Tuesday, September 13, 2022

‘ಬೆಳಕಾಯಿತು ಬಾಗಲಕೋಟೆ’ ಪ್ರಸಾರವಾದ 143 ಉಪನ್ಯಾಸಗಳು .

 ‘ಬೆಳಕಾಯಿತು ಬಾಗಲಕೋಟೆ’ 

ಪ್ರಸಾರವಾದ 143 ಉಪನ್ಯಾಸಗಳು .


 


             ಸಂಯೋಜನೆ ; ಡಾ.ಪ್ರಕಾಶ ಗ.ಖಾಡೆ, ಬಾಗಲಕೋಟೆ ಮೊ.9845500890


(ಪರಿಕಲ್ಪನೆ : ಡಾ.ರಾಜಶೇಖರ ಮಠಪತಿ (ರಾಗಂ), ಮಾರ್ಗದರ್ಶನ : ಪ್ರೊ.ಬಿ.ಆರ್.ಪೊಲೀಸಪಾಟೀಲ.)

ಸಾಮಾಜಿಕ ಜಾಲತಾಣದಲ್ಲಿ ಸದ್ದಿಲ್ಲದ ಕ್ರಾಂತಿ : 

ವಿಶ್ವವ್ಯಾಪಿ ಕನ್ನಡಿಗರಿಂದ ಮೆಚ್ಚುಗೆ.

ಕೊವಿಡ್ 19 ಕೊರೊನಾ ಕಾಲಘಟ್ಟದಲ್ಲಿ ವರ್ಷಪೂರ್ತಿ ನಿರಂತರ ನಡೆದ ಮಾಲಿಕೆ.

ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಸಾಧಕರ ಕುರಿತು

 ಫೇಸ್ ಬುಕ್ ಲೈವ್ ಸರಣಿ ಉಪನ್ಯಾಸ


ಅ.ನಂ. ಪ್ರಸಾರವಾದ

ದಿನಾಂಕ ವಾರ ಸಾಧಕರ ಹೆಸರು ಉಪನ್ಯಾಸ ನೀಡಿದವರ ಹೆಸರು


1 3.7.2020 ಶುಕ್ರ ಪ್ರಸ್ತಾವನೆ ಡಾ.ರಾಜಶೇಖರ ಮಠಪತಿ (ರಾಗಂ)

2 6.7.2020 ಸೋಮ ಪ್ರೊ.ಸ.ಸ.ಮಾಳವಾಡ ಡಾ.ವೈ.ಎಂ.ಯಾಕೊಳ್ಳಿ,ಸವದತ್ತಿ

3 9.7.2020 ಗುರು ಬ.ಗಿ.ಯಲ್ಲಟ್ಟಿ ಪ್ರೊ.ಬಿ.ಆರ್.ಪೊಲೀಸಪಾಟೀಲ,ಬನಹಟ್ಟಿ

4 12.7.2020 ರವಿ ಡಾ.ಸ.ಜ.ನಾಗಲೋಟಿಮಠ ಡಾ.ಪ್ರಜ್ಞಾ ಮತ್ತಿಹಳ್ಳಿ,ಧಾರವಾಡ

5 15.7.2020 ಬುಧ ಕೆರೂರು ವಾಸುದೇವಾಚಾರ್ಯ ಡಾ.ಬಸು ಬೇವಿನಗಿಡದ,ಧಾರವಾಡ

6 18.7.2020 ಶನಿ ಜೀವಣ್ಣ ಮಸಳಿ ಡಾ.ವೀರೇಶ ಬಡಿಗೇರ,ಹಂಪಿ ಕನ್ನಡ ವಿ.ವಿ.

7 21.7.2020 ಮಂಗಳ ಪೂಜ್ಯ ಬಂಥನಾಳದ ಸಂಗನಬಸವ ಶಿವಯೋಗಿಗಳು ಸಂಗಮೇಶ ಪೂಜಾರಿ,ವಿಜಯಪುರ

8 24.7.2020 ಶುಕ್ರ ಬಿ.ಎಂ.ಹೊರಕೇರಿ ಕೆ.ಬಿ.ವೀರಲಿಂಗನಗೌಡರ,ಬಾದಾಮಿ

9 27.7.2020 ಸೋಮ ಪ್ರೊ.ಪಿ.ವಿ.ವಜ್ರಮಟ್ಟಿ ಡಾ.ಜೆ.ಪಿ.ದೊಡಮನಿ,ಅಥಣಿ

10 30.7.2020 ಗುರು ಪಿ.ಎಂ.ನಾಡಗೌಡರು ಪೂಜ್ಯ ಬಸವ ಮೃತ್ಯುಂಜಯ ಶ್ರೀಗಳು, ಕೂಡಲಸಂಗಮ

11 3.8.2020 ಸೋಮ ಈಶ್ವರ ಸಣಕಲ್ಲ ಡಾ.ಯಶವಂತ ಕೊಕ್ಕನವರ,ಜಮಖಂಡಿ

12 6.8.2020 ಗುರು ಡಾ.ಫ.ಗು.ಹಳಕಟ್ಟಿ ಡಾ.ಪಿಕೆ. ರಾಠೋಡ,ಧಾರವಾಡ ಕ.ವಿ.ವಿ.

13 9.8.2020 ರವಿ ಪೂಜ್ಯ ಹಾನಗಲ್ಲ ಕುಮಾರಸ್ವಾಮಿಗಳು ಪೂಜ್ಯ ಶಿವಕುಮಾರಸ್ವಾಮಿಗಳು,ಕಪ್ಪತಗುಡ್ಡ,ಗದಗ

14 12.8.2020 ಬುಧ ಡಾ.ಎಸ್.ಎಂ.ಹುಣಶ್ಯಾಳ ಮಲ್ಲಿಕಾರ್ಜುನ ಹೆಗ್ಗಳಗಿ,ಮಹಾಲಿಂಗಪುರ

15 15.8.2020 ಶನಿ ಬಾಗಲಕೋಟೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ಡಾ.ವಿನಯ ಹಿರೇಮಠ,ಬಾಗಲಕೋಟೆ

ಸಂದರ್ಶನ : ಡಾ.ಪ್ರಕಾಶ ಗ.ಖಾಡೆ

16 18.8.2020 ಮಂಗಳ ಪೂಜ್ಯ ಡಾ.ಮಹಾಂತ ಶಿವಯೋಗಿಗಳು ಪೂಜ್ಯ ಡಾ.ಈಶ್ವರ ಮಂಟೂರ,ಮಧುರಖಂಡಿ

17 21.8.2020 ಶಕ್ರ ಜಿ.ಬಿ.ಖಾಡೆ ಡಾ.ಸಿದ್ದರಾಮ ಬಂಗಾರಿ,ಬೀಳಗಿ

18 24.8.2020 ಸೋಮ ದಾನಪ್ಪ ಜತ್ತಿ ಕಲ್ಲೇಶ ಕುಂಬಾರ,ಹಾರೂಗೇರಿ

19 27.8.2020 ಗುರು ಡಾ.ಎಸ್.ಎಸ್.ಬಸುಪಟ್ಟದ ಡಾ.ವಿ.ಎ.ಬೆನಕನಾಳ,ಗುಳೇದಗುಡ್ಡ

20 30.8.2020 ರವಿ ಸತ್ಯಕಾಮ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ,ಬೆಂಗಳೂರು

21 3.9.2020 ಗುರು ಚಿಕ್ಕೋಡಿ ತಮ್ಮಣ್ಣಪ್ಪನವರು ಪ್ರೊ.ಮಲ್ಲಿಕಾರ್ಜುನ ಹುಲಗಬಾಳಿ,ಬನಹಟ್ಟಿ

22 6.9.2020 ರವಿ ತಾಳಿಕೋಟಿ ಖಾಸ್ಗತ ಶಿವಯೋಗಿಗಳು ಪ್ರೊ.ಚಂದ್ರಗೌಡ ಕುಲಕರ್ಣಿ,ತಾಳಿಕೋಟಿ

23 9.9.2020 ಬುಧ ರಾಷ್ಟ್ರಪತಿ ಡಾ.ಬಿ.ಡಿ.ಜತ್ತಿ ಡಾ.ಪ್ರಕಾಶ ಗ.ಖಾಡೆ, ಬಾಗಲಕೋಟೆ

24 12.9.2020 ಶನಿ ಬಿ.ಆರ್.ಅರಿಷಿಣಗುಡಿ ಡಾ.ಗಣೇಶ ಅಮೀನಗಡ, ಮೈಸೂರು

25 15.9.2020 ಮಂಗಳ ಶಂ.ಗು.ಬಿರಾದಾರ ಪ.ಗು.ಸಿದ್ದಾಪುರ,ಮುಳವಾಡ

26 18.9.2020 ಶುಕ್ರ ಬೀಳೂರು ಗುರುಬಸವ ಶ್ರೀಗಳು ಸಿದ್ದರಾಮ ಮನಹಳ್ಳಿ, ಬಾಗಲಕೋಟೆ

27 21.9.2020 ಸೋಮ ‘ಸಿಸು’ಸಂಗಮೇಶ ಜಂಬುನಾಥ ಕಂಚ್ಯಾಣಿ,ವಿಜಯಪುರ

28 24.9.2020 ಗುರು ಕೃಷ್ಣಮೂರ್ತಿ ಪುರಾಣಿಕ ಡಾ.ಚನ್ನಪ್ಪ ಕಟ್ಟಿ, ಸಿಂದಗಿ

29 27.9.2020 ರವಿ ರಾವಬಹದ್ದೂರ ಡಾ.ಶಾರದಾ ಮುಳ್ಳೂರ, ಜಮಖಂಡಿ

30 30.9.2020 ಬುಧ ಡಾ.ಮಹಾದೇವ ಕಣವಿ ಪ್ರೊ.ಚಂದ್ರಶೇಖರ ಹೆಗಡೆ,ಬೀಳಗಿ

31 4.10.2020 ರವಿ ಶ್ರೀರಂಗರು ಪ್ರೊ.ರಾಜಕುಮಾರ ಬಡಿಗೇರ,ಬೆಂಗಳೂರು

32 8.10.2020 ಗುರು ಪರಶುರಾಮ ಚಿತ್ರಗಾರ ಜಯಶ್ರೀ ಭಂಡಾರಿ,ಬಾದಾಮಿ

33 11.10.2020 ರವಿ ಜನರಲ್ ಜಿ.ಜಿ.ಬೇವೂರ ಎಚ್.ಕೆ.ಅವಟಿ,ಎಂ.ಬಿ.ಕಟ್ಟಿಮನಿ,ವಿಜಯಪುರ

34 15.10.2020 ಗುರು ಹರ್ಡೇಕರ ಮಂಜಪ್ಪನವರು ಡಾ.ಮಲ್ಲಿಕಾರ್ಜುನ ಮೇತ್ರಿ,ವಿಜಯಪುರ

35 18.10.2020 ರವಿ ಪಾರಿಜಾತದ ಅಪ್ಪಾಲಾಲ  ನದಾಫ ಶಿವಾನಂದ ಶೆಲ್ಲಿಕೇರಿ,ಮುಧೋಳ

36 22.10.2020 ಗುರು ಕುಮಾರ ಕಕ್ಕಯ್ಯ ಪೋಳ ಡಾ.ಅರ್ಜುನ ಗೊಳಸಂಗಿ,ಗದಗ

37 25.10.2020 ರವಿ ಮೊಹರೆ ಹನಮಂತರಾಯರು ಅಶೋಕ ಹಂಚಲಿ, ಮುದ್ದೇಬಿಹಾಳ

38 29.10.2020 ಗುರು ಗೀ ಗೀ ಗಾರುಡಿಗ ಕಡಣಿ ಕಲ್ಲಪ್ಪ ಡಾ.ರಮೇಶ ಎಸ್.ಕತ್ತಿ, ಆಲಮೇಲ

39 1.11.2020 ರವಿ ಪಿ.ಬಿ.ದುತ್ತರಗಿ ಡಾ.ವಿಶ್ವನಾಥ ವಂಶಾಕೃತಮಠ,ಇಳಕಲ್ಲ

40 5.11.2020 ಗುರು ವಾಸಣ್ಣ ದೇಸಾಯಿ ಮಹಾದೇವ ಕಂಬಾಗಿ, ಇಳಕಲ್ಲ

41 8.11.2020 ರವಿ ಡಾ.ಬಿ.ಆರ್.ಹಿರೇಮಠ ಡಾ.ಬಿ.ಎಸ್.ಬಿರಾದಾರ,ಬಾಗಲಕೋಟೆ

42 12.11.2020 ಗುರು ಚನ್ನಪ್ಪ ಕರಡಿ ದಾಕ್ಷಾಯಣಿ ಮಂಡಿ,ಮಹಾಲಿಂಗಪುರ

43 15.11.2020 ರವಿ ದು.ನಿಂ.ಬೆಳಗಲಿ ಪ್ರಾ.ಚಂದ್ರಪ್ರಭಾ ಬಾಗಲಕೋಟ,ರಬಕವಿ

44 19.11.2020 ಗುರು ಡಾ.ಆರ್.ಬಿ.ಪಾಟೀಲ ಡಾ.ಜಿನದತ್ತ ಹಡಗಲಿ, ಧಾರವಾಡ

45 22.11.2020 ರವಿ ಡಾ.ಸಿಂಪಿ.ಲಿಂಗಣ್ಣ ಡಾ.ಸದಾನಂದ ಬಿಳ್ಳೂರ, ಪುಣೆ

46 26.11.2020 ಗುರು ಅನ್ನದಾನಿ ಹಿರೇಮಠ ಡಾ.ಬಸವರಾಜ ಗವಿಮಠ, ಇಳಕಲ್ಲ

47 29.11.2020 ರವಿ ಡಾ.ಸಿ.ಚ.ನಂದೀಮಠ ಪ್ರಾ.ಜಿ.ಬಿ.ದಾನಶೆಟ್ಟಿ.ಬಾಗಲಕೋಟೆ

48 3.12.2020 ಗುರು ಅಮೀರಬಾಯಿ ಕರ್ನಾಟಕಿ ಚಂದ್ರಶೇಖರ ದೇಸಾಯಿ, ಮುಧೋಳ

49 6.12.2020 ರವಿ ಬರಗಿ ರಾಚಯ್ಯನವರು ಎಸ್.ವಿಜಯಲಕ್ಷ್ಮೀ ಬದನೂರ

50 10.12.2020 ಗುರು ಜನಪದ ಕೋಗಿಲೆ ಗೌರಮ್ಮ ಚಲವಾದಿ ಪ್ರೊ.ಜಿ.ಕೆ.ತಳವಾರ, ಬಾಗಲಕೋಟೆ

51 13.12.2020 ರವಿ ಬಿ.ಪಿ.ಹಿರೇಸೋಮಣ್ಣವರ ಚಂದ್ರಶೇಖರ ರೂಗಿ, ಮುಧೋಳ

52 17.12.2020 ಗುರು ಕೆ.ಪಿ.ನಾಡಗೌಡರು ವೆಂಕಟೇಶ ಗುಡೆಪ್ಪನವರ, ಮುಧೋಳ

53 20.12.2020 ರವಿ ಮಧುರಚೆನ್ನ ಡಾ.ಎಚ್.ಎಸ್.ಸತ್ಯನಾರಾಯಣ.ಚಿಕ್ಕಮಗಳೂರು

54 24.12.2020 ಗುರು ಪ್ರಸನ್ನ ವೆಂಕಟದಾಸರು ಡಾ.ಸುಭಾಷ ಕಾಖಂಡಕಿ, ಬೆಂಗಳೂರು

55 27.12.2020 ರವಿ ಡಾ.ಬಿ.ಎಸ್.ಗದ್ದಗಿಮಠ ಡಾ.ಎಚ್.ಎಸ್.ಘಂಟಿ, ಗುಳೇದಗುಡ್ಡ

56 31.12.2020 ಗುರು ಕಂದಗಲ್ಲ ಹನಮಂತರಾಯರು ಡಾ.ಪ್ರಕಾಶ ನರಗುಂದ ,ಮುದ್ದೇಬಿಹಾಳ

57 3.1.2021 ರವಿ ಸಂಗಮೇಶ ಹೊಸಮನಿ ಸಿದ್ದಲಿಂಗಪ್ಪ ಬೀಳಗಿ, ಹುನಗುಂದ

58 7.1.2021 ಗುರು ಜೋರಾಪುರ ಗುರುರಾಯರು ಪ್ರಾ.ಅಶೋಕ ಕಂದಗಲ್ಲ ,ಬಾಗಲಕೋಟೆ

59 10.1.2021 ರವಿ ಕೆ.ಎಂ.ಪಟ್ಟಣಶೆಟ್ಟರು ರವಿ.ಕಂಗಳ, ಬಾದಾಮಿ

60 14.1.2021 ಗುರು ಮಹಾದಾನಿ ಗಂಗಮ್ಮ ಚಿನಿವಾರ ಗೀತಾ ಶಿವಮೂರ್ತಿ, ಮುದ್ದೇಬಿಹಾಳ

61 17.1.2021 ರವಿ ವೇದಾಂತಕೇಸರಿ ಪೂಜ್ಯ ಮಲ್ಲಿಕಾರ್ಜುನಶ್ರೀಗಳು ಪ್ರೊ.ಬಿ.ಆರ್.ಪೊಲೀಸಪಾಟೀಲ,ಬನಹಟ್ಟಿ

62 21.1.2021 ಗುರು ಅಥರ್ಗಾ ರೇವಣಸಿದ್ದ ಮಾಸ್ತರರು ಪ್ರೊ.ಎಂ.ಎಸ್.ಬದಾಮಿ,ರಬಕವಿ

63 24.1.2021 ರವಿ ಗಣಿತಜ್ಞ ಭಾಸ್ಕರಾಚಾರ್ಯ-2 ವಿದ್ವಾನ್ ಗುರುರಾಜ ಆಚಾರ್ಯ ಹೆರಕಲ್ಲ,ಹುಬ್ಬಳ್ಳಿ

64 28.1.2021 ಗುರು ಶ್ರೀಮಂತ ಆರ್.ಎಂ.ದೇಸಾಯಿ ಸಿದ್ದರಾಮ ಶಿರೋಳ,ಬೀಳಗಿ

65 31.1.2021 ರವಿ ಕವಿ ಸಂಗಮೇಶ ಕೋಟಿ ಡಾ.ಶಿವಾನಂದ ಕುಬಸದ,ಮುಧೋಳ

66 4.2.2021 ಗುರು ಪ್ರೊ.ಜಿ.ಬಿ.ಸಜ್ಜನ ಡಾ.ರಾಜಶೇಖರ ಮಠಪತಿ (ರಾಗಂ)

