ಜನಪದ ವಸ್ತುಗಳ ಅವಸಾನ
ಮರೆಯಾಗುತ್ತಿರುವ ಗ್ರಾಮೀಣ ಗೃಹೊಪಯೋಗಿ ವಸ್ತುಗಳು
- ಡಾ. ಪ್ರಕಾಶ ಗ. ಖಾಡೆ.
ಗ್ರಾಮೀಣ ಸಂಸ್ಕøತಿಯ ತಿರುಳು ತುಂಬಾ ಆಪ್ತವಾದುದು ಮತ್ತು ಹೃದಯ ಪೂರ್ಣವಾದುದು. ಇಲ್ಲಿನ ಜನರ ಬದುಕಿನಲ್ಲಿ ಕಲ್ಮಶವೆಂಬುದಿಲ್ಲ. ಅದು ತಿಳಿನೀರ ಕೊಳದಂತೆ ಸದಾ ನಿರ್ಮಲವಾದುದು. ಅವರ ದುಡಿಮೆಗೆ ಒಂದು ಪೂಜ್ಯನೀಯ ಸ್ಥಾನವಿದೆ. ಕಾಯಕವನ್ನು ಪ್ರೀತಿಸುವ, ಗೌರವಿಸುವ ಮನೋಭಾವದವರು. ತಮಗೆ ತಮ್ಮವರಿಗೆ ಬೇಕಾದ ವಸ್ತುಗಳನ್ನು ರೂಪಿಸುವುದೆಂದರೆ ಅದೊಂದು ತುಂಬಾ ಲವಲವಿಕೆಯ ಹಾಗೂ ಶೃದ್ಧೆಯ ಕಾಯಕ, ಯಾವುದೇ ಕಾಯಕದಲ್ಲೂ ಅವರು ದೇವರ ನೆನಹು ಬಿಟ್ಟವರಲ್ಲ. ಆರಾಧನಾ ಸಂಸ್ಕøತಿಯಿಂದ ರೂಪಿತವಾದ ಜನಪದರ ಕಾಯಕ ಸೇವೆ ತುಂಬಾ ಮೌಲ್ಯಯುತವಾದುದು. ಕಾಯಕವನ್ನು ಒಂದು ಬದುಕಿನ ಅವಿಭಾಜ್ಯ ಅಂಗವಾಗಿ ಮಾಡಿಕೊಂಡ ಹಳ್ಳಿಗರು ಸದಾ ದುಡಿಮೆಯಲ್ಲಿಯೇ ಭಗವಂತನನ್ನು ಕಂಡವರು. ಶರಣರು ಸಾರಿದ ಕಾಯಕವೇ ಕೈಲಾಸ ಮಾತಿಗೆ ಹಳ್ಳಿಗರು ಸಾಕ್ಷಿಯಾಗಿದ್ದಾರೆ. ಆದರೆ ಇವತ್ತು ಅವಸರದ ಜಗತ್ತು ಅವಘÀಢಗಳನ್ನು ಸೃಷ್ಟಿಸಿ ಗ್ರಾಮೀಣ ಬದುಕನ್ನು ಕಲುಷಿತಗೊಳಿಸಿದೆ. ಗ್ರಾಮೀಣರ ಬಳಕೆಯ ವಸ್ತುಗಳು ಆಧುನಿಕತೆಯ ಯಾಂತ್ರಿಕ ಸೃಷ್ಟಿಯಲ್ಲಿ ಮೂಲೆ ಗುಂಪಾಗುತಿವೆ. ಈಗ ಅವುಗಳ ನೆನಪೇ ಇಂದು ಬಹುದೊಡ್ಡ ಶಕ್ತಿ ಎನಿಸಿದೆ.
