Thursday, May 6, 2021

 ಸೌಹಾರ್ದ ಸಂಸ್ಕೃತಿಯ ಜೀವಂತಿಕೆಗೆ ಭಾವೈಕ್ಯತೆಯೇ ಉಸಿರು: ಡಾ. ಪ್ರಕಾಶ ಖಾಡೆ ಅಭಿಮತ. 


28.02.2021 ಅಮರಗೋಳ(ತಾ:ಮುದ್ದೆಬಿಹಾಳ,(ಜಿ. ವಿಜಯಪುರ)


ಸರ್ವರು ಸಮಾನರು ಎಂಬ ನಾಗರಿಕ-ಸೌಹಾರ್ದ ಸಂಸ್ಕೃತಿ ಜೀವಂತವಾಗಿರಬೇಕಾದರೆ ಅದು ಭಾವೈಕ್ಯತೆಯನ್ನು ಉಸಿರಾಡಬೇಕು ಎಂದು ಸಾಹಿತಿಡಾ.ಪ್ರಕಾಶ ಗ.ಖಾಡೆ ಅಭಿಪ್ರಾಯಪಟ್ಟರು.


ಶರಣಜೀವಿ ಮಲಕಣ್ಣಮರಗೋಳ ಸ್ಮರಣರ್ಥಮುದ್ದೆಬಿಹಾಳದ ಡಾ.ಸಿಂಪಿಲಿಂಗಣ್ಣ ಸಾಹಿತ್ಯ ವೇದಿಕೆಯು ಅಮರಗೋಳದ ನಾಗಲಿಂಗೇಶ್ವರ ದೇವಸ್ಥಾನದಲ್ಲಿಆಯೋಜಿಸಿದ್ದ ಜಿಲ್ಲಾಮಟ್ಟದ ಕಥಾ ಸ್ಫರ್ಧೆಯನ್ನುಉದ್ಗಾಠಿಸಿ ಅವರುಮಾತನಾಡಿದರು.


ಹಿಂದಿನ ಕಾಲಕ್ಕಿಂತಲೂ ಇಂದು ಅಕ್ಷರಸ್ಥರ ಸಂಖ್ಯೆ ಹೆಚ್ಚುತ್ತಿದೆ. ಆದರೆ,ಓದು-ಬರಹಕ್ಕಿಂತ ನಾಗರಿಕತೆ-ಸಂಸ್ಕೃತಿ ದೊಡ್ಡದು. ಜೀವನದಲ್ಲಿಸೌಹಾರ್ದತೆಯ ಮೌಲ್ಯಗಳು ಇರಬೇಕಾದರೆ ಭಾವೈಕ್ಯತೆ ಮುಖ್ಯ. ಸಣ್ಣ ಸಣ್ಣ ಘಟನೆ-ಸನ್ನಿವೇಶಗಳ ಹಿನ್ನೆಲೆಯಲ್ಲಿ ಜನಸಾಮಾನ್ಯರ ಭಾವೈಕ್ಯತೆ ಕದಡುವ ಪ್ರಯತ್ನಗಳು ನಮ್ಮ ಅನಾಗರಿಕ-ಕುಸಂಸ್ಕೃತಿಯನ್ನು ಬಿಂಬಿಸುತ್ತವೆ. ಸರ್ವರೂ ಸಮಾನರು ಎಂಬ ಸಾಮಾಜಿಕ ಮೌಲ್ಯ ಕಾಣುತ್ತಿಲ್ಲ.ಭಾವೈಕ್ಯತೆಯನ್ನು ಉಸಿರಾಡದ ನಾವು ಮನುಷ್ಯರಾಗಿದ್ದೂ ಮಾನವೀಯತೆಯನ್ನುಮರೆತವರಂತೆ ವರ್ತಿಸುತ್ತಿದ್ದೇವೆ ಎಂದು ವಿಷಾದಿಸಿದರು.


ನಮ್ಮ ನಡುವೆಯೇ ಮಾದರಿ ವ್ಯಕ್ತಿತ್ವ: ಶರಣಜೀವಿ ಮಲಕಣ್ಣ ಅಮರಗೋಳ ಅವರು ಮೂಲತಃ ಮಲ್ಲಿಕ್ ಸಾಬ್ ನದಾಫ್.. ಅವರು ಮುಸಲ್ಮಾನರಾಗಿದ್ದೂ ಸಕಲಜೀವರಾಶಿಗಳನ್ನು ಪ್ರೀತಿಸು ಎಂಬ ಶರಣರ ವಚನಗಳನ್ನು ಪಾಲಿಸುವ ಒಬ್ಬಪರಿಶುದ್ಧ ಮನಸ್ಸಿನ ಸಂತರಾಗಿದ್ದರು.ನಮ್ಮ ನಡುವೆಯೇ ಇದ್ದು ಭಾವೈಕ್ಯತೆಯನ್ನು ಉಸಿರಾಡಿಸಿದವರು. ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಮಾತ್ರ ಕಲಿಸಲಿಲ್ಲ. ಬದಲಾಗಿ, ಅವರು ತಮ್ಮ ನಡೆ-ನುಡಿಯ ಮೂಲಕ ಎಲ್ಲ ಧರ್ಮೀಯರೊಂದಿಗೆ ಆತ್ಮೀಯತೆಯನ್ನು ಬೋಧಿಸಿದರು. ಇಂತಹ ವ್ಯಕ್ತಿತ್ವವು ನಮಗೆ ಮಾದರಿಯಾಗಬೇಕು. ಅವರ ಹೆಸರಿನಲ್ಲಿ ಜಿಲ್ಲಾಮಟ್ಟದ ಕಥಾ ಸ್ಪರ್ಧೆ ಆಯೋಜಿಸುತ್ತಿರುವ ವೇದಿಕೆಯ ಕಳಕಳಿಯು ಪ್ರಶಂಸಾರ್ಹ ಎಂದರು.


ಶರಣಜೀವಿ ಮಲಕಣ್ಣ ಅಮರಗೋಳ ಅವರು ವಿಶೇಷವಾಗಿ ಅಧ್ಯಾತ್ಮಜೀವಿಗಳ ಬದುಕನ್ನುಆಳವಾಗಿ ಅಧ್ಯಯನ ಮಾಡಿದ್ದರು ಮಾತ್ರವಲ್ಲ ನಿರುಪಾಧೀಶರ ಚರಿತ್ರೆ ಸೇರಿದಂತೆ ಈ ಭಾಗದ ಅಧ್ಯಾತ್ಮ ಜೀವಿಗಳನ್ನು ತಮ್ಮ ಸಾಹಿತ್ಯದ ಮೂಲಕ ಪರಿಚಯಿಸಿದ್ದಾರೆ ಎಂದು ಹೇಳಿದರು.


ಸ್ಪರ್ಧಾ ವಿಜೇತರನ್ನು ಸನ್ಮಾನಿಸಲಾಯಿತು. ಅಮರಗೋಳದ ದೊಡ್ಡಯ್ಯ ಹಿರೇಮಠ ಸ್ವಾಮೀಜಿ ಹಾಗೂ ಮಹಮ್ಮದ್ ರಫಿಕ್ ಮೌಲಾನಾ ಅವರು ಸಾನ್ನಿಧ್ಯವಹಿಸಿದ್ದರು. ಕಾಶಿಂಬಿ ಮಲ್ಲಿಕ್ ಸಾಬ್ ನದಾಫ್, ಉಪನ್ಯಾಸಕ ಎ.ಎಲ್. ನಾಗೂರು ಅಧ್ಯಕ್ಷತೆ ವಹಿಸಿದ್ದರು. ಗಣ್ಯರಾದ ಎಚ್.ಎ. ಕಟಗೂರು, ಎನ್.ಆರ್. ಮೊಕಾಶಿ, ಅಬ್ದುಲ್ ರಹಮಾನ ಬಿದರಕುಂದಿ, ಎಸ್.ಎಸ್.ಕರಡ್ಡಿ, ಎಂ.ಎನ್. ಬಿರಾದಾರ,ಎಸ್.ಬಿ.ಬಂಗಾರಿ, ಬಾಪೂಗೌಡ ಪಾಟೀಲ, ಬುರಾನಾ ರುದ್ರವಾಡಿ, ಮುತ್ತಣ್ಣ ಎ.ಕಡಿ, ರಮೇಶ ಲಿಂಗದಳ್ಳಿ, ಸಿ.ಎಸ್. ಬೇನಾಳ್,ಸಂಗಪ್ಪ ಕವಡಿಮಟ್ಟಿ, ಎಂ.ಡಿ.ನದಾಫ್, ಬಿ.ಎಚ್.ಬಾಗೇವಾಡಿ ಸೇರಿದಂತೆ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

#

No comments:

Post a Comment

Shivaratri -Dr.Prakash Khade

 ಶಿವರಾತ್ರಿ ವಿಶೇಷ ಲೇಖನ   : ಜನಪದರ ಹಾಡುಗಳಲ್ಲಿ ಶಿವರಾತ್ರಿ :  -ಡಾ.ಪ್ರಕಾಶ ಗ. ಖಾಡೆ,    ಬಾಗಲಕೋಟ ಮೊ. 9845500890    ಭಾರತೀಯ ಸಂಸ್ಕøತಿಯ ಬೇರುಗಳು ನಮ್ಮ ಜನಪದರ...