕನ್ನಡ ಸಾಹಿತ್ಯ ಸಮ್ಮೇಳನ, ಕವಿಗೋಷ್ಠಿ, ಶಿವಮೊಗ್ಗ 2006


8)ಚಾಲುಕ್ಯ ಉತ್ಸವ ಕವಿಗೋಷ್ಠಿ 17-01-2008.


9)ಮೈಸೂರು ದಸರಾ ಕವಿಗೋಷ್ಠಿ -ಅಕ್ಟೋಬರ 2009


10)ಅಧ್ಯಕ್ಷತೆ.ಬಾಗಲಕೋಟ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ,ಕವಿಗೋಷ್ಟಿ,ತುಳಸಿಗೇರಿ


11) ಅಖಿಲ ಭಾರತ 73ನೇ ಕನ್ನಡ ಸಾಹಿತ್ಯ ಸಮ್ಮೇಳನ, ಕವಿಗೋಷ್ಠಿ, ಮೈಸೂರು 2017


12) ಮೈಸೂರು ದಸರಾ ಕವಿಗೊಷ್ಠಿ


13) ಹಂಪಿ ಉತ್ಸವ ಕವಿಗೋಷ್ಠಿ





ಡಾ.ಪ್ರಕಾಶ ಗ.ಖಾಡೆ ಪ್ರಕಟಿತ ಕಥೆಗಳ ಪಟ್ಟಿ




1.ಚೆಲುವಿ ಚಂದ್ರಿ.


2.ಇದೊಳ್ಳೆ ಪಂಚಾಯ್ತಿ ಆಯ್ತಲ್ಲಾ. (ಕರ್ಮವೀರದಲ್ಲಿ ಪ್ರಕಟ )


3. ಅಕ್ಷರ ಬೀಜ ( ವಿಕ್ರಮದಲ್ಲಿ ಪ್ರಕಟ )


4. ಮುತ್ಯಾನ ಜಾತ್ರಿ ( ವಿಶ್ವವಾಣಿಯಲ್ಲಿ ಪ್ರಕಟ )


5.  ಭೂಮಿ ತಲ್ಲಣಿಸ್ಯಾವ ( ವಿಜಯ ಕರ್ನಾಟಕದಲ್ಲಿ ಪ್ರಕಟ )


6. ಕತ್ತಲಾ ಕಾಡಿತು. ( ಕರ್ಮವೀರದಲ್ಲಿ ಪ್ರಕಟ )


7. ಅಕ್ಕಿಕಾಳು . ( ಮಯೂರದಲ್ಲಿ ಪ್ರಕಟ )


8. ಖಾಕಿ ಕಾವಲು ( ಸಮಾಜಮುಖಿಯಲ್ಲಿ ಪ್ರಕಟ )


9. ನಮ್ಮೂರ ನಮಗ ಪಾಡ ( ಪ್ರಜಾವಾಣಿಯಲ್ಲಿ ಪ್ರಕಟ )


10. ಸೂರ್ಯ ಚಂದ್ರರು ಕಾವಲೋ ( ಕನ್ನಡಪ್ರಭದಲ್ಲಿ ಪ್ರಕಟ )


11. ಬಾಳುಕುನ ಪುರಾಣ ( ಸುಧಾದಲ್ಲಿ ಪ್ರಕಟ )


12. ಸಾಲಿ ಝೇಂಡಾ


13. ಅಕ್ಕರದ ತಾಯವ್ವಾ (ಬಹುಮಾನಿತ ಕಥೆ ,ಕರ್ಮವೀರದಲ್ಲಿ ಪ್ರಕಟ )


14. ಇಲ್ಲಿಂದ ಮೇಲೆ ಶಬ್ದಗಳಿಲ್ಲ. (ಪ್ರಜಾವಾಣಿಯಲ್ಲಿ ಪ್ರಕಟ )


15. ಸಾಲಿ ಸವಾರಿ (ವಿಜಯ ಕರ್ನಾಟಕದಲ್ಲಿ ಪ್ರಕಟ )


16. ಯಾಗದ ಕುದುರೆ ( ಸುಧಾದಲ್ಲಿ ಪ್ರಕಟ )


17. ಬುದ್ದ ಪ್ರಿಯೆ ಶಾಂತಿ


18. ಸಧ್ಯಕಿದು ಜಮಖಂಡಿ ಸಂತಿ (ಬಹುಮಾನಿತ ಕಥೆ – ಮೋಗವೀರದಲ್ಲಿ ಪ್ರಕಟ )


19. ಮುಳುಗದಿರಲಿ ಬದುಕು (ತರಂಗದಲ್ಲಿ ಪ್ರಕಟ)


20. ಒಪ್ಪಾರಿ ಮೀಸೆ


ಪ್ರಕಟಿತ ಕಥಾ ಸಂಕಲನಗಳು


1. ಚೆಲುವಿ ಚಂದ್ರಿ ( 2021 )


2. ಬಾಳುಕುನ ಪುರಾಣ (2023)







        ಡಾ.ಪ್ರಕಾಶ ಗ.ಖಾಡೆ ಅವರಿಗೆ ಸಂದ ಪ್ರಶಸ್ತಿ, ಪುರಸ್ಕಾರಗಳು.


1) ಉತ್ತರ ಕರ್ನಾಟಕ ಯುವ ಲೇಖಕರ ವೇದಿಕೆ 

 "ಶ್ರೇಷ್ಠ ಸಾಹಿತಿ" ಪುರಸ್ಕಾರ 1997.


2) "ನಸುಕಿನ ಚಿತ್ರಗಳು" 

    ಕವಿತೆಗೆ ಸಂಕ್ರಮಣ ಸಾಹಿತ್ಯ ಪ್ರಶಸ್ತಿ 1989


3) "ಸಾಹಿತ್ಯ ಮತ್ತು ಸಾಮಾಜಿಕ ಬದಲಾವಣೆ" ಪ್ರಬಂಧಕ್ಕೆ 

    ರಾಜ್ಯ ಬಂಡಾಯ ಸಾಹಿತ್ಯ  ಸಂಘಟನೆಯ ಪ್ರಥಮ ಬಹುಮಾನ 1990.


4) ‘ಪ್ರೀತಿ ಬಟ್ಟಲು" ಕವನ ಸಂಕಲನಕ್ಕೆ ಕಡಣಿ ಸಾಹಿತ್ಯ ಪ್ರಶಸ್ತಿ, ಸಿಂದಗಿ 1998.