ಗೃಹ ಬಳಕೆಯ ವಸ್ತುಗಳನ್ನು ತಯಾರಿಸುವ ಕಾಯಕ ನಮ್ಮ ಹಳ್ಳಿಗಳಲ್ಲಿ ಬೆಳೆದು ಬಂದಿದೆ. ಇದೊಂದು ಉದ್ಯಮವಾಗಿ ಗುರುತಿಸಿದರೂ ಮೂಲದಲ್ಲಿ ಬಳಕೆಗೆ ಸಲ್ಲುವ ಈ ಬಗೆಯ ಕಾಯಕ ಒಂದು ನಿರ್ದಿಷ್ಟ ವರ್ಗದ ಕಸಬುಗಾರಿಕೆಯಾಗಿದೆ. ಹಳ್ಳಿಯ ಜನ ತಾವೇ ಹಂಚಿಕೊಂಡು ಒಂದೊಂದು ಕಾಯಕಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದರೂ ಎಲ್ಲರಿಗೂ ಎಲ್ಲರೂ ಅನಿವಾರ್ಯವಾಗಿದ್ದರು. ಕೊಳ್ ಕೊಡುಗೆ ಮೂಲಕ ಅವರ ತಯಾರಿಕೆಯ ವಿನಿಮಯ ನಡೆಯುತ್ತಿತ್ತು. ಯಾವಾಗ ದುಡ್ಡೇ ದೊಡ್ಡಪ್ಪನಾಯಿತೋ ಅಂದಿನಿಂದ ಈ ಬಗೆಯ ವಿನಿಮಯ ನಿಂತು ಮೌಲ್ಯತೆಯ ಮತ್ತು ಪ್ರಾಮಾಣಿಕತೆಯ ಕುಸಿತ ಆರಂಭವಾಯಿತು. ಯಂತ್ರ ನಾಗರಿಕತೆಯ ಆವಿಷ್ಕಾರದಿಂದ ಪ್ಲಾಸ್ಟಿಕ್ ಜಗತ್ತು ತನ್ನ ಕದಂ¨ ಬಾಹುಗಳನ್ನು ಎಲ್ಲೆಡೆ ಚಾಚಿದಾಗ ಗ್ರಾಮೀಣರ ಕಂಬಾರಿಕೆ , ಕುಂಬಾರಿಕೆ ವಸ್ತುಗಳನ್ನು ಕೇಳುವವರಿಲ್ಲದೆ ಒಂದು ಬಗೆಯ ಶೂನ್ಯ ಸೃಷ್ಟಿಯಾಯಿತು. ಆಧುನಿಕತೆಯ ವಾಮನರೂಪ ಜನಪದವನ್ನು ಈ ಮೂಲಕ ಛಿದ್ರ ಛಿದ್ರಗೊಳಿಸಿತು.
ಗ್ರಾಮೀಣರ ಗೃಹ ಬಳಕೆಯ ವಸ್ತುಗಳಲ್ಲಿ ವೈವಿಧ್ಯತೆ ಇದೆ. ನಿತ್ಯ ಬಳಕೆಗೆ ಸಲ್ಲುವ ವಸ್ತುಗಳನ್ನು ಹಳ್ಳಿಗರು ತಮ್ಮ ಹಳ್ಳಿಯಲ್ಲಿಯೇ ಸಿಗುವ ಕಟ್ಟಿಗೆ, ಕಲ್ಲು ಬಳಸಿ ಕಬ್ಬಿಣ ಲೋಹ ಕೊಂಡು ತಂದು ತಯಾರಿಸಿ ಕೊಡುತ್ತಿದ್ದರು. ಗೃಹ ಬಳಕೆಯ ವಸ್ತುಗಳಲ್ಲಿ ಅನೇಕ ವಿಭಾಗಗಳನ್ನು ನಮ್ಮ ಅನುಕೂಲಕ್ಕೆ ಮಾಡಿಕೊಳ್ಳಬಹುದು. ಅಡುಗೆ ಮನೆಯಲ್ಲಿ ಬಳಕೆಯಾಗುವ ವಸ್ತುಗಳು, ಕೃಷಿ ಕಾಯಕಕ್ಕೆ ಬಳಕೆಯಾಗುವ ವಸ್ತುಗಳು, ಹಾಸಲು ಹೊದಿಯಲು ಬಳಕೆಯಾಗುವ ವಸ್ತುಗಳು ಹೀಗೆ ಬದುಕಿಗೆ ಅನಿವಾರ್ಯವಾದ ವಸ್ತುಗಳು ನಮ್ಮ ಜೊತೆಯಲ್ಲಿವೆ. ಅದರಲ್ಲೂ ಗೃಹಬಳಕೆಯ ಅಡುಗೆಮನೆಯ ವಸ್ತುಗಳನ್ನು ನಮ್ಮ ಹಳ್ಳಿಯ ಕಸುಬುದಾರರಾದ ಕಂಬಾರರು, ಕುಂಬಾರರು, ಬಡಿಗರು, ತುಂಬಾ ಕಲಾತ್ಮಕವಾಗಿಯೇ ರೂಪಿಸಿಕೊಟ್ಟಿದ್ದಾರೆ.