67 7.2.2021 ರವಿ ಕೃಷಿತಜ್ಞ ಡಾ.ಎನ್.ಪಿ.ಪಾಟೀಲ ಗುರುರಾಜ ಲೂತಿ,ಬೀಳಗಿ

68 11.2.2021 ಗುರು ಜ್ಞಾನ ದಾಸೋಹಿ ಗುರು ಬಸವಾರ್ಯ ಮಠ ಗುರುಗಳು ಡಾ.ಮಲ್ಲಣ್ಣ ನಾಗರಾಳ,   

ಪ್ರಭು ಮಾಲಗತ್ತಿಮಠ,ಹುನಗುಂದ

69 14.2.2021 ರವಿ ಕವಿ ಶಂಕರ ಕಟಗಿ ಕಿರಣ ಬಾಳಾಗೋಳ, ಬೀಳಗಿ

70 18.2.2021 ಗುರು ಸಿದ್ದು ನ್ಯಾಮಗೌಡರು ಪ್ರೊ.ಟಿ.ಪಿ.ಗಿರಡ್ಡಿ,ಜಮಖಂಡಿ

71 21.2.2021 ರವಿ ಅಬ್ಬಾಸ್ ಮೇಲಿನಮನಿ ಲಕ್ಷ್ಮಣ ಬದಾಮಿ,ಸಿರೂರ

72 25.2.2021 ಗುರು ಗುರುದೇವ ರಾನಡೆ ಸೋಮನಾಥ ಗೀತಯೋಗಿ,ಇಂಡಿ

73 28.2.2021 ರವಿ ಎಂ.ಸಿ.ಮೋದಿ ವಿ.ಬಿ.ಮಾಳಿ,ಲೋಕಾಪುರ

74 4.3.2021 ಗುರು ಸೋಮಶೇಖರ ಸಾಲಿ ಶಾಂತಯ್ಯ ಪರಡಿಮಠ,ದಾವಣಗೆರೆ

75 7.3.2021 ರವಿ ಕೌಜಲಗಿ ನಿಂಗಮ್ಮ ಗೀತಾ ದಾನಶೆಟ್ಟಿ, ಬಾಗಲಕೋಟೆ

76 11.3.2021 ಗುರು ರಾಮಣ್ಣ ಸೊನ್ನದ ಸಂಗಮೇಶ ಸಣ್ಣತಂಗಿ, ಬಾಗಲಕೋಟೆ

77 14.3.2021 ರವಿ ಸಿಂಹಾಸನ ಮಾಮಲೇದಾರ ಶಂಕರ ಬೈಚಬಾಳ,ವಿಜಯಪುರ

78 18.3.2021 ಗುರು ಎಲ್.ಎಸ್.ಇನಾಮದಾರ ದ.ರಾ.ಪುರೋಹಿತ, ಕಲಾದಗಿ

79 21.3.2021 ರವಿ ನಾಲತವಾಡ ವೀರೇಶ್ವರ ಶರಣರು ಐ.ಬಿ.ಹಿರೇಮಠ.ಮುದ್ದೆಬಿಹಾಳ

80 25.3.2021 ಗುರು ಚಂದ್ರವರ್ಮ ಬಿ.ಆರ್.ಕೊಟ್ಯಾಳಕರ ಡಾ.ಜಿ.ಎಸ್.ಭೂಸಗೊಂಡ,ತಿಕೋಟಾ

81 28.3.2021 ರವಿ ಕೃಷ್ಣಾಜಿ ದೇಶಪಾಂಡೆ ಮುರುಗೇಂದ್ರ ವಿರಕ್ತಮಠ, ಲೋಕಾಪುರ

82 1.4.2021 ಗುರು ಬಿಂದುಮಾಧವ ಕುಲಕರ್ಣಿ ವೆಂಕಟೇಶ ಇನಾಮದಾರ,ಬಾದಾಮಿ

83 4.4.2021 ರವಿ ಸನಾದಿ ಅಪ್ಪಣ್ಣ ಡಾ.ಎಸ.ಡಿ.ಕೆಂಗಲಗುತ್ತಿ,ಬಾಗಲಕೋಟೆ

84 8.4.2021 ಗುರು ಜ್ಯೋತಿಪ್ರಕಾಶ ಸಾಳುಂಕೆ ಮೋಹನ ದೇಶಪಾಂಡೆ,ಬಾಗಲಕೋಟೆ

85 11.4.2021 ರವಿ ಅದೃಶ್ಯಪ್ಪ ಮಾನ್ವಿ ಶಂಕರ ಹೂಲಿ,ಬಾದಾಮಿ

86 15.4.2021 ಗುರು ಅರ್ಜುನ ಕೊರಟಕರ ಮಲ್ಲಿಕಾರ್ಜುನ ಇಂಡಿ,ಜಮಖಂಡಿ

87 18.4.2021 ರವಿ ಬ.ವೀ.ಹಂಪನಗೌಡ್ರ ಜಿ.ಎನ್.ತೆಗ್ಗಳ್ಳಿ, ವಿಜಯಪುರ

88 22.4.2021 ಗುರು ರಬಕವಿ ಸದ್ಗುರು ಬ್ರಹ್ಮಾನಂದರು ಗಿರೀಶ ಮುತ್ತೂರ , ರಬಕವಿ

89 25.4.2021 ರವಿ ಡಾ.ಎಸ್.ಎಸ್.ನರಸಣಗಿ ಗಿರಿರಾಜ ಹೊಸಮನಿ, ಲಿಂಗಸಗೂರ

90 29.4.2021 ಗುರು ಬಿ.ಟಿ.ಪಾಟೀಲ,ಶಿರಬೂರ ಶಿವಾನಂದ ಶೆಲ್ಲಿಕೇರಿ,ಮುಧೋಳ

91 2.5.2021 ರವಿ ಬಿ.ಎಸ್.ಪಾಟೀಲ ಸಾಸನೂರ ಶ್ರೀಕಾಂತ ಪತ್ತಾರ,  ತಾಳಿಕೋಟಿ

92 6.5.2021 ಗುರು ಆಕಾಶವಾಣಿಯ ಅನಿಲ ದೇಸಾಯಿ ಡಾ.ಶಶಿಧರ ನರೇಂದ್ರ, ಧಾರವಾಡ

93 9.5.2021 ರವಿ ಮಹಾಲಿಂಗಲೀಲೆಯ ಬಸವ ಕವಿ ಡಾ.ಅಶೋಕ ನರೋಡೆ,ಮಹಾಲಿಂಗಪುರ

94 13.5.2021 ಗುರು ಜಂಗಿನ ಮರಗಯ್ಯನವರು ಪ್ರಾ.ಎ.ಎಸ್.ಪಾವಟೆ

95 16.5.2021 ರವಿ ಕನ್ನಡ ಕಟ್ಟಾಳು ರಾಮ ಜಾಧವ ಡಾ.ರಾಮಕೃಷ್ಣ ಮರಾಠೆ

96 20.5.2021 ಗುರು ನಾಟಕಕಾರ ಕೆ.ಎನ್.ಸಾಳುಂಕೆ ಡಾ.ಮುರ್ತುಜಾ ಬ.ಒಚಿಟಿ, ಹುನಗುಂದ

97 23.5.2021 ರವಿ ಪ್ರೊ.ಭುಜೇಂದ್ರ ಮಹಿಷವಾಡಿ ಆನಂದ ಕುಂಚನೂರ,ಮೈಸೂರ

98 27.5.2021 ಗುರು ಎಸ್.ಆರ್.ಕಂಠಿ ಮಲ್ಲಿಕಾರ್ಜುನ ಅಂಗಡಿ,ಇಳಕಲ್ಲ

99 30.5.2021 ರವಿ ಡಾ.ಎಂ.ಎಂ.ಕಲಬುರ್ಗಿ ಡಾ.ವೀರಣ್ಣ ರಾಜೂರ,ಧಾರವಾಡ

100 3.6.2021 ಗುರು ತೋಂಟದ ಡಾ.ಸಿದ್ದಲಿಂಗಶ್ರೀಗಳು ಡಾ.ಚಂದ್ರಶೇಖರ ವಸ್ತ್ರದ,ಗದಗ

101 6.6.2021 ರವಿ ಆಲೂರ ವೆಂಕಟರಾಯರು ಮಲ್ಲಿಕಾರ್ಜುನ ಶೆಲ್ಲಿಕೇರಿ,ಬಾಗಲಕೋಟೆ

102 10.6.2021 ಗುರು ಪಿ.ಎಂ.ಬಾಂಗಿ ಪೂಜ್ಯ ಡಾ.ಚನ್ನಬಸವಸ್ವಾಮಿಜಿ,ಓಲೇಮಠ,ಜಮಖಂಡಿ

103 13.6.2021 ರವಿ ವೀರವೈರಾಗ್ಯ ಮಲ್ಲಣಾರ್ಯರು ಬಸವರಾಜ ಎಸ್.ಮಠ (ಜಲಜಮಿತ್ರ)

104 17.6.2021 ಗುರು ಪೂಜ್ಯ ಸೊನ್ನದ ಶಿವಾನಂದ ಶಿವಯೋಗಿಗಳು ಸಿದ್ದಲಿಂಗ ಮನಹಳ್ಳಿ,ಮಸಬಿನಾಳ,ವಿಜಯಪುರ

105 20.6.2021 ರವಿ ಪಡಗಾನೂರ ಶಂಕರಗೌಡರು ಬಾಳನಗೌಡ ಪಾಟೀಲ,ಪಡಗಾನೂರ

106 24.6.2021 ಗುರು ಬಿ.ಎಸ್.ಪಾಟೀಲ,ಮನಗೂಳಿ ಸಿದ್ದರಾಮ ಬಿರಾದಾರ,ಮನಗೂಳಿ

107 27.6.2021 ರವಿ ಎನ್.ವಿ.ಜೋಶಿ ಶ್ರೀನಿವಾಸ ಕುಲಕರ್ಣಿ,ಧಾರವಾಡ

108 1.7.2021 ಗುರು ಶರಣಶ್ರೀ ಯಮನೂರೇಶ ಬಿರಾದಾರ ಗುಂಡುರಾವ ಧನಪಾಲ,ತಾಳಿಕೋಟಿ

109 4.7.2021 ರವಿ ಹಾದಿಮನಿ ಬಸವಪ್ಪ ಶರಣರು ಗಂಗಾಧರ ಅವಟೇರ,ಉಪನ್ಯಾಸಕರು,ಇಟಗಿ

110 8.7.2021 ಗುರು ಕಾಖಂಡಕಿ ಮಹಿಪತಿದಾಸರು ನಾರಾಯಣ ಬಾಬಾನಗರ,ವಿಜಯಪುರ

111 11.7.2021 ರವಿ ರಾ.ಯ.ಧಾರವಾಡಕರ ಡಾ.ಎಚ್.ಎಸ್.ಸತ್ಯನಾರಾಯಣ,ಚಿಕ್ಕಮಗಳೂರು

112 15.7.2021 ಗುರು ಪೂಜ್ಯ ಬೋರಗಿ-ಪುರದಾಳದ ಭೀಮಾಶಂಕರ ಮಹಾರಾಜರು ಬಸವರಾಜ ಬಡಿಗೇರ,ಬೋರಗಿ

113 18.7.2021 ರವಿ ಪೂಜ್ಯ ಮೃತ್ಯುಂಜಯ ಮಹಾಸ್ವಾಮಿಗಳು, ಮುಧೋಳ ಡಾ.ಮೃತ್ಯುಂಜಯ ರುಮಾಲೆ,ಹೊಸಪೇಟೆ

114 22.7.2021 ಗುರು ಸಜ್ಜಲಗುಡ್ಡದ ಶ್ರೀ ಶರಣಮ್ಮನವರು ಇಂದುಮತಿ ಅಂಗಡಿ,(ಪುರಾಣಿಕ),ಇಳಕಲ್ಲ

115 25.7.2021 ರವಿ ಜಿ.ಎಸ್.ಬಾಗಲಕೋಟ ರುದ್ರಗೌಡ ಪಾಟೀಲ,ಜಮಖಂಡಿ

116 29.7.2021 ಗುರು ವಿಜಯ ಸಾಸನೂರ ಮಲ್ಲಿಕಾರ್ಜುನ ಶೆಲ್ಲಿಕೇರಿ,ಬಾಗಲಕೋಟೆ

117 1.8.2021 ರವಿ ಸಾರವಾಡದ ಸ್ವಾತಂತ್ರ್ಯ ಹೋರಾಟಗಾರರು ಡಾ.ಸೋಮಶೇಖರ ವಾಲಿ,ವಿಜಯಪುರ

118 5.8.2021 ಗುರು ಸೀತಾಬಾಯಿ ತಿಮಸಾನಿ ಡಾ.ವಿಜಯಶ್ರೀ ಇಟ್ಟಣ್ಣವರ,ಬೀಳಗಿ

119 8.8.2021 ರವಿ ಪರಪ್ಪ ಸಂಗಪ್ಪ ಸಜ್ಜನ ಯೋಗೇಶ ಲಮಾಣಿ,ಅಮೀನಗಡ

120 12.8.2021 ಗುರು ಹುನಗುಂದ ಭಾಗದ ಸ್ವಾತಂತ್ರ್ಯ ಹೋರಾಟಗಾರರು ಡಾ.ನಾಗರಾಜ ನಾಡಗೌಡ, ಹುನಗುಂದ

121 15.8.2021 ರವಿ ಬಾಗಲಕೋಟೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ಡಾ.ವಿನಯ ಹಿರೇಮಠ, ಬಾಗಲಕೋಟೆ

122 19.8.2021 ಗುರು ಸ್ವಾತಂತ್ರ್ಯ ಹೋರಾಟಗಾರ ಸಾಬಣ್ಣ ಶಿಂಧೆ,ಗುಳೇದಗುಡ್ಡ ಪ್ರಾ.ಸಿ.ಎಂ.ಜೋಶಿ, ಗುಳೇದಗುಡ್ಡ

123 22.8.2021 ರವಿ ಚನ್ನಬಸಪ್ಪ ಅಂಬಲಿಯವರು ಸಂಗಮೇಶ ಬದಾಮಿ, ವಿಜಯಪುರ

124 26.8.2021 ಗುರು ಸ್ವಾತಂರ್ತ್ಯ ಹೋರಾಟಗಾರ  ಮುದಕಪ್ಪ ಕಲಬುರ್ಗಿ ಡಾ.ಉಮೇಶ ತಿಮ್ಮಾಪುರ,ಬಾಗಲಕೋಟೆ

125 29.8.2021 ರವಿ ಮಸಬಿನಾಳದ ಸ್ವಾತಂತ್ರ್ಯ ಹೋರಾಟಗಾರರು ಶಂಕರ ಬೈಚಬಾಳ,ವಿಜಯಪುರ

126 5.9.2021 ರವಿ ಬಾಗಲಕೋಟೆ ಜಿಲ್ಲೆ ರಚನೆಯ ಇಪ್ಪತ್ತೈದು ; ಪ್ರಾಸ್ತಾವಿಕ ಡಾ.ಶ್ರೀರಾಮ ಇಟ್ಟಣ್ಣವರ,ಬೀಳಗಿ

127 12.9.2021 ರವಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,ಬಾಗಲಕೋಟೆ ಡಾ.ವಸಂತ ಎಂ.ಗಾಣಿಗೇರ,ಬಾಗಲಕೋಟೆ

128 19.9.2021 ರವಿ ಬಾಗಲಕೋಟೆ ಜಿಲ್ಲೆಯ ಸಾಹಿತ್ಯ ಪ್ರಾ.ಬಿ.ಆರ್.ಪೊಲೀಸಪಾಟೀಲ,ಬನಹಟ್ಟಿ

129 26.9.2021 ರವಿ ಬಾಗಲಕೋಟೆ ಜಿಲ್ಲೆಯ ಶಿಕ್ಷಣ ಸಿದ್ಧರಾಮ ಮನಹಳ್ಳಿ,ಬಾಗಲಕೋಟೆ

130 3.10.2021 ರವಿ ಬಾಗಲಕೋಟೆ ಜಿಲ್ಲೆಯ ಪ್ರವಾಸೋದ್ಯಮ ಪ್ರಾ.ಅಶೋಕ ಕಂದಗಲ್ಲ,ಬಾಗಲಕೋಟೆ

131 10.10.2021 ರವಿ ಬಾಗಲಕೋಟೆ ಜಿಲ್ಲೆಯ ಮಹಿಳಾ ಸಾಹಿತ್ಯ ಡಾ.ಸುಮಂಗಲಾ ಮೇಟಿ,ಇಳಕಲ್ಲ

132 17.10.2021 ರವಿ ಬಾಗಲಕೋಡೆ ಜಿಲ್ಲೆಯ ಕ್ರೀಡಾ ಕ್ಷೇತ್ರ ಶ್ರೀಕಾಂತ ದಾಸರ,ಬಾಗಲಕೋಟೆ

133 24.10.2021 ರವಿ ಬಾಗಲಕೋಟೆ ಜಿಲ್ಲೆಯ ಪತ್ರಿಕೋದ್ಯಮ ರಾಮ ಮನಗೂಳಿ,ಬಾಗಲಕೋಟೆ

134 31.11.2021 ರವಿ ಬಾಗಲಕೋಟೆ ಸಂಸ್ಕøತಿ ಡಾ.ಪ್ರಕಾಶ ಗ.ಖಾಡೆ, ಬಾಗಲಕೋಟೆ

135 7.11.2021 ರವಿ ಬಾಗಲಕೋಟೆ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಎಸ್.ಜಿ.ಕೋಟಿ,ಬಾಗಲಕೋಟೆ

136 14.11.2021 ರವಿ ಬಾಗಲಕೋಟೆ ಜಿಲ್ಲೆಯ ಮಕ್ಕಳ ಸಾಹಿತ್ಯ ಡಾ.ಲಲಿತಾ ಹೊಸಪ್ಯಾಟಿ,ಹುನಗುಂದ

137 21.11.2021 ರವಿ ಬಾಗಲಕೋಟೆ ಜಿಲ್ಲೆಯ ದೇಸಗತಿ ಮನೆತನಗಳು ಡಾ.ಸಂಗಮೇಶ ಕಲ್ಯಾಣಿ,ಮುಧೋಳ

138 28.11.2021 ರವಿ ಬಾಗಲಕೋಟೆ ಜಿಲ್ಲೆಯ ನೇಕಾರಿಕೆ ಮಹಾದೇವ ಬಸರಕೋಡ,ಅಮೀನಗಡ

139 5.12.2021 ರವಿ ಬಾಗಲಕೋಟೆ ಜಿಲ್ಲೆಯ ಮಠಮಾನ್ಯಗಳು ಡಾ.ರಾಜಶೇಖರ ಬಸುಪಟ್ಟದ,ಗುಳೇದಗುಡ್ಡ

140 19.12.2022 ರವಿ ಬಾಗಲಕೋಟೆ ಜಿಲ್ಲೆಯ ವೈದ್ಯಕೀಯ ಕ್ಷೇತ್ರದ ಸಾಧನೆ ಮತ್ತು ಸಾಧ್ಯತೆಗಳು ಡಾ.ಕರವೀರಪ್ರಭು ಕ್ಯಾಲಕೊಂಡ,ಬಾದಾಮಿ

141 26.12.2022 ರವಿ ಬಾಗಲಕೋಟೆ ಜಿಲ್ಲೆಯ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಧನೆಗಳು ಡಾ.ಲಿಂಗಾನಂದ ಗವಿಮಠ,ಜಮಖಂಡಿ

142 9.1.2022 ರವಿ ಬಾಗಲಕೋಟೆ ಜಿಲ್ಲೆಯ ರಂಗ ಪರಂಪರೆ ಎಸ್.ಕೆ.ಕೊನೆಸಾಗರ,ಹುನಗುಂದ

143 6.2.2022 ರವಿ ಪದ್ಮಶ್ರೀ ಇಬ್ರಾಹಿಂ ಸುತಾರ ಡಾ.ಅಶೋಕ ನರೋಡೆ,ಮಹಾಲಿಂಗಪುರ













ಬೆಳಕಾಯಿತು ಬಾಗಲಕೋಟೆ ಫೇಸ್ಬುಕ್ ಲೈವ್ ಮೂಲಕ ಅವಿಭಜಿತ ವಿಜಯಪುರ ,ಬಾಗಲಕೋಟೆ ಜಿಲ್ಲೆಯ ಸಾಧಕರ ಕುರಿತು ನಾಡಿನ 143 ಉಪನ್ಯಾಸಕರು ಉಪನ್ಯಾಸ ನೀಡುವ ಮೂಲಕ ಈ ಸರಣಿಯ ಯಶಸ್ಸಿಗೆ ಕಾರಣರಾಗಿದ್ದಾರೆ, ಅವರೆಲ್ಲರ ಪ್ರೀತಿಗೆ ಹೃದಯಪೂರ್ವಕ ಧನ್ಯವಾದಗಳು. ವಿಶ್ವದೆಲ್ಲೆಡೆ ನೆಲೆಸಿದ ಕನ್ನಡಿಗರು ಕೇಳಿ ಹರಸಿದ್ದಾರೆ, ಸಾಧಕರ ಕುಟುಂಬವರ್ಗದವರು ಕರೆ ಮಾಡಿ ಧನ್ಯತೆ ಹಂಚಿಕೊಂಡಿದ್ದಾರೆ. ಪರಿಕಲ್ಪನೆ ರೂಪಿಸಿಕೊಟ್ಟ ಸಾಹಿತಿಗಳಾದ ಡಾ.ರಾಜಶೇಖರ ಮಠಪತಿ (ರಾಗಂ) ಹಾಗೂ ಸದಾ ಮಾರ್ಗದರ್ಶನ ಮಾಡುತ್ತಿರುವ  ಸಾಹಿತಿಗಳಾದ ಪ್ರಾ.ಬಿ.ಆರ್.ಪೊಲೀಸಪಾಟೀಲ ಅವರಿಗೆ. ಎಲ್ಲ ಕೇಳುಗರಿಗೆ, ಜೊತೆಗೆ ಮಾಧ್ಯಮ ಬಳಗದವರ ಪ್ರೊತ್ಸಾಹ, ಫೇಸ್ಬುಕ್ ಆಡಳಿತ ವರ್ಗದವರ ಪ್ರೀತಿ ಈ ಸರಣಿಯ ಯಶಸ್ಸಿಗೆ ಕಾರಣವಾಗಿದೆ. ಎಲ್ಲರಿಗೂ ಅನಂತ ಧನ್ಯವಾದಗಳು. ಸರಣಿ ನಿರಂತರವಾಗಿರುತ್ತದೆ.

8.2.2022            ಡಾ.ಪ್ರಕಾಶ ಗ.ಖಾಡೆ, ಸಂಯೋಜಕ, ಬೆಳಕಾಯಿತು ಬಾಗಲಕೋಟೆ ಮೊ.9845500890




ಡಾ.ಪ್ರಕಾಶ ಗ.ಖಾಡೆ ; ರಂಗಭೂಮಿ ಕ್ಷೇತ್ರದ ಸಾಧನೆಗಳು:

  ಡಾ.ಪ್ರಕಾಶ ಗ.ಖಾಡೆ ;  ರಂಗಭೂಮಿ ಕ್ಷೇತ್ರದ ಸಾಧನೆಗಳು:





1)"ಬರ್ರೆಪೋ ಗಲ್ಲಿಗೇರಿಸ್ರಿ" ನಾಟಕ ರಂಗ ಸಮೂಹ ಬಾಗಲಕೋಟ ಅವರಿಂದ ಮಲ್ಲಿಕಾರ್ಜುನ ಸೊನ್ನದ ನಿರ್ದೇಶನದಲ್ಲಿ 25ಕ್ಕೂ ಹೆಚ್ಚು ಬೀದಿ ನಾಟಕವಾಗಿ ಪ್ರದರ್ಶನ 20-04-1984 ರಿಂದ

2)ಹುನಗುಂದ ತಾಲೂಕ ಸೂಳೆಭಾವಿಯಲ್ಲಿ ನಡೆದ ಹವ್ಯಾಸಿ ವೃತ್ತಿ ರಂಗೋತ್ಸವ (25-07-1990 ರಿಂದ 29-07-1990)ದಲ್ಲಿ ಕಾರ್ಯನಿರ್ವಹಣೆ.

3)"ಸ್ನೇಹರಂಗ ಸಾಧನೆ ತುಂಬಿದ ದಶಕ" ಲೇಖನ ಸುಧಾ 21-10-1990ರಲ್ಲಿ   ಪ್ರಕಟ.

4)"ನಾ ಹೆಚ್ಚೋ ನಿನ್ನ ತವರ ಹೆಚ್ಚೋ" (ಜನಪದ ಸಂಗೀತ ನಾಟಕ) ಆಕಾಶವಾಣಿ     ಧಾರವಾಡ ಕೇಂದ್ರದಿಂದ ದಿ. 11-02-1993 ರಲ್ಲಿ ಪ್ರಸಾರ.

5)ಕೇಂದ್ರ ಮಾನವ ಸಂಪನ್ಮೂಲ ಇಲಾಖೆ, ಸಾಂಸ್ಕøತಿಕ ವಿಭಾಗ, ನವದೆಹಲಿ ಶ್ರೀ ಮಂಜುನಾಥ ಶ್ರೀ ಕೃಷ್ಣ ಪಾರಿಜಾತ ಬಯಲು ಕಂಪನಿ, ದಾದನಟ್ಟಿ, ಸಹಯೋಗದಲ್ಲಿ ನಡೆದ "ಶ್ರೀ ಕೃಷ್ಣ ಪಾರಿಜಾತ ರಂಗ ತರಬೇತಿ ಶಿಬಿರ"ದಲ್ಲಿ ಉಪನ್ಯಾಸ. ಉತ್ತರ ಕರ್ನಾಟಕದಲ್ಲಿ ಪಾರಿಜಾತ ಕಲೆಯ ಬೆಳವಣಿಗೆ ಹಾಗೂ ಪ್ರಚಾರ 06-08-1998, ಸ್ಥಳ: ಕಡಪಟ್ಟಿ, ತಾ: ಜಮಖಂಡಿ.

6)ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಹಾಗೂ ನಟರಾಜ ಹವ್ಯಾಸಿ ಕಲಾ ತಂಡ, ಲೋಕಾಪೂರ ಸಹಯೋಗದಲ್ಲಿ ನಡೆದ "ಗ್ರಾಮೀಣ ರಂಗೋತ್ಸವ 99" ದಲ್ಲಿ ಕಾರ್ಯನಿರ್ವಹಣೆ (ಸಂಚಾಲಕತ್ವ) (25-04-1999 ರಿಂದ 27-04-1999).

7)ಅಧ್ಯಕ್ಷತೆ: ಜಾನಪದ ಸಂರಕ್ಷಣಾ ಪರಿಷತ್ ಯಂಡಿಗೇರಿ (ಬದಾಮಿ) ಸಂಸ್ಥೆಯಿಂದ ನಡೆದ ಬಯಲಾಟ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ, ಸ್ಥಳ: ಯಂಡಿಗೇರಿ, ತಾ: ಬದಾಮಿ ದಿ. 12-08-2000.

8)ರಂಗ ಕೃತಿ ಪ್ರಕಟ: "ಪಾರಿಜಾತದ ಗಾರುಡಿಗ" ಕೃಷ್ಣಾಜಿ ದೇಶಪಾಂಡೆ ಕೃತಿ ಬಿಡುಗಡೆ, ಸಂಸ್ಕøತಿ ರಂಗಮಂದಿರ ಲೋಕಾಪೂರ 14-10-1997, ಪಾರಿಜಾತ ಪ್ರತಿಷ್ಠಾನ ಲೋಕಾಪೂರ, ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಣೆ.

9)ರಂಗ ಸಂಗೀತ: ಅಧ್ಯಕ್ಷತೆ, ಕರ್ನಾಟಕ ನಾಟಕ ಅಕಾಡಮಿ, ಬೆಂಗಳುರು ವತಿಯಿಂದ ಶ್ರೀ ಮಹಾಲಿಂಗೇಶ್ವರ ಅನುಭವ ಮಂಟಪ ರನ್ನ ಬೆಳಗಲಿಯಲ್ಲಿ ನಡೆದ ರಂಗಭೂಮಿ ಕಲಾವಿದರಿಂದ ರಂಗ ಸಂಗೀತ ಮತ್ತು ಪಾರಿಜಾತ ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ, ಸ್ಥಳ: ರನ್ನ ಬೆಳಗಲಿ (ಮುಧೋಳ), ದಿ. 14-02-1997.

10)ರಂಗ ಉಪನ್ಯಾಸ: ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಮತ್ತು ಶ್ರೀ ಮಂಜುನಾಥ ಪಾರಿಜಾತ ಕಂಪನಿ, ದಾದನಟ್ಟಿ, ಸಹಯೋದಲ್ಲಿ "ಶ್ರೀ ಕೃಷ್ಣ ಪಾರಿಜಾತ ರಂಗೋತ್ಸವದಲ್ಲಿ" ಉಪನ್ಯಾಸ, ಸ್ಥಳ: ಬಾಲಕಿಯರ ಸರಕಾರಿ ಪ.ಪೂ. ಕಾಲೇಜು ಜಮಖಂಡಿ ದಿನಾಂಕ 01-10-1997.

11)ಪ್ರಚಾರ ಸಮಿತಿ ಅಧ್ಯಕ್ಷ: "ಗಿರಿಜನ ಕಲಾ ಮೇಳ 98" ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಮತ್ತು ನಟರಾಜ ಹವ್ಯಾಸಿ ಕಲಾ ತಂಡ ಲೋಕಾಪುರ ವತಿಯಿಂದ ನಡೆದ "ಗಿರಿಜನ ಕಲಾ ಮೇಳ 98"ರ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ, ದಿನಾಂಕ 12-04-98.

12)ರಂಗ ಉಪನ್ಯಾಸ : ಕೇಂದ್ರ ಮಾನವ ಸಂಪನ್ಮೂಲ ಇಲಾಖೆ, ಸಾಂಸ್ಕøತಿಕ ವಿಭಾಗ ನವದೆಹಲಿ ಹಾಗೂ ಮಂಜುನಾಥ ಶ್ರೀ ಕೃಷ್ಣ ಪಾರಿಜಾತ ಬಯಲು ಕಂಪನಿ ದಾದನಟ್ಟಿ ಸಹಯೋಗದಲ್ಲಿ ನಡೆದ "ಶ್ರೀ ಕೃಷ್ಣ ಪಾರಿಜಾತ" ರಂಗ ತರಬೇತಿ ಶಿಬಿರದಲ್ಲಿ ಉತ್ತರ ಕರ್ನಾಟಕದಲ್ಲಿ ಪಾರಿಜಾತ ರಂಗ ಕಲೆಯ ಬೆಳವಣಿಗೆ ಹಾಗೂ ಪ್ರಚಾರ ಕುರಿತು ಉಪನ್ಯಾಸ.

13)ಗ್ರಾಮೀಣ ರಂಗೋತ್ಸವ ಸಂಚಾಲಕತ್ವ, ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ, ಬೆಂಗಳೂರು ಹಾಗು ನಟರಾಜ ಹವ್ಯಾಸಿ ಕಲಾ ತಂಡ, ಲೋಕಾಪುರ ವತಿಯಿಂದ ನಡೆದ 

"ಗ್ರಾಮೀಣ ರಂಗೋತ್ಸವ 99" ರ ಕಾರ್ಯನಿರ್ವಹಣೆ. ಸ್ಥಳ: ಲೋಕಾಪುರ ದಿ. 25-04-1999 ರಿಂದ 27-04-1999.

14)ಅಧ್ಯಕ್ಷತೆ: ಜಾನಪದ ಸಂರಕ್ಷಣಾ ಪರಿಷತ್ ಯಂಡಿಗೇರಿ (ಬಾದಾಮಿ) ಅವರಿಂದ ನಡೆದ ಬಯಲಾಟ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಪಾತ್ಯಕ್ಷಿಕೆ ಹಾಗೂ ಕಲಾವಿದರೊಂದಿಗೆ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ, ಸ್ಥಳ: ಯಂಡಿಗೇರಿ (ಬದಾಮಿ) ದಿನಾಂಕ 12-08-2000.

15)ಕಮ್ಮಟದ ನಿರ್ದೇಶಕ: ಬಾಗಲಕೋಟ ಜಿಲ್ಲಾ ಶಿಕ್ಷಕರಿಗಾಗಿ ಕರ್ನಾಟಕ ನಾಟಕ ಅಕ್ಯಾಡಮಿ, ಡಯಟ್, ಇಲಕಲ್ಲ ಸಹಯೋಗದಲ್ಲಿ ನಡೆದ 5 ದಿನಗಳ ಮಕ್ಕಳ ನಾಟಕ ರಚನಾ ಮತ್ತು ಅಭಿನಯ ಕಮ್ಮಟದ ನಿರ್ದೇಶಕರಾಗಿ ಕಾರ್ಯ ನಿರ್ವಹಣೆ, ಸ್ಥಳ: ಬಾಗಲಕೋಟ, ದಿನಾಂಕ 16-12-2002.

16)ರಂಗ ಉಪನ್ಯಾಸ: ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬಾಗಲಕೋಟ ವತಿಯಿಂದ ಪಾರಿಜಾತ ಉತ್ಸವ ಲೋಕಾಪೂರ 2003ರಲ್ಲಿ ಲೋಕಾಪೂರ ಪಾರಿಜಾತ ಪರಂಪರೆ ಕುರಿತು ಉಪನ್ಯಾಸ.

17)"ರಂಗಕೋಟೆ ಬಾಗಲಕೋಟೆ" ತಂಡದ ಸ್ಥಾಪನೆ, ತಂಡದ ಪ್ರಧಾನ ಸಂಚಾಲಕ, ಈ ತಂಡದಿಂದ ಬಾಗಲಕೋಟೆ ನಗರದಲ್ಲಿ ದಿನಾಂಕ 25-02-2006 ರಂದು "ಮುಟ್ಟಿದರೆ ಶಿವನಾಣೆ" ನಾಟಕ ಪ್ರದರ್ಶನ, ನಾಟಕದಲ್ಲಿ ಸನ್ಯಾಸಿ ರೂಪದ ನಾರದನಾಗಿ ಅಭಿನಯ. ಸ್ಥಳ: ಜಿಲ್ಲಾ ಕಲಾಭವನ, ನವನಗರ, ಬಾಗಲಕೋಟ.

18)ದಿನಾಂಕ 15-08-2006ರಂದು ಜಿಲ್ಲಾ ಆಡಳಿತ, ಬಾಗಲಕೋಟೆಯ ವತಿಯಿಂದ ಸ್ವಾತಂತ್ರ್ಯೋತ್ಸವ ಅಂಗವಾಗಿ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ "ಗಾಂಧಿ ಎದುರಿನಲ್ಲಿ" ನಾಟಕ ಪ್ರದರ್ಶನ. ನಿರ್ದೇಶನ: ಡಾ. ಪ್ರಕಾಶ ಖಾಡೆ.

19)"ರಂಗಕೋಟೆ ಬಾಗಲಕೋಟೆ" ತಂಡದಿಂದ ಎರಡನೆಯ ನಾಟಕ "ಶ್ರೀ ಬೀಳೂರು ಗುರುಬಸವ ಜ್ಯೋತಿ" ನಾಟಕದಲ್ಲಿ ಘನಮಠದ ಶಿವಯೋಗಿಗಳ ಪಾತ್ರ ಅಭಿನಯಿಸಿದ್ದು. ನಾಟಕ ಪ್ರದರ್ಶನ ದಿನಾಂಕ 04-11-2007, ಸ್ಥಳ: ಜಿಲ್ಲಾ ಕಲಾಭವನ, ನವನಗರ, ಬಾಗಲಕೋಟ.

20)ಜಲಜಮಿತ್ರ ರಂಗವೇದಿಕೆ ತಂಡದಿಂದ ಬೆಂಗಳೂರು ಕುವೆಂಪು ಕಲಾಮಂದಿರದಲ್ಲಿ 26                 ಜನೆವರಿ 2010 ರಂದು ಗಣರಾಜ್ಯೋತ್ಸವ ಅಂಗವಾಗಿ ‘ರಂಗ ಸುಂದರಿ’ (ರಚನೆ,ನಿರ್ದೆಶನ :ಬಸವರಾಜ ಮಠ) ಪ್ರದರ್ಶನ, ನಾಟಕದಲ್ಲಿ ಟಿ.ವಿ.ನಿರೂಪಕನ ಪಾತ್ರ ಅಭಿನಯ. 

21)ಜಲಜಮಿತ್ರ ರಂಗವೇದಿಕೆ ತಂಡದಿಂದ ಬಾಗಲಕೋಟದ ಜಿಲ್ಲಾ ಕಲಾ ಭವನದಲ್ಲಿ ಜನೇವರಿ 2011 ರವಿವಾರ ‘ಬಿತ್ತದೆ ಬೆಳೆದ ಇಳಿಹಾಳ ಬೊಮ್ಮಯ್ಯ’ನಾಟಕ ಪ್ರದರ್ಶನ,ನಾಟಕದಲ್ಲಿ ‘ಸುಗ್ರೀವಯ್ಯ’’ ಪಾತ್ರ ಅಭಿನಯಿಸಿದ್ದು.

22)ಬೆಳಗುತಿದೆ ಬಸವ ಬ್ಯಾಂಕ ನಾಟಕ ರಚನೆ , ಪ್ರದರ್ಶನ,ಬಾಗಲಕೋಟ.16.11.2017


ಪರಿಚಯ : ಡಾ. ಪ್ರಕಾಶ ಗ. ಖಾಡೆ

 ಪರಿಚಯ :

ಡಾ. ಪ್ರಕಾಶ ಗ. ಖಾಡೆ






 




ಬಾಗಲಕೋಟೆಯ ಡಾ. ಪ್ರಕಾಶ ಗ. ಖಾಡೆ ಅವರು ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ 10 ನೇ ಜೂನ 1965 ರಂದು ಜನಿಸಿದರು. ತಂದೆ ಗಣಪತಿ, ತಾಯಿ ಗಂಗೂಬಾಯಿ, ಪತ್ನಿ ಅನ್ನಪೂರ್ಣ ಅವರು. ಡಾ.ಪ್ರಕಾಶ ಗ.ಖಾಡೆ ಅವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರು ತೊದಲಬಾಗಿಯಲ್ಲಿ ಪೂರೈಸಿಕೊಂಡು , ಪ್ರೌಢ ಶಿಕ್ಷಣವನ್ನು ಬಾದಾಮಿ ತಾಲೂಕಿನ ಕೆರೂರು, ಬಿ.ಎ. ಕನ್ನಡ ಪದವಿ ಶಿಕ್ಷಣವನ್ನು ಇಳಕಲ್ಲು, ಎಂ.ಎ. ಕನ್ನಡ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಪೂರೈಸಿಕೊಂಡರು. ಮುಂದೆ " ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ " ವಿಷಯದ ಮೇಲೆ ಪ್ರೊ. ಎ.ವಿ.ನಾವಡ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಮಹಾ ಪ್ರಬಂಧವನ್ನು ಸಿದ್ಧಪಡಿಸಿ 2005 ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಡಾಕ್ಟರೇಟ್ ಪದವಿಗೆ ಭಾಜನರಾದರು.  

    ಕಾವ್ಯ, ಕಥೆ, ನಾಟಕ, ಜೀವನಚರಿತ್ರೆ, ಸಂಶೋಧನೆ, ಸಂಪಾದನೆ, ಜಾನಪದ ಹಾಗೂ ವಿಮರ್ಶೆಗಳು ಸೇರಿದಂತೆ 32 ಕೃತಿಗಳನ್ನು ರಚಿಸಿದ್ದಾರೆ. ಪ್ರೀತಿ ಬಟ್ಟಲು, ಕೃಷ್ಣಾ ತೀರದ ಜನಪದ ಒಗಟುಗಳು, ನೆಲಮೂಲ ಸಂಸ್ಕøತಿ, ಜಾನಪದ ಲೋಕ, ಜನಪದ ಕೋಗಿಲೆ ಚಲವಾದಿ ಗೌರಮ್ಮ, ಮೌನ ಓದಿನ ಬೆಡಗು, ಜಾನಪದ ಹೆಬ್ಬಾಗಿಲು, ಸಾಹಿತ್ಯ ಸಂಗತಿ, ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ, ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ. ಶಾಂತಿ ಬೀಜಗಳ ಜತನ, ಕೊರೊನಾ ಕಾಲದ ಕವಿತೆಗಳು, ಬೇಂದ್ರೆ ಕಾವ್ಯದ ದೇಸಿಯತೆ, ಬಾಗಲಕೋಟೆ ಹೋಳಿ ಹಾಗೂ ಚೆಲುವಿ ಚಂದ್ರಿ ಕಥಾ ಸಂಕಲನ ಮುಂತಾದವುಗಳು ಇವರ ಪ್ರಕಟಿತ ಕೃತಿಗಳು.

   ಕನ್ನಡ ಸಾಹಿತ್ಯ ಪರಿಷತ್ತಿನ ಮುದ್ದಣ ಕಾವ್ಯ ಪ್ರಶಸ್ತಿ, ಬೇಂದ್ರೆ ಸಾಹಿತ್ಯ ಪ್ರಶಸ್ತಿ, ಹುಬ್ಬಳ್ಳಿಯ ಬೊಮ್ಮಾಯಿ ಪ್ರತಿಷ್ಠಾನ ಪ್ರಶಸ್ತಿ, ಆಜೂರ ಪ್ರತಿಷ್ಠಾನ ಪ್ರಶಸ್ತಿ, ಹರಿಹರಶ್ರೀ ಸಾಹಿತ್ಯ ಪ್ರಶಸ್ತಿ, ಸಂಕ್ರಮಣ ಸಾಹಿತ್ಯ ಪ್ರಶಸ್ತಿ ಹಾಗೂ ಮುಂಂಬಯಿಯ ಮೊಗವೀರ ಕಥಾ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಆಕಾಶವಾಣಿ, ದೂರದರ್ಶನಗಳಲ್ಲಿ ಸಾಹಿತ್ಯಿಕ ಕಾರ್ಯಕ್ರಮಗಳು ಪ್ರಸಾರವಾಗಿವೆ. ದಸರಾ, ಕಿತ್ತೂರು,ನವರಸಪುರ, ಚಾಲುಕ್ಯ, ಹಂಪಿ ಉತ್ಸವ ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗಳಲ್ಲಿ ಕವಿತೆ ವಾಚಿಸಿದ್ದಾರೆ. 

      ಕೊವಿಡ್-19 ಕೊರೊನಾ ಕಾಲ ಘಟ್ಟದ ಲಾಕ್‍ಡೌನ್ ವೇಳೆಯಲ್ಲಿ ಪ್ರತಿ ದಿವಸ ಮನೆಯಲ್ಲಿದ್ದುಕೊಂಡೆ "ದೇಸಿ : ಕನ್ನಡದ ಅನನ್ಯತೆ" ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ನೂರಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ. "ಬೆಳಕಾಯಿತು ಬಾಗಲಕೋಟೆ' ಹೆಸರಿನಲ್ಲಿ ಫೇಸ್ ಬುಕ್ ಲೈವ್‍ದಲ್ಲಿ ನಾಡಿನ ವಿದ್ವಾಂಸರಿಂದ ಅವಿಭಜಿತ ವಿಜಯಪುರ, ಬಾಗಲಕೋಟೆ ಜಿಲ್ಲೆಯ ಸಾಧಕರನ್ನು ಕುರಿತು ಸರಣಿ ಉಪನ್ಯಾಸಗಳನ್ನು ಏರ್ಪಡಿಸಿಕೊಂಡು ಬಂದಿದ್ದಾರೆ, 140 ಕ್ಕೂ ಹೆಚ್ಚು ಉಪನ್ಯಾಸಗಳು ಪ್ರಸಾರವಾಗಿವೆ. ಜೊತೆಗೆ ಇವರ ಕೂಡಿ ಕಟ್ಟಿದ ಕನ್ನಡ, ಒಲುಮೆ ಹಾಡಿಗೆ ಗೀತೆಗಳು  ಜಗದೆಲ್ಲೆಡೆ ಜನಪ್ರಿಯವಾಗಿವೆ.


#

ವಿಳಾಸ.

ಡಾ.ಪ್ರಕಾಶ ಗ.ಖಾಡೆ, ಮನೆ ನಂ. ಎಸ್.135, ಬಡಾವಣೆ ಸಂಖ್ಯೆ 63, ನವನಗರ, ಬಾಗಲಕೋಟೆ-587103

ಮೊ.9845500890


ಡಾ.ಪ್ರಕಾಶ ಖಾಡೆ, ಬಹುಮಾನ ಮತ್ತು ಪ್ರಶಸ್ತಿ:

  ಡಾ.ಪ್ರಕಾಶ ಖಾಡೆ, ಬಹುಮಾನ ಮತ್ತು ಪ್ರಶಸ್ತಿ:




1)ಉತ್ತರ ಕರ್ನಾಟಕ ಯುವ ಲೇಖಕರ ವೇದಿಕೆ 

 "ಶ್ರೇಷ್ಠ ಸಾಹಿತಿ" ಪುರಸ್ಕಾರ 1997.

2) "ನಸುಕಿನ ಚಿತ್ರಗಳು" 

    ಕವಿತೆಗೆ ಸಂಕ್ರಮಣ ಸಾಹಿತ್ಯ ಪ್ರಶಸ್ತಿ 1989

3) "ಸಾಹಿತ್ಯ ಮತ್ತು ಸಾಮಾಜಿಕ ಬದಲಾವಣೆ" ಪ್ರಬಂಧಕ್ಕೆ 

    ರಾಜ್ಯ ಬಂಡಾಯ ಸಾಹಿತ್ಯ  ಸಂಘಟನೆಯ ಪ್ರಥಮ ಬಹುಮಾನ 1990.

4) ‘ಪ್ರೀತಿ ಬಟ್ಟಲು" ಕವನ ಸಂಕಲನಕ್ಕೆ ಕಡಣಿ ಸಾಹಿತ್ಯ ಪ್ರಶಸ್ತಿ, ಸಿಂದಗಿ 1998.

5) "ಕೃಷ್ಣಾ ತೀರದ ಜನಪದ ಒಗಟುಗಳು" ಕೃತಿಗೆ 

     ಹುಬ್ಬಳ್ಳಿಯ ಗೌರಮ್ಮ ಬೊಮ್ಮಾಯಿ  ಪ್ರತಿಷ್ಠಾನದದಿಂದ

     5,000/- ನಗದು ಬಹುಮಾನದೊಂದಿಗೆ "ಜಾನಪದ ಸಿರಿ" ಪ್ರಶಸ್ತಿ 2006.

6) "ಕಾಸರಗೋಡು ಕರಾವಳಿ ಪ್ರತಿಷ್ಠಾನದ" "ಸುವರ್ಣ ಕನ್ನಡಿಗೆ" ಪ್ರಶಸ್ತಿ 2006.

7) "ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ" ಕೃತಿಗೆ 

    ಸಿಂದಗಿಯ "ಬೇಂದ್ರೆ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ"

     3,000/- ರೂ. ಪ್ರಶಸ್ತಿ ಮೊತ್ತ 2007.

8) ’ನೆಲಮೂಲ ಸಂಸ್ಸøತಿ’  ಕೃತಿಗೆ 

    ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ-2010,

    ಬಹುಮಾನ ಮೊತ್ತ-ರೂ.2000

10) ’ನೆಲಮೂಲ ಸಂಸ್ಸøತಿ ಕೃತಿಗೆ ಜಾನಪದ ಸಂರಕ್ಷಣಾ ಪರಿಷತ್ತು 

     ಶ್ರೇಷ್ಠ ಕೃತಿ ಪ್ರಶಸ್ತಿ -2010

11) ಬಾಗಲಕೋಟ ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ -2016

12) ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ –ಕವನ ಸಂಕಲನಕ್ಕೆ

   ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ-2016,

 ಬಹುಮಾನ ಮೊತ್ತ-ರೂ.2000

13) ಬೆಂಗಳೂರಿನ ಮಾತೃಭೂಮಿ ಸಂಸ್ಥೆಯಿಂದ 

     ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯ ಪ್ರಶಸ್ತಿ-2017

14) ಯಾದಗಿರಿ ಜಾನಪದ ಕಲಾಲೋಕದಿಂದ ಜಾನಪದ ಕಲಾ ಲೋಕ ಪ್ರಶಸ್ತಿ -2017


15) ಶಾಂತಿ ಬೀಜಗಳ ಜತನ ಕೃತಿಗೆ 2018 ನೇ ಸಾಲಿನ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಮುದ್ದಣ ಕಾವ್ಯ ಪ್ರಶಸ್ತಿ.


16) ಶಾಂತಿ ಬೀಜಗಳ ಕೃತಿಗೆ ಹರಿಹರದ ಹರಿಹರಶ್ರೀ ಪ್ರಶಸ್ತಿ’, 5000 ರೂ.ನಗದು ಬಹುಮಾನ.


17) ಮುಂಬೈನ ಮೊಗವೀರ ಪತ್ರಿಕೆ ನಡೆಸಿದ ರಾಷ್ರ್ಟಮಟ್ಟದ ಕಥಾ ಸ್ಪರ್ಧೆಯಲ್ಲಿ ‘ಸಧ್ಯಕಿದು ಜಮಖಂಡಿ ಸಂತಿ’ ಕಥೆಗೆ 5000 ರೂ ನಗದು ಬಹುಮಾನದೊಂದಿಗೆ ದ್ವಿತೀಯ ಬಹುಮಾನ.


ಡಾ.ಪ್ರಕಾಶ ಖಾಡೆ, ಪ್ರಕಟಿತ ಕೃತಿಗಳು

  ಡಾ.ಪ್ರಕಾಶ ಖಾಡೆ, ಪ್ರಕಟಿತ ಕೃತಿಗಳು



1) ಗೀತ ಚಿಗಿತ - ಸಂಪಾದಿತ ಕವನ ಸಂಕಲನ (ಮೇ 1986)

2) ತೂಕದವರು - ನಾಟಕ ಕೃತಿ (1993)

3) ಪ್ರೀತಿ ಬಟ್ಟಲು - ಕವನ ಸಂಕಲನ (1997)

4) ನಮ್ಮೂರ ಶಾಲೆ, ನಮ್ಮೂರ ಮಕ್ಕಳು - ಶಿಕ್ಷಣ ಚಿಂತನ (2003)

5) ಸಾಲು ಹನಿಗಳು - ಹನಿಗವಿತೆಗಳು (2004)

6) ಕೃಷ್ಣಾ ತೀರದ ಜನಪದ ಒಗಟುಗಳು (2005), ದ್ವಿತೀಯ ಮುದ್ರಣ (2008)




7) ಗೌರಮ್ಮ ಚಲವಾದಿ (2005) ಜೀವನ ಚರಿತ್ರೆ

8) "ಜಿ.ಬಿ. ಖಾಡೆ ಅವರ ನಕ್ಕು ನಗಿಸುವ ಹಾಸ್ಯ ಪ್ರಸಂಗಗಳು" (ಸಂ.) 2006

9) ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ, ಸಂಶೋಧನಾ ಪ್ರಬಂಧ (2007)

10)"ಬಸವ ಸಿರಿ" ಸ್ಮರಣ ಸಂಚಿಕೆ, ಸಂಪಾದನೆ (2008)

11) "ಕೃಷಿ ಋಷಿ" ಸ್ಮರಣ ಸಂಚಿಕೆ, ಸಂಪಾದನೆ (2009)

12)"ಜತ್ತಿ ಕಾವ್ಯಾಭಿವಂದನ", ಸಂಪಾದಿತ ಕವನ ಸಂಕಲನ (2009)

13) "ಆರೂಢ ಸಂಪದ", ಸಂಪಾದಿತ ಕೃತಿ (2009)

14) "ಸಾಹಿತ್ಯ ಸಂಗತಿ", ಅಂಕಣ ಬರಹಗಳು (2010)

15) "ನೆಲಮೂಲ ಸಂಸ್ಕøತಿ", ಜನಪದ ಲೇಖನ (2010)

16) "ಕನ್ನಡ ಪತ್ರಿಕೆ ಮತ್ತು ಸಾಹಿತ್ಯ", ಪತ್ರಿಕಾ ಲೇಖನಗಳು (2010)

17) "ಜಾನಪದ ಲೋಕ", ಜನಪದ ಸಂಪಾದಿತ ಕೃತಿ (2009)

18) "ಕೋಟಿ ಕಾರಂಜಿ", ಸಂಪಾದನೆ (2010)

19) “ಹತ್ತರ ಹೊತ್ತಿಗೆ” ಸಂಪಾದನೆ (2011)

20) “ಬಾಗಲಕೋಟ ಜಿಲ್ಲೆಯ ಜನಪದ ಹಾಡುಗಳು” ಸಂಪಾದನೆ (2011)

21) ’ಶರಣ ಲೋಕ’ ಲೇಖನ ಸಂಕಲನ (2012)

22) ಮೌನ ಓದಿನ ಬೆಡಗು ,ಪುಸ್ತಕ ವಿಮರ್ಶೆ ಸಂಕಲನ (2012)

23 )ಜಾನಪದ ಹೆಬ್ಬಾಗಿಲು ,ಸಂಶೋಧನಾ ಲೇಖನಗಳು.2013

24) ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ –ಕವನ ಸಂಕಲನ ,2016



25) ಬಸವ ಸಂಪದ ಸ್ಮರಣ ಸಂಚಿಕೆ 2017

26) ಬೆಳಗುತಿದೆ ಬಸವ ಬ್ಯಾಂಕ ನಾಟಕ 2017

27) ಕನ್ನಡ ದೇಸಿ ಕಾವ್ಯ ಅಧ್ಯಯನ – 2017

28) ಶಾಂತಿ ಬೀಜಗಳ ಜತನ ಕವನ ಸಂಕಲನ -2018




29) ನೂರೆಂಟು ಕವಿಗಳ ಕೊರೊನಾ ಕಾಲದ ಕವಿತೆಗಳು – 2020




30) ಬೇಂದ್ರೆ ಕಾವ್ಯದ ದೇಸಿಯತೆ -2020




31) ಬಾಗಲಕೋಟೆ ಹೋಳಿ - 2021




32) ಚೆಲುವಿ ಚಂದ್ರಿ ಕಥಾ ಸಂಕಲನ – 2021




33) ಸ್ವಾತಂತ್ರ್ಯ ಹೋರಾಟದಲ್ಲಿ ಬಾದಾಮಿ – 2022












Saturday, May 21, 2022

ಮುತ್ತಿನ ಹನಿಗಳ ಸಂಗ್ರಹ ‘ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ’

 

ಮುತ್ತಿನ ಹನಿಗಳ ಸಂಗ್ರಹ ‘ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ’


ಡಾ ಪ್ರಕಾಶ ಖಾಡೆಯವರ "ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ" ಪದ್ಯ ಸಂಕಲನದ ಕುರಿತು ಡಾ.ಯ.ಮಾ.ಯಾಕೊಳ್ಳಿ, ಸವದತ್ತಿ ಅವರು ಬರೆದ ವಿಮರ್ಶೆ ನಿಮ್ಮ ಓದಿಗಾಗಿ...

ಖಾಲಿಯಾಗದ
ಒರತೆ
ಒಡನಿರುವ
ಕವಿತೆ
ಎಂದು ನಂಬಿ ಬರೆಯುತ್ತಿರುವ ಕವಿ ಬಾಗಲಕೋಟೆಯ ಡಾ.ಪ್ರಕಾಶ ಖಾಡೆಯವರು. ಅವರು ಸಂಶೋಧನೆ ವಿಮರ್ಶೆ ,ಜಾನಪದ,ಸಂಪಾದನೆ ಇತ್ಯಾದಿ ಹಲವು ಪ್ರಕಾರಗಳಲ್ಲಿ ಕೃತಿ ರಚನೆ ಮಾಡಿದ್ದರೂ ಮುಖ್ಯವಾಗಿ ಕವಿಗಳು ಎಂಬುದನ್ನು ಮರೆಯಲಾಗದು.ಕವಿತೆಯನ್ನು ತುಂಬ ಗಂಭೀರವಾಗಿ ತಗೆದುಕೊಂಡಿರುವ ಡಾ.ಖಾಡೆ ಯವರು ಇತ್ತಿಚೆಗಂತೂ ತುಂಬ ಸಾಮಾಜಿಕ ಜಾಲತಾಣ ದಲ್ಲಿ ಸಕ್ರೀಯವಾಗಿದ್ದಾರೆ‌.

ಅಂತರ್ಜಾಲದ ಬ್ಲಾಗ್, ಪೇಸ್ಬುಕ್ ಮೊದಲಾದ ಮಾಧ್ಯಮಗಳಲ್ಲಿ ನಿತ್ಯವೂ ಬರೆಯುತ್ತಿರುವ ಈ ಕವಿ ಬರೆದಿರುವ ಚೆಂದನೆಯ 306 ಹನಿಗಳನ್ನು ಸಂಗ್ರಹಿಸಿ "ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ "ಎಂಬ ಸುಂದರ ಸಂಕಲನವನ್ನು 2019 ರಲ್ಲಿಯೆ ಬಾಗಲಕೋಟೆಯ ಅನಿಕೇತ ಪ್ರಕಾಶನದಿಂದ ಹೊರತಂದಿದ್ದಾರೆ.

ಇವು ಹನಿಗವಿತೆಗಳೇ?,ಮಿನಿಗವಿತೆಗಳೇ? ಚುಟುಕುಗಳೇ ? ಏನು ಎಂಬುದನ್ನು ಹೇಳುವದು ಕಷ್ಟದ ಕೆಲಸ .ಆದರೆ ಕವಿತೆಗಳೆಂಬುದು ಮಾತ್ರ ನೂರಕ್ಕೆ ನೂರು ನಿಜ.ಇಲ್ಲಿ ಏನೆಲ್ಲ ಸಮಾಹಿತವಾಗಿದೆ ಎನ್ನುವದನ್ನು ಮುನ್ನುಡಿ ಬರೆದ ವಿಮರ್ಶಕ ಗೆಳೆಯ ರಾಗಂ ಅವರು‌
-" ಇಂಗ್ಲೀಷಿನ‌ ಮೆಟಾಪಿಜಿಕಲ್ ,ಚೈನಾ ಝೆನ್,ಜಪಾನಿನ ಹಾಯ್ಕು,ಭಾರತದ ದೋಹೆಗಳ ಒಟ್ಟು ಶ್ರಮವನ್ನು ಸೌಂದರ್ಯವನ್ನು ಗರ್ಭೀಕರಿಸಿಕೊಂಡ ನುಡಿಕಿಡಿಗಳು" ಎಂದು ವ್ಯಾಖ್ಯಾನಿಸಿದ್ದಾರೆ.

ಈ ಸಂಕಲನವನ್ನು ತಂದುದರ ಹಿಂದಿನ ಉದ್ದೇಶವನ್ನುಸ್ವತಃ ಕವಿಯೆ - ಈ ಫೇಸ್ ಬುಕ್‌ಎಂಬ ಮಾಯೆ ನಿಜವಾಗಿಯೂ ನನ್ನಲ್ಲಿ ಹಲವು ಭಾವಗಳ ರೆಕ್ಕೆಗೆ ಆಡುಂಬೋಲವಾಯಿತು.ಪದ್ಯಗಳ ಹುಟ್ಟಿಗೆ ಹರವಿಕೊಂಡ ಭಿತ್ತಿಯಾಯಿತು.ದೇಶ ವಿದೇಶಗಳಲ್ಲಿ‌ಕನ್ನಡದ ಜನ ಓದಿ ,ಸಂಭ್ರಮಿಸಿ ಹಂಚಿಕೊಂಡ ಒಡಲಾಳದ ಮಿಡಿತಗಳೇ ನನ್ನೊಳಗೆ ನಿತ್ಯವೂ ಪದ್ಯಗಳ ಹೊಸೆವ ನವಿರತೆಗೆ ಸಾಕ್ಷಿಯಾಯಿತು.ಹೀಗೆ ನಿತ್ಯ ಹುಟ್ಟಿಕೊಂಡ ಪದ್ಯಗಳ ಸೂಡು ಕಟ್ಟಿ ಒಟ್ಟಿಗೆ ಈ ಸಂಕಲನ ಮೂಲಕ ತಮಗೆ ಒಪಗಪಿಸುತ್ತಿದ್ದೇನೆ" ಎಂದು ನಿವೇದಿಸಿಕೊಂಡಿರು ವದರಲ್ಲಿ ಅವರ ಉದ್ದೇಶ ಸ್ಪಷ್ಟವಾಗಿದೆ.ಇಲ್ಲಿನ ಕವಿತೆಗಳ ವ್ಯಾಪ್ತಿ ಮೂರು ಸಾಲಿನಿಂದ ಆರು ಸಾಲುಗಳವರೆಗಿದೆ.ಆದರೆ ಹೆಚ್ಚಿನ ಚುಟುಕುಗಳು ನಾಲ್ಕು ಸಾಲಿನಲ್ಲಿಯೇ ಇರುವದು ವಿಶೇಷ.

ಈ‌ ನಾಲ್ಕು ಸಾಲಿನ ನುಡಿಗಳ ವ್ಯಾಪ್ತಿ "ಹಿಡಿದರೆ ಹಿಡಿ ತುಂಬ ಬಿಟ್ಟರೆ ಜಗ ತುಂಬ" ಎನ್ನುವ ರೀತಿಯದ್ದು.ನಾಲ್ಕು ಸಾಲಿನ ಪದ್ಯವನ್ನು ವಿಸ್ತರಿಸ ಹೋಗುವದು ಕಷ್ಟಕರವೇ‌ .ವಿಸ್ತರಿಸದಿದ್ದರೂ ಕಷ್ಟವೇ ಎನ್ನುವ ಸಂಕಷ್ಟ ನಮ್ಮಂತಹ ಓದುಗರದ್ದು. ಈ‌ ಕವಿತೆಗಳಿಗೆ ನಮಗೆ ಗೊತ್ತಿಲ್ಲದಂತೆಯೆ ಜಗತ್ತಿನ ತುಂಬಾ ಓದುಗರಿರುತ್ತಾರೆ.ನಮಗರಿವಿಲ್ಲದಂತೆಯೇ ಓದಿ ಪ್ರೇರಣೆ ಪಡೆದವರಿರುತ್ತಾರೆ.ಲೈಕ್ ಮಾಡುವ ಕಾಮೆಂಟ್ ಮಾಡುವ ಕೆಲವರನ್ನು ಬಿಟ್ಟರೂ ಓದಿ ಸುಮ್ಮನೆ ಇರುವವವರ ಸಂಖ್ಯೆ ಸಾವಿರಾರು.ಆದರೆ ಪೇಸ್ ಬುಕ್ಕಿನಲ್ಲಿ ಬರುವ‌ ಲೈಕು‌,ಕಾಮೆಂಟುಗಳು‌ ಪುಕ್ಕಟೆ ಸಿಗಲಾರವು.ಅಲ್ಲಿ ಓದಿ ಸ್ಪಂದಿಸಿರುವಲ್ಲಿ ಒಂದು‌ ಕಾವ್ಯ‌ಪ್ರಿಯ ಮನಸ್ಸು‌ ಇರುತ್ತದೆ ಎಂಬುದಕ್ಕೆ

ಪ್ರತಿ‌ ಲೈಕಿನ
ಜೊತೆಗೆ ಒಂದು
ಜೀವ ಮಿಡಿತದ
ಉಸಿರಿದೆ

ಎಂಬ ಸಾಲುಗಳೇ ಸಾಕ್ಷಿ. ಇಂದು‌ ಕವಿತೆಯನ್ನು ಓದುವ,ಸ್ಪಂದಿಸುವ ರೀತಿ ಕೂಡ ಭಿನ್ನವಾಗಿದೆ ಎನ್ನುವದನ್ನು‌ ಈ ಕಾಲದ ಕವಿಗಳು ಅರಿಯುವದು ಅನಿವಾರ್ಯವಾಗಿದೆ.
ಇಲ್ಲಿನ ಹನಿಗಳಲ್ಲಿ ಓದಿದೊಡನೆ ಖುಷಿ ಕೊಡುವ ಹಲವಾರು ಪದ್ಯಗಳಿವೆ. ನಮ್ಮ‌ ಮನದಲ್ಲಿ ಒಂದು ಬಗೆಯ ಬೆಳಕು ಜಗ್ಗೆಂದು ಹೊತ್ತಿ ಪ್ರಕಾಶ ಬೀರಿ ಒಂದು ಸಮಾಧಾನ ನೆಮ್ಮದಿ,ಮೂಡುತ್ತದೆ. ದೀರ್ಘ‌ ಕವಿತೆಯೆ ಇರಲಿ ಚುಟುಕು ಕಾವ್ಯವೇ ಇರಲಿ ಓದುಗನಲ್ಲಿ ಮೂಡುವ ಈ ಸಂತೃಪ್ತಿಯೇ ಕಾವ್ಯದ ಅಂತಿಮ ಉದ್ದೇಶ. ಇದನ್ನೆ ವರಕವಿ ಬೇಂದ್ರೆ‌ 'ಕಲ್ಲು ಸಕ್ಕರೆಯಂತಹ ಎದೆಯು‌ ಕರಗಿ ನೀರಾಗಿ ಹರಿಯುವದು 'ಎಂದಿದ್ದರು.ಅಂತಹ ಸಂತೃಪ್ತ ಭಾವ ಇಲ್ಲಿನ ಅನೇಕ ಪದ್ಯಗಳನ್ನು ಓದಿದಾಗ‌ ಖಂಡಿತ ಆಗುತ್ತದೆ. ಉದಾಹರಣೆಗೆ ಗಮನಿಸುವದಾದರೆ

ಅಗಳು
ಹುಡುಕಿಕೊಂಡು
ಬಂದ ಕಾಗೆ ;
ಬಳಗ ಕಟ್ಟಿಕೊಂಡಿತು

ಈಜಿ
ಜಯಿಸಿದವರು ;
ಮೈಲುಗಲ್ಲುಗಳ
ನೆಟ್ಟರು

ಇಂಥ ಹನಿಗಳನ್ನು ಓದಿದಾಗ ಆಗುವ ಸಂತೋಷ ಬಣ್ಣನೆಗೆ ನಿಲುಕದ್ದು.

ಕವಿ ವರ್ಡ್ಸವರ್ಥ್ Our sweetest songs are those ,which are our saddest thoughts "ದುಃಖದ ಮನಸ್ಸುಗಳ ಭಾವ ದೀಪ್ತಿ‌ ಮಾತ್ರ ಸುಂದರ ಕಾವ್ಯವಾಗಬಹುದು" ಎಂದಿದ್ದ ಮಾತು ಎಲ್ಲ ಕಾಲದ ಸತ್ಯವೇ .ನೋವಿನ ತೀವ್ರತೆ ಮಾತ್ರ ಉತ್ತಮ ಕಾವ್ಯ ಸೃಷ್ಟಿಸಬಲ್ಲುದು.ನೋವು ಕಡಿಮೆಯಾದಂತೆ ,ಕಾವ್ಯ ಕರಗುತ್ತಾ ಹೋಗುತ್ತದೆ ಎನ್ನುತ್ತಾರೆ ಒಂದು‌ ಹನಿಯಲ್ಲಿ

ಗಾಯದ ನೋವು
ಮಾಯುತ್ತಾ ಬಂದಂತೆ ;
ಕವಿತೆ ಕರಗುತ್ತಾ ಹೋಗುತ್ತದೆ

ಎನ್ನುತ್ತಾರೆ‌.ಅವರ ಕವಿತೆಗಳಲ್ಲಿರುವ ನವಿರಾದ ಭಾವಕ್ಕೆ ಉದಾಹರಣೆ ಈ ಕೆಳಗಿನ ಸಾಲು

ಮಗು‌
ಮಲಗಿತು ಎಂದಳು ;
ಲಾಲಿ ಹಾಡು
ಬದಲಿಸು ಎಂದೆ

ನಾಲ್ಕೆ ಸಾಲುಗಳ ಈ‌ ಪದ್ಯ ಒಂದು ಇಡೀ ದಾಂಪತ್ಯದ ಸವಿಯನ್ನು, ಅವರ ಮೋಹಕ ಬದುಕನ್ನು ,ಅವರ ಪ್ರೇಮವನ್ನು ಹಿಡಿದಿಟ್ಟಿರುವ ರೀತಿಯನ್ನು ವಿವರಿಸ ಹೊರಟರೆ ನಾವು‌ ಮೂರ್ಖರಾಗುತ್ತೇವೆ.
ಮೂರೇ ಮೂರು ಸಾಲಿನಲ್ಲಿ‌ ಇಡೀ ಬದುಕನ್ನೇ ಹಿಡಿದಿಟ್ಟ ಪರಿಗೆ -

ಬದುಕಿನ‌
ಪಠ್ಯದ ಹೆಸರೇ ;
ಬೇವು ಬೆಲ್ಲ

ಒಂದು ಇಡೀ ಮಹಾಕಾವ್ಯ ಸ್ಪುರಿಸುವ ಅರ್ಥವನ್ನು ಈ ಮೂರು ಸಾಲಿನ ಪದ್ಯ ಹೇಳುವದು ಕವಿಯ ಸೂಕ್ಷ್ಮದರ್ಶಿತ್ವಕ್ಕೆ ಸಾಕ್ಷಿಯಾಗಿದೆ.

ಕವಿ ಬರೀ ಸುಂದರ ಸಾಲುಗಳನ್ನು ಬರೆದು ತೃಪ್ತರಾಗುವದಿಲ್ಲ.ಅವರೊಳಗಿನ ಹೋರಾಟದ ಮನಸ್ಸು ಸಿಡಿಯುತ್ತದೆ.

ಪಲ್ಲಕ್ಕಿ‌ ಮೇಲೆ
ಕುಳಿತಿದ್ದಾರೆ ಪ್ರಭುಗಳು ;
ಹೊರುವವರಿಗಾಗಿ
ಕಾಯುತ್ತಿದ್ದಾರೆ‌ ಹಿಂಬಾಲಕರು

ಇಲ್ಕಿರುವ ವ್ಯಂಗ್ಯ ಮಾತಿಗೆ‌ ಮೀರಿದ್ದು. ಇಂದು ಪ್ರಭುಗಳನ್ನು ಹೊರಲು ಜನವೂ ಇಲ್ಲ. ಅವರಿಗಾಗಿ‌ ಕಾಯಬೇಕಾದ ಸ್ಥಿತಿ ಪ್ರಭುಗಳಿಗೆ ಬಂದೊದಗಿದೆ ಎಂಬ ಸೂಕ್ಷ್ಮ‌ವಿಡಂಬನೆ‌ ಅಲ್ಲಿದೆ . ಕವಿಯ‌ ಮನಸ್ಸು ಬಡವರನ್ನು‌,ನಿರ್ಗತಿಕರನ್ನು ಕಂಡು ಮಿಡಿಯುತ್ತದೆ.ಅಂತೆಯೇ

ಚಳಿಗೆ ನಡುಗುವ ಮಕ್ಕಳಿಗೆ
ಹೊದಿಕೆಯಾಗಲಿ ನನ್ನ ಕವನ,
ಮುದುಡಿ‌ ಮಲಗಿದ್ದ ಕಂದಮ್ಮಗಳಿಗೆ
ತಾಯ ಮಡಿಲಾಗಲಿ‌ ನನ್ನ‌ ಕವನ

ಎಂದು ಹಂಬಲಿಸುತ್ತಾರೆ.ಇಲ್ಲಿನ‌ ದೇವರು ಮಸೀದಿ ಚರ್ಚಗಳು‌,ಸ್ವಾಮಿ‌,ಬಾಬಾ,ಪಾದರ್ ಗಳು ಜಗತ್ತಿನಲ್ಲಿ ತುಂಬಿದ ಹಿಂಸೆಯನ್ನು ಕಡಿಮೆ‌ ಮಾಡುತ್ತಿಲ್ಲವಲ್ಲ ಎಂಬ‌ ವಿಷಾದ ಕಾಡಿದೆ ಕವಿಗೆ.ಅದನ್ನೆ

ಅಡಿಗಡಿಗೆ ಇವೆ ಗುಡಿಗಳು
ಚರ್ಚ ಮಸೀದಿಗಳು
ಆದರೂ ತುಂಬುತ್ತಿವೆ ಪತ್ರಿಕೆಯಲ್ಲಿ
ಅಪರಾಧ ಪುಟಗಳು

ಎಂಬ ಹನಿ ವಿವರಿಸಲು ಯತ್ನಿಸಿದೆ.ನಾವೇ ಸೃಷ್ಟಿಸಿದ ಗುಡಿ ಗುಂಡಾರಗಳು ಚರ್ಚು ಮಸೀದಿಗಳು‌ ಮಾನವೀಯತೆಯ ನಡುವೆ ಬಿರುಕು‌ ಮಾಡಿಸುವ ಕೆಲಸ ಮಾಡುತ್ತಿರುವದು ಕವಿಗೆ ಕಾಡಿದೆ. ಹಾಗಾಗಿ‌ ಕವಿಯ‌ ಮನ ಕೋಪಗೊಂಡು‌ ಇಂತಹ‌ ಆಕ್ರೋಶ‌ ಹೊರಗೆಡಹುತ್ತದೆ.

ಇಲ್ಲಿನ ಎಲ್ಲ ಮುನ್ನೂರು ಹನಿಗಳು ಶ್ರೇಷ್ಠ ಕಾವ್ಯ ವಾಗಿವೆ ಎಂದು ನನ್ನ ಅಭಿಪ್ರಾಯವಲ್ಲ.ಸುಮ್ಮನೆ ಹೊಸೆದ, ಪದದ ಕೆಳಗೆ‌ ಪದವಿಟ್ಟ ಕೆಲವು ರಚನೆಗಳು ಇರದಿದ್ದರೆ ಚೆನ್ನಿತ್ತು‌ ಎಂದು ಅನ್ನಿಸಿದ್ದು ಇದೆ.ಆದರೆ ಕವಿ ತಾಯಿಯಂತೆ .ಅವನ‌ ಕವಿತೆಗಳಲ್ಲಿ ಯಾವುದು ಶ್ರೇಷ್ಠ,? ಯಾವುದು‌ ಕನಿಷ್ಠ ಎಂದು ಆತ ಅಂತರ ಮಾಡಲಾರ .ಹಾಗಾಗಿ ಎಲ್ಲ ರಚನೆಗಳನ್ನು ಆತ ಸೇರಿಸಿ ಬಿಡುತ್ತಾನೆ. ಕವಿಯ ಪ್ರತಿ ಕವಿತೆ ಶ್ರೇಷ್ಠವಾಗಿಯೇ ತೀರುತ್ತದೆ ಎಂದೇನಿಲ್ಲ ಅದು ಕವಿಗೂ ಗೊತ್ತಿದ್ದದ್ದೇ ಆಗಿದೆ.ಅಂತೆಯೆ ಅವರೇ

ಎಲ್ಲವೂ ಕಾವ್ಯವಾಗಬೇಕಿಲ್ಲ
ಅನುಭವದ ಮೂಸೆಯಲ್ಲಿ
ಎಷ್ಟೊಂದು ಉಳಿದಿಲ್ಲ
ಮೊಳಕೆಯೊಡೆಯದ ಬೀಜ
ಭೂ ತಾಯಿಯ ಒಡಲಲ್ಲಿ

ಎಂಬ ಸಮಜಾಯಿಷಿಯನ್ನೂ ನೀಡುತ್ತಾರೆ.ಎಲ್ಲ‌ ಕವಿ ಎದುರಿಸಬೇಕಾದ ಅಗ್ನಿದಿವ್ಯವಿದು.

ಇಲ್ಲಿನ‌ ಎಲ್ಲ ಹನಿಗಳನ್ನು‌ ಉದಾಹರಿಸಬೇಕೆಂಬ‌ ಆಸೆ ನನಗೆ. ಆದರೆ ಅದು ವಿಮರ್ಶಕನ‌ ಕೆಲಸವಲ್ಲ. ಆತ ಏನಿದ್ದರೂ ತಾಯಿ‌ ಕೂಸು‌ ಹೆರುವಾಗ ದಾಯಿಯಂತೆ‌. ಇದು ಕವಿಯ ಕವಿತೆ ಎಂದು‌ ಮಾತ್ರ ತೋರಿಸಿ ದೂರ ಸರಿಯಬೇಕು.ಇನ್ನು ಕವಿತೆಯುಂಟು. ಓದುಗರಾದವ ರುಂಟು. ಇಂತಹದೊಂದು ,ನಿಮ್ಮ ಸಾರ್ಥಕ ಓದಿಗೆ ಕವಳವಾಗಬಲ್ಲಸಂಕನವಿದೆಯಂದು ಸೂಚಿಸುವದಷ್ಟೇ ಕೆಲಸ.ಈ ಚಂದನೆಯ ಸಂಕಲನ ನೀಡಿದ್ದಕ್ಕೆ ಕವಿಗೆ ಶುಭಾಶಯಗಳು.

- ಡಾ.ಯ.ಮಾ.ಯಾಕೊಳ್ಳಿ, ಸವದತ್ತಿ

Sunday, February 6, 2022

ಡಾ. ಬಸು ಬೇವಿನಗಿಡದ ಅವರಿಗೆ ಬಾಗಲಕೋಟೆಯಲ್ಲಿ ಸತ್ಕಾರ

 ಮಕ್ಕಳ ಸಾಹಿತ್ಯದಲ್ಲಿ ಅಖಂಡ ವಿಜಯಪುರ ಜಿಲ್ಲೆಯು ಸಮೃದ್ಧ ಬೆಳೆ ಕೊಟ್ಟಿದ್ದು, ಈ ಜಿಲ್ಲೆಯ ಹಿರಿಯ ಸಾಹಿತಿಗಳು ಕಟ್ಟಿಕೊಟ್ಟ ಸಾಹಿತ್ಯದಿಂದ ಆದರ್ಶಮಯ ಬದುಕು ರೂಪಿಸಿಕೊಳ್ಳಲು ಸಾಧ್ಯವಾಯಿತು ಎಂದು ಹಿರಿಯ ಸಾಹಿತಿ ಸಿದ್ದರಾಮ ಮನಹಳ್ಳಿ ಹೇಳಿದರು. ಅವರು ರವಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಬಸು ಬೇವಿನಗಿಡದ ಅವರ ಸತ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.


ಕಸಾಪ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಡಾ,ಬೇವಿನಗಿಡದ ಅವರ ‘ಓಡಿ ಹೋದ ಹುಡುಗ’ ಮಕ್ಕಳ ಕಾದಂಬರಿಯು ಗ್ರಾಮೀಣ ಪ್ರದೇಶದ ಮಕ್ಕಳ ಪರಿಸರ ಕಾಳಜಿಗೆ ಸಾಕ್ಷಿಯಾಗಿದೆ ಎಂದರು. ಕೃತಿ ಕುರಿತು ಮಾತನಾಡಿದ ಹಿರಿಯ ಸಾಹಿತಿ ಡಾ.ಪ್ರಕಾಶ ಖಾಡೆಯವರು ಡಾ.ಬಸು ಬೇವಿನ ಗಿಡದ ಅವರ ಕಾದಂಬರಿಯಲ್ಲಿ ಮಾನವೀಯ ತುಡಿತ, ಸಾಮಾಜಿಕ ಕಾಳಜಿ ಹಾಗೂ ಗ್ರಾಮೀಣ ಬದುಕಿನ ತವಕ ತಲ್ಲಣಗಳನ್ನು ಒಳಗೊಂಡಿದೆ.

ಹಳ್ಳಿ ಮಕ್ಕಳ ಸಾಹಸಗಾಥೆ ಮತ್ತು ಪರೋಪಕಾರಿಗುಣವನ್ನು ಈ ಕೃತಿ ದಟ್ಟವಾಗಿ ಚಿತ್ರಿಸಿದೆ ಎಂದರು. ಸತ್ಕಾರಕ್ಕೆ ಅಭಿವಂದಿಸಿ ಮಾತನಾಡಿದ ಡಾ.ಬಸು ಬೇವಿನಗಿಡದ ಅವರು ‘ಬಾಗಲಕೋಟೆಯು ಮಧುರಚೆನ್ನರಂಥ ಕವಿಗಳಿಗೆ ಸಾಕ್ಷಾತ್ಕಾರ ಕೊಟ್ಟ ಪವಿತ್ರ ನೆಲ.

ಇಲ್ಲಿನ ಸಾಹಿತ್ಯ ಇಡೀ ನಾಡಿನಲ್ಲಿಯೇ ಹೆಸರಾಗಿದೆ, ಇಲ್ಲಿನ ಕಥೆಗಾರರು ಗ್ರಾಮೀಣ ಬದುಕನ್ನು ಯಥಾವತ್ತಾಗಿ ನಿರೂಪಿಸುತ್ತಿದ್ದಾರೆ’ ಎಂದರು. ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲೀಕೇರಿ ಮಾತನಾಡಿ ‘ಕಸಾಪ ಜನಸಾಮಾನ್ಯರನ್ನೂ ಒಳಗೊಂಡು ನಾಡಿನ ಸಾಹಿತ್ಯ ದಿಗ್ಗಜರೊಂದಿಗೆ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತದೆ’ ಎಂದರು.

ಕಾರ್ಯಕ್ರಮದಲ್ಲಿ ಸಾಹಿತಿ ಮಲ್ಲಿಕಾರ್ಜುನ ಶೆಲ್ಲಿಕೇರಿ ಅತಿಥಿಗಳಾಗಿ ಪಾಲ್ಗೊಂಡಿದ್ದರು ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ.ಚಂದ್ರಶೇಖರ ಕಾಳನ್ನವರ ನಿರೂಪಿಸಿದರು. ಸಿದ್ದರಾಮ ಶಿರೋಳ ಸ್ವಾಗತಿಸಿದರು. ತಾಲೂಕು ಕಸಾಪ ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ ವಂದಿಸಿದರು.

ಕಾರ್ಯಕ್ರಮದಲ್ಲಿ ರಾಜಶೇಖರ ಕುಕ್ಕುಂದಾ, ನರಸನಗೌಡರ, ಸಂಗಮೇಶ ನೀಲಗುಂದ, ಗೀತಾ ದಾನಶೆಟ್ಟಿ. ಗಂಗಾಧರ ಅವಟೇರ, ಪ್ರಕಾಶ ಡಂಗಿ. ಸಂಗಮೇಶ ಬಡಿಗೇರ, ಎಸ್.ಎಸ್.ಹಳ್ಳೂರ, ಜುಟ್ಟಲ, ಪ್ರಾ.ಬಿಜಾಪುರ ರೇಖಾ ಗೋಗಿ ಮೊದಲಾದವರು ಭಾಗವಹಿಸಿದ್ದರು.

Friday, February 4, 2022

ಕಥೆ -ಸಧ್ಯಕಿದು ಜಮಖಂಡಿ ಸಂತಿ.

 

ಡಾ. ಪ್ರಕಾಶ ಗ. ಖಾಡೆ

ಅವರ ಬಹುಮಾನಿತ ಕಥೆ. 



*ಸಧ್ಯಕಿದು ಜಮಖಂಡಿ ಸಂತಿ*


   ‘ಮುತ್ಯಾ, ಯಾವದೋ ಮುದುಕಿ ಬಂದ ನಿನಗ ಮಲ್ಲಪ್ಪ ಮಾಸ್ತರ ಅದಾನೇನ ಅಂತಾ ಕೇಳಾಕ ಹತ್ಯಾಳ, ಇಲ್ಲ ಅಂತ ಹೇಳಲೇನ’ ಅಂತಾ ವಿಶ್ರಾಂತ ಮಾಸ್ತರರÀ ಐದು ವರ್ಷದ ಮೊಮ್ಮಗಳು ಒಳಬಂದು ಕೇಳಿದಾಗ, ಪೇಪರದೊಳಗಿನ ತಮ್ಮ ಫೋಟೋದ್ದು ಮೊಬೈಲದಾಗ ಫೋಟೋ ತುಗೊಳ್ಳತಿದ್ದ ಮಲ್ಲಪ್ಪ ಮಾಸ್ತರು, ಅದನ್ನು ಬಿಟ್ಟು ‘ಯಾವ ಮುದುಕಿ’ ಅನ್ನುತ್ತಾ ತಮ್ಮ ಧೋತರಾ ಸರಿಪಡಿಸಿಕೊಳ್ಳುತ್ತಾ ಹೊರಗೆ ಬಂದರು.

     ಬಂದು ನೋಡುತ್ತಾರೆ, ಆ ಮುದುಕಿ. ಮುದುಕಿಯನ್ನು ನೋಡಿದವರೆ ಒಂದ ನಮೂನಿ ತೆಲೆ ತಿರುಗಿದ ಹಾಗೆ ಆಗಿ, ನಿತ್ರಾಣದಿಂದ ಅಲ್ಲಿಯೇ ಕುಸಿದು ಕುಳಿತುಕೊಳ್ಳುತ್ತಾರೆ. ಹತ್ತಿರದಲ್ಲಿಯೇ ಇದೆಲ್ಲವನ್ನೂ ಗಮನಿಸುತ್ತಿದ್ದ ಕಿರಿಸೊಸಿ ಓಡಿ ಬಂದು ‘ಅಯ್ಯೋ ! ಮಾವಾರ ಏನಾತು’ ಅಂತಾ ಗಾಬರ್ಯಾಗಿ, ನೀರ ತಂದು ಮುಖಕ್ಕ ಚಿಮುಕಿಸಿದಳು, ಆವಾಗ ಸ್ವಲ್ಪ ಎಚ್ಚರ ಆದಾಂಗ ಆಗಿ ಸುಧಾರಿಸಿಕೊಂಡು, ತಾವು ಬಿದ್ದಿದ್ದ ಖಬರ್ ಇಲ್ಲದನ ಬಂದ ಮುದುಕಿಗಿ ‘ಇಲ್ಯಾಕ ಬಂದಿ, ನಿನಗ ಮನಿ ಯಾರ ತೋರಿಸಿದರು’ ಎಂದು ಝಬರಿಸತೊಡಗಿದರು,

      ಮಾಸ್ತರರು ಬಾಯಿ ಮಾಡುವ ಸೌಂಡಿಗಿ ಕೆಳಗಿನ ಮೇಲಿನ ಮನೆಗಳಲ್ಲಿದ್ದ ಮಾಸ್ತರರ  ಮಕ್ಕಳು ಮತ್ತು ಇಬ್ಬರು ಸೊಸೆಯಿಂದಿರು, ಮಾಸ್ತರ ಹೆಂಡತಿ, ಮೊಮ್ಮಕ್ಕಳು ಎಲ್ಲಾರು ಮೇನ್ ಗೇಟಿಗೆ ಬಂದು ಸೇರಿದರು, ಮಾಸ್ತರರ ಬಿಪಿ ಇನ್ನಷ್ಟು ಹೆಚ್ಚಾಯಿತು. ತನಗೆ ತಿಳಿದಂತೆ ಬಾಯಿ ಮಾಡುತ್ತಾ ‘ನೀ ಇನ್ನಾ ಸತ್ತಿಲ್ಲೇನ’ ಎಂದು ಜೋರು ಮಾಡುತ್ತಾ, ಮತ್ತೆ ಮೂರ್ಛೆ ಹೋಗಿ ಬಿದ್ದು ಬಿಟ್ಟರು. ಈ ಸಲಾ ಮತ್ತ ಸೊಸ್ತ್ಯಾರು ಮುಖಕ ನೀರ ಗೊಜ್ಜಿದರು. ಆದ್ರ ಮಾಸ್ತರಗÀ ಎಚ್ಚರ ಆಗಲಿಲ್ಲ,

      ಮನಿಯಾಗ ಇದ್ದ ಹಿರಿ ಮಗಾ ಓಡಿ ಬಂದ ತೆಕ್ಕಿ ಬಡಕೊಂಡ ‘ಎ..ಎಪ್ಪಾ  ಎಪ್ಪಾ’ ಎಂದು ಮ್ಯಾಲ ಕೆಳಗ ಮಾಡಿ ನೋಡಿ ‘ಈಗ ಅಪ್ಪನ ತಾಬಡ ತೋಬಡ ದವಾಖಾನಿಗಿ ಕರಕೊಂಡ ಹೋಗಬೇಕ’ ಅಂತಾ, ತಮ್ಮಗ ಕಾರ ಚಾಲೂ ಮಾಡಕ ಹೇಳಿ, ಮಾಸ್ತರನ್ನ ಎತಗೊಂಡ ದವಾಖಾನಿಗಿ ಓಡಿದರು, ಇತ್ತ ಬಂದ ಮುದಕಿ ‘ಅಯ್ಯ ಎವ್ವಾ ಮಾಸ್ತರಗ ಏನಾತು, ಎಷ್ಟ ದಿನದ ಮ್ಯಾಲ ಸಿಕ್ಕಿದ್ದ, ಈಗ ನೋಡಿದರ ಅರೆ ಹೆಣಾ ಆಗಿ ದವಾಖಾನಿಗಿ ಓಡಿಸಿಕೊಂಡ ಹ್ವಾದರು’ ಅಂತಾ ರಂಪಾಟ ಶುರುವಿಟ್ಟುಕೊಂಡು ಗಾಡಿ ಹಿಂದ ಓಡತೊಡಗಿದಳು.

     ಈ ರಂಪಾಟಕ್ಕೆ ಜಾತ್ರೆ ಸೇರಿದಂತೆ ಜನಾ ಮಾಸ್ತರ ಮನಿ ಮುಂದ ಸೇರಿ, ‘ಏನಾತು ಏನಾತು’ ಅಂತಾ ಗಾಬರಿಗೆ ಬಿದ್ದು ಕೇಳತೊಡಗಿದರು, ಎಲ್ಲಿದೋ ಒಂದ ಮುದುಕಿ ಬಂದ ಮ್ಯಾಲ ಮಾಸ್ತರರು ಬಾಯಿ ಮಾಡಿ ಬಿಪಿ ಶುಗರ್ ಜಾಸ್ತಿಯಾಗಿ, ದವಾಖಾನಿಗಿ ಒಯ್ಯದಾರ, ಈ ಮುದುಕಿ ಯಾರೋ, ಈ ಮಾಸ್ತರಿಗೆ ಏನಾಗಬೇಕೋ ಎರಡು ಗೊತ್ತಿಲ್ಲದ ಜನಾ ದಂಗಾಗಿ ನಿಂತರು, ಎಲ್ಲಿ ಮುದುಕಿ ಅಂತಾ ಹುಡುಕುವುದರೊಳಗ ಮುದುಕಿ ಮಂಗಮಾಯವಾಗಿ ಬಿಟ್ಟಿದ್ದಳು, ನೆರೆದವರಿಗೆ ಮತ್ತು ಮಲ್ಲಪ್ಪ ಮಾಸ್ತರ ಕುಟುಂಬವರ್ಗದವರಿಗೆ ಇದು ಆಶ್ಚರ್ಯದ ಸಂಕೇತವಾಗಿ ತೋರಿತು.

*


‘ಈ ಮುದುಕಿ ಮತ್ತ ಯಾಕ ಬಂತು, ಎಷ್ಟೋ ವರ್ಷದ ಮ್ಯಾಲ ಇವತ್ತ ನೋಡಾಕ ಹತ್ತಿನಿ, ಯಾರೋ ಮುದುಕಿ ಸತ್ತ ಹೋಗೇತಿ ಅಂತಾ ಹೇಳಿದ್ದರು, ಈಗ ನೋಡಿದರ ಮತ್ತ ಹ್ಯಾಂಗ ಅದಾಳ ಹಾಂಗ ಪ್ರತ್ಯಕ್ಷ ಆಗ್ಯಾಳ, ನಮಗ ಏನ ಕಾದಿದೆಯೋ, ಎವ್ವಾ, ತದಲಬಾಗಿ ಲಕ್ಕವ್ವಾ ನೀನೇ ಕಾಪಾಡು’ ಎಂದು ಮಾಸ್ತರನ ಹೆಂಡತಿ ತುಳಜವ್ವ ದೇವರ ಜಗಲಿಗಿ ಬಂದು ಕೈ ಮುಗಿದು ಅಳಾಕ ಚಾಲೂ ಮಾಡಿದಳು.

   ತುಳಜಾಬಾಯಿಯ ಇಬ್ಬರೂ ಸೊಸ್ತ್ಯಾರ ಬಂದು, ‘ಅತ್ತ್ಯಾರ ಕಾಳಜಿ ಮಾಡಬ್ಯಾಡ್ರಿ, ಮಾಮಾರನ ದವಾಖಾನಿಗಿ ಎಡ್ಮಿಟ್ ಮಾಡ್ಯಾರಂತ, ಚೆಕಪ್ ನಡದೈತಿ, ಅವ್ವಗ ಕಾಳಜಿ ಮಾಡಬ್ಯಾಡ ಹೇಳ ಅಂತಾ ಇವರ್ರು ಫೋನು ಮಾಡಿದ್ದರು’ ಎಂದು ಹಿರಿಸೊಸಿ ಹೇಳಿದಳು. ಒಂದೆಡೆ ಗಂಡನ ದವಾಖಾನಿ ಸವಾರಿ ಇನ್ನೊಂದೆಡೆ ಈ ಮುದುಕಿಯ ಆಗಮನ  ಇದರಿಂದ ತುಳಜವ್ವ ಕುಸಿದು ಹೋದಳು.

        ‘ಅತ್ಯಾರ, ಆ ಮುದುಕಿ ಯಾರ ಗೊತ್ತೈತೇನ, ಯಾಕ ಮಾಮಾರನ್ನ ಹುಡುಕಿಕೊಂಡು ಬಂದೈತಿ, ನಾನು ಈ ಮನಿಗಿ ಬಂದ ಇಷ್ಟ ವರ್ಷಾ ಆಯ್ತು, ಒಂದ ಸಲಾನೂ ಈ ಮುದುಕಿನ ನೋಡಿಲ್ಲಾ, ಈಗ ಹರ್ಯಾಗೆದ್ದು ಬಂದು ನಮ್ಮ ಮನಿ ನೆಮ್ಮದಿನ ಕೆಡಿಸಿ ಬಿಟ್ಟಳು, ಗಾಡಿ ಹಿಂದ ಓಡಿ ಹ್ವಾದಾಕಿ ಒಮ್ಮಿಗ ಮಂಗಮಾಯವಾಗಿ ಬಿಟ್ಟಳಲ್ಲ’ ಎಂದು ಹಿರಿ ಸೊಸಿ ಗಾಬರಿಯಾಗಿ ಹೇಳಿದಳು. ಮತ್ತೆ ಎಲ್ಲರ ಮುಖದಲ್ಲಿ ದೊಡ್ಡ ಪ್ರಶ್ನೆ ಮೂಡಿತು, ಈ ಮುದುಕಿ ಯಾರು, ಮಾಮಾರು ಮುದುಕಿ ನೋಡಿ ಯಾಕ ಮೂರ್ಛೆ ಹೋಗಿ ಬಿದ್ದರು, ಮತ್ತ ಮುದುಕಿ ಮಂಗಮಾಯ ಯಾಕ ಆದಳು ಎಂದು ಇಬ್ಬರೂ ಸೊಸ್ತ್ಯಾರು ಮುಖಾ ಮುಖಾ ನೋಡಿದರು.

*

    ಮಲ್ಲಪ್ಪ ಮಾಸ್ತರ ಮನಿಗಿ ಹಿರಿಸೊಸಿ ಬಂದು ಆರ ವರ್ಷ ಆಗಿತ್ತು, ಅದರ ಹಿಂದಿನ ವರ್ಷನ ಮಾಸ್ತರು ಮೂರ ಮಹಡಿದು ಮನಿ ಕಟ್ಟಿ, ಓಪನಿಂಗ್ ಮಾಡಿ ಮರು ವರ್ಷನ ಹಿರಿಯ ಮಗನ ಲಗ್ನಾ ಮನಿ ಮುಂದ ಅದ್ದೂರಿ ಮಾಡಿದ್ದರು, ಆ ಮ್ಯಾಲ ಮೂರ ವರ್ಷ ಬಿಟ್ಟ ಎರಡನೇ ಮಗನ ಲಗ್ನಾನೂ ಮಾಡಿದ್ದರು, ಮೂರನೆಯ ಮಗಾ ಡಾಕ್ಟರ್ ಕಲಿತ ಬೆಳಗಾವಿಗಿಯೊಳಗ ಪ್ರ್ಯಾಕ್ಟಿಸ್ ಮಾಡತಿದ್ದಾ, ಇನ್ನಾ ಲಗ್ನಾ ಮಾಡಿರಲಿಲ್ಲ. ಹೊಸಾ ಮನಿ ಆಗಿ ಮಾಸ್ತರು ಮೊಮ್ಮಕ್ಕಳನ್ನು ಆಡಿಸಿಕೊಂಡು ಚಿಂತಿ ಇಲ್ಲದ ಚೆಂದಾಗಿ ಇರಬೇಕಾದ್ರ , ಈ ಮುದುಕಿಯೊಂದು ಹರ್ಯಾಗೆದ್ದು ಒಕ್ಕರಿಸಿ, ಇಡೀ ಮಲ್ಲಪ್ಪ ಮಾಸ್ತರ ಮನಿಗಿ ಸಿಡಿಲ ಬಡಿದಾಂಗ ಮಾಡಿದ್ದಳು. 

    ಅತ್ತ ಮಾಸ್ತರು ದವಾಖಾನ್ಯಾಗ ಬೆಡ್ ಮ್ಯಾಲ ಮಲಗಿ ಸಕಲ ಪರೀಕ್ಷೆಗಳಿಗೆ ಅಂದರೆ ರಕ್ತ ಪರೀಕ್ಷೆ , ಮೂತ್ರ ಪರೀಕ್ಷೆ, ಈ.ಸಿ.ಜಿ. ಹೀಂಗ ತರಹೇವಾರಿ ಪರೀಕ್ಷೆಗಳು , ನಡೆದು ಕಣ್ಣ ಮ್ಯಾಲ ಮಾಡಿ ಮಲಗಿದ್ದರು, ಇತ್ತ ಮಾಸ್ತರರ ಹೆಂಡತಿ ತುಳಜವ್ವ ಬೆಡ್ ರೂಮ್ ಸೇರಿ, ನನಗ ಥಂಡಿ ಭಾಳ ಐತಿ ಅಂತಾ ದೊಡ್ಡ ಚಾದರ ಹಚಗೊಂಡ ಮಲಗಿಕೊಂಡಳು. ಸೊಸ್ತ್ಯಾರ ಮಾಡಿಕೊಟ್ಟ ಚಾ ಕುಡಿದು ಮಲಗಿದಾಕಿಗಿ ನೆನಪುಗಳು ಹಿಂದ ಹಿಂದಕ ಹೋದವು.

*

     ತುಳಜವ್ವ ಮಲ್ಲಪ್ಪ ಮಾಸ್ತರ ಕೈ ಹಿಡಿದು ಹೊಸದಾಗಿ ನಡಿಯಾಕ ಬಂದಾಗ ಕೂಡು ಕುಟುಂಬದೊಳಗ ಚೆಂದ ಮನಿತಾನ ನೋಡಕೊಂಡ ಇದ್ದಳು. ಮುಂದ ಮಾಸ್ತರಗ ದೂರದ ಹಳ್ಳಿಗಿ ವರ್ಗ ಆಗಾನ ಸ್ವತಂತ್ರ ಮನಿ ಮಾಡೋದಾತ. ಹಳ್ಳಿಯೊಳಗ ಇರಾಕ ಚಲೋ ಬಾಡಿಗಿ ಮನಿ ಇರಲಿಲ್ಲ. ಹೀಂಗಾಗಿ ಜಮಖಂಡ್ಯಾಗ ಮನಿ ನೋಡಿ ಬಂದು ಮಾಸ್ತರು, ಹಾಲ ಉಕ್ಕಿಸಿ ಹೆಂಡತಿನ ಕರಕೊಂಡ ಬಂದ ಮನಿ ಹೊಕ್ಕರು. ದಿನಾ ಸೈಕಲ್ಲಮ್ಯಾಗ ಸಾಲಿಗಿ ಹೋಗಿ ಬರತಿದ್ದರು, ತುಳಜವ್ವ ಬುತ್ತಿ ಮಾಡಿ ಕಟ್ಟತಿದ್ದಳು. ಸಣ್ಣ ಪಗಾರ, ಮಾಸ್ತರಗ ಅಂತಾದೇನ ಹೇಳಿಕೊಳ್ಳುವಷ್ಟು ಆಸ್ತಿ ಇರಲಿಲ್ಲ, ಇಲ್ಲಿ ಬಂದು, ಬಂದ ಪಗಾರದಾಗ ಚೆಂದಾಗಿ ಮನಿ ನಡೆಸಿದ್ದರು, ದೊಡ್ಡ ಹಬ್ಬ, ಕುಟುಂಬ ವರ್ಗದವರ ಮದುವಿ ಮುಂಜವಿ ಬಂದ್ರ ಎಲ್ಲೇರ ಅಟ ಸಾಲ ಮಾಡಿ ಹೋಗಬೇಕಾಗಿತ್ತು, ಹೀಂಗ ಮಾಸ್ತರದು ಆರಕ್ಕೆ ಏರದೇ, ಮೂರಕ್ಕೆ ಇಳಿಯದೇ ಸಂಸಾರ ಚೆಂದಾಗಿ ನಡೆದಿತ್ತು,

       ವರ್ಷ ತುಂಬುದರೊಳಗ ತುಳಜವ್ವ ಹೊಟ್ಟೀಲೆ ಆಗಿ ಡಿಲೆವರಿಗೆ ತನ್ನ ತವರ ಊರ ಅಥಣಿಗಿ ಹ್ವಾದಳು. ಮಾಸ್ತರ ತನ್ನ ಅಡಗಿ ತಾನ ಮಾಡಕೊಂಡ ಸಾಲಿಗಿ ಹೋಗಾಕ ಚಾಲೂ ಮಾಡಿದರು. ಸೂಟಿ ಇದ್ದಾಗ ರಾಮತೀರ್ಥ ಅರಮನಿ, ಕಡಪಟ್ಟಿ ಬಸವೇಶ್ವರ ಗುಡಿ, ಮಧುರಖಂಡಿ ಮಹಾಲಕ್ಷ್ಮಿ, ಕುಂಚನೂರ ಮಹಾದೇವನ ಗುಡಿ ಹೀಂಗ ತಿರಿಗ್ಯಾಡಿ ಹೊತ್ತ ಕಳಿತಿದ್ದರು. ಒಂದ ರವಿವಾರ ಏನ ಆತ ಅಂದ್ರ, ‘ಮಾಸ್ತರ ಮಂದಿಯೆಲ್ಲಾ ಚಿಕ್ಕಪಡಸಲಗಿಗೆ ಶ್ರಮದಾನ ಮಾಡಕ ಹೋಗುದೈತಿ, ನೀವು ತಯ್ಯಾರ ಆಗ್ರಿ, ಮಲ್ಲಪ್ಪ ಮಾಸ್ತರ’ ಅಂತಾ ತಮ್ಮ ಸಾಲಿ ಶಿಕ್ಷಕರು ಹೇಳಿದಾಗ, ರವಿವಾರ ತಯ್ಯಾರ ಆದ್ರು. ಚಿಕ್ಕಪಡಸಲಗಿ ಹತ್ತಿರ ಕೃಷ್ಣಾ ನದಿಗಿ ರೈತರು ತಮ್ಮ ಶ್ರಮದಾನದಿಂದ ಬ್ಯಾರೆಜ್ ಕಟ್ಟತಿದ್ದರು. ಇಲ್ಲಿ ವಾರಕ್ಕೊಮ್ಮಿ ಬ್ಯಾರೆ ಬ್ಯಾರೆ  ಸಂಘ ಸಂಸ್ಥೆಯವರು ಬಂದು ಶ್ರಮದಾನ ಮಾಡತಿದ್ದರು, ಜಮಖಂಡಿಯೊಳಗಿರೋ ಮಾಸ್ತರ ಮಂದೀನೂ ಒಂದ ರವಿವಾರ ಶ್ರಮದಾನ ಮಾಡಿ ಬರೋಣ ಬರ್ರೀ ಅಂತಾ ಗಾಡಿ ಮಾಡಿಕೊಂಡ ಹೋಗಿದ್ದರು.

       ಅಲ್ಲಿ ಮಾಸ್ತರ ಬಳಗದ ಅಧ್ಯಕ್ಷನ ನೇತೃತ್ವದಾಗ ಸಂಜೀತನಾ ಭಾಳ ನಿವ್ವಳಾಗಿ ಎಲ್ಲಾರು ಶ್ರಮದಾನ ಮಾಡಿದರು, ಸಂಜೀಕ ಶ್ರಮದಾನ ಮಾಡಿದ ತಮ್ಮ ಶಿಕ್ಷಕ ಬಳಗಕ್ಕ ಸಮೀಪದ ತಮ್ಮ ತ್ವಾಟದಾಗ ಬಳಗದ ಅಧ್ಯಕ್ಷ ಕೋಳಿ ಊಟದ ವ್ಯವಸ್ಥೆ ಮಾಡಿದ್ದರು. ಮತ್ತ ಯಾರರೇ ಎಣ್ಣಿ ತುಗೊಳ್ಳುವವರು ಇದ್ರ ಅವರಿಗೂ ಬ್ಯಾರೆ ವ್ಯವಸ್ಥೆ ಇತ್ತು. ಮಲ್ಲಪ್ಪ ಮಾಸ್ತರ ತನ್ನ ಜೀವಮಾನದಾಗ ಒಮ್ಮಿಯೂ ಸೆರೆ ಮೂಸ ನೋಡಿರಲಿಲ್ಲ, ಹೀಂಗಾಗಿ ಬ್ಯಾರೆನ ಕುಂತಿದ್ದರು. ಆದ್ರ ಆವತ್ತ ಏನಾತು, ‘ಹ್ಯಾಂಗೂ ಮನ್ಯಾಗ ಡೆಲೆವರಿಗಿ ಹೋಗ್ಯಾರ. ಇವತ್ತ ಇಲ್ಲೇ ತ್ವಾಟದಾಗ ವಸ್ತಿ ಇರೋಣ, ಮತ್ತ ಸ್ವಲ್ಪ ಎಣ್ಣಿ ರುಚಿ ನೋಡಿ’್ರ ಅಂತಾ ಮಾಸ್ತರರ ಆಪ್ತ ಗೆಳೆಯ ಪರಮಾನಂದ ಮಾಸ್ತರ ಒತ್ತಾಯ ಮಾಡಿದರು. ಆಪ್ತ ಗೆಳೆಯನ ಒತ್ತಾಯಕ್ಕೆ ಹಣಿಮಣಿದು ಮೊದಲ ಬಾರಿಗೆ ಮಲ್ಲಪ್ಪ ಮಾಸ್ತರು ಎಣ್ಣಿಯ ರುಚಿ ನೋಡಿದರು.

         ರಾತ್ರಿ ಹೊತ್ತು ಬೆಳ್ಳನ ಬೆಳದಿಂಗಳದಾಗ ಚೆಂದಾಗಿ ಹಾಡ ಹೇಳಕೋತ ಜಗವ ಮರೆತವರ ಹಾಗೆ ಅಲೋಕದಲ್ಲಿ ವಿವಹರಿಸಿದರು. ಮಲ್ಲಪ್ಪ ಮಾಸ್ತರು ಒಂದಿಷ್ಟು ಕುಡದಿರಲಿಲ್ಲ, ಹೊಟ್ಟೆ ತೊಳೆಸಿದಂತಾಗಿ, ಕುಡಿದಿದ್ದನ್ನೇಲ್ಲಾ ಅಫೂಟ ಕಕ್ಕಿದರು, ಯಾರೋ ಮಾಸ್ತರ ಜೋರ ಬಾಯಿ ಮಾಡಿದರು, ‘ಈ ಮಲ್ಲಪ್ಪ ಮಾಸ್ತರಗ ಕುಡಿಯೋ ರೂಢಾ ಇಲ್ಲಾ, ಇವರಿಗ್ಯಾಕ ಕುಡಸಾಕ ಹೋಗಿರಿ’ ಎಂದು ತರಾಟೆಗೆ ತೆಗೆದುಕೊಂಡರು. ಯಾರು ಕುಡಿದವರು, ಯಾರ ಕುಡಿಯಲಾರದವರು ತಮ್ಮ ಸಾಮಥ್ರ್ಯಕ್ಕೆ ತಕ್ಕಷ್ಟು ಊಟ ಮಾಡಿ ಹೋಗುವವರು ಹ್ವಾದರು, ಪರಮಾನಂದ ಮಾಸ್ತರರೊಂದಿಗೆ ನಿತ್ರಾಣವಾಗಿದ್ದ ಮಲ್ಲಪ್ಪ ಮಾಸ್ತರು ತ್ವಾಟದಲ್ಲಿಯೇ ವಸ್ತಿ ಉಳಿದರು. 

       ಮರುದಿನದಿಂದ ಪ್ಯಾಟಿಯಲ್ಲಿ ಎಣ್ಣಿ ಗೆಳೆಯರ ಸ್ನೇಹ ಜಾಸ್ತಿಯಾಗಿ ಮಾಸ್ತರು ಕುಡಿಯುವದನ್ನು ಮತ್ತ ಇಸ್ಪೀಟ್ ಆಡುವುದನ್ನು ಚಾಲೂ ಮಾಡಿದರು. ಆದ್ರ ಶಾಲಿಗಿ ಹೋಗಬೇಕಾದರ ಶುಭ್ರ ಬಿಳಿ ಅಂಗಿ, ಶುಭ್ರ ಧೋತಾರ ಉಟಗೊಂಡ ಹ್ವಾಂಟ್ರ ಅಂದ್ರ  ಊರಾನ ಮಂದೀ ಸಾಕ್ಷಾತ್ ದೇವರ ಕಂಡಾಂಗ ಆಗಿ ನಮಸ್ಕಾರ ಮಾಡತಿದ್ದರು, ಈ ಮಾಸ್ತರು ಕುಡಿತಾನ, ಇಸ್ಪೇಟ್ ಆಡತಾನ ಅನ್ನುವುದನ್ನು ನಂಬಲಾರದಷ್ಟು ತಮ್ಮ ಚಟದ ಗುಟ್ಟನ್ನು ಮುಚ್ಚಿಟ್ಟಿದ್ದರು. ಪಾಠ ಹೇಳುವುದರಲ್ಲಿ, ಮಕ್ಕಳಿಗೆ ಹಾಡು ನೃತ್ಯ ಕಲಿಸುವುದರಲ್ಲಿ ಎತ್ತಿದ ಕೈ, ಶಾಲೆಗಾಗಿ ನಾನು ಏನಾದರೂ ಅನ್ಯಾಯ ಮಾಡಿದರೇ, ಆವತ್ತೇ ನನಗೆ ಸಾವು ಬರಲಿ ಅಂತಾ ಪಂಡರಪುರ ವಿಠ್ಠಲನ ಮೇಲೆ ಆಣೆ ಮಾಡಿದ್ದರು, ಮತ್ತೆ ಅದೇ ರೀತಿಯಿಂದ ಊರಲ್ಲಿ, ಶಾಲೆಯಲ್ಲಿ ನಡೆದುಕೊಂಡಿದ್ದರು, ಹೀಗಾಗಿ ಮಲ್ಲಪ್ಪ ಮಾಸ್ತರ ಅಂದ್ರ ಊರಲ್ಲಿ ಒಂದು ಬಗೆಯ ಗೌರವ, ಮರ್ಯಾದೆ, 

        ಊರಲ್ಲಿ ಯಾವುದೇ ಕಾರ್ಯಕ್ರಮವಿರಲಿ, ಹೆಣ್ಣ ಗಂಡ ನೋಡಲಿಕ್ಕೆ ಹೋಗುವುದ ಇರಲಿ, ಮಲ್ಲಪ್ಪ ಮಾಸ್ತರರನ್ನು ಕರೆದುಕೊಂಡೆ ಹೋಗುತ್ತಿದ್ದರು, ಎಷ್ಟೋ ಮದುವೆಗಳನ್ನು, ಹೆಣ್ಣು ಗಂಡಿನ ಮಾತುಕಥಿಗಳನ್ನು ತಮ್ಮ ಮಾತಿನಿಂದ ಈ ಮಾಸ್ತರು ನಡೆಸಿ ಇಲ್ಲವೇ ಗೆಲ್ಲಿಸಿಕೊಡುತ್ತಿದ್ದರು, ಒಟ್ಟಿನಲ್ಲಿ ಸಾಲಿ ಮಲ್ಲಪ್ಪ ಮಾಸ್ತರು ಈ ಹಳ್ಳಿಗೆ ದೇವತಾ ಮನುಷ್ಯರಾಗಿದ್ದರು. ಡಿಲೆವರಿಗೆ ಹೋಗಿದ್ದ ತುಳಜವ್ವ ಅಥಣಿ ದವಾಖಾನಿಯೊಳಗ ಗಂಡ ಮಗುವಿಗಿ ಜನ್ಮಕೊಟ್ಟಾಳ, ತಾಯಿ ಮಗಾ ಆರಾಮ ಅದಾರ ಅಂತಾ ಮಾವನ ಮನೆಯಿಂದ ಮಾಸ್ತರರಿಗೆ ಪತ್ರ ಬಂತು. ಐದ ತಿಂಗಳ ತುಂಬಿದಮ್ಯಾಲ ಕೂಸಿನೊಂದಿಗೆ ಮಲ್ಲಪ್ಪ ಮಾಸ್ತರು ಅಥಣಿಯಿಂದ ಹೆಂಡತಿಯನ್ನು ಕರೆದುಕೊಂಡು ಬಂದರು. ಮತ್ತ ಹೊಸ ಜೀವನಾ ಚಾಲೂ ಆತು, ನೋಡ ನೋಡತನ ಮೂರ ಗಂಡ ಮಕ್ಕಳಾದವು, ಪ್ಯಾಟ್ಯಾಗ ಮನಿ, ಹಳ್ಳ್ಯಾಗ ಡ್ಯೂಟಿ ಮಾಡಿಕೊಂಡು ಒಂದ ಹಳ್ಳ್ಯಾಗ ಹತ್ತವರ್ಷ ಕಳೆದಿದ್ದರು.

    ಈ ನಡುವೆ ಮಲ್ಲಪ್ಪ ಮಾಸ್ತರು ಒಂದ ದಿನಾ ಸಂಜೀಮುಂದ ಸಾಲಿ ಮುಗಿಸಿ  ತಮ್ಮ ಬಾಡಿಗಿ ಮನಿಗಿ ಬಂದು ಮೂಲ್ಯಾಗ ಒಂದ ಗಂಟ ಮುಚ್ಚಿಟ್ಟಿದ್ದರು, ರಾತ್ರಿ ಮಕ್ಕಳು ಮಲಗಿದ ಮ್ಯಾಲ ಹೆಂಡತಿನ ಕರೆದು, ಅವಳ ಮುಂದ ಗಂಟ ಬಿಚ್ಚಿದರು, ಅಲ್ಲಿ ಕಂಡದ್ದು ಥರಥರದ ಬಂಗಾರದ ಆಭರಣಗಳು, ಪೆಂಡಿ ಕಟ್ಟಿದ ನೋಟಗಳು.  ತುಳಜವ್ವ ನೋಡಿ ಗಾಬರಿ ಆಗಿ ‘ಅಯ್ಯ ಶಿವನ ಎಲ್ಲಿಂದ ತಂದೀರಿ ಇವನ್ನ, ತುಡುಗ ಗಿಡಗ ಮಾಡಿರೇನ, ಎಷ್ಟೊಂದು ಬಂಗಾರ ಸಾಮಾನ ಅದಾವು, ಮತ್ತ ನೋಟ್ ಎಷ್ಟ ಅದಾವು, ನಿಮಗ ಇವೆಲ್ಲಾ ಎಲ್ಲಿ ಸಿಕ್ಕವು’ ಎಂದು ಮೈ ಬೆವರಿ ಗಾಬರಿಯಾಗಿ ಕೇಳಿದಳು, ಮಾಸ್ತರು ಇವೆಲ್ಲಾ ಗಟ್ಟಿ ಬಂಗಾರ, ಏನ ಇಲ್ಲವೆಂದರೂ ಒಂದ ಮೂವತ್ತ, ನಲವತ್ತ ತೊಲಿ ಅದಾವು. ಮತ್ತ ಈ ರೂಪಾಯಿ ಒಂದ ಹತ್ತಿಪ್ಪತ್ತ ಸಾವಿರ ಅದಾವು, ಮಾಸ್ತರ ಹೇಳು ಲೆಕ್ಕಕ್ಕ ಇವತ್ತಿನ ದಿನಕ್ಕ ಒಂದ ಲಕ್ಷ ಅಂದ್ರ ಒಂದ ಕೋಟಿ ಇದ್ದಾಂಗ, ಎಂದು ವಿವಹರಿಸಿದರು.ಬ ತುಳಜವ್ವನ ತೆರೆದ ಬಾಯಿ ತೆರದಾಂಗ ಇತ್ತು.

      ಮಲ್ಲಪ್ಪ ಮಾಸ್ತರಿಗೆ ಗಂಟ ಸಿಗುವುದಕ್ಕ ಮತ್ತ ಹೆಡ್ ಮಾಸ್ತರ ಆಗಿ ಬ್ಯಾರೆ ಊರಿಗೆ ವರ್ಗಾವಣೆಯಾಗುವುದಕ್ಕ ಸರಿ ಹೋಯಿತು. ಊರಲ್ಲಿ ಜನಪ್ರಿಯರಾಗಿದ್ದ ಮಾಸ್ತರು ಈ ಸಾಲಿಯಿಂದ ಬಿಡುಗಡೆಯಾಗಿ ಬ್ಯಾರೆ ಊರಿಗಿ ಹೋಗಬೇಕಾದರ ಊರಾನ ಮಂದಿ ಕಣ್ಣೀರ ಹಾಕಿದರು, ಎಂತಾ ಚಲೋ ಮಲ್ಲಪ್ಪ ಮಾಸ್ತರ ಎಂದು ಬಿಳ್ಕೊಟ್ಟಿದ್ದರು. ಅಲ್ಲಿಂದ ಬ್ಯಾರೆ ಹಳ್ಳ್ಯಾಗ ಹತ್ತ ವರ್ಷ ಕಳೆದು, ಮುಂದ, ರಿಟಾಯರ್ಡ ಆಗಿ ಈ ಸಿಟಿಯೊಳಗ ಮೂರ ಮಹಡಿ ಮನಿ ಕಟ್ಟಿ, ಇಬ್ಬರ ಮಕ್ಕಳ ಲಗ್ನಾ ಮಾಡಿ , ಮೊಮ್ಮಕ್ಕಳ ಜೋಡಿ ಚೆಂದಾಗಿ ಇರತಿರಬೇಕಾದರ ಈ ಮುದುಕಿ ಸಲುವಾಗಿ ಇವತ್ತು ದವಾಖಾನಿ ಸೇರಿದ್ದರು.

*

      ಹಿಂದಿನ ನೆನಪುಗಳೊಂದಿಗೆ ಬೆಡ್ ರೂಮ್‍ದಲ್ಲಿ ಮಲಗಿದ್ದ ತುಳಜಾಬಾಯಿಗೆ ಮೊಮ್ಮಗಳು ಓಡಿ ಬಂದು ‘ಅಜ್ಜೀ’ ಎಂದು ಕೂಗಿದಾಗ ನೆನಪಿನ ಲೋಕದಿಂದ ವಾಸ್ತವಕ್ಕೆ ಬಂದರು. ಕಿರಿ ಸೊಸಿ ಬಂದು, ಅತ್ಯಾರ ಈ ಬಿಸಿ ನೀರ ಕುಡಿರಿ, ಅಡಗಿ ತಯ್ಯಾರ ಆಗೇತಿ, ಮಾವಾರು ಸ್ವಲ್ಪ ಆರಾಮ ಆಗ್ಯಾರ ಅಂತಾ, ಮತ್ತ ಏನೇನೋ ಪರೀಕ್ಷೆ ಮಾಡ್ಯಾರಲ್ಲ, ಅವತರದು ರಿಜೆಲ್ಟ್ ಬರಬೇಕಂತ , ಸಂಜೀ ಮುಂದ ಡಾಕ್ಟರು ಡಿಚಾರ್ಜ ಬಗ್ಗೆ ಹೇಳತಾರಂತ, ಇವರ ಬಂದು ಬುತ್ತಿ ಒಯ್ಯತೀನಿ ಅಂದಾರ, ನೀವಟ ಊಟಾ ಮಾಡ ಏಳ್ರೀ, ಇವರಿಗಿ ಬರುವಾಗ ಥಂಡಿ ಜ್ವರಾ ಕಡಿಮಿ ಆಗೋ ಗುಳಿಗಿ ತರಾಕ ಹೇಳಿನಿ’ ಎಂದು ಅತ್ತೆಗೆ ಎಂದಿಲ್ಲದ ಪ್ರೀತಿ ತೋರಿ ಉಪಚರಿಸಿದಳು.

       ಹೌದು ಇಬ್ಬರೂ ಸೊಸ್ತ್ಯಾರು ಅತ್ತೆ ಮಾವರನ್ನು ಅಷ್ಟಾಗಿ ಸೇರತಿರಲಿಲ್ಲ, ಮನೆಯೊಂದು ಮೂರ ಬಾಗಿಲಾಗಿತ್ತು, ಮಾಸ್ತರಿಗೆ ತುಳಜವ್ವನ ಅಡಗಿ ಮಾಡಿ ಹಾಕತಿದ್ದಳು, ತಾವ ಮಾಡಿ ತಾವ ತಿಂತಿದ್ದರು. ಮತ್ತ ಸೋಸ್ತ್ಯರು ತಮ್ಮದ ತಾವ ಮಾಡಿ ಉಣತಿದ್ದರು. ಇದ ಹೊರಗಿನ ಮಂದಿಗಿ ಕಾಣತಿರಲಿಲ್ಲ, ಆದ್ರ ಒಳಗಿನ ಹುಳುಕ ಮುಚ್ಚಿಕೊಂಡು ಮಲ್ಲಪ್ಪ ಮಾಸ್ತರು ಹೊರಗ ದೊಡ್ಡ ಫೋಜು ಕೊಡತಿದ್ದರು, ರಿಟಾಯರ್ಡ ಆದ ಮ್ಯಾಲ ಒಂದಿಷ್ಟ ಕವಿತಾ ಬರದು ದೊಡ್ಡ ಸಾಹಿತಿಯಾಗಿದ್ದರು, ಮತ್ತ ಮಾತಿನ್ಯಾಗ ಹೊಟ್ಟ್ಯಾನ ಹಳ್ಳಾ ಕರಗುವಾಂಗ ಮಾತಾಡೋ ಕಲೆ ಕರಗತವಾಗಿತ್ತು, ಹೀಂಗಾಗಿ ಚಲೋ ಭಾಷಣಾ ಮಾಡತಿದ್ದರು, 

     ಯಾವುದರೇ ಕಾರ್ಯಕ್ರಮ ನಡೆದಿದ್ದರೆ ಅಲ್ಲಿ ತಪ್ಪದೇ  ಉದ್ಘಾಟನಾ ಸಮಾರಂಭದ ದೀಪಾ ಬೆಳಗಿಸೋ ವ್ಯಾಳೆದಾಗ ಹಾಜರ್ ಆಗತಿದ್ದರು.  ಉದ್ಘಾಟನಾ ಸಮಾರಂಭವಿದ್ದರ ಇವರು ಮೊದಲ ಮೇಣದಬತ್ತಿ ಮತ್ತ ಕಡ್ಡಿಪಟ್ನ ತುಗೊಂಡ ದೂರ ನಿಲ್ಲತಿದ್ದರು, ಈಗ ಗಣ್ಯರಿಂದ ದೀಪ ಬೆಳಗಿಸುವುದರಿಂದ ಸಮಾರಂಭದ ಉದ್ಘಾಟನೆ ಎಂದಾಗ, ಎಲ್ಲಾರೂ ಮೇಣದ ಬತ್ತಿ ಎಲ್ಲೈತಿ ಅಂತಾ ಹುಡುಕಾಡುವುದರೊಳಗ, ಇಲ್ಲಿ ಐತೆಂತ ದೀಪಾ ಹಚಗೊಂಡ ಬಂದ ಗಣ್ಯರ ಕೈಯಾಗ ಕೊಟ್ಟು, ಅಲ್ಲೇ ನಿಲ್ಲಾವರು. ಎದುರಿಗಿದ್ದ ಕ್ಯಾಮರಾಮೆನ್‍ಗಳ ಕಡೆಗೆ ಮುಖಾ ಮಾಡಿ ಮೂವತ್ತೆರಡು ಹಲ್ಲ ತಕ್ಕೊಂಡ ನಿಲ್ಲಾವರು, ಹ್ಯಾಂಗೂ ನಾನು ಫೊಟೋದಾಗ ಬಂದೀನಿ ಅನ್ನೋ ಖುಷಿಯೊಳಗ, ಯಾವಾಗ ಬೆಳಗ ಹರಿದೀತು, ಯಾವಾಗ ಎಲ್ಲಾ ಪೇಪರ ನೋಡೇನಿ, ಅಂತಾ ಪೇಪರ ಕಾಯತಿದ್ದರು. ಅವರು ಬಯಸಿದಾಂಗ ಗಣ್ಯರ ಜೋಡಿ ಇವರದು ಫೊಟೋ ಜಗತ್ ಜಾಹೀರ ಆಗತಿತ್ತು. ಎಲ್ಲಾ ಪೇಪರು ಮುಂದ ಹರವಿಕೊಂಡು ತಮ್ಮ ಮೊಬೈಲದಾಗ ತಮ್ಮ ಚಿತ್ರ ವರದಿ ಪೋಟೋ ತಕ್ಕೊಂಡ ತಮ್ಮ ಫೇಸ್ಬುಕ್ಕು ಮತ್ತ ವಾಟ್ಸಾಫಗ್ರುಫ್‍ಗಳಿಗೆ ಬಿಡತಿದ್ದರು, ಸಂಜೀತನಾ ಲೈಕು ಕಾಮೆಂಟು ಕಾಯುತ್ತಾ ಹೊತ್ತಗಳಿತಿದ್ದರು, ಮುಂಜ್ಯಾನೆದ್ದ ಇಂತಾ ಪೋಟೋ ತೆಗಿಯುವ ವ್ಯಾಳೆದಾಗ ಈ ದಿನ ಆ ಮುದುಕಿಯ ಆಗಮನವಾಗಿ ಮಲ್ಲಪ್ಪ ಮಾಸ್ತರು ಈ ದಾವಾಖಾನಿ ಸೇರುವಂಗ ಆಗಿತ್ತು.

*

    ಎಲ್ಲಾರೂ ತಿಳಿದಾಂಗ ಮುದುಕಿಯೇನು ಮಂಗಮಾಯವಾಗಿರಲಿಲ್ಲ. ಆದ್ರ ಮುದುಕಿಯನ್ನು ಯಾರಿಗೂ ಕಾಣಲಾರದಾಂಗ ಒಂದ ಹುಡುಗಿ ಸ್ಕೂಟಿ ಮ್ಯಾಲ ಕುಂಡರಿಸಿಕೊಂಡ ಪರಾರಿಯಾಗಿದ್ದಳು, ಮಲ್ಲಪ್ಪ ಮಾಸ್ತರ ಮನಿ ಮುಂದ ಸುಖಾಂತ್ಯವಾಗಿ ಪ್ರಸಂಗ ಮುಗಿಯಬಹುದು ಅಂತಾ ಬಂದಾಕಿದು, ಜೋರ ರಾದ್ದಾಂತ ನಡೆದು , ಜಾತ್ರಿ ಸೇರಿದಾಂಗ ಜನಾ ಸೇರಿದ ಮ್ಯಾಲ, ಮುದುಕಿನ ಕರಕೊಂಡು ಜೋರ ಸ್ಕೂಟಿ ಚಾಲೂ ಮಾಡಿಕೊಂಡು ಹುಡುಗಿ ಕುಂಬಾರಹಳ್ಳದ ದಾರಿ ಹಿಡಿದ ಹಿರಿಹೊಳಿ ದಾಟಿ , ತಮ್ಮ ಹಳ್ಳಿ ಸೇರಿದ್ದಳು. 

     ಈ ಹಳ್ಯಾಗೂ ಈ ಮುದುಕಿ ಈ ಹುಡುಗಿ ಎಲ್ಲಿಗಿ ಹೋಗಿ ಬಂದ್ರು ಅಂತಾ ಒಟ್ಟ ಗೊತ್ತ ಮಾಡಿಕೊಟ್ಟಿರಲಿಲ್ಲ. ಆದ್ರ ಈ ಹುಡುಗಿ ಬ್ಯಾರೆ ಯಾರೂ ಆಗಿರಲಿಲ್ಲ, ಈ ಮುದುಕಿ ಮೊಮ್ಮಗಳ ಆಗಿದ್ದಳು, ಮುದುಕಿಯ ಒಬ್ಬಾಕಿನ ಮಗಳನ್ನು ಚಿಕ್ಕಲಕಿಗಿ ಕೊಟ್ಟಿದ್ದರು. ಆಕಿ ಮೊದಲ ಹೆರಿಗೆಯೊಳಗ ಈ ಕೂಸಿನ್ನ ಭೂಮಿಗೆ ಬಿಟ್ಟು  ಆಕಾಶ ಸೇರಿದ್ದಳು. ಮಗಳ ಗಂಡನ ಮನಿಯಾವರು ನಿಮ್ಮ ಮಗಳ ಸತ್ತ ಹ್ವಾದ ಮ್ಯಾಲ ಈ ಪಾಪಿ ಅಪಶಕುನದ ಕೂಸ ನಮಗ ಬ್ಯಾಡ ಅಂತಾ ಮುದಕಿ ಹಿಂದ ಕೊಟ್ಟ ಕಳಿಸಿದ್ದರು, ಇದ ಮುದುಕಿ ಕೂಸಿನ ಹೀಂಗ ಬೆಳಸಿದಳಲ್ಲಾ ,ಯಾವುದಕ್ಕೂ ಕಡಿಮೆ ಇಲ್ಲದಾಂಗ ಬೆಳೆಸಿ ಸಾಲಿ ಕಲಿಸಿ ಶ್ಯಾಣ್ಯಾ ಮಾಡಿದ್ದಳು, ಬಾದಾಮಿಯೊಳಗ ನರ್ಸ ಕೋರ್ಸ ಮುಗಿಸಿಕೊಂಡು ಬಂದಿದ್ದಳು, ನಾಳಿ ದಿವಸ ಜಮಖಂಡಿ ಹೊಸಾ ದವಾಖಾನಿಯೊಳಗ ನರ್ಸ ಆಗಿ ನೌಕರಿ ಚಾಲೂ ಮಾಡಾಕಿ ಇದ್ದಳು.

*

       ಇವತ್ತು ಮಲ್ಲಪ್ಪ ಮಾಸ್ತರರು ರಿಪೋರ್ಟ ಎಲ್ಲಾ ಬಂದಿದ್ದವು, ಮಾಸ್ತರಿಗೆ ಸಣ್ಣ ಅಪರೇಷನ್ ಮಾಡಿ ಆರಾಮ ಮಾಡಿ ಕಳಿಸತೇವು, ವಾರೊಪ್ಪತ್ತು ಇಲ್ಲೇ ದವಾಖಾನ್ಯಾಗ ಇರಬೇಕಂತ ಹೇಳಿದ್ದರು. ಇದು ಮಾಸ್ತರ ಮಕ್ಕಳಿಗೆ ಮತ್ತು ಸೊಸ್ತ್ಯಾರಿಗೆ ಪೀಕಲಾಟಕ್ಕಿಟ್ಟುಕೊಂಡಿತು, ಅವರು ಕೈ ಚೆಲ್ಲಿ ನಮಗ ನೋಡೋದು ಆಗುದಿಲ್ಲ ಅಂದ್ರು. ಅದಕ್ಕ ಒಂದ ಕಾರಣವಿತ್ತು, ಮಲ್ಲಪ್ಪ ಮಾಸ್ತರರು ಹದಿನೈದ ವರ್ಷಗಳ ಹಿಂದ ಏನ ಗಂಟ ಸಿಕ್ಕಿತ್ತಲ್ಲಾ ಆ ಗಂಟನ್ಯಾಗಿರೋ ಡಜನ್‍ಗಟ್ಟಲೇ ಬಂಗಾರ ಆಭರಣಗಳನ್ನು ಬ್ಯಾಂಕಿನ ಲಾಕರ್‍ದಾಗ ಇಟ್ಟಿದ್ದರು, ಪ್ರತಿ ವರ್ಷ ದೀಪಾವಳಿಗಿ ಬಿಡಿಸಿಕೊಂಡು ಬಂದು ಲಕ್ಷ್ಮೀ ಪೂಜೆಗೆ ಇಡುತ್ತಿದ್ದರು. ಪೂಜೆ ಮುಗಿದ ಮ್ಯಾಲ ಮತ್ತ ಹ್ಯಾಂಗಿತ್ತ ಹಾಂಗ ಲಾಕರ್‍ದಾಗ ಇಟ್ಟ ಬರತಿದ್ದರು, ಹೊಸದಾಗಿ ನಡಿಯಾಕ ಬಂದ ಸೊಸ್ತ್ಯಾರ ಕಣ್ಣ ಈ ಆಭರಣಗಳ ಮ್ಯಾಲ ಬಿದ್ದಿತ್ತು. ತಮ್ಮ ಹೆಂಡತಿ ತುಳಜವ್ವನನ್ನೂ  ಸೇರಿ ಮಾಸ್ತರು ಈ ಆಭರಣಗಳನ್ನು ಯಾರಿಗೂ ಧರಿಸಲಿಕ್ಕೆ ಕೊಟ್ಟಿರಲಿಲ್ಲ,

        ಒಮ್ಮಿ ಹಿರಿ ಸೊಸಿ ‘ನಮ್ಮ ತಮ್ಮನ ಲಗ್ನ ಮುಧೋಳ ಹೇಮರಡ್ಡಿ ಮಲ್ಲಮ್ಮನ ಕಲ್ಯಾಣ ಮಂಟಪದಾಗ ಐತಿ ನಮ್ಮ ಮಂದಿ ಮೈತುಂಬ ಬಂಗಾರ ಹಾಕ್ಕೊಂಡ ಬರ್ತಾರ ಮಾವಾರ ಲಾಕರ್‍ದಾನ ಬಂಗಾರ ಬಿಡಿಸಿಕೊಂಡ ಬರ್ರೀ, ನಾ ಹಾಕ್ಕೊಂಡ ಲಗ್ನಕ್ಕ ಹೋಗತೇನಿ’ ಅಂದಿದ್ದಳು, ಮಾಸ್ತರು ಸಿಟ್ಟಾಗಿ ‘ಯಾರಿಗೂ ಆ ಆಭರಣ ಮುಟ್ಟಿಸಿ ಕೊಡೊದಿಲ್ಲಾ ಸುಮ್ಮನ ಆಸೆ ಇಟಗೋಬ್ಯಾಡ್ರಿ’ ಎಂದು ಬೈದಿದ್ದರು, ‘ಇಲ್ಲಾ ನಾ ಮದುವಿ ಮುಗದ ಮ್ಯಾಲ ಹ್ಯಾಂಗ ಐತಿ ಹಾಂಗ ತಂದ ಕೊಡತಿನಿ’ ಅಂದ್ರು ಮಾಸ್ತರು ಕಡ್ಡಿ ಮುರದಂಗ ಹೇಳಿಬಿಟ್ಟಿದ್ದರು ‘ಅದರÀ ಒಂದ ಗುಂಜಿ ಮೊದಲ ಮಾಡಿ ಏನೂ ಕೊಡೊದಿಲ್ಲಾ, ತೊಟಗೊಳ್ಳಾಕು ಕೊಡೊದಿಲ್ಲ’ ಅಂತಾ ನಿಷ್ಟುರವಾಗಿ ಹೇಳಿದ್ದರು, ಮಾಸ್ತರ ಗುಣಾ ಗೊತ್ತಿದ್ದ ತುಳಜಾಬಾಯಿ ಸುಮ್ಮನಿದ್ದಳು. ಆದ್ರ ಸೊಸ್ತ್ಯಾರ ಯಾಕ ಕೇಳತಾರು ಇಡೀ ದಿನಾ ರಂಪಾಟ ಮಾಡಿ ದೊಡ್ಡ ರಾದ್ದಾಂತ ಮಾಡಿದರು. ಮುಧೋಳದಾಗ ತನ್ನ ತಮ್ಮನ ಲಗ್ನಾ ಮುಗಿಸಿಬಂದ ಹಿರಿಸೊಸಿ ಮನಿಗಿ ಬಂದು ಬ್ಯಾರೆ ಒಲಿ ಹೂಡಿದಳು. ಇದನ್ನ ನೋಡಿದ ಕಿರಿ ಸೊಸಿನೂ ಬ್ಯಾರೆ ಒಲಿ ಹೂಡಿದಳು, ಮನಿ ಒಂದು ಮೂರ ಒಲಿ ಆಯ್ತು. ಒಂದ ಮನಿಯಾಗ ಇದ್ರು ಬ್ಯಾರೆ ಮಾಡಕೊಂಡು ಉಣ್ಣುದಾತ ಇದು ಐದಾರು ವರ್ಷಗಳಿಂದ ನಡೆದಿತ್ತು. 

*

      ವಾರ ಕಾಲ ಮಾವಾರ ಚಾಕ್ರಿ ಮಾಡಲು ಸೊಸೆಯಂದಿರು ನಿರಾಕರಿಸಿದ್ದರು, ಅವರಲ್ಲಿ ಬಂಗಾರದ ಆಭರಣಗಳ ಆಸೆ ಜೀವಂತವಿತ್ತು. ಗಂಡಂದಿರು ಅಸಹಾಯಕರಾದರು. ಯಾವಾಗ ಮಕ್ಕಳು ಸೊಸ್ತ್ಯಾರು ನೋಡುವದಿಲ್ಲ ಎಂದರೋ ಬೆಳಗಾವಿಯಲ್ಲಿ ಪ್ರ್ಯಾಕ್ಟಿಸ್ ಮಾಡುತ್ತಿದ್ದ ಕಿರಿಯ ಮಗನನ್ನು ಕರೆಸಿಕೊಂಡರು. ಮರುದಿನ ಇದೇ ದವಾಖಾನಿಗಿ ಡಾಕ್ಟರ್‍ಗೆ ಹೇಳಿ ಇಲ್ಲಿಯೇ ಪ್ರ್ಯಾಕ್ಟಿಸ್ ಗೆ ಕಿರಿಮಗಾ ಸೇರಿಕೊಂಡು ಅಪ್ಪನ ಆರೈಕೆ ಮಾಡತೊಡಗಿದನು. ಇದೇ ಹೊತ್ತಿಗೆ ಇವತ್ತೇ ಈ ಮುದುಕಿಯ ಮೊಮ್ಮಗಳು ಇಲ್ಲಿ ನರ್ಶ ಆಗಿ ಸೇರಿದ್ದಳು. ಈಗ ಮಾಸ್ತರ ಚಿಂತಿ ಕಡೀತು ತುಳಜವ್ವ ಆರಾಮ ಆಗಿ ಮಾಸ್ತರ ನೋಡು ಸಲುವಾಗಿ ದವಾಖಾನಿಯಲ್ಲಿ ಉಳಿದಳು, ಹ್ಯಾಂಗೂ ಮಗಾ ನೋಡಾಕ ಇದ್ದಾ, ಅಷ್ಟ ಅಲ್ಲಾ ಹೊಸದಾಗಿ ನರ್ಸ ಹುದ್ದೆ ಸೇರಿದ್ದ ಹುಡುಗಿಗೆಯನ್ನು ಹೊಸ ಡಾಕ್ಟರ್ ಕೈಕೆಳಗೆ ಕೆಲಸ ಮಾಡಲು ಬಿಟ್ಟಿದ್ದರು. 

       ನೋಡ ನೋಡುತ್ತಿರುವಂತೆ ಹೊಸ ನರ್ಸ ಹುಡುಗಿಯ ಕೈಗುಣದಿಂದ ಅವಳ ಕಾಳಜಿ ಕಕ್ಕುಲಾತಿಯಿಂದ ಮಾಸ್ತರು ಆರಾಮವಾದರು, ಮೊದಲಿನಂತೆ ಲವಲವಿಕೆಯಿಂದ ಕೂಡಿದರು. ಅವಳು ಮನೆಯ ಒಬ್ಬ ಸದಸ್ಯಳಂತೆ ಕಂಡು ಬಂದಳು, ಅಷ್ಟು ಆತ್ಮೀಯತೆ ಮಾಸ್ತರಲ್ಲಿ ಮತ್ತು ತುಳಜವ್ವನಲ್ಲಿ ಬೆಳೆಯಿತು. ಅಷ್ಟೇ ಅಲ್ಲಾ ನಮಗ ಕಿರಿಯ ಮಗನಿಗೆ ಇವಳು ತಕ್ಕುದಾದÀ ಹೆಂಡತಿಯಾಗ್ತಾಳೆ ಅಂತಾ ಮಾತನಾಡಿಕೊಂಡರು, ಕಿರಿಯ ಮಗನೂ ಅಷ್ಟೇ ,ಅವಳ ಕಾರ್ಯ ಕಂಡು ,ತಮ್ಮ ತಂದೆ ತಾಯಿಯರನ್ನು ಕಾಣುವ ಪ್ರೀತಿ ಕಂಡು ಅವಳನ್ನು ಮೆಚ್ಚಿದ್ದನು, ಅವಳಲ್ಲೂ ಈ ಕುಟುಂಬ ಸೇರಬೇಕೆಂಬ ತವಕವಿತ್ತು.

*

     ಮೊಮ್ಮಗಳು ಊರಿಗೆ ಹೋಗಿ ತನ್ನ ಅಜ್ಜಿಗೆ ಮತ್ತ ಊರ ಮಂದಿಗೆ ಹೊಸದಾಗಿ ಕೆಲಸ ಸಿಕ್ಕಿದ್ದಕ್ಕಾಗಿ ಫೇಡೆ ಹಂಚಿದಳು. ಮತ್ತ ತನ್ನ ಅಜ್ಜಿಯ ಮುಂದ ಮಾಸ್ತರರ ಗುಣಗಾನ ಮಾಡಿದಳು .ಇದು ಅಜ್ಜಿಗೆ ಆಶ್ಚ್ಯರ್ಯದ ಸಂಕೇತವಾಗಿ ತೋರಿತು. ಮೊಮ್ಮಗಳನ್ನ ಮುದ್ದು ಮಾಡಿ, ಅವಳಿಗೆ ಬೇಕಾದ್ದು ಉಣಿಸಿ, ತಿಣಿಸಿ ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಒಂದೆರಡು ಕಥೆ ಹೇಳುವ ಹೊತ್ತಿಗೆ ಅಜ್ಜಿಯ ತೊಡೆಯ ಮೇಲೆ ನಿದ್ರೆಗೆ ಜಾರಿದ್ದಳು.

        ಮೊಮ್ಮಗಳು ನಿದ್ರೆಗೆ ಜಾರಿದಾಗ ಈ ಮುದುಕಿಯೂ ತನ್ನ ಹಿಂದಿನ ನೆನಪುಗಳಿಗೆ ಜಾರಿದಳು, ಅದು ಇಪ್ಪತ್