5) "ಕೃಷ್ಣಾ ತೀರದ ಜನಪದ ಒಗಟುಗಳು" ಕೃತಿಗೆ 

     ಹುಬ್ಬಳ್ಳಿಯ ಗೌರಮ್ಮ ಬೊಮ್ಮಾಯಿ  ಪ್ರತಿಷ್ಠಾನದದಿಂದ

     5,000/- ನಗದು ಬಹುಮಾನದೊಂದಿಗೆ "ಜಾನಪದ ಸಿರಿ" ಪ್ರಶಸ್ತಿ 2006.


6) "ಕಾಸರಗೋಡು ಕರಾವಳಿ ಪ್ರತಿಷ್ಠಾನದ" "ಸುವರ್ಣ ಕನ್ನಡಿಗೆ" ಪ್ರಶಸ್ತಿ 2006.


7) "ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ" ಕೃತಿಗೆ 

    ಸಿಂದಗಿಯ "ಬೇಂದ್ರೆ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ"

     3,000/- ರೂ. ಪ್ರಶಸ್ತಿ ಮೊತ್ತ 2007.


8) ’ನೆಲಮೂಲ ಸಂಸ್ಸøತಿ’  ಕೃತಿಗೆ 

    ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ-2010,

    ಬಹುಮಾನ ಮೊತ್ತ-ರೂ.2000


10) ’ನೆಲಮೂಲ ಸಂಸ್ಸøತಿ ಕೃತಿಗೆ ಜಾನಪದ ಸಂರಕ್ಷಣಾ ಪರಿಷತ್ತು 

     ಶ್ರೇಷ್ಠ ಕೃತಿ ಪ್ರಶಸ್ತಿ -2010


11) ಬಾಗಲಕೋಟ ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ -2016


12) ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ –ಕವನ ಸಂಕಲನಕ್ಕೆ

       ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ-2016,

       ಬಹುಮಾನ ಮೊತ್ತ-ರೂ.2000




12) ಬೆಂಗಳೂರಿನ ಮಾತೃಭೂಮಿ ಸಂಸ್ಥೆಯಿಂದ 

     ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯ ಪ್ರಶಸ್ತಿ-2017


13) ಯಾದಗಿರಿ ಜಾನಪದ ಕಲಾಲೋಕದಿಂದ ಜಾನಪದ ಕಲಾ ಲೋಕ ಪ್ರಶಸ್ತಿ -2017


14) ಶಾಂತಿ ಬೀಜಗಳ ಜತನ ಕೃತಿಗೆ 2018 ನೇ ಸಾಲಿನ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಮುದ್ದಣ ಕಾವ್ಯ ಪ್ರಶಸ್ತಿ.


15) ಶಾಂತಿ ಬೀಜಗಳ ಕೃತಿಗೆ ಹರಿಹರದ ಹರಿಹರಶ್ರೀ ಪ್ರಶಸ್ತಿ’


16) ಮುಂಬೈನ ಮೊಗವೀರ ಪತ್ರಿಕೆ ನಡೆಸಿದ ರಾಷ್ರ್ಟಮಟ್ಟದ ಕಥಾ ಸ್ಪರ್ಧೆಯಲ್ಲಿ ‘ಸಧ್ಯಕಿದು ಜಮಖಂಡಿ ಸಂತಿ’ ಕಥೆಗೆ 5000 ರೂ ನಗದು ಬಹುಮಾನದೊಂದಿಗೆ ದ್ವಿತೀಯ ಬಹುಮಾನ.2022















‘ಬೆಳಕಾಯಿತು ಬಾಗಲಕೋಟೆ’

ಪ್ರಸಾರವಾದ 143 ಉಪನ್ಯಾಸಗಳು

ಸಾಮಾಜಿಕ ಜಾಲತಾಣದಲ್ಲಿ ಸದ್ದಿಲ್ಲದ ಕ್ರಾಂತಿ : ವಿಶ್ವವ್ಯಾಪಿ ಕನ್ನಡಿಗರಿಂದ ಮೆಚ್ಚುಗೆ.

ಕೊವಿಡ್ 19 ಕೊರೊನಾ ಕಾಲಘಟ್ಟದಲ್ಲಿ ವರ್ಷಪೂರ್ತಿ ನಿರಂತರ ನಡೆದ ಮಾಲಿಕೆ.

ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಸಾಧಕರ ಕುರಿತು ಫೇಸ್ ಬುಕ್ ಲೈವ್ ಸರಣಿ ಉಪನ್ಯಾಸ


ಸಂಯೋಜನೆ ; ಡಾ.ಪ್ರಕಾಶ ಗ.ಖಾಡೆ, ಬಾಗಲಕೋಟೆ ಮೊ.9845500890

(ಪರಿಕಲ್ಪನೆ : ಡಾ.ರಾಜಶೇಖರ ಮಠಪತಿ (ರಾಗಂ), ಮಾರ್ಗದರ್ಶನ : ಪ್ರೊ.ಬಿ.ಆರ್.ಪೊಲೀಸಪಾಟೀಲ.)

ಅ.ನಂ. ಪ್ರಸಾರವಾದ

ದಿನಾಂಕ ವಾರ ಸಾಧಕರ ಹೆಸರು ಉಪನ್ಯಾಸ ನೀಡಿದವರ ಹೆಸರು

1 3.7.2020 ಶುಕ್ರ ಪ್ರಸ್ತಾವನೆ ಡಾ.ರಾಜಶೇಖರ ಮಠಪತಿ (ರಾಗಂ)

2 6.7.2020 ಸೋಮ ಪ್ರೊ.ಸ.ಸ.ಮಾಳವಾಡ ಡಾ.ವೈ.ಎಂ.ಯಾಕೊಳ್ಳಿ,ಸವದತ್ತಿ

3 9.7.2020 ಗುರು ಬ.ಗಿ.ಯಲ್ಲಟ್ಟಿ ಪ್ರೊ.ಬಿ.ಆರ್.ಪೊಲೀಸಪಾಟೀಲ,ಬನಹಟ್ಟಿ

4 12.7.2020 ರವಿ ಡಾ.ಸ.ಜ.ನಾಗಲೋಟಿಮಠ ಡಾ.ಪ್ರಜ್ಞಾ ಮತ್ತಿಹಳ್ಳಿ,ಧಾರವಾಡ

5 15.7.2020 ಬುಧ ಕೆರೂರು ವಾಸುದೇವಾಚಾರ್ಯ ಡಾ.ಬಸು ಬೇವಿನಗಿಡದ,ಧಾರವಾಡ

6 18.7.2020 ಶನಿ ಜೀವಣ್ಣ ಮಸಳಿ ಡಾ.ವೀರೇಶ ಬಡಿಗೇರ,ಹಂಪಿ ಕನ್ನಡ ವಿ.ವಿ.