ನಾಡಿನೆಲ್ಲೆಡೆ ಕುಂಬಾರಿಕೆ ಮಾಡುವ ಹೆಚ್ಚಿನ ಸಂಖ್ಯೆಯ ಕುಶಲಕರ್ಮಿಗಳಿದ್ದಾರೆ. ಮಣ್ಣಿನಿಂದ ಮಡಿಕೆ, ಕುಡಿಕೆ, ಒಲೆ, ಪಡ್ಡಿನ ಮಣಿ, ಗಣಪತಿ, ಮೊದಲಾದವನ್ನು ಮಾಡುವ ಸಾಂಪ್ರದಾಯಕ ಉದ್ಯೋಗವನ್ನು ನಾಡಿನ ಕುಂಬಾರರದಾಗಿತ್ತು. ಪ್ಲಾಸ್ಟಿಕ್ ಪ್ರಭಾವದಿಂದ ಈ ಉದ್ಯಮ ನಶಿಸಿ ಹೋಗುತ್ತಿದೆ. ಕಮ್ಮಾರಿಕೆಯು ನಮ್ಮ ಪ್ರತಿ ಹಳ್ಳಿಗಳಲ್ಲಿಯೂ ಕಾಣುತ್ತೇವೆ. ಕೃಷಿ ಕಾಯಕಕ್ಕೆ ಬೇಕಾದ ವಸ್ತುಗಳನ್ನು ಇವರು ತಯಾರಿಸಿಕೊಡುತ್ತಾರೆ. ಗುದ್ದಲಿ, ಮಚ್ಚು, ಕೊಡಲಿಯೊಂದಿಗೆ ಗೃಹೋಪಯೋಗಿ ವಸ್ತುಗಳನ್ನು ಇವರು ತಯಾರಿಸುತ್ತಾರೆ.
ನಾಡಿನ ಜೀನುಗಾರರು ಕುದುರೆಗಳಿಗೆ ಜೀನು ತಯಾರಿಸುತ್ತಾರೆ. ಚಿತ್ರದ ಕೆಲಸ ಮಾಡುವದು, ಮರದ ತೊಟ್ಟಿಲು, ಮೊದಲಾದ ಮರದ ಸಾಮಗ್ರಿಗಳನ್ನು ತಯಾರಿಸುತ್ತಾರೆ. ಕುರುಬ ಜನಾಂಗದವರು ಕಂಬಳಿ ನೇಯುವ, ದೇವಾಂಗದವರು ಸೀರೆ, ಕುಬಸದ ಖಣ ನೇಯುವ ಕಾಯಕವನ್ನು ಮಾಡಿಕೊಂಡು ಬಂದಿದ್ದಾರೆ. ನಾಗರಿಕತೆಯ ಆವಾಂತರವು ನಾಡಿನ ಮೂಲ ಕಾಯಕಕ್ಕೆ ಕಂಟಕವಾಗಿ ಪರಿಣಮಿಸಿದೆ. ನಗರ ಪ್ರದೇಶಗಳಲ್ಲಂತೂ ಗ್ರಾಮೀಣರ ತಯಾರಿಕೆಯ ವಸ್ತುಗಳು ಪರಕೀಯವೆನಿಸಿವೆ. ಇಂದು ಪದಾರ್ಥಗಳನ್ನು ತುಂಬಿಡಲು, ಅಡುಗೆಯನ್ನು ಮಾಡಲು ಸ್ಟೈನ್ಲೆಸ್ ಸ್ಟೀಲ್ ಪಾತ್ರೆಗಳು, ಪ್ಲಾಸ್ಟಿಕ್ ಪಾತ್ರೆಗಳು ಬಳಕೆಗೆ ಬಂದಿವೆ. ಆದರೂ ಹಿಂದಿನಿಂದ ರೂಢಿಯಲ್ಲಿದ್ದ ಹಿತ್ತಾಳೆ, ತಾಮ್ರ, ಹಾಗೂ ಅಲ್ಯೂಮಿನಿಯಂ ಪಾತ್ರೆಗಳು ಬಳಕೆಯಲ್ಲಿವೆ.
ನಮ್ಮ ಹಳ್ಳಿಯ ಕೆಲವು ಮನೆಗಳಲ್ಲಿ ಮಣ್ಣಿನ ಮತ್ತು ಅಲ್ಯೂಮಿನಿಯಂ ಪಾತ್ರೆಗಳ ಬಳಕೆ ಹೆಚ್ಚಾಗಿ ಕಂಡು ಬರುತ್ತವೆ. ಮಣ್ಣಿನ ಹರವಿ, ಗಡಿಗೆ, ಕೊಡ, ಚಟಗಿ, ಪರಿಯಾಣ, ಮತ್ತು ಮುಚ್ಚಲ, ಅಲ್ಯುಮಿನಿಯಂದಿಂದ ಮಾಡಿದ ತಪ್ಪಲೆ, ತಟ್ಟೆ, ಲೋಟ ಮತ್ತು ಚಮಚ, ಹಿತ್ತಾಳೆಯ ತಂಬಿಗೆ, ಬಟ್ಟಲು, ಥಾಲಿ, ಕೊಳಗ, ಭೋಗಣಿಗೆ, ತಪ್ಪಲಿ, ತಾಬಾನ ಮತ್ತು ತಾಟು, ಕಂಚಿನ ಗಂಗಾಳ, ತವೆ, ಕಡತಾರ, ಇವೆಲ್ಲ ಬಳಕೆಯಲ್ಲಿವೆ. ಈಗ ಅಡುಗೆ ಮನೆಗೆ
ಲಗ್ಗೆ ಇಟ್ಟಿರುವ ಕುಕ್ಕರ್ ಪಾತ್ರೆ, ಅನಿಲದ ಒಲೆ, ವಿದ್ಯುತ್ ಒಲೆ, ಮಿಕ್ಸ್ರ್, ಗ್ರ್ಯಾಂಡರ್ಗಳು ಗ್ರಾಮೀಣರ ಗೃಹ ಬಳಕೆಯ ವಸ್ತುಗಳನ್ನು ಮೂಲೆಗುಂಪು ಮಾಡಿವೆ.
ಇಂದಿನ ತಲೆಮಾರಿನವರಿಗೆ ಅದರಲ್ಲೂ ನಗರವಾಸಿಗಳಿಗೆ ಗೊತ್ತಿಲ್ಲದ ಅನೇಕ ಗೃಹೋಪಯೋಗಿ ವಸ್ತುಗಳ ತಯಾರಿಕೆ ಮತ್ತು ಬಳಕೆ ಹಿಂದೆ ತುಂಬಾ ಜನಪ್ರಿಯವಾಗಿತ್ತು. ಇವತ್ತು ಗ್ರಾಮೀಣ ಗೃಹ ಬಳಕೆಯ ವಸ್ತುಗಳನ್ನು ವಸ್ತು ಸಂಗ್ರಾಲಯದಲ್ಲಿಟ್ಟು ಪ್ರದರ್ಶಿಸಬೇಕಾದ ಸಂದರ್ಭ ಬಂದೊದಗಿದೆ. ಇಂದಿನ ಜೀವನ ವಿಧಾನವೇ ಬದಲಾಗಿ ಬಿಟ್ಟಿದೆ. ಇದಕ್ಕೆ ಗ್ರಾಮೀಣರೂ ಒಗ್ಗಿಕೊಂಡಿದ್ದಾರೆ. ಹೀಗಾಗಿ ಹಿಂದಿನಿಂದ ಪ್ರವಹಿಸಿಕೊಂಡು ಬಂದ ಪರಂಪರೆ ಆಧುನಿಕತೆಯ ಭರಾಟೆಯಲ್ಲಿ ಕೊಚ್ಚಿಕೊಂಡು ಹೋಗುತ್ತಿದೆ.
ಆರಾಧನಾ ಸಂಸ್ಕøತಿ :
ಅಡುಗೆ ಮನೆಯ ವಸ್ತುಗಳಾದ ಶ್ಯಾವಿಗೆ ಮಣಿ, ಕುರುಡಗಿ ಮಣಿ, ಕಡಗೋಲು, ನೆಲವು, ಅಡ್ಡಣಿಗೆ, ಒನಕೆ ಒರಳು, ಈಳಗಿ ಮಣಿ, ಲಟ್ಟಣಿಗೆ, ಚೋಂಗೆಮಣಿ, ಕೊಣಮಿಗೆ, ಬೀಸುವ ಕಲ್ಲು, ಗಡಿಗೆ, ಮಡಕೆ, ಕುಡಿಕೆ, ಕೊಡ, ಮೊದಲಾದವನ್ನು ನಮ್ಮ ಹಳ್ಳಿಯ ಕಸಬುದಾರರ ಕೈಯಲ್ಲಿ ರೂಪಿತವಾಗುತ್ತಿದ್ದವು, ಮತ್ತು ಬಳಕೆಗೆ ಸಿಕ್ಕುತ್ತಿದ್ದವು. ಕಲ್ಲು, ಹಗ್ಗ, ಕಬ್ಬಿಣ, ಕಟ್ಟಿಗೆಗಳಿಂದ ಇವುಗಳನ್ನು ತಯಾರಿಸುತ್ತಾರೆ. ಆಯಾ ಬಡಗಿಯ ಇಲ್ಲವೆ ಕಮ್ಮಾರನ, ಕುಂಬಾರನ, ಕೈ ಚಳಕಕ್ಕೆ ತಕ್ಕಂತೆ ಇವುಗಳ ಆಕಾರ, ರೂಪ, ಕಲೆ, ಬದಲಾಗುತ್ತ ಹೋಗುತ್ತವೆ. ಇವುಗಳ ಬಳಕೆಯ ಹಿಂದೆ ಆರಾಧನಾ ಸಂಸ್ಕøತಿಯೂ ಮುಖ್ಯವಾಗುತ್ತದೆ. ಗ್ರಾಮೀಣರ ಗೃಹ ಬಳಕೆಯ ವಸ್ತುಗಳು ಪೂಜ್ಯನೀಯವಾಗಿವೆ. ಬನ್ನಿ ಹಬ್ಬದ ಸಂದರ್ಭದಲ್ಲಿ ‘ಖಂಡೆ ಪೂಜೆ’ ಮಾಡುವಾಗ ಇವುಗಳು ಪೂಜೆಗೊಳ್ಳುತ್ತವೆ. ಗ್ರಾಮೀಣರು ಮಜ್ಜಿಗೆ ಕಡೆಯುವ ಕಡಗೋಲು ಉಡುಪಿಯ ಶ್ರೀ ಕೃಷ್ಣನ ಕೈಯಲ್ಲಿ ರಾರಾಜಿಸುತ್ತಿದೆ. ಮಂದರ ಪರ್ವತವನ್ನೇ ಕಡಗೋಲನ್ನಾಗಿ, ವಾಸುಕಿ ಸರ್ಪವನ್ನೇ ಕಡಗೋಲ ಹಗ್ಗವಾಗಿ ಮಾಡಿಕೊಂಡು ದೇವತೆಗಳು ಒಂದು ಕಡೆ, ರಾಕ್ಷಸರು ಮತ್ತೊಂದು ಕಡೆ ನಿಂತು ಕ್ಷೀರಸಾಗರವನ್ನು ಕಡೆದ ರಮ್ಯ ಕಥೆಯಲ್ಲಿ ಕಡಗೋಲು ಪ್ರಧಾನವಾಗಿದೆ.
ಕಲಾತ್ಮಕತೆ :
ಗ್ರಾಮೀಣರ ಗೃಹ ಬಳಕೆಯ ವಸ್ತುಗಳು ಪ್ರಧಾನವಾಗಿ ನಿತ್ಯ ಬಳಕೆಯ ವಸ್ತುಗಳಾಗಿದ್ದರೂ ಅವುಗಳನ್ನು ಕಲಾತ್ಮಕವಾಗಿ ರೂಪಿಸಿರುವುದು ಅವರ ಕಲಾ ಪ್ರತಿಭೆಗೆ ಸಾಕ್ಷಿಯಾಗಿದೆ. ಊಟ ಮಾಡುವಾಗ ತಟ್ಟೆ ಇಡುವ ಪೀಠಕ್ಕೆ ಅಡ್ಡಣಿಗೆ ಎಂದು ಕರೆಯುತ್ತಾರೆ. ಜೊತೆಗೆ ಲಗ್ನದ ಶುಭ ಕಾರ್ಯಗಳಲ್ಲಿ ಕಳಸದ ತಂಬಿಗೆ ಇರಿಸಲು ಮತ್ತು ಮುಯ್ಯಿ ತಟ್ಟೆ ಇರಿಸಲು ಅಡ್ಡಣಿಗೆ ಬಳಸುತ್ತಾರೆ. ಈ ಅಡ್ಡಣಿಗೆಯ ಕಾಲುಗಳು ಗಿಣಿಗಳ ಆಕಾರಗಳಲ್ಲಿ, ಹೂವಿನ ಚಿತ್ತಾರದಿಂದ ರೂಪಿಸಿರುತ್ತಾರೆ. ಹಣ್ಣು, ಕಾಯಿಪಲ್ಲೆ ಹೆಚ್ಚಲು ಬಳಸುವ ಈಳಗೆ ಮಣೆಗಳನ್ನೂ ಕಲಾತ್ಮಕವಾಗಿ ರೂಪಿಸಿರುತ್ತಾರೆ. ಈಳಿಗೆ ಮಣಿಗಳಲ್ಲಿ ಗಿಳಿಗಳನ್ನೂ, ಬಳ್ಳಿ
ವರಸೆಗಳನ್ನು ಕೆತ್ತಲಾಗಿರುತ್ತದೆ. ಗ್ರಾಮೀಣರು ರೂಪಿಸಿದ ಬೀಸು ಕಲ್ಲುಗಳ ಮೇಲೆ ಬಗೆ ಬಗೆಯ ಬಳ್ಳಿ ವರಸೆ, ಗಿಣಿಗಳು, ಸೂರ್ಯ, ಚಂದ್ರ, ಚಿತ್ತಾರ ಕೊರೆದಿರುತ್ತಾರೆ. ಹೀಗೆ ಬಗೆ ಬಗೆಯ ಕಲಾತ್ಮಕತೆಯನ್ನು ಕಾಣುತ್ತೇವೆ.
ನಾಡಿನ ಅನೇಕ ಕಡೆ ಭೌಗೋಲಿಕ ಪರಿಸರವು ಅನೇಕ ಗೃಹ ಉಪಯೋಗಿ ಉದ್ಯಮಗಳನ್ನು ಸೃಷ್ಟಿಸಿದೆ. ಎಲ್ಲಿ ಫಲವತ್ತಾದ ಬೆಳೆ ಬೆಳೆಯಲು ಜಮೀನುಗಳಿರುತ್ತವೆಯೋ ಅಲ್ಲಿ ಕೃಷಿ ಪ್ರಧಾನವಾದ ಸಂಸ್ಸøತಿಯನ್ನು ಕಾಣುತ್ತೇವೆ. ಬರೀ ಕಲ್ಲು ಗುಡ್ಡೆಗಳಿಂದ ಕೂಡಿದ ಒಣ ಪ್ರದೇಶದಲ್ಲಿ ಹುಟ್ಟಿಕೊಂಡ ನಗರ, ಗ್ರಾಮಗಳಲ್ಲಿ ನಾವು ಕೃಷಿ ಕಾಯಕಕ್ಕಿಂತ ನೇಕಾರಿಕೆ ಅಂದರೆ ಸೀರೆ, ಖಣ, ಕಂಬಳಿ ನೇಯ್ಗೆಯ ಕಾಯಕವನ್ನು ಕಾಣುತ್ತೇವೆ. ಪ್ರಾಕೃತಿಕ ಸಂಪತ್ತಿನಿಂದ ಕೂಡಿದ ನಮ್ಮ ಪರಿಸರದಲ್ಲಿ ಗೃಹ ಉದ್ಯಮವನ್ನು ಉಳಿಸಿ ಬೆಳೆಸಲು ಪ್ರಯತ್ನಗಳು ತುಂಬಾ ನಡೆಯಬೇಕಾಗಿದೆ. ಸಮೃದ್ಧ ಕಚ್ಚಾ ಸಾಮಗ್ರಿಯನ್ನು ಪುನರ್ ಸೃಷ್ಟಿಸುವ ಕಾರ್ಯ ನಡೆಯಬೇಕು. ಒಂದು ಕಾಲಕ್ಕೆ ನಮ್ಮ ಹಳ್ಳಿಗರಿಗೆ ಕಲ್ಲು, ಕಟ್ಟಿಗೆ, ನಾರು, ಮೊದಲಾದ ಕಚ್ಚಾ ಸಾಮಗ್ರಿಗಳನ್ನು ಪೂರೈಸಿಕೊಳ್ಳುವಲ್ಲಿ ಯಾವ ನಿರ್ಬಂಧಗಳಿರಲಿಲ್ಲ. ಹೀಗಾಗಿ ಹಳ್ಳಿಯ ಜನರ ಗೃಹ ಕೈಗಾರಿಕೆಗೆ ಯಾವ ಅಡ್ಡಿ ಆತಂಕಗಳಿರಲಿಲ್ಲ. ಆದರೆ ಇಂದು ಇವೆಲ್ಲ ಉಳ್ಳವರ ಸೊತ್ತಾಗಿವೆ. ಗ್ರಾಮೀಣರಿಗೆ ದಕ್ಕದಂತಾಗಿವೆ. ಹೀಗಾಗಿ ಗೃಹ ವಸ್ತುಗಳ ತಯಾರಿಕೆ ನಿಂತು ಹೋಗಿವೆ.
ಜೊತೆಗೆ ಯಂತ್ರ ನಾಗರಿಕತೆ ಬಿಸುಟುವ ವೈವಿಧ್ಯಮಯ ವಸ್ತುಗಳು ಪ್ರತಿ ಹಳ್ಳಿಯ ಅಂಗಡಿ ಮುಂಗಟ್ಟುಗಳನ್ನು ಪ್ರವೇಶಿಸಿ ಹಳ್ಳಿಗರ ತಯಾರಿಕೆಯ ವಸ್ತುಗಳನ್ನು ಕೇಳುವವರಿಲ್ಲದಂತಾಗಿದೆ. ಹೀಗಾಗಿ ಜನಪದರ ಕುಶಲತೆ, ಕಾಯಕ ಮೌಲ್ಯ ಕರಗಿ ಹೋಗುವುದರೊಂದಿಗೆ ಅವರ ಹಾಡು ಸಂಸ್ಕøತಿ ಹಬ್ಬದಾಚರಣೆಗಳೂ ಯಾಂತ್ರಿಕವಾಗಿ ಪರಿಣಮಿಸಿವೆ. ಈ ಮೂಲಕ ವಿಶ್ವ ಮಾರುಕಟ್ಟೆ ಮತ್ತು ಜಾಗತೀಕರಣದ ರಾಕ್ಷಸ ಬಾಹುಗಳಲ್ಲಿ ನಮ್ಮ ಹಳ್ಳಿಗರ ಗೃಹೋಪಯೋಗಿ ಉದ್ಯಮ ನರಳಿ ನೆಲ ಕಚ್ಚಿದೆ.ಇದಕ್ಕೆ ಪರ್ಯಾಯ ಹುಡಕಬೇಕಾಗಿದೆ.
ಲೇಖಕರ ವಿಳಾಸ:
ಡಾ. ಪ್ರಕಾಶ ಗ. ಖಾಡೆ., ಶ್ರೀ ಗುರು ನಿಲಯ, ಸೆಕ್ಟರ್ ನಂ.63 ನವನಗರ, ಬಾಗಲಕೋಟ. ಮೊ. 9845500890 ,
‹
ಊome
ಗಿieತಿ ತಿeb veಡಿsioಟಿ
ಂbouಣ ಒe
ಒಥಿ ಠಿhoಣo
ಆಡಿ.Pಡಿಚಿಞಚಿsh ಉ. ಏhಚಿಜe
emಚಿiಟ : ಜಡಿಠಿಡಿಚಿಞಚಿshಞhಚಿಜe@gmಚಿiಟ.ಛಿom
ಗಿieತಿ mಥಿ ಛಿomಠಿಟeಣe ಠ
