ಮುನ್ನುಡಿ
ಕನ್ನಡ ಕಾವ್ಯದ ದೇಸಿ ಲಯಗಾರಿಕೆ ಮತ್ತು ‘ಹ್ಯಾಂಗಿತ್ತ ನನ್ನೂರ ’
-ಡಾ.ಪ್ರಕಾಶ ಗ.ಖಾಡೆ
ಕಾವ್ಯ ಇಂದು ಹಲವು ರೀತಿ, ರೂಪ, ಶೈಲಿ, ಬಂಧಗಳಲ್ಲಿ ರಚನೆಯಾಗುತ್ತಿದೆ. ಇಂದಿನ ಕಾವ್ಯಗಳಲ್ಲಿ ಮರೆಯಾಗಿ ಹೋಗುತ್ತಿದ್ದ ದೇಸೀ ಲಯಗಾರಿಕೆ ಮರು ಹುಟ್ಟು ಪಡೆದುಕೊಳ್ಳುತ್ತಿದೆ. ಪಂಡಿತ ಕಾವ್ಯವು ದೇಸೀ ಲಯಗಾರಿಕೆಯಿಂದ ಎಂದೂ ತನ್ನನ್ನು ಬಿಡಿಸಿಕೊಂಡಿಲ್ಲ. ನವ್ಯದ ಸಂದರ್ಭದಲ್ಲೂ ದೇಸೀ ಲಯಗಾರಿಕೆಯಲ್ಲಿ ಕಾವ್ಯ ಕಟ್ಟಿ ಅನೇಕರು ಸೈ ಎನಿಸಿಕೊಂಡರು. ಕನ್ನಡ ಕಾವ್ಯ ಕಾಲ ಕಾಲಕ್ಕೆ ತನ್ನ ಮಗ್ಗಲು ಬದಲಿಸಿಕೊಳ್ಳುತ್ತ ಹೋದರೂ ದೇಸೀಯತೆಯನ್ನು ಬಿಟ್ಟು ಕೊಡದಿರುವುದು ಜನಪದರ ಹೆಗ್ಗಳಿಕೆಯೇ ಆಗಿದೆ. ಆಧುನಿಕ ಬದುಕಿನ ಅವಘಡಗಳ ಒತ್ತಡದಿಂದ ಜಾನಪದ ಸೌಂದರ್ಯ, ಭಾಷಾ ಸೌಂದರ್ಯ ದೂರವಾಗುತ್ತ ನಡೆದ ಸಂದರ್ಭದಲ್ಲಿ ನಮ್ಮಲ್ಲಿ ಬೇಂದ್ರೆ, ಆನಂದಕಂದ, ಮಧುರ ಚೆನ್ನರು ಜಾನಪದವನ್ನು ತಮ್ಮ ಕವಿತೆಗಳಲ್ಲಿ ಐಕ್ಯಗೊಳಿಸಿ ಸಾಧನೆ ಮೆರೆದರು.
ಜನಪದ ಕಾವ್ಯ ಭಾಷೆಯನ್ನು ತಮ್ಮ ಕಾವ್ಯಕ್ಕೆ ತಂದ ನವೋದಯ ಕಾಲದ ಕವಿಗಳು ಅದರ ರೂಪ, ಸತ್ವ, ಸೌಂದರ್ಯವನ್ನು ತಮ್ಮದಾಗಿಸಿಕೊಂಡರು. ಜನಪದ ಹಾಡು ಸಂಸ್ಕøತಿ ನವೋದಯ ಕಾವ್ಯಕ್ಕೆ ನಾದದ ಮಾಧುರ್ಯತೆ ತಂದಿತು. ಕಾವ್ಯದ ಭಾಷೆ ಜನ ಭಾಷೆಗೆ ಸಮೀಪವಾದಂತೆ ಅದರ ಆಡುಮಾತಿನ ಸತ್ವ ಕಾವ್ಯವನ್ನು ನಾದಮಯ ಗೊಳಿಸುತ್ತದೆ. ಒಂದು ಕಾಲಕ್ಕೆ ಜನಭಾಷೆಗೆ ಸಮೀಪವಾಗಿದ್ದ ಕಾವ್ಯದ ಭಾಷೆ ಬರಬರುತ್ತಾ ಪಾಂಡಿತ್ಯಮಯವಾಗಿ, ಕ್ಲಿಷ್ಟವಾಗಿ ಕೆಲವರ ಸ್ವತ್ತಾಗಿ, ಗದ್ದುಗೆಯನ್ನೇರಿ ಕೂತು ಬಿಡುತ್ತದೆ. ಆಗ ಅದು ``ಪಂಡಿತರುಂ ವಿವಿಧಕಳಾ ಮಂಡಿತರುಂ ಕೇಳತಕ್ಕ ಕೃತಿ'' ಮಾತ್ರವಾಗುತ್ತದೆ. ಈ ಎಚ್ಚರವನ್ನು ಅರಿತ ನಮ್ಮ ಕನ್ನಡ ಕವಿಗಳು ದೇಸೀಯತೆಯನ್ನು ಬಿಟ್ಟುಕೊಡಲಿಲ್ಲ.
ಕನ್ನಡ ಕಾವ್ಯಕ್ಕೆ ಜಾನಪದದಿಂದ ಹೊಸ ಕಾವ್ಯ ಭಾಷೆ ರೂಪತಾಳಿತು. ಕಾವ್ಯ ಭಾಷೆಗೆ ದೇಸೀಯ ಚೆಲುವು, ಜನಪದ ದೈನಂದಿನ ಮಾತುಗಳಲ್ಲಿ ಬಳಕೆಗೊಳ್ಳುವ ದೇಸೀ ನುಡಿ, ನುಡಿಗಟ್ಟು, ನಾಣ್ನುಡಿ, ಕೂಡುನುಡಿ, ಗಾದೆ, ಒಗಟು, ಒಡಪು ಮೊದಲಾದವು ಹೊಸ ರೀತಿಯಲ್ಲಿ ಬಳಕೆಯಾದವು. ದೇಸೀ ಶೈಲಿಯ ಸೊಗಡು, ಜನಪದ ಮಾತಿನ ಧಾಟಿ, ಸುಲಭವಾದ ಮತ್ತು ನೇರವಾದ ಭಾಷಾ ಬಳಕೆ ನವೋದಯ ಕಾವ್ಯವನ್ನು ಜಾನಪದೀಯವಾಗಿ ರೂಪಿಸಿದವು.
ಡಾ. ಚಂದ್ರಶೇಖರ ಕಂಬಾರ ಅವರು ಬಹಳ ಸ್ಪಷ್ಟವಾಗಿ ಒಂದು ಮಾತು ಹೇಳುತ್ತಾರೆ- `` ನವೋದಯ ಕವಿಗಳು ಬಂದದ್ದು ಪ್ರಾಚೀನ ಕಾವ್ಯದ ಯುಗ ಮುಗಿದು ಭಾಷೆ ಮೃತಾವಸ್ಥೆಯಲ್ಲಿದ್ದಾಗ. ಕುವೆಂಪು ಆ ಕೊರತೆಯನ್ನು ಸಂಸ್ಕøತದಿಂದ ತುಂಬಲೆತ್ನಿಸಿದರೆ, ಬೇಂದ್ರೆಯವರು ಜಾನಪದದ ನೆರವು ಪಡೆದರು. ಆಡುನುಡಿ, ಜನಪದ ಜೀವನ ಇವು ಕಾವ್ಯವಾಗಬಲ್ಲದೆಂಬುದೇ ಆಗ ಬೆರಗಿನ ವಿಷಯವಾಗಿತ್ತು. ಪಂಡಿತರ ಕಣ್ಣು ಕುಕ್ಕುವ ಹಾಗೆ ಬೇಂದ್ರೆಯವರು ಅದನ್ನೂ ಸಾಧ್ಯವಾಗಿ ತೋರಿಸಿದರು. ಆಗಿನ ಕಾಲದಲ್ಲಿ ಅವರ ಕವಿತೆಗಳಿಗೆ ಬಂದ ಜನಪ್ರಿಯತೆಯನ್ನು ನೋಡಿದರಂತೂ ದಿಗ್ಬ್ರಮೆಯಾಗುತ್ತದೆ. ಇಂಥ ಸಾಧ್ಯತೆಗಳನ್ನು ತೋರುವುದಷ್ಟೇ ತಡ ಎಲ್ಲ ಕಡೆಗೆ ಹುಚ್ಚು ಉತ್ಸಾಹ ಹರಿದಾಡಿತು. ಅವಸರದಲ್ಲಿ ಆಗಬಾರದವರೂ ಕವಿಗಳಾದರು. ಆಡು ನುಡಿಯನ್ನು ಬಳಸಿದರು. ಆ ಚರಿತ್ರೆ ಏನೇ ಇರಲಿ ಜನಪದ ಸತ್ವದಿಂದ ಪುಷ್ಠರಾದ ಬೇಂದ್ರೆ, ಮಧುರಚೆನ್ನರಂಥ ಗಟ್ಟಿ ಮುಟ್ಟಾದ ಕವಿಗಳು ಮುಂದೆ ಬಂದರು. ಯಾವ ಜಾನಪದವೂ ಇಂಥ ಕವಿಗಳ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಬಹುದು'' ಎಂಬ ಕಂಬಾರರ ಮಾತಿನಲ್ಲಿ ನವೋದಯ ಕಾವ್ಯಕ್ಕೆ ಶಕ್ತಿ, ಸತ್ವ ತುಂಬಿದ ಜಾನಪದ ಭಾಷೆಯ ಹಿರಿಮೆಯ ಸಾರ್ಥಕತೆ ಇದೆ.