7 21.7.2020 ಮಂಗಳ ಪೂಜ್ಯ ಬಂಥನಾಳದ ಸಂಗನಬಸವ ಶಿವಯೋಗಿಗಳು ಸಂಗಮೇಶ ಪೂಜಾರಿ,ವಿಜಯಪುರ

8 24.7.2020 ಶುಕ್ರ ಬಿ.ಎಂ.ಹೊರಕೇರಿ ಕೆ.ಬಿ.ವೀರಲಿಂಗನಗೌಡರ,ಬಾದಾಮಿ

9 27.7.2020 ಸೋಮ ಪ್ರೊ.ಪಿ.ವಿ.ವಜ್ರಮಟ್ಟಿ ಡಾ.ಜೆ.ಪಿ.ದೊಡಮನಿ,ಅಥಣಿ

10 30.7.2020 ಗುರು ಪಿ.ಎಂ.ನಾಡಗೌಡರು ಪೂಜ್ಯ ಬಸವ ಮೃತ್ಯುಂಜಯ ಶ್ರೀಗಳು, ಕೂಡಲಸಂಗಮ

11 3.8.2020 ಸೋಮ ಈಶ್ವರ ಸಣಕಲ್ಲ ಡಾ.ಯಶವಂತ ಕೊಕ್ಕನವರ,ಜಮಖಂಡಿ

12 6.8.2020 ಗುರು ಡಾ.ಫ.ಗು.ಹಳಕಟ್ಟಿ ಡಾ.ಪಿಕೆ. ರಾಠೋಡ,ಧಾರವಾಡ ಕ.ವಿ.ವಿ.

13 9.8.2020 ರವಿ ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳು ಪೂಜ್ಯ ಶಿವಕುಮಾರಸ್ವಾಮಿಗಳು,ಕಪ್ಪತಗುಡ್ಡ,ಗದಗ

14 12.8.2020 ಬುಧ ಡಾ.ಎಸ್.ಎಂ.ಹುಣಶ್ಯಾಳ ಮಲ್ಲಿಕಾರ್ಜುನ ಹೆಗ್ಗಳಗಿ,ಮಹಾಲಿಂಗಪುರ

15 15.8.2020 ಶನಿ ಬಾಗಲಕೋಟೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ಡಾ.ವಿನಯ ಹಿರೇಮಠ,ಬಾಗಲಕೋಟೆ

ಸಂದರ್ಶನ : ಡಾ.ಪ್ರಕಾಶ ಗ.ಖಾಡೆ

16 18.8.2020 ಮಂಗಳ ಪೂಜ್ಯ ಡಾ.ಮಹಾಂತ ಶಿವಯೋಗಿಗಳು ಪೂಜ್ಯ ಡಾ.ಈಶ್ವರ ಮಂಟೂರ,ಮಧುರಖಂಡಿ

17 21.8.2020 ಶಕ್ರ ಜಿ.ಬಿ.ಖಾಡೆ ಡಾ.ಸಿದ್ದರಾಮ ಬಂಗಾರಿ,ಬೀಳಗಿ

18 24.8.2020 ಸೋಮ ದಾನಪ್ಪ ಜತ್ತಿ ಕಲ್ಲೇಶ ಕುಂಬಾರ,ಹಾರೂಗೇರಿ

19 27.8.2020 ಗುರು ಡಾ.ಎಸ್.ಎಸ್.ಬಸುಪಟ್ಟದ ಡಾ.ವಿ.ಎ.ಬೆನಕನಾಳ,ಗುಳೇದಗುಡ್ಡ

20 30.8.2020 ರವಿ ಸತ್ಯಕಾಮ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ,ಬೆಂಗಳೂರು

21 3.9.2020 ಗುರು ಚಿಕ್ಕೋಡಿ ತಮ್ಮಣ್ಣಪ್ಪನವರು ಪ್ರೊ.ಮಲ್ಲಿಕಾರ್ಜುನ ಹುಲಗಬಾಳಿ,ಬನಹಟ್ಟಿ

22 6.9.2020 ರವಿ ತಾಳಿಕೋಟಿ ಖಾಸ್ಗತ ಶಿವಯೋಗಿಗಳು ಪ್ರೊ.ಚಂದ್ರಗೌಡ ಕುಲಕರ್ಣಿ,ತಾಳಿಕೋಟಿ

23 9.9.2020 ಬುಧ ರಾಷ್ಟ್ರಪತಿ ಡಾ.ಬಿ.ಡಿ.ಜತ್ತಿ ಡಾ.ಪ್ರಕಾಶ ಗ.ಖಾಡೆ, ಬಾಗಲಕೋಟೆ

24 12.9.2020 ಶನಿ ಬಿ.ಆರ್.ಅರಿಷಿಣಗುಡಿ ಡಾ.ಗಣೇಶ ಅಮೀನಗಡ, ಮೈಸೂರು

25 15.9.2020 ಮಂಗಳ ಶಂ.ಗು.ಬಿರಾದಾರ ಪ.ಗು.ಸಿದ್ದಾಪುರ,ಮುಳವಾಡ

26 18.9.2020 ಶುಕ್ರ ಬೀಳೂರು ಗುರುಬಸವ ಶ್ರೀಗಳು ಸಿದ್ದರಾಮ ಮನಹಳ್ಳಿ, ಬಾಗಲಕೋಟೆ

27 21.9.2020 ಸೋಮ ‘ಸಿಸು’ಸಂಗಮೇಶ ಜಂಬುನಾಥ ಕಂಚ್ಯಾಣಿ,ವಿಜಯಪುರ

28 24.9.2020 ಗುರು ಕೃಷ್ಣಮೂರ್ತಿ ಪುರಾಣಿಕ ಡಾ.ಚನ್ನಪ್ಪ ಕಟ್ಟಿ, ಸಿಂದಗಿ

29 27.9.2020 ರವಿ ರಾವಬಹದ್ದೂರ ಡಾ.ಶಾರದಾ ಮುಳ್ಳೂರ, ಜಮಖಂಡಿ

30 30.9.2020 ಬುಧ ಡಾ.ಮಹಾದೇವ ಕಣವಿ ಪ್ರೊ.ಚಂದ್ರಶೇಖರ ಹೆಗಡೆ,ಬೀಳಗಿ

31 4.10.2020 ರವಿ ಶ್ರೀರಂಗರು ಪ್ರೊ.ರಾಜಕುಮಾರ ಬಡಿಗೇರ,ಬೆಂಗಳೂರು

32 8.10.2020 ಗುರು ಪರಶುರಾಮ ಚಿತ್ರಗಾರ ಜಯಶ್ರೀ ಭಂಡಾರಿ,ಬಾದಾಮಿ

33 11.10.2020 ರವಿ ಜನರಲ್ ಜಿ.ಜಿ.ಬೇವೂರ ಎಚ್.ಕೆ.ಅವಟಿ,ಎಂ.ಬಿ.ಕಟ್ಟಿಮನಿ,ವಿಜಯಪುರ

34 15.10.2020 ಗುರು ಹರ್ಡೇಕರ ಮಂಜಪ್ಪನವರು ಡಾ.ಮಲ್ಲಿಕಾರ್ಜುನ ಮೇತ್ರಿ,ವಿಜಯಪುರ

35 18.10.2020 ರವಿ ಪಾರಿಜಾತದ ಅಪ್ಪಾಲಾಲ  ನದಾಫ ಶಿವಾನಂದ ಶೆಲ್ಲಿಕೇರಿ,ಮುಧೋಳ

36 22.10.2020 ಗುರು ಕುಮಾರ ಕಕ್ಕಯ್ಯ ಪೋಳ ಡಾ.ಅರ್ಜುನ ಗೊಳಸಂಗಿ,ಗದಗ

37 25.10.2020 ರವಿ ಮೊಹರೆ ಹನಮಂತರಾಯರು ಅಶೋಕ ಹಂಚಲಿ, ಮುದ್ದೇಬಿಹಾಳ

38 29.10.2020 ಗುರು ಗೀ ಗೀ ಗಾರುಡಿಗ ಕಡಣಿ ಕಲ್ಲಪ್ಪ ಡಾ.ರಮೇಶ ಎಸ್.ಕತ್ತಿ, ಆಲಮೇಲ

39 1.11.2020 ರವಿ ಪಿ.ಬಿ.ದುತ್ತರಗಿ ಡಾ.ವಿಶ್ವನಾಥ ವಂಶಾಕೃತಮಠ,ಇಳಕಲ್ಲ

40 5.11.2020 ಗುರು ವಾಸಣ್ಣ ದೇಸಾಯಿ ಮಹಾದೇವ ಕಂಬಾಗಿ, ಇಳಕಲ್ಲ

41 8.11.2020 ರವಿ ಡಾ.ಬಿ.ಆರ್.ಹಿರೇಮಠ ಡಾ.ಬಿ.ಎಸ್.ಬಿರಾದಾರ,ಬಾಗಲಕೋಟೆ

42 12.11.2020 ಗುರು ಚನ್ನಪ್ಪ ಕರಡಿ ದಾಕ್ಷಾಯಣಿ ಮಂಡಿ,ಮಹಾಲಿಂಗಪುರ

43 15.11.2020 ರವಿ ದು.ನಿಂ.ಬೆಳಗಲಿ ಪ್ರಾ.ಚಂದ್ರಪ್ರಭಾ ಬಾಗಲಕೋಟ,ರಬಕವಿ

44 19.11.2020 ಗುರು ಡಾ.ಆರ್.ಬಿ.ಪಾಟೀಲ ಡಾ.ಜಿನದತ್ತ ಹಡಗಲಿ, ಧಾರವಾಡ

45 22.11.2020 ರವಿ ಡಾ.ಸಿಂಪಿ.ಲಿಂಗಣ್ಣ ಡಾ.ಸದಾನಂದ ಬಿಳ್ಳೂರ, ಪುಣೆ

46 26.11.2020 ಗುರು ಅನ್ನದಾನಿ ಹಿರೇಮಠ ಡಾ.ಬಸವರಾಜ ಗವಿಮಠ, ಇಳಕಲ್ಲ

47 29.11.2020 ರವಿ ಡಾ.ಸಿ.ಚ.ನಂದೀಮಠ ಪ್ರಾ.ಜಿ.ಬಿ.ದಾನಶೆಟ್ಟಿ.ಬಾಗಲಕೋಟೆ

48 3.12.2020 ಗುರು ಅಮೀರಬಾಯಿ ಕರ್ನಾಟಕಿ ಚಂದ್ರಶೇಖರ ದೇಸಾಯಿ, ಮುಧೋಳ

49 6.12.2020 ರವಿ ಬರಗಿ ರಾಚಯ್ಯನವರು ಎಸ್.ವಿಜಯಲಕ್ಷ್ಮೀ ಬದನೂರ

50 10.12.2020 ಗುರು ಜನಪದ ಕೋಗಿಲೆ ಗೌರಮ್ಮ ಚಲವಾದಿ ಪ್ರೊ.ಜಿ.ಕೆ.ತಳವಾರ, ಬಾಗಲಕೋಟೆ

51 13.12.2020 ರವಿ ಬಿ.ಪಿ.ಹಿರೇಸೋಮಣ್ಣವರ ಚಂದ್ರಶೇಖರ ರೂಗಿ, ಮುಧೋಳ

52 17.12.2020 ಗುರು ಕೆ.ಪಿ.ನಾಡಗೌಡರು ವೆಂಕಟೇಶ ಗುಡೆಪ್ಪನವರ, ಮುಧೋಳ

53 20.12.2020 ರವಿ ಮಧುರಚೆನ್ನ ಡಾ.ಎಚ್.ಎಸ್.ಸತ್ಯನಾರಾಯಣ.ಚಿಕ್ಕಮಗಳೂರು

54 24.12.2020 ಗುರು ಪ್ರಸನ್ನ ವೆಂಕಟದಾಸರು ಡಾ.ಸುಭಾಷ ಕಾಖಂಡಕಿ, ಬೆಂಗಳೂರು

55 27.12.2020 ರವಿ ಡಾ.ಬಿ.ಎಸ್.ಗದ್ದಗಿಮಠ ಡಾ.ಎಚ್.ಎಸ್.ಘಂಟಿ, ಗುಳೇದಗುಡ್ಡ

56 31.12.2020 ಗುರು ಕಂದಗಲ್ಲ ಹನಮಂತರಾಯರು ಡಾ.ಪ್ರಕಾಶ ನರಗುಂದ ,ಮುದ್ದೇಬಿಹಾಳ

57 3.1.2021 ರವಿ ಸಂಗಮೇಶ ಹೊಸಮನಿ ಸಿದ್ದಲಿಂಗಪ್ಪ ಬೀಳಗಿ, ಹುನಗುಂದ

58 7.1.2021 ಗುರು ಜೋರಾಪುರ ಗುರುರಾಯರು ಪ್ರಾ.ಅಶೋಕ ಕಂದಗಲ್ಲ ,ಬಾಗಲಕೋಟೆ

59 10.1.2021 ರವಿ ಕೆ.ಎಂ.ಪಟ್ಟಣಶೆಟ್ಟರು ರವಿ.ಕಂಗಳ, ಬಾದಾಮಿ

60 14.1.2021 ಗುರು ಮಹಾದಾನಿ ಗಂಗಮ್ಮ ಚಿನಿವಾರ ಗೀತಾ ಶಿವಮೂರ್ತಿ, ಮುದ್ದೇಬಿಹಾಳ

61 17.1.2021 ರವಿ ವೇದಾಂತಕೇಸರಿ ಪೂಜ್ಯ ಮಲ್ಲಿಕಾರ್ಜುನಶ್ರೀಗಳು ಪ್ರೊ.ಬಿ.ಆರ್.ಪೊಲೀಸಪಾಟೀಲ,ಬನಹಟ್ಟಿ

62 21.1.2021 ಗುರು ಅಥರ್ಗಾ ರೇವಣಸಿದ್ದ ಮಾಸ್ತರರು ಪ್ರೊ.ಎಂ.ಎಸ್.ಬದಾಮಿ,ರಬಕವಿ

63 24.1.2021 ರವಿ ಗಣಿತಜ್ಞ ಭಾಸ್ಕರಾಚಾರ್ಯ-2 ವಿದ್ವಾನ್ ಗುರುರಾಜ ಆಚಾರ್ಯ ಹೆರಕಲ್ಲ,ಹುಬ್ಬಳ್ಳಿ

64 28.1.2021 ಗುರು ಶ್ರೀಮಂತ ಆರ್.ಎಂ.ದೇಸಾಯಿ ಸಿದ್ದರಾಮ ಶಿರೋಳ,ಬೀಳಗಿ

65 31.1.2021 ರವಿ ಕವಿ ಸಂಗಮೇಶ ಕೋಟಿ ಡಾ.ಶಿವಾನಂದ ಕುಬಸದ,ಮುಧೋಳ

66 4.2.2021 ಗುರು ಪ್ರೊ.ಜಿ.ಬಿ.ಸಜ್ಜನ ಡಾ.ರಾಜಶೇಖರ ಮಠಪತಿ (ರಾಗಂ)

67 7.2.2021 ರವಿ ಕೃಷಿತಜ್ಞ ಡಾ.ಎನ್.ಪಿ.ಪಾಟೀಲ ಗುರುರಾಜ ಲೂತಿ,ಬೀಳಗಿ

68 11.2.2021 ಗುರು ಜ್ಞಾನ ದಾಸೋಹಿ ಗುರು ಬಸವಾರ್ಯ ಮಠ ಗುರುಗಳು ಡಾ.ಮಲ್ಲಣ್ಣ ನಾಗರಾಳ,   

ಪ್ರಭು ಮಾಲಗತ್ತಿಮಠ,ಹುನಗುಂದ

69 14.2.2021 ರವಿ ಕವಿ ಶಂಕರ ಕಟಗಿ ಕಿರಣ ಬಾಳಾಗೋಳ, ಬೀಳಗಿ

70 18.2.2021 ಗುರು ಸಿದ್ದು ನ್ಯಾಮಗೌಡರು ಪ್ರೊ.ಟಿ.ಪಿ.ಗಿರಡ್ಡಿ,ಜಮಖಂಡಿ

71 21.2.2021 ರವಿ ಅಬ್ಬಾಸ್ ಮೇಲಿನಮನಿ ಲಕ್ಷ್ಮಣ ಬದಾಮಿ,ಸಿರೂರ

72 25.2.2021 ಗುರು ಗುರುದೇವ ರಾನಡೆ ಸೋಮನಾಥ ಗೀತಯೋಗಿ,ಇಂಡಿ

73 28.2.2021 ರವಿ ಎಂ.ಸಿ.ಮೋದಿ ವಿ.ಬಿ.ಮಾಳಿ,ಲೋಕಾಪುರ

74 4.3.2021 ಗುರು ಸೋಮಶೇಖರ ಸಾಲಿ ಶಾಂತಯ್ಯ ಪರಡಿಮಠ,ದಾವಣಗೆರೆ

75 7.3.2021 ರವಿ ಕೌಜಲಗಿ ನಿಂಗಮ್ಮ ಗೀತಾ ದಾನಶೆಟ್ಟಿ, ಬಾಗಲಕೋಟೆ

76 11.3.2021 ಗುರು ರಾಮಣ್ಣ ಸೊನ್ನದ ಸಂಗಮೇಶ ಸಣ್ಣತಂಗಿ, ಬಾಗಲಕೋಟೆ

77 14.3.2021 ರವಿ ಸಿಂಹಾಸನ ಮಾಮಲೇದಾರ ಶಂಕರ ಬೈಚಬಾಳ,ವಿಜಯಪುರ

78 18.3.2021 ಗುರು ಎಲ್.ಎಸ್.ಇನಾಮದಾರ ದ.ರಾ.ಪುರೋಹಿತ, ಕಲಾದಗಿ

79 21.3.2021 ರವಿ ನಾಲತವಾಡ ವೀರೇಶ್ವರ ಶರಣರು ಐ.ಬಿ.ಹಿರೇಮಠ.ಮುದ್ದೆಬಿಹಾಳ

80 25.3.2021 ಗುರು ಚಂದ್ರವರ್ಮ ಬಿ.ಆರ್.ಕೊಟ್ಯಾಳಕರ ಡಾ.ಜಿ.ಎಸ್.ಭೂಸಗೊಂಡ,ತಿಕೋಟಾ

81 28.3.2021 ರವಿ ಕೃಷ್ಣಾಜಿ ದೇಶಪಾಂಡೆ ಮುರುಗೇಂದ್ರ ವಿರಕ್ತಮಠ, ಲೋಕಾಪುರ

82 1.4.2021 ಗುರು ಬಿಂದುಮಾಧವ ಕುಲಕರ್ಣಿ ವೆಂಕಟೇಶ ಇನಾಮದಾರ,ಬಾದಾಮಿ

83 4.4.2021 ರವಿ ಸನಾದಿ ಅಪ್ಪಣ್ಣ ಡಾ.ಎಸ.ಡಿ.ಕೆಂಗಲಗುತ್ತಿ,ಬಾಗಲಕೋಟೆ

84 8.4.2021 ಗುರು ಜ್ಯೋತಿಪ್ರಕಾಶ ಸಾಳುಂಕೆ ಮೋಹನ ದೇಶಪಾಂಡೆ,ಬಾಗಲಕೋಟೆ

85 11.4.2021 ರವಿ ಅದೃಶ್ಯಪ್ಪ ಮಾನ್ವಿ ಶಂಕರ ಹೂಲಿ,ಬಾದಾಮಿ

86 15.4.2021 ಗುರು ಅರ್ಜುನ ಕೊರಟಕರ ಮಲ್ಲಿಕಾರ್ಜುನ ಇಂಡಿ,ಜಮಖಂಡಿ

87 18.4.2021 ರವಿ ಬ.ವೀ.ಹಂಪನಗೌಡ್ರ ಜಿ.ಎನ್.ತೆಗ್ಗಳ್ಳಿ, ವಿಜಯಪುರ

88 22.4.2021 ಗುರು ರಬಕವಿ ಸದ್ಗುರು ಬ್ರಹ್ಮಾನಂದರು ಗಿರೀಶ ಮುತ್ತೂರ , ರಬಕವಿ

89 25.4.2021 ರವಿ ಡಾ.ಎಸ್.ಎಸ್.ನರಸಣಗಿ ಗಿರಿರಾಜ ಹೊಸಮನಿ, ಲಿಂಗಸಗೂರ

90 29.4.2021 ಗುರು ಬಿ.ಟಿ.ಪಾಟೀಲ,ಶಿರಬೂರ ಶಿವಾನಂದ ಶೆಲ್ಲಿಕೇರಿ,ಮುಧೋಳ

91 2.5.2021 ರವಿ ಬಿ.ಎಸ್.ಪಾಟೀಲ ಸಾಸನೂರ ಶ್ರೀಕಾಂತ ಪತ್ತಾರ,  ತಾಳಿಕೋಟಿ

92 6.5.2021 ಗುರು ಆಕಾಶವಾಣಿಯ ಅನಿಲ ದೇಸಾಯಿ ಡಾ.ಶಶಿಧರ ನರೇಂದ್ರ, ಧಾರವಾಡ

93 9.5.2021 ರವಿ ಮಹಾಲಿಂಗಲೀಲೆಯ ಬಸವ ಕವಿ ಡಾ.ಅಶೋಕ ನರೋಡೆ,ಮಹಾಲಿಂಗಪುರ

94 13.5.2021 ಗುರು ಜಂಗಿನ ಮರಗಯ್ಯನವರು ಪ್ರಾ.ಎ.ಎಸ್.ಪಾವಟೆ

95 16.5.2021 ರವಿ ಕನ್ನಡ ಕಟ್ಟಾಳು ರಾಮ ಜಾಧವ ಡಾ.ರಾಮಕೃಷ್ಣ ಮರಾಠೆ

96 20.5.2021 ಗುರು ನಾಟಕಕಾರ ಕೆ.ಎನ್.ಸಾಳುಂಕೆ ಡಾ.ಮುರ್ತುಜಾ ಬ.ಒಚಿಟಿ, ಹುನಗುಂದ

97 23.5.2021 ರವಿ ಪ್ರೊ.ಭುಜೇಂದ್ರ ಮಹಿಷವಾಡಿ ಆನಂದ ಕುಂಚನೂರ,ಮೈಸೂರ

98 27.5.2021 ಗುರು ಎಸ್.ಆರ್.ಕಂಠಿ ಮಲ್ಲಿಕಾರ್ಜುನ ಅಂಗಡಿ,ಇಳಕಲ್ಲ

99 30.5.2021 ರವಿ ಡಾ.ಎಂ.ಎಂ.ಕಲಬುರ್ಗಿ ಡಾ.ವೀರಣ್ಣ ರಾಜೂರ,ಧಾರವಾಡ

100 3.6.2021 ಗುರು ತೋಂಟದ ಡಾ.ಸಿದ್ದಲಿಂಗಶ್ರೀಗಳು ಡಾ.ಚಂದ್ರಶೇಖರ ವಸ್ತ್ರದ,ಗದಗ

101 6.6.2021 ರವಿ ಆಲೂರ ವೆಂಕಟರಾಯರು ಮಲ್ಲಿಕಾರ್ಜುನ ಶೆಲ್ಲಿಕೇರಿ,ಬಾಗಲಕೋಟೆ

102 10.6.2021 ಗುರು ಪಿ.ಎಂ.ಬಾಂಗಿ ಪೂಜ್ಯ ಡಾ.ಚನ್ನಬಸವಸ್ವಾಮಿಜಿ,ಓಲೇಮಠ,ಜಮಖಂಡಿ

103 13.6.2021 ರವಿ ವೀರವೈರಾಗ್ಯ ಮಲ್ಲಣಾರ್ಯರು ಬಸವರಾಜ ಎಸ್.ಮಠ (ಜಲಜಮಿತ್ರ)

104 17.6.2021 ಗುರು ಪೂಜ್ಯ ಸೊನ್ನದ ಶಿವಾನಂದ ಶಿವಯೋಗಿಗಳು ಸಿದ್ದಲಿಂಗ ಮನಹಳ್ಳಿ,ಮಸಬಿನಾಳ,ವಿಜಯಪುರ

105 20.6.2021 ರವಿ ಪಡಗಾನೂರ ಶಂಕರಗೌಡರು ಬಾಳನಗೌಡ ಪಾಟೀಲ,ಪಡಗಾನೂರ

106 24.6.2021 ಗುರು ಬಿ.ಎಸ್.ಪಾಟೀಲ,ಮನಗೂಳಿ ಸಿದ್ದರಾಮ ಬಿರಾದಾರ,ಮನಗೂಳಿ

107 27.6.2021 ರವಿ ಎನ್.ವಿ.ಜೋಶಿ ಶ್ರೀನಿವಾಸ ಕುಲಕರ್ಣಿ,ಧಾರವಾಡ

108 1.7.2021 ಗುರು ಶರಣಶ್ರೀ ಯಮನೂರೇಶ ಬಿರಾದಾರ ಗುಂಡುರಾವ ಧನಪಾಲ,ತಾಳಿಕೋಟಿ

109 4.7.2021 ರವಿ ಹಾದಿಮನಿ ಬಸವಪ್ಪ ಶರಣರು ಗಂಗಾಧರ ಅವಟೇರ,ಉಪನ್ಯಾಸಕರು,ಇಟಗಿ

110 8.7.2021 ಗುರು ಕಾಖಂಡಕಿ ಮಹಿಪತಿದಾಸರು ನಾರಾಯಣ ಬಾಬಾನಗರ,ವಿಜಯಪುರ

111 11.7.2021 ರವಿ ರಾ.ಯ.ಧಾರವಾಡಕರ ಡಾ.ಎಚ್.ಎಸ್.ಸತ್ಯನಾರಾಯಣ,ಚಿಕ್ಕಮಗಳೂರು

112 15.7.2021 ಗುರು ಪೂಜ್ಯ ಬೋರಗಿ-ಪುರದಾಳದ ಭೀಮಾಶಂಕರ ಮಹಾರಾಜರು ಬಸವರಾಜ ಬಡಿಗೇರ,ಬೋರಗಿ

113 18.7.2021 ರವಿ ಪೂಜ್ಯ ಮೃತ್ಯುಂಜಯ ಮಹಾಸ್ವಾಮಿಗಳು, ಮುಧೋಳ ಡಾ.ಮೃತ್ಯುಂಜಯ ರುಮಾಲೆ,ಹೊಸಪೇಟೆ

114 22.7.2021 ಗುರು ಸಜ್ಜಲಗುಡ್ಡದ ಶ್ರೀ ಶರಣಮ್ಮನವರು ಇಂದುಮತಿ ಅಂಗಡಿ,(ಪುರಾಣಿಕ),ಇಳಕಲ್ಲ

115 25.7.2021 ರವಿ ಜಿ.ಎಸ್.ಬಾಗಲಕೋಟ ರುದ್ರಗೌಡ ಪಾಟೀಲ,ಜಮಖಂಡಿ

116 29.7.2021 ಗುರು ವಿಜಯ ಸಾಸನೂರ ಮಲ್ಲಿಕಾರ್ಜುನ ಶೆಲ್ಲಿಕೇರಿ,ಬಾಗಲಕೋಟೆ

117 1.8.2021 ರವಿ ಸಾರವಾಡದ ಸ್ವಾತಂತ್ರ್ಯ ಹೋರಾಟಗಾರರು ಡಾ.ಸೋಮಶೇಖರ ವಾಲಿ,ವಿಜಯಪುರ

118 5.8.2021 ಗುರು ಸೀತಾಬಾಯಿ ತಿಮಸಾನಿ ಡಾ.ವಿಜಯಶ್ರೀ ಇಟ್ಟಣ್ಣವರ,ಬೀಳಗಿ

119 8.8.2021 ರವಿ ಪರಪ್ಪ ಸಂಗಪ್ಪ ಸಜ್ಜನ ಯೋಗೇಶ ಲಮಾಣಿ,ಅಮೀನಗಡ

120 12.8.2021 ಗುರು ಹುನಗುಂದ ಭಾಗದ ಸ್ವಾತಂತ್ರ್ಯ ಹೋರಾಟಗಾರರು ಡಾ.ನಾಗರಾಜ ನಾಡಗೌಡ, ಹುನಗುಂದ

121 15.8.2021 ರವಿ ಬಾಗಲಕೋಟೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ಡಾ.ವಿನಯ ಹಿರೇಮಠ, ಬಾಗಲಕೋಟೆ

122 19.8.2021 ಗುರು ಸ್ವಾತಂತ್ರ್ಯ ಹೋರಾಟಗಾರ ಸಾಬಣ್ಣ ಶಿಂಧೆ,ಗುಳೇದಗುಡ್ಡ ಪ್ರಾ.ಸಿ.ಎಂ.ಜೋಶಿ, ಗುಳೇದಗುಡ್ಡ

123 22.8.2021 ರವಿ ಚನ್ನಬಸಪ್ಪ ಅಂಬಲಿಯವರು ಸಂಗಮೇಶ ಬದಾಮಿ, ವಿಜಯಪುರ

124 26.8.2021 ಗುರು ಸ್ವಾತಂರ್ತ್ಯ ಹೋರಾಟಗಾರ  ಮುದಕಪ್ಪ ಕಲಬುರ್ಗಿ ಡಾ.ಉಮೇಶ ತಿಮ್ಮಾಪುರ,ಬಾಗಲಕೋಟೆ

125 29.8.2021 ರವಿ ಮಸಬಿನಾಳದ ಸ್ವಾತಂತ್ರ್ಯ ಹೋರಾಟಗಾರರು ಶಂಕರ ಬೈಚಬಾಳ,ವಿಜಯಪುರ

126 5.9.2021 ರವಿ ಬಾಗಲಕೋಟೆ ಜಿಲ್ಲೆ ರಚನೆಯ ಇಪ್ಪತ್ತೈದು ; ಪ್ರಾಸ್ತಾವಿಕ ಡಾ.ಶ್ರೀರಾಮ ಇಟ್ಟಣ್ಣವರ,ಬೀಳಗಿ

127 12.9.2021 ರವಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,ಬಾಗಲಕೋಟೆ ಡಾ.ವಸಂತ ಎಂ.ಗಾಣಿಗೇರ,ಬಾಗಲಕೋಟೆ

128 19.9.2021 ರವಿ ಬಾಗಲಕೋಟೆ ಜಿಲ್ಲೆಯ ಸಾಹಿತ್ಯ ಪ್ರಾ.ಬಿ.ಆರ್.ಪೊಲೀಸಪಾಟೀಲ,ಬನಹಟ್ಟಿ

129 26.9.2021 ರವಿ ಬಾಗಲಕೋಟೆ ಜಿಲ್ಲೆಯ ಶಿಕ್ಷಣ ಸಿದ್ಧರಾಮ ಮನಹಳ್ಳಿ,ಬಾಗಲಕೋಟೆ

130 3.10.2021 ರವಿ ಬಾಗಲಕೋಟೆ ಜಿಲ್ಲೆಯ ಪ್ರವಾಸೋದ್ಯಮ ಪ್ರಾ.ಅಶೋಕ ಕಂದಗಲ್ಲ,ಬಾಗಲಕೋಟೆ

131 10.10.2021 ರವಿ ಬಾಗಲಕೋಟೆ ಜಿಲ್ಲೆಯ ಮಹಿಳಾ ಸಾಹಿತ್ಯ ಡಾ.ಸುಮಂಗಲಾ ಮೇಟಿ,ಇಳಕಲ್ಲ

132 17.10.2021 ರವಿ ಬಾಗಲಕೋಡೆ ಜಿಲ್ಲೆಯ ಕ್ರೀಡಾ ಕ್ಷೇತ್ರ ಶ್ರೀಕಾಂತ ದಾಸರ,ಬಾಗಲಕೋಟೆ

133 24.10.2021 ರವಿ ಬಾಗಲಕೋಟೆ ಜಿಲ್ಲೆಯ ಪತ್ರಿಕೋದ್ಯಮ ರಾಮ ಮನಗೂಳಿ,ಬಾಗಲಕೋಟೆ

134 31.11.2021 ರವಿ ಬಾಗಲಕೋಟೆ ಸಂಸ್ಕøತಿ ಡಾ.ಪ್ರಕಾಶ ಗ.ಖಾಡೆ, ಬಾಗಲಕೋಟೆ

135 7.11.2021 ರವಿ ಬಾಗಲಕೋಟೆ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಎಸ್.ಜಿ.ಕೋಟಿ,ಬಾಗಲಕೋಟೆ

136 14.11.2021 ರವಿ ಬಾಗಲಕೋಟೆ ಜಿಲ್ಲೆಯ ಮಕ್ಕಳ ಸಾಹಿತ್ಯ ಡಾ.ಲಲಿತಾ ಹೊಸಪ್ಯಾಟಿ,ಹುನಗುಂದ

137 21.11.2021 ರವಿ ಬಾಗಲಕೋಟೆ ಜಿಲ್ಲೆಯ ದೇಸಗತಿ ಮನೆತನಗಳು ಡಾ.ಸಂಗಮೇಶ ಕಲ್ಯಾಣಿ,ಮುಧೋಳ

138 28.11.2021 ರವಿ ಬಾಗಲಕೋಟೆ ಜಿಲ್ಲೆಯ ನೇಕಾರಿಕೆ ಮಹಾದೇವ ಬಸರಕೋಡ,ಅಮೀನಗಡ

139 5.12.2021 ರವಿ ಬಾಗಲಕೋಟೆ ಜಿಲ್ಲೆಯ ಮಠಮಾನ್ಯಗಳು ಡಾ.ರಾಜಶೇಖರ ಬಸುಪಟ್ಟದ,ಗುಳೇದಗುಡ್ಡ

140 19.12.2022 ರವಿ ಬಾಗಲಕೋಟೆ ಜಿಲ್ಲೆಯ ವೈದ್ಯಕೀಯ ಕ್ಷೇತ್ರದ ಸಾಧನೆ ಮತ್ತು ಸಾಧ್ಯತೆಗಳು ಡಾ.ಕರವೀರಪ್ರಭು ಕ್ಯಾಲಕೊಂಡ,ಬಾದಾಮಿ

141 26.12.2022 ರವಿ ಬಾಗಲಕೋಟೆ ಜಿಲ್ಲೆಯ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಧನೆಗಳು ಡಾ.ಲಿಂಗಾನಂದ ಗವಿಮಠ,ಜಮಖಂಡಿ

142 9.1.2022 ರವಿ ಬಾಗಲಕೋಟೆ ಜಿಲ್ಲೆಯ ರಂಗ ಪರಂಪರೆ ಎಸ್.ಕೆ.ಕೊನೆಸಾಗರ,ಹುನಗುಂದ

143 6.2.2022 ರವಿ ಪದ್ಮಶ್ರೀ ಇಬ್ರಾಹಿಂ ಸುತಾರ ಡಾ.ಅಶೋಕ ನರೋಡೆ,ಮಹಾಲಿಂಗಪುರ



     ಬೆಳಕಾಯಿತು ಬಾಗಲಕೋಟೆ ಫೇಸ್ಬುಕ್ ಲೈವ್ ಮೂಲಕ ಅವಿಭಜಿತ ವಿಜಯಪುರ ,ಬಾಗಲಕೋಟೆ ಜಿಲ್ಲೆಯ ಸಾಧಕರ ಕುರಿತು ನಾಡಿನ 143 ಉಪನ್ಯಾಸಕರು ಉಪನ್ಯಾಸ ನೀಡುವ ಮೂಲಕ ಈ ಸರಣಿಯ ಯಶಸ್ಸಿಗೆ ಕಾರಣರಾಗಿದ್ದಾರೆ, ಅವರೆಲ್ಲರ ಪ್ರೀತಿಗೆ ಹೃದಯಪೂರ್ವಕ ಧನ್ಯವಾದಗಳು. ವಿಶ್ವದೆಲ್ಲೆಡೆ ನೆಲೆಸಿದ ಕನ್ನಡಿಗರು ಕೇಳಿ ಹರಸಿದ್ದಾರೆ, ಸಾಧಕರ ಕುಟುಂಬವರ್ಗದವರು ಕರೆ ಮಾಡಿ ಧನ್ಯತೆ ಹಂಚಿಕೊಂಡಿದ್ದಾರೆ. ಪರಿಕಲ್ಪನೆ ರೂಪಿಸಿಕೊಟ್ಟ ಸಾಹಿತಿಗಳಾದ ಡಾ.ರಾಜಶೇಖರ ಮಠಪತಿ (ರಾಗಂ) ಹಾಗೂ ಸದಾ ಮಾರ್ಗದರ್ಶನ ಮಾಡುತ್ತಿರುವ  ಸಾಹಿತಿಗಳಾದ ಪ್ರಾ.ಬಿ.ಆರ್.ಪೊಲೀಸಪಾಟೀಲ ಅವರಿಗೆ. ಎಲ್ಲ ಕೇಳುಗರಿಗೆ, ಜೊತೆಗೆ ಮಾಧ್ಯಮ ಬಳಗದವರ ಪ್ರೊತ್ಸಾಹ, ಫೇಸ್ಬುಕ್ ಆಡಳಿತ ವರ್ಗದವರ ಪ್ರೀತಿ ಈ ಸರಣಿಯ ಯಶಸ್ಸಿಗೆ ಕಾರಣವಾಗಿದೆ. ಎಲ್ಲರಿಗೂ ಅನಂತ ಧನ್ಯವಾದಗಳು. ಸರಣಿ ನಿರಂತರವಾಗಿರುತ್ತದೆ.

7.72023           ಡಾ.ಪ್ರಕಾಶ ಗ.ಖಾಡೆ, ಸಂಯೋಜಕ, ಬೆಳಕಾಯಿತು ಬಾಗಲಕೋಟೆ ಮೊ.9845500890


Shivaratri -Dr.Prakash Khade

 ಶಿವರಾತ್ರಿ ವಿಶೇಷ ಲೇಖನ   : ಜನಪದರ ಹಾಡುಗಳಲ್ಲಿ ಶಿವರಾತ್ರಿ :  -ಡಾ.ಪ್ರಕಾಶ ಗ. ಖಾಡೆ,    ಬಾಗಲಕೋಟ ಮೊ. 9845500890    ಭಾರತೀಯ ಸಂಸ್ಕøತಿಯ ಬೇರುಗಳು ನಮ್ಮ ಜನಪದರ...