ಈ ಒಟ್ಟು ಹಿನ್ನೆಲೆಯಲ್ಲಿ ಕವಿ ನಾರಾಯಣ ಯಳ್ಳಿಗುತ್ತಿಯವರ `ಹ್ಯಾಂಗಿತ್ತ ನನ್ನೂರ' ಕಾವ್ಯ ಸಂಕಲನವನ್ನು ನೋಡುವುದೇ ಒಂದು ಸೊಗಸು. ನಾರಾಯಣ ಭ. ಯಳ್ಳಿಗುತ್ತಿ ಅವರು ನಮ್ಮ ನಡುವಿನ ಭರವಸೆಯ ಕವಿ. ಬಾಗಲಕೋಟೆ ತಾಲೂಕಿನ ಕಿರಸೂರ ಗ್ರಾಮದ ಕವಿ ನಾರಾಯಣ ಅವರು ದೇಸೀ ಕವಿತ್ವ ರಚನೆಯಲ್ಲಿ ಸಿದ್ದ ಹಸ್ತರು. ಕಿರಸೂರ ಊರು ಅವರಿಗೆ ಸ್ವರ್ಗಕ್ಕಿಂತಲೂ ಮಿಗಿಲಾದುದು. ಹೆತ್ತ ತಾಯಿ ಮತ್ತು ಹುಟ್ಟಿದ ಊರು ಸ್ವರ್ಗಕ್ಕಿಂತಲೂ ಮಿಗಿಲು ಎನ್ನುವ ಮಾತು ನಾರಾಯಣ ಅವರ ಕಾವ್ಯದಿಂದಲೇ ಕಂಡುಕೊಳ್ಳಬಹುದು. ಹಾಗೆ ಅವರ `ಹ್ಯಾಂಗಿತ್ತ ನನ್ನೂರ' ಸಂಕಲನದ ರಚನೆಗಳೆಲ್ಲ ಗ್ರಾಮ್ಯ ಅನುಭವದ ರಸಘಟ್ಟಿಗಳಾಗಿವೆ.
ಹಿಂದಿನ ದಿನದಾಗ
ನನ್ನೂರ ಹೆಂಗಿತ್ತ
ಚಂದ್ರನ ಹಾಂಗ ಬೆಳಕಿತ್ತ | ಸುತ್ತೂರಿಗೆ
ಆಲದ ಮರದ್ಹಾಂಗ ನೆರಳಿತ್ತ
ಕವಿ ನಾರಾಯಣ ಯಳ್ಳಿಗುತ್ತಿ ಇವರ `ಹ್ಯಾಂಗಿತ್ತ ನನ್ನೂರ' ಕವಿತೆಯ ಸಾಲುಗಳು ನಮ್ಮ ಹಳ್ಳಿಯ ಹಿಂದಿನ ಚಿತ್ರಣಗಳನ್ನು ಕಣ್ಣೆದಿರು ತಂದು ನಿಲ್ಲಿಸುತ್ತವೆ. ಇಂದು ಎಲ್ಲ ಊರುಗಳು ಬದಲಾಗುತ್ತಿವೆ. ಆಧುನಿಕತೆ ಎಂಬುದು ಯಾರನ್ನೂ, ಯಾವುದನ್ನೂ ಬಿಡುತ್ತಿಲ್ಲ. ಹಳ್ಳಿಯಿಂದ ನಗರಕ್ಕೆ ವಲಸೆ ನಿರಂತರ ಮತ್ತು ತುಂಬಾ ತೀವ್ರವಾಗಿಯೇ ನಡೆದಿದೆ. ಹಳ್ಳಿಗಳು ನಗರಮುಖಿ ಸಂಸ್ಕøತಿಯಿಂದ ಮೂಲ ಸೊಬಗು ಸೊಗಡನ್ನು ಕಳಕೊಂಡು ಒಂದು ಬಗೆಯ ವಿಕಾರತೆಯತ್ತ ಸಾಗುತ್ತಿವೆ. ಈ ಹೊತ್ತಲ್ಲಿ ಅಲ್ಲಿನ ಸಂಭ್ರಮವನ್ನು ನೆನೆಸಿಕೊಳ್ಳುವುದಷ್ಟೇ ನಮ್ಮ ಮುಂದಿರುವ ಒಂದು ಅವಕಾಶ. ಇದನ್ನ ಕವಿ ಯಳ್ಳಿಗುತ್ತಿಯವರು ಕಾವ್ಯದ ಮೂಲಕ ನಮ್ಮೆದಿರು ಹಳ್ಳಿಯ ಚಿತ್ರಣ ತೆರೆದಿಡುತ್ತಾರೆ-
ಮಳೆಗಾಲ ಬಾಳಿತ್ತ
ಕೆರಿತುಂಬಿ ಹರಿತಿತ್ತ
ಮನೆ ಸೋರಿ ಪಡಸಾಲಿ ಗಿಜಿ ಗಿಜಿ ಹಗೆ ತುಂಬಿ
ಹೈನಾ ಹಾಲು ತುಂಬಿ ತುಳುಕಿತ್ತ
ಇಂದು ನಿಯಮಿತವಾಗಿ ಬಾರದ ಮಳೆಗಳು, ಕುಸಿದು ಹೋಗಿರುವ ಅಂತರ್ಜಲ ಮಟ್ಟ, ಬರಿದಾಗಿರುವ ಹೊಳೆ, ಹಳ್ಳ, ಕೆರೆ ಕಟ್ಟೆಗಳು ಈ ಕಾರಣವಾಗಿ ಹಸಿರು ಸಮೃದ್ದಿ ಮರೆಯಾಗಿ ಹಾಲು ಹೈನಕ್ಕೂ ತತ್ವಾರ ಒದಗಿದ ಸಂದರ್ಭವನ್ನು ಕಂಡಾಗ ಖಂಡಿತ ಮನನೊಂದುಕೊಳ್ಳುತ್ತದೆ. ಹಿಂದಿನ ದಿನಗಳನ್ನು ನೆನೆಸಿ ಮರುಗುವುದೇ ಆಗಿದೆ ಎನ್ನುವ ಕವಿಯ ಭಾವದಲ್ಲಿ ವಿಷಾದವಿದೆ.
ಕವಿ ನಾರಾಯಣ ಯಳ್ಳಿಗುತ್ತಿಯವರು ಜನಪದ ಮೂಲದಿಂದ ಬಂದವರಾಗಿದ್ದರಿಂದ ಅವರು ತಾವು ಕಂಡ, ತಾವು ಅನುಭವಿಸಿದ ಸಂಗತಿಗಳನ್ನು ಕಾವ್ಯವಾಗಿ ಕಟ್ಟಿಕೊಡುವಲ್ಲಿ ಸಿದ್ದಹಸ್ತರು ಎಂಬುದಕ್ಕೆ ಇಲ್ಲಿ ಅವರು ರಚಿಸಿಕೊಟ್ಟ ಮುಳುಗಡೆ ಸಂದರ್ಭದ ಕವಿತೆಗಳು, ನಿಡಗುಂದಿ ಬಸ್ ದುರಂತ, ಹೊನ್ನಾಕಟ್ಟಿ ಯೋಧರ ಸಾವು, ಸುನಾಮಿ ಅವಾಂತರ ಮೊದಲಾದ ಕವಿತೆಗಳು ಸಾಕ್ಷಿಯಾಗುತ್ತವೆ. ಕವಿ ಇಲ್ಲಿ ಕೇವಲ ರಂಜನೆಗಾಗಿ ಕಾವ್ಯ ಬರೆಯುತ್ತಿಲ್ಲ. ಒಬ್ಬ ಚರಿತ್ರೆಕಾರನೂ ಆಗುತ್ತಾನೆ ಎಂಬುದಕ್ಕೆ ಈ ಕವಿತೆಗಳು ಸಾರಿ ಹೇಳುತ್ತವೆ. ಇತಿಹಾಸಕಾರ ರಚಿಸಿದ ಗದ್ಯ ಸಾಹಿತ್ಯ ಪಠ್ಯಪುಸ್ತಕಗಳಲ್ಲಿ ಸೇರಿ ವಿದ್ಯಾರ್ಥಿಗಳ ಓದಿಗೆ ಮಾತ್ರ ಸಾಧ್ಯವಾದರೆ, ಜನಪದ ಕವಿಗಳು ಕಟ್ಟಿಕೊಟ್ಟ ಗೀಗಿ, ಲಾವಣಿಯಲ್ಲಿನ ಚರಿತ್ರೆಯ ಸಂಗತಿಗಳು ಓದು ಬಾರದ ಮತ್ತು ಎಲ್ಲರಿಗೂ ತಿಳಿಯುವ ಮತ್ತು ಪರಂಪರೆಯಿಂದ ಮುಂದಿನವರಿಗೂ ತಿಳಿಸಿಕೊಡುವ `ನಿರಂತರ ಬೌದ್ದಿಕ ವಾಹಕ' ಗಳಾಗುತ್ತವೆ.
ಆಲಮಟ್ಟಿ ಡ್ಯಾಮಿನ ನೀರಾಗ
ಮುಳುಗಿ ಹೋತ ಊರ
ಬಂಗಾರದಂತ ಭೂಮಿ ಪೂರ
*
ಆಲಮಟ್ಟಿ ಕಟ್ಟೆ ಜನರ ಊರ ಬಿಡಿಸಿ ಬಿಟ್ಟೆ
ಹೋಗುವ ಮುಂದ ಬಗಲಾಗ ಚಾಪಿ ಸುಳ್ಳಿ ಸುತ್ತಿ ಕೊಟ್ಟೆ
*
ಹೊಳಿಸಾಲ ದಂಡ್ಯಾಗ ನಮ್ಮಯ ಊರ
ವರ್ಷಕ್ಕೆ ಒಮ್ಮೆ ಎಳಿತಿತ್ತ ತೇರ
ಹೊನ್ನಿನಂತ ಊರ ಈಗ
ಮುಳುಗಿ ಹೋತ ದೂರ
- ಹೀಗೆ ಆಲಮಟ್ಟಿ ಆಣೆಕಟ್ಟೆಯ ಹಿನ್ನೀರಿನಲ್ಲಿ ಮುಳುಗಿ ಹೋದ ಹಳ್ಳಿಯ ಸೊಬಗು, ಸಂಸ್ಕøತಿಯನ್ನು ಹೇಳಹೊರಟ ಕವಿ ಮುಳುಗಡೆ ಜನರ ನೋವಿಗೆ ಧ್ವನಿಯಾಗುತ್ತಾರೆ. ಬೃಹತ್ತ ಆಣೆಕಟ್ಟುಗಳ ಮೂಲಕ ಮುಳುಗಡೆ ಮತ್ತು ಸ್ಥಳಾಂತರ ಪ್ರಕ್ರಿಯೆಯಲ್ಲಿ ನೊಂದುಕೊಳ್ಳುವ ಹಳ್ಳಿಯ ಜನರ ಆರ್ತನಾದವನ್ನು ಕವಿ ಕಟ್ಟಿಕೊಟ್ಟು ನೋವಿನ ನೆನಪುಗಳನ್ನು ಚರಿತ್ರೆಯ ಸಾಲುಗಳಿಗೆ ಪೋಣಿಸುತ್ತಾರೆ. ಇತಿಹಾಸದ ಪುಟಗಳು ಒದ್ದೆಯಾಗಿರುವುದು ಇಂಥ ಸಾಲುಗಳಿಂದಲೇ ಅಲ್ಲವೆ?
ನಿಡಗುಂದಿ ಕ್ರಾಸಲ್ಲಿ ಕಾಲುವೆ ನೀರಲ್ಲಿ ಬಸ್ಸು ಮುಳುಗಿತ
ಇಲಿಯ ತುಂಬಿದ ಬಲೆಯನ್ನು ನೀರಾಗ ಮುಳುಗಿಸಿದಂಗಾತ
ಎರಡು ಸಾವಿರದಾ ಐದು ಜನವರಿ ಹತ್ತನೆಯ ತಾರೀಖು ಆಲಮಟ್ಟಿ ಬಳಿಯ ನಿಡಗುಂದಿ ಕಾಲುವೆಯಲ್ಲಿ ಅಮವಾಸ್ಯೆಯ ರಾತ್ರಿ ತುಂಬಿದ ಬಸ್ಸು ನೀರಿಗೆ ಬಿದ್ದು ಸುಮಾರು ಐವತ್ತೆಂಟು ಜನ ಅಸುನೀಗಿದರು. ಈ ಘೋರ ದುರಂತವನ್ನು `ನಿಡಗುಂದಿ ದುರಂತ' ಕವಿತೆಯಲ್ಲಿ ಯಳ್ಳಿಗುತ್ತಿಯವರು ಕಟ್ಟಿಕೊಡುವ ಮೂಲಕ ಈ ಕವಿತೆಯನ್ನು ಹಲವಾರು ಭಜನಾ ತಂಡದವರು ಬೇರೆ ಬೇರೆ ಕಡೆ ಹಾಡಿಕೊಳ್ಳುವ ಮೂಲಕ ನೋವಿನ ಸಂದರ್ಭವನ್ನು ಚರಿತ್ರೆಯಲ್ಲಿ ಜೀವಂತವಾಗಿರಿಸಿಕೊಂಡು ಬಂದಿದ್ದಾರೆ. ಇಂಥ ಅವಘಡಗಳು ಚರಿತ್ರೆಯ ಮೂಲಕ ನಮಗೆ ಅನೇಕ ಪಾಠ ಕಲಿಸುತ್ತವೆ. ಆದರೆ ನಾವು ಮರೆಯುತ್ತ ಹೋಗುತ್ತೇವೆ. ಕವಿಗೆ ಮರೆಯಲಾದೀತೆ?
ನಾರಾಯಣ ಯಳ್ಳಿಗುತ್ತಿ ಅವರ ಈ ಸಂಕಲನದಲ್ಲಿ ಪ್ರೇಮ, ಪ್ರೀತಿ ಕವಿತೆಗಳೂ ತುಂಬಾ ತಾಜಾತನದಿಂದ ಕೂಡಿವೆ.
ಹೊನ್ನಿನ ಕಳಸದಿ ಅಂದದಿ ಹೊಳೆಯುವ
ಮುತ್ತಿನ ಕಂಗಳ ಚೆಲುವೆ
ನೀಳ ಕಾಯದ ನೆಟ್ಟ ಮೂಗಿನ
ನಿಂಬೆ ಹಣ್ಣಿನ ಬಣ್ಣದ ಮೊಗವೆ
ಕಡಲು ನಾನು ನನ್ನೊಡಲು ನೀನು
ಎಲ್ಲೆ ಹೋದರೂ ಏನೇ ಆದರೂ
ಅರಿತು ಬೆರೆತು ಮಡಿಲಲಿ ನಾವು
ಚಿರಕಾಲ ಸೇರಿ ಚದುರದಿರೋಣ
ದೇಸೀ ಒಡಲಾಳದಿಂದ ಉದಿಸಿದ ಯಳ್ಳಿಗುತ್ತಿ ಅವರ ಕಾವ್ಯ ಹಳ್ಳಿಯ ಜನ ಮಾತು ಆಡಿದರೆ ಅವರ ಮಾತಿನಲ್ಲಿ ಒಂದು ತತ್ತ್ವ ಅಡಗಿರುತ್ತದೆ. ಹಾಗೇ ಕವಿ ಯಳ್ಳಿಗುತ್ತಿಯವರ ಇಲ್ಲಿನ ಬಹಳಷ್ಟು ಕವಿತೆಗಳು ತತ್ವಪದಗಳಾಗಿ ರೂಪ ಪಡೆದಿವೆ. ಬೆಕ್ಕಿನ ಕುರಿತಾಗಿ ಬರೆದ ಈ ಕವಿತೆಯ ಸಾಲುಗಳನ್ನು ಗಮನಿಸಿ-
ತಾನ ಶ್ಯಾನ್ಯಾ ಎಂದು ಗಿಂಡಿ ಒಳಗ ಹಾಕುದ ಚೆಂಡ
ಬರದೆ ಬಾರಿಸಿಕೊಂಡು ಆಗುವದು ಭಂಡ
ಬಿಳಿಯ ಬೆಣ್ಣೆ ಬಾಯಲ್ಲಿ ಇಡುವೆ ಎಲ್ಲ
ಸುಡುವ ತುಪ್ಪದ ಖಬರ ಇಲ್ಲ
ತೊಗಲ ಮೇಲಿನ ಪ್ರೀತಿ ತಪ್ಪೊ ಅಣ್ಣಾ
ಆತ್ಮದ ಪ್ರೀತಿ ನೀ ಒಪ್ಪೋ ಅಣ್ಣಾ
ಜೀವನ ಪ್ರೀತಿಗೆ ಬದುಕು ಗೌರವಿಸುವ ಪರಿಯಲ್ಲಿ ಮೋಹಕತೆಯಿಂದ ಬರಿದಾಗುವುದಕ್ಕಿಂತ, ಆಧ್ಯಾತ್ಮದ ಇರುವಿನಿಂದ ಬಯಲಾಗಬೇಕೆಂದು ಕವಿ ಸಾರುತ್ತಾರೆ.
`ಕೌದಿ ಮರಿಬ್ಯಾಡ್ರಿ ಗಾದಿ ಹಿಡಿಬ್ಯಾಡ್ರಿ' ಎನ್ನುವ ಸಾಲುಗಳಿಂದ ಆರಂಭವಾಗುವ `ಚಿತ್ತಾರ ಕೌದಿ' ಕವಿತೆಯು ಮರೆಯಾಗಿ ಹೋಗುತ್ತಿರುವ ಗ್ರಾಮೀಣ ವಸ್ತುಗಳ ಅಗತ್ಯತೆಯನ್ನು ಬಿಡಿಸಿಡುತ್ತದೆ.
ಅವ್ವನ ಸೀರಿ ಅಪ್ಪನ ಧೋತರ
ತಂಗಿಯ ಲಂಗ ಅಕ್ಕನ ಜಂಪರ
ಅಣ್ಣನ ಅಂಗಿ ತಮ್ಮನ ಲುಂಗಿ
ಎಲ್ಲರ ಅರಿವೆಯ ಅರಿವಿನ ಕೌದಿ
`ಕೌದಿ' ಹಲವು ಅರಿವೆಗಳ, ಹಲವು ಬಣ್ಣಗಳ ಚಿತ್ತಾರದ ಸಿರಿ. ಹೆಣಿಕೆಯಲ್ಲೂ ಕುಶಲತೆ. ಹೊದ್ದುಕೊಂಡರೆ ಅದರ ಖುಷಿಯೇ ವಿಶಿಷ್ಟ. ಬೇಸಿಗೆಯಲ್ಲಿ ತಂಪಾಗಿ, ಚಳಿಯಲ್ಲಿ ಬೆಚ್ಚಗಾಗಿರುವ ಕೌದಿ ಇಂದು ಬಗೆ ಬಗೆಯ ಹೊದಿಕೆಗಳ ಭರಾಟೆಯಲ್ಲಿ ಹೊದ್ದು ಕೊಳ್ಳುವವರಿಲ್ಲದೆ ಕೇಳುವವರಿಲ್ಲದಂತಾಗಿದೆ. ಇದರ ನೆನಪೇ ಒಂದು ವಿಶಿಷ್ಟ ಅನುಭವನ.
ಇಲ್ಲಿನ `ಕಾಲದ ಮಹಿಮೆ' ಕವಿತೆ ಬದಲಾಗುತ್ತಿರುವ ಸಮಾಜಮುಖಿ ವ್ಯವಸ್ಥೆ, ಮಗ್ಗಲು ಬದಲಿಸುತ್ತಿರುವ ಭೂಮಂಡಲದ ಒಕ್ಕಲು, ಒರಟಾಗುತ್ತಿರುವ ಕೋಮಲದ ಮನಸ್ಸುಗಳು, ಕಳಕೊಳ್ಳುತ್ತಿರುವ ಭಾತೃತ್ವದ ಕೊಂಡಿಗಳು ಕಾಲನ ತುಳಿತಕ್ಕೆ ನಾಶದ ಅಂಚಿಗೆ ಬಂದು ನಿಂತಿರುವ ಗ್ರಾಮ್ಯದ ಪರಿಸರ ಎಲ್ಲವನ್ನು ಬಿಚ್ಚಿಡುತ್ತದೆ.
ಹಿಂದಿನ ದಿನದಾಗ ರೋಣಿ ಮಳಿ ಆದರ ಓಣಿಗೆಲ್ಲ ಜ್ವಾಳಂತ
ಪಟಪಟ ಅಂತ ಅವ್ವ ರೊಟ್ಟಿಯ ಬಡದರ ಓಣೆಲ್ಲ ಘಮ್ಮಂತ
ಚಿಕ್ಕವರಿರುವಾಗ ಊರ ತುಂಬೆಲ್ಲ ಕಾಗಿ ಗುಬ್ಬಿ ಭಾಳಂತ
ಇಂದಿನ ದಿನದಾಗ ಬದಲಾದ ಕಾಲಕ್ಕ ಅವಕ್ಕು ಅಳಿಗಾಲ ಬಂತ
ಕಾಲನ ಮಹಿಮೆಯಲ್ಲಿ ಅಳಿಯುತ್ತಿರುವ ಗ್ರಾಮ್ಯ ಸಂಸ್ಕøತಿ, ಅಲ್ಲಿನ ಬಂಧುತ್ವ ಕುರಿತ ಕನವರಿಕೆ ಈ ಕವಿತೆಯಲ್ಲಿ ಯಳ್ಳಿಗುತ್ತಿಯವರು ಸೊಗಸಾಗಿ ಬಿಡಿಸಿಟ್ಟಿದ್ದಾರೆ.
ಸಂಕಲನದಲ್ಲಿ ಜಾಗ ಪಡೆದ `ರೈತ' ಕವಿತೆ, ``ಮೇಟಿ ಹಿಡಿದ ಕೈ ಕೋಟಿ ಸಲುವತೈತಿ. ನೌಕರಿ ಸಮಯೇನ'' ಎಂದು ಸಾರುತ್ತ ಕೃಷಿಕರ ಹಿರಿಮೆಯನ್ನು ಎತ್ತಿ ಹಿಡಿದರೆ, `ಬಾಲ್ಯವಿವಾಹ' ಕವಿತೆಯಲ್ಲಿ ಎಳೆ ಹುಡುಗಿಗೆ ಮದುವೆ ಮಾಡಿಸಬ್ಯಾಡ್ರಿ ಎಂದು ಹೇಳುತ್ತ-
ಲಂಗ ಹಾಕ್ಕೊಂಡು ಓಡ್ಯಾಡು ಹುಡುಗಿಗೆ ಕಟ್ಟಬ್ಯಾಡ್ರೋ ತಾಳಿ
ಕಟ್ಟಬ್ಯಾಡ್ರೋ ತಾಳಿ ಆಕಿನ ಕೊಲ್ಲತೀರೋ ನಾಳಿ
-ಎಂಬ ಎಚ್ಚರಿಕೆಯನ್ನು ಕೊಡುತ್ತಾರೆ. ಸಾಕ್ಷರತೆ ಮಹತ್ವ ಸಾರುವ ಕವಿತೆಯೂ ಗಮನಾರ್ಹವಾಗಿದೆ.
ಲೇಖಕರ ವಿಳಾಸ : ಡಾ.ಪ್ರಕಾಶ ಗ. ಖಾಡೆ,
‘ಶ್ರೀಗುರು’ ,
ಸರಸ್ವತಿ ಬಡಾವಣೆ,ಸೆಕ್ಟರ್ ನಂ. 63,
ನವನಗರ, ಬಾಗಲಕೋಟ.
ಅeಟಟ :9845500890. emಚಿiಟ :ಜಡಿಠಿಡಿಚಿಞಚಿshಞhಚಿಜe@gmಚಿiಟ.ಛಿo
PÀ£ÀßqÀ PÁªÀåzÀ zÉù
®AiÀÄUÁjPÉ ªÀÄvÀÄÛ ‘ºÁåAVvÀÛ £À£ÀÆßgÀ ’
-qÁ.¥ÀæPÁ±À UÀ.SÁqÉ
PÁªÀå EAzÀÄ ºÀ®ªÀÅ jÃw, gÀÆ¥À, ±Éʰ, §AzsÀUÀ¼À°è
gÀZÀ£ÉAiÀiÁUÀÄwÛzÉ. EA¢£À PÁªÀåUÀ¼À°è ªÀÄgÉAiÀiÁV ºÉÆÃUÀÄwÛzÀÝ zÉùÃ
®AiÀÄUÁjPÉ ªÀÄgÀÄ ºÀÄlÄÖ ¥ÀqÉzÀÄPÉÆ¼ÀÄîwÛzÉ. ¥ÀArvÀ PÁªÀåªÀÅ zÉùÃ
®AiÀÄUÁjPɬÄAzÀ JAzÀÆ vÀ£ÀߣÀÄß ©r¹PÉÆAr®è. £ÀªÀåzÀ ¸ÀAzÀ¨sÀðzÀ®Æè zÉùÃ
®AiÀÄUÁjPÉAiÀİè PÁªÀå PÀnÖ C£ÉÃPÀgÀÄ ¸ÉÊ J¤¹PÉÆAqÀgÀÄ. PÀ£ÀßqÀ PÁªÀå PÁ®
PÁ®PÉÌ vÀ£Àß ªÀÄUÀ먀 §zÀ°¹PÉÆ¼ÀÄîvÀÛ ºÉÆÃzÀgÀÆ zÉùÃAiÀÄvÉAiÀÄ£ÀÄß ©lÄÖ
PÉÆqÀ¢gÀĪÀÅzÀÄ d£À¥ÀzÀgÀ ºÉUÀνPÉAiÉÄà DVzÉ. DzsÀĤPÀ §zÀÄQ£À CªÀWÀqÀUÀ¼À
MvÀÛqÀ¢AzÀ eÁ£À¥ÀzÀ ¸ËAzÀAiÀÄð, ¨sÁµÁ ¸ËAzÀgÀå zÀÆgÀªÁUÀÄvÀÛ £ÀqÉzÀ
¸ÀAzÀ¨sÀðzÀ°è £ÀªÀÄä°è ¨ÉÃAzÉæ, D£ÀAzÀPÀAzÀ, ªÀÄzsÀÄgÀ ZÉ£ÀßgÀÄ eÁ£À¥ÀzÀªÀ£ÀÄß
vÀªÀÄä PÀ«vÉUÀ¼À°è LPÀåUÉÆ½¹ ¸ÁzsÀ£É ªÉÄgÉzÀgÀÄ.
d£À¥ÀzÀ PÁªÀå ¨sÁµÉAiÀÄ£ÀÄß
vÀªÀÄä PÁªÀåPÉÌ vÀAzÀ £ÀªÉÇÃzÀAiÀÄ PÁ®zÀ PÀ«UÀ¼ÀÄ CzÀgÀ gÀÆ¥À, ¸ÀvÀé,
¸ËAzÀgÀåªÀ£ÀÄß vÀªÀÄäzÁV¹PÉÆAqÀgÀÄ. d£À¥ÀzÀ ºÁqÀÄ ¸ÀA¸ÀÌøw £ÀªÉÇÃzÀAiÀÄ
PÁªÀåPÉÌ £ÁzÀzÀ ªÀiÁzsÀÄgÀåvÉ vÀA¢vÀÄ. PÁªÀåzÀ ¨sÁµÉ d£À ¨sÁµÉUÉ ¸À«ÄÃ¥ÀªÁzÀAvÉ
CzÀgÀ DqÀĪÀiÁw£À ¸ÀvÀé PÁªÀåªÀ£ÀÄß £ÁzÀªÀÄAiÀÄ UÉÆ½¸ÀÄvÀÛzÉ. MAzÀÄ
PÁ®PÉÌ d£À¨sÁµÉUÉ ¸À«ÄÃ¥ÀªÁVzÀÝ PÁªÀåzÀ ¨sÁµÉ §gÀ§gÀÄvÁÛ
¥ÁArvÀåªÀÄAiÀĪÁV, QèµÀÖªÁV PÉ®ªÀgÀ ¸ÀévÁÛV, UÀzÀÄÝUÉAiÀÄ£ÉßÃj PÀÆvÀÄ
©qÀÄvÀÛzÉ. DUÀ CzÀÄ ``¥ÀArvÀgÀÄA ««zsÀPÀ¼Á ªÀÄArvÀgÀÄA PÉüÀvÀPÀÌ PÀÈw''
ªÀiÁvÀæªÁUÀÄvÀÛzÉ. F JZÀÑgÀªÀ£ÀÄß CjvÀ £ÀªÀÄä PÀ£ÀßqÀ PÀ«UÀ¼ÀÄ zÉùÃAiÀÄvÉAiÀÄ£ÀÄß
©lÄÖPÉÆqÀ°®è.
PÀ£ÀßqÀ PÁªÀåPÉÌ eÁ£À¥ÀzÀ¢AzÀ
ºÉƸÀ PÁªÀå ¨sÁµÉ gÀÆ¥ÀvÁ½vÀÄ. PÁªÀå ¨sÁµÉUÉ zÉùÃAiÀÄ ZɮĪÀÅ, d£À¥ÀzÀ
zÉÊ£ÀA¢£À ªÀiÁvÀÄUÀ¼À°è §¼ÀPÉUÉÆ¼ÀÄîªÀ zÉùà £ÀÄr, £ÀÄrUÀlÄÖ, £ÁtÄßr,
PÀÆqÀÄ£ÀÄr, UÁzÉ, MUÀlÄ, MqÀ¥ÀÄ ªÉÆzÀ¯ÁzÀªÀÅ ºÉƸÀ jÃwAiÀÄ°è §¼ÀPÉAiÀiÁzÀªÀÅ.
zÉùà ±ÉʰAiÀÄ ¸ÉÆUÀqÀÄ, d£À¥ÀzÀ ªÀiÁw£À zsÁn, ¸ÀÄ®¨sÀªÁzÀ ªÀÄvÀÄÛ £ÉÃgÀªÁzÀ
¨sÁµÁ §¼ÀPÉ £ÀªÉÇÃzÀAiÀÄ PÁªÀåªÀ£ÀÄß eÁ£À¥À¢ÃAiÀĪÁV gÀƦ¹zÀªÀÅ.
qÁ. ZÀAzÀæ±ÉÃRgÀ PÀA¨ÁgÀ CªÀgÀÄ
§ºÀ¼À ¸ÀàµÀÖªÁV MAzÀÄ ªÀiÁvÀÄ ºÉüÀÄvÁÛgÉ- `` £ÀªÉÇÃzÀAiÀÄ PÀ«UÀ¼ÀÄ §AzÀzÀÄÝ
¥ÁæaãÀ PÁªÀåzÀ AiÀÄÄUÀ ªÀÄÄVzÀÄ ¨sÁµÉ ªÀÄÈvÁªÀ¸ÉÜAiÀİèzÁÝUÀ. PÀĪÉA¥ÀÄ D
PÉÆgÀvÉAiÀÄ£ÀÄß ¸ÀA¸ÀÌøvÀ¢AzÀ vÀÄA§¯Éwß¹zÀgÉ, ¨ÉÃAzÉæAiÀĪÀgÀÄ eÁ£À¥ÀzÀzÀ
£ÉgÀªÀÅ ¥ÀqÉzÀgÀÄ. DqÀÄ£ÀÄr, d£À¥ÀzÀ fêÀ£À EªÀÅ PÁªÀåªÁUÀ§®èzÉA§ÄzÉà DUÀ
¨ÉgÀV£À «µÀAiÀĪÁVvÀÄÛ. ¥ÀArvÀgÀ PÀtÄÚ PÀÄPÀÄ̪À ºÁUÉ ¨ÉÃAzÉæAiÀĪÀgÀÄ CzÀ£ÀÆß
¸ÁzsÀåªÁV vÉÆÃj¹zÀgÀÄ. DV£À PÁ®zÀ°è CªÀgÀ PÀ«vÉUÀ½UÉ §AzÀ d£À¦æAiÀÄvÉAiÀÄ£ÀÄß
£ÉÆÃrzÀgÀAvÀÆ ¢UÀâçªÉÄAiÀiÁUÀÄvÀÛzÉ. EAxÀ ¸ÁzsÀåvÉUÀ¼À£ÀÄß vÉÆÃgÀĪÀÅzÀµÉÖÃ
vÀqÀ J®è PÀqÉUÉ ºÀÄZÀÄÑ GvÁìºÀ ºÀjzÁrvÀÄ. CªÀ¸ÀgÀzÀ°è DUÀ¨ÁgÀzÀªÀgÀÆ
PÀ«UÀ¼ÁzÀgÀÄ. DqÀÄ £ÀÄrAiÀÄ£ÀÄß §¼À¹zÀgÀÄ. D ZÀjvÉæ K£Éà EgÀ° d£À¥ÀzÀ
¸ÀvÀé¢AzÀ ¥ÀĵÀ×gÁzÀ ¨ÉÃAzÉæ, ªÀÄzsÀÄgÀZÉ£ÀßgÀAxÀ UÀnÖ ªÀÄÄmÁÖzÀ PÀ«UÀ¼ÀÄ
ªÀÄÄAzÉ §AzÀgÀÄ. AiÀiÁªÀ eÁ£À¥ÀzÀªÀÇ EAxÀ PÀ«UÀ¼À §UÉÎ ºÉªÉÄä ¥ÀlÄÖPÉÆ¼ÀÀÄzÀÄ''
JA§ PÀA¨ÁgÀgÀ ªÀiÁw£À°è £ÀªÉÇÃzÀAiÀÄ PÁªÀåPÉÌ ±ÀQÛ, ¸ÀvÀé vÀÄA©zÀ eÁ£À¥ÀzÀ
¨sÁµÉAiÀÄ »jªÉÄAiÀÄ ¸ÁxÀðPÀvÉ EzÉ.
F MlÄÖ »£É߯ÉAiÀİè PÀ« £ÁgÁAiÀÄt
AiÀĽîUÀÄwÛAiÀĪÀgÀ `ºÁåAVvÀÛ £À£ÀÆßgÀ' PÁªÀå ¸ÀAPÀ®£ÀªÀ£ÀÄß £ÉÆÃqÀĪÀÅzÉÃ
MAzÀÄ ¸ÉÆUÀ¸ÀÄ. £ÁgÁAiÀÄt ¨sÀ. AiÀĽîUÀÄwÛ CªÀgÀÄ £ÀªÀÄä £ÀqÀÄ«£À ¨sÀgÀªÀ¸ÉAiÀÄ
PÀ«. ¨ÁUÀ®PÉÆÃmÉ vÁ®ÆQ£À QgÀ¸ÀÆgÀ UÁæªÀÄzÀ PÀ« £ÁgÁAiÀÄt CªÀgÀÄ zÉùà PÀ«vÀé
gÀZÀ£ÉAiÀÄ°è ¹zÀÝ ºÀ¸ÀÛgÀÄ. QgÀ¸ÀÆgÀ HgÀÄ CªÀjUÉ ¸ÀéUÀðQÌAvÀ®Æ
«ÄV¯ÁzÀÄzÀÄ. ºÉvÀÛ vÁ¬Ä ªÀÄvÀÄÛ ºÀÄnÖzÀ HgÀÄ ¸ÀéUÀðQÌAvÀ®Æ «ÄV®Ä J£ÀÄߪÀ
ªÀiÁvÀÄ £ÁgÁAiÀÄt CªÀgÀ PÁªÀå¢AzÀ¯Éà PÀAqÀÄPÉÆ¼ÀÀÄzÀÄ. ºÁUÉ CªÀgÀ `ºÁåAVvÀÛ
£À£ÀÆßgÀ' ¸ÀAPÀ®£ÀzÀ gÀZÀ£ÉUÀ¼É®è UÁæªÀÄå C£ÀĨsÀªÀzÀ gÀ¸ÀWÀnÖUÀ¼ÁVªÉ.
»A¢£À ¢£ÀzÁUÀ
£À£ÀÆßgÀ ºÉAVvÀÛ
ZÀAzÀæ£À ºÁAUÀ ¨É¼ÀQvÀÛ | ¸ÀÄvÀÆÛjUÉ
D®zÀ ªÀÄgÀzÁíAUÀ £ÉgÀ½vÀÛ
PÀ« £ÁgÁAiÀÄt AiÀĽîUÀÄwÛ EªÀgÀ
`ºÁåAVvÀÛ £À£ÀÆßgÀ' PÀ«vÉAiÀÄ ¸Á®ÄUÀ¼ÀÄ £ÀªÀÄä ºÀ½îAiÀÄ »A¢£À avÀætUÀ¼À£ÀÄß
PÀuÉÚ¢gÀÄ vÀAzÀÄ ¤°è¸ÀÄvÀÛªÉ. EAzÀÄ J®è HgÀÄUÀ¼ÀÄ §zÀ¯ÁUÀÄwÛªÉ. DzsÀĤPÀvÉ
JA§ÄzÀÄ AiÀiÁgÀ£ÀÆß, AiÀiÁªÀÅzÀ£ÀÆß ©qÀÄwÛ®è. ºÀ½î¬ÄAzÀ £ÀUÀgÀPÉÌ ªÀ®¸É
¤gÀAvÀgÀ ªÀÄvÀÄÛ vÀÄA¨Á wêÀæªÁVAiÉÄà £ÀqÉ¢zÉ. ºÀ½îUÀ¼ÀÄ £ÀUÀgÀªÀÄÄT
¸ÀA¸ÀÌøw¬ÄAzÀ ªÀÄÆ® ¸ÉƧUÀÄ ¸ÉÆUÀqÀ£ÀÄß PÀ¼ÀPÉÆAqÀÄ MAzÀÄ §UÉAiÀÄ
«PÁgÀvÉAiÀÄvÀÛ ¸ÁUÀÄwÛªÉ. F ºÉÆvÀÛ°è C°è£À ¸ÀA¨sÀæªÀĪÀ£ÀÄß
£É£É¹PÉÆ¼ÀÄîªÀÅzÀµÉÖà £ÀªÀÄä ªÀÄÄA¢gÀĪÀ MAzÀÄ CªÀPÁ±À. EzÀ£Àß PÀ«
AiÀĽîUÀÄwÛAiÀĪÀgÀÄ PÁªÀåzÀ ªÀÄÆ®PÀ £ÀªÉÄä¢gÀÄ ºÀ½îAiÀÄ avÀæt vÉgÉ¢qÀÄvÁÛgÉ-
ªÀļÉUÁ®
¨Á½vÀÛ
PÉjvÀÄA© ºÀjwvÀÛ
ªÀÄ£É ¸ÉÆÃj ¥ÀqÀ¸Á° Vf Vf ºÀUÉ vÀÄA©
ºÉÊ£Á ºÁ®Ä vÀÄA© vÀļÀÄQvÀÛ
EAzÀÄ ¤AiÀÄ«ÄvÀªÁV ¨ÁgÀzÀ ªÀļÉUÀ¼ÀÄ, PÀĹzÀÄ
ºÉÆÃVgÀĪÀ CAvÀdð® ªÀÄlÖ, §jzÁVgÀĪÀ ºÉƼÉ, ºÀ¼Àî, PÉgÉ PÀmÉÖUÀ¼ÀÄ F
PÁgÀtªÁV ºÀ¹gÀÄ ¸ÀªÀÄÈ¢Ý ªÀÄgÉAiÀiÁV ºÁ®Ä ºÉÊ£ÀPÀÆÌ vÀvÁégÀ MzÀVzÀ
¸ÀAzÀ¨sÀðªÀ£ÀÄß PÀAqÁUÀ RArvÀ ªÀÄ£À£ÉÆAzÀÄPÉÆ¼ÀÄîvÀÛzÉ. »A¢£À ¢£ÀUÀ¼À£ÀÄß £É£É¹
ªÀÄgÀÄUÀĪÀÅzÉà DVzÉ J£ÀÄߪÀ PÀ«AiÀÄ ¨sÁªÀzÀ°è «µÁzÀ«zÉ.
PÀ« £ÁgÁAiÀÄt
AiÀĽîUÀÄwÛAiÀĪÀgÀÄ d£À¥ÀzÀ ªÀÄÆ®¢AzÀ §AzÀªÀgÁVzÀÝjAzÀ CªÀgÀÄ vÁªÀÅ PÀAqÀ,
vÁªÀÅ C£ÀĨsÀ«¹zÀ ¸ÀAUÀwUÀ¼À£ÀÄß PÁªÀåªÁV PÀnÖPÉÆqÀĪÀ°è ¹zÀݺÀ¸ÀÛgÀÄ JA§ÄzÀPÉÌ
E°è CªÀgÀÄ gÀa¹PÉÆlÖ ªÀÄļÀÄUÀqÉ ¸ÀAzÀ¨sÀðzÀ PÀ«vÉUÀ¼ÀÄ, ¤qÀUÀÄA¢ §¸ï zÀÄgÀAvÀ,
ºÉÆ£ÁßPÀnÖ AiÉÆÃzsÀgÀ ¸ÁªÀÅ, ¸ÀÄ£Á«Ä CªÁAvÀgÀ ªÉÆzÀ¯ÁzÀ PÀ«vÉUÀ¼ÀÄ
¸ÁQëAiÀiÁUÀÄvÀÛªÉ. PÀ« E°è PÉêÀ® gÀAd£ÉUÁV PÁªÀå §gÉAiÀÄÄwÛ®è. M§â
ZÀjvÉæPÁgÀ£ÀÆ DUÀÄvÁÛ£É JA§ÄzÀPÉÌ F PÀ«vÉUÀ¼ÀÄ ¸Áj ºÉüÀÄvÀÛªÉ. EwºÁ¸ÀPÁgÀ
gÀa¹zÀ UÀzÀå ¸Á»vÀå ¥ÀoÀå¥ÀĸÀÛPÀUÀ¼À°è ¸ÉÃj «zÁåyðUÀ¼À N¢UÉ ªÀiÁvÀæ
¸ÁzsÀåªÁzÀgÉ, d£À¥ÀzÀ PÀ«UÀ¼ÀÄ PÀnÖPÉÆlÖ VÃV, ¯ÁªÀtÂAiÀİè£À ZÀjvÉæAiÀÄ
¸ÀAUÀwUÀ¼ÀÄ NzÀÄ ¨ÁgÀzÀ ªÀÄvÀÄÛ J®èjUÀÆ w½AiÀÄĪÀ ªÀÄvÀÄÛ ¥ÀgÀA¥ÀgɬÄAzÀ
ªÀÄÄA¢£ÀªÀjUÀÆ w½¹PÉÆqÀĪÀ `¤gÀAvÀgÀ ¨Ë¢ÝPÀ ªÁºÀPÀ' UÀ¼ÁUÀÄvÀÛªÉ.
D®ªÀÄnÖ
qÁå«Ä£À ¤ÃgÁUÀ
ªÀÄļÀÄV ºÉÆÃvÀ HgÀ
§AUÁgÀzÀAvÀ ¨sÀÆ«Ä ¥ÀÆgÀ
*
D®ªÀÄnÖ PÀmÉÖ d£ÀgÀ HgÀ ©r¹ ©mÉÖ
ºÉÆÃUÀĪÀ ªÀÄÄAzÀ §UÀ¯ÁUÀ ZÁ¦ ¸ÀÄ½î ¸ÀÄwÛ PÉÆmÉÖ
*
ºÉƽ¸Á® zÀAqÁåUÀ £ÀªÀÄäAiÀÄ HgÀ
ªÀµÀðPÉÌ MªÉÄä J½wvÀÛ vÉÃgÀ
ºÉƤߣÀAvÀ HgÀ FUÀ
ªÀÄļÀÄV ºÉÆÃvÀ zÀÆgÀ
- »ÃUÉ D®ªÀÄnÖ DuÉPÀmÉÖAiÀÄ
»¤ßÃj£À°è ªÀÄļÀÄV ºÉÆÃzÀ ºÀ½îAiÀÄ ¸ÉƧUÀÄ, ¸ÀA¸ÀÌøwAiÀÄ£ÀÄß ºÉüÀºÉÆgÀl PÀ«
ªÀÄļÀÄUÀqÉ d£ÀgÀ £ÉÆÃ«UÉ zsÀé¤AiÀiÁUÀÄvÁÛgÉ. §ÈºÀvÀÛ DuÉPÀlÄÖUÀ¼À ªÀÄÆ®PÀ
ªÀÄļÀÄUÀqÉ ªÀÄvÀÄÛ ¸ÀܼÁAvÀgÀ ¥ÀæQæAiÉÄAiÀÄ°è £ÉÆAzÀÄPÉÆ¼ÀÄîªÀ ºÀ½îAiÀÄ d£ÀgÀ
DvÀð£ÁzÀªÀ£ÀÄß PÀ« PÀnÖPÉÆlÄÖ £ÉÆÃ«£À £É£À¥ÀÄUÀ¼À£ÀÄß ZÀjvÉæAiÀÄ ¸Á®ÄUÀ½UÉ
¥ÉÆÃt¸ÀÄvÁÛgÉ. EwºÁ¸ÀzÀ ¥ÀÄlUÀ¼ÀÄ MzÉÝAiÀiÁVgÀĪÀÅzÀÄ EAxÀ ¸Á®ÄUÀ½AzÀ¯ÉÃ
C®èªÉ?
¤qÀUÀÄA¢
PÁæ¸À°è PÁ®ÄªÉ ¤ÃgÀ°è §¸ÀÄì ªÀÄļÀÄVvÀ
E°AiÀÄ vÀÄA©zÀ §¯ÉAiÀÄ£ÀÄß
¤ÃgÁUÀ ªÀÄļÀÄV¹zÀAUÁvÀ
JgÀqÀÄ ¸Á«gÀzÁ LzÀÄ d£ÀªÀj ºÀvÀÛ£ÉAiÀÄ vÁjÃRÄ D®ªÀÄnÖ §½AiÀÄ
¤qÀUÀÄA¢ PÁ®ÄªÉAiÀİè CªÀĪÁ¸ÉåAiÀÄ gÁwæ vÀÄA©zÀ §¸ÀÄì ¤ÃjUÉ ©zÀÄÝ ¸ÀĪÀiÁgÀÄ
LªÀvÉÛAlÄ d£À C¸ÀĤÃVzÀgÀÄ. F WÉÆÃgÀ zÀÄgÀAvÀªÀ£ÀÄß `¤qÀUÀÄA¢ zÀÄgÀAvÀ'
PÀ«vÉAiÀİè AiÀĽîUÀÄwÛAiÀĪÀgÀÄ PÀnÖPÉÆqÀĪÀ ªÀÄÆ®PÀ F PÀ«vÉAiÀÄ£ÀÄß ºÀ®ªÁgÀÄ
¨sÀd£Á vÀAqÀzÀªÀgÀÄ ¨ÉÃgÉ ¨ÉÃgÉ PÀqÉ ºÁrPÉÆ¼ÀÄîªÀ ªÀÄÆ®PÀ £ÉÆÃ«£À
¸ÀAzÀ¨sÀðªÀ£ÀÄß ZÀjvÉæAiÀİè fêÀAvÀªÁVj¹PÉÆAqÀÄ §A¢zÁÝgÉ. EAxÀ CªÀWÀqÀUÀ¼ÀÄ
ZÀjvÉæAiÀÄ ªÀÄÆ®PÀ £ÀªÀÄUÉ C£ÉÃPÀ ¥ÁoÀ PÀ°¸ÀÄvÀÛªÉ. DzÀgÉ £ÁªÀÅ ªÀÄgÉAiÀÄÄvÀÛ
ºÉÆÃUÀÄvÉÛêÉ. PÀ«UÉ ªÀÄgÉAiÀįÁ¢ÃvÉ?
£ÁgÁAiÀÄt AiÀĽîUÀÄwÛ CªÀgÀ F
¸ÀAPÀ®£ÀzÀ°è ¥ÉæÃªÀÄ, ¦æÃw PÀ«vÉUÀ¼ÀÆ vÀÄA¨Á vÁeÁvÀ£À¢AzÀ PÀÆrªÉ.
ºÉƤߣÀ
PÀ¼À¸À¢ CAzÀ¢ ºÉƼÉAiÀÄĪÀ
ªÀÄÄwÛ£À PÀAUÀ¼À ZɮĪÉ
¤Ã¼À PÁAiÀÄzÀ £ÉlÖ ªÀÄÆV£À
¤A¨É ºÀtÂÚ£À §tÚzÀ ªÉÆUÀªÉ
PÀqÀ®Ä £Á£ÀÄ £À£ÉÆßqÀ®Ä ¤Ã£ÀÄ
J¯Éè ºÉÆÃzÀgÀÆ K£Éà DzÀgÀÆ
CjvÀÄ ¨ÉgÉvÀÄ ªÀÄr®° £ÁªÀÅ
agÀPÁ® ¸ÉÃj ZÀzÀÄgÀ¢gÉÆÃt
zÉùà MqÀ¯Á¼À¢AzÀ G¢¹zÀ AiÀĽîUÀÄwÛ CªÀgÀ PÁªÀå
ºÀ½îAiÀÄ d£À ªÀiÁvÀÄ DrzÀgÉ CªÀgÀ ªÀiÁw£À°è MAzÀÄ vÀvÀÛ÷é CqÀVgÀÄvÀÛzÉ. ºÁUÉÃ
PÀ« AiÀĽîUÀÄwÛAiÀĪÀgÀ E°è£À §ºÀ¼ÀµÀÄÖ PÀ«vÉUÀ¼ÀÄ vÀvÀé¥ÀzÀUÀ¼ÁV gÀÆ¥À
¥ÀqÉ¢ªÉ. ¨ÉQÌ£À PÀÄjvÁV §gÉzÀ F PÀ«vÉAiÀÄ ¸Á®ÄUÀ¼À£ÀÄß UÀªÀĤ¹-
vÁ£À
±Áå£Áå JAzÀÄ VAr M¼ÀUÀ ºÁPÀÄzÀ ZÉAqÀ
§gÀzÉ ¨Áj¹PÉÆAqÀÄ DUÀĪÀzÀÄ ¨sÀAqÀ
©½AiÀÄ ¨ÉuÉÚ ¨ÁAiÀİè EqÀÄªÉ J®è
¸ÀÄqÀĪÀ vÀÄ¥ÀàzÀ
R§gÀ E®è
vÉÆUÀ®
ªÉÄð£À ¦æÃw vÀ¥ÉÆà CuÁÚ
DvÀäzÀ ¦æÃw ¤Ã M¥ÉÆàà CuÁÚ
fêÀ£À ¦æÃwUÉ §zÀÄPÀÄ UËgÀ«¸ÀĪÀ
¥ÀjAiÀÄ°è ªÉÆÃºÀPÀvɬÄAzÀ §jzÁUÀĪÀÅzÀQÌAvÀ, DzsÁåvÀäzÀ EgÀÄ«¤AzÀ
§AiÀįÁUÀ¨ÉÃPÉAzÀÄ PÀ« ¸ÁgÀÄvÁÛgÉ.
`PË¢ ªÀÄj¨Áåræ UÁ¢ »r¨Áåræ' J£ÀÄߪÀ
¸Á®ÄUÀ½AzÀ DgÀA¨sÀªÁUÀĪÀ `avÁÛgÀ PË¢' PÀ«vÉAiÀÄÄ ªÀÄgÉAiÀiÁV ºÉÆÃUÀÄwÛgÀĪÀ
UÁæ«ÄÃt ªÀ¸ÀÄÛUÀ¼À CUÀvÀåvÉAiÀÄ£ÀÄß ©r¹qÀÄvÀÛzÉ.
CªÀé£À
¹Ãj C¥Àà£À zsÉÆÃvÀgÀ
vÀAVAiÀÄ ®AUÀ CPÀÌ£À dA¥ÀgÀ
CtÚ£À CAV vÀªÀÄä£À ®ÄAV
J®ègÀ CjªÉAiÀÄ Cj«£À PË¢
`PË¢' ºÀ®ªÀÅ CjªÉUÀ¼À, ºÀ®ªÀÅ
§tÚUÀ¼À avÁÛgÀzÀ ¹j. ºÉtÂPÉAiÀÄ®Æè PÀıÀ®vÉ. ºÉÆzÀÄÝPÉÆAqÀgÉ CzÀgÀ RĶAiÉÄÃ
«²µÀÖ. ¨ÉùUÉAiÀİè vÀA¥ÁV, ZÀ½AiÀÄ°è ¨ÉZÀÑUÁVgÀĪÀ PË¢ EAzÀÄ §UÉ §UÉAiÀÄ
ºÉÆ¢PÉUÀ¼À ¨sÀgÁmÉAiÀÄ°è ºÉÆzÀÄÝ PÉÆ¼ÀÄîªÀªÀj®èzÉ PÉüÀĪÀªÀj®èzÀAvÁVzÉ. EzÀgÀ
£É£À¥Éà MAzÀÄ «²µÀÖ C£ÀĨsÀªÀ£À.
E°è£À `PÁ®zÀ ªÀÄ»ªÉÄ' PÀ«vÉ
§zÀ¯ÁUÀÄwÛgÀĪÀ ¸ÀªÀiÁdªÀÄÄT ªÀåªÀ¸ÉÜ, ªÀÄUÀ먀 §zÀ°¸ÀÄwÛgÀĪÀ ¨sÀƪÀÄAqÀ®zÀ
MPÀÌ®Ä, MgÀmÁUÀÄwÛgÀĪÀ PÉÆÃªÀÄ®zÀ ªÀÄ£À¸ÀÄìUÀ¼ÀÄ, PÀ¼ÀPÉÆ¼ÀÄîwÛgÀĪÀ
¨sÁvÀÈvÀézÀ PÉÆArUÀ¼ÀÄ PÁ®£À vÀĽvÀPÉÌ £Á±ÀzÀ CAaUÉ §AzÀÄ ¤AwgÀĪÀ UÁæªÀÄåzÀ ¥Àj¸ÀgÀ
J®èªÀ£ÀÄß ©aÑqÀÄvÀÛzÉ.
»A¢£À
¢£ÀzÁUÀ gÉÆÃt ªÀĽ DzÀgÀ NtÂUÉ®è eÁé¼ÀAvÀ
¥Àl¥Àl CAvÀ CªÀé gÉÆnÖAiÀÄ §qÀzÀgÀ NuÉ®è WÀªÀÄäAvÀ
aPÀ̪ÀjgÀĪÁUÀ HgÀ vÀÄA¨É®è PÁV UÀĩ⠨sÁ¼ÀAvÀ
EA¢£À ¢£ÀzÁUÀ §zÀ¯ÁzÀ
PÁ®PÀÌ CªÀPÀÄÌ C½UÁ® §AvÀ
PÁ®£À ªÀÄ»ªÉÄAiÀİè
C½AiÀÄÄwÛgÀĪÀ UÁæªÀÄå ¸ÀA¸ÀÌøw, C°è£À §AzsÀÄvÀé PÀÄjvÀ PÀ£ÀªÀjPÉ F PÀ«vÉAiÀİè
AiÀĽîUÀÄwÛAiÀĪÀgÀÄ ¸ÉÆUÀ¸ÁV ©r¹nÖzÁÝgÉ.
¸ÀAPÀ®£ÀzÀ°è eÁUÀ ¥ÀqÉzÀ `gÉÊvÀ'
PÀ«vÉ, ``ªÉÄÃn »rzÀ PÉÊ PÉÆÃn ¸À®ÄªÀvÉÊw. £ËPÀj ¸ÀªÀÄAiÉÄãÀ'' JAzÀÄ ¸ÁgÀÄvÀÛ
PÀȶPÀgÀ »jªÉÄAiÀÄ£ÀÄß JwÛ »rzÀgÉ, `¨Á®å«ªÁºÀ' PÀ«vÉAiÀİè J¼É ºÀÄqÀÄVUÉ
ªÀÄzÀÄªÉ ªÀiÁr¸À¨Áåræ JAzÀÄ ºÉüÀÄvÀÛ-
®AUÀ
ºÁPÉÆÌAqÀÄ NqÁåqÀÄ ºÀÄqÀÄVUÉ PÀlÖ¨ÁåqÉÆæÃ vÁ½
PÀlÖ¨ÁåqÉÆæÃ vÁ½ DQ£À
PÉÆ®èwÃgÉÆÃ £Á½
-JA§ JZÀÑjPÉAiÀÄ£ÀÄß PÉÆqÀÄvÁÛgÉ. ¸ÁPÀëgÀvÉ ªÀĺÀvÀé ¸ÁgÀĪÀ
PÀ«vÉAiÀÄÆ UÀªÀÄ£ÁºÀðªÁVzÉ.
¯ÉÃRPÀgÀ «¼Á¸À :
qÁ.¥ÀæPÁ±À UÀ. SÁqÉ,
‘²æÃUÀÄgÀÄ’ ,
¸ÀgÀ¸Àéw §qÁªÀuÉ,¸ÉPÀÖgï £ÀA. 63,
£ÀªÀ£ÀUÀgÀ, ¨ÁUÀ®PÉÆÃl.
Cell :9845500890. email :drprakashkhade@gmail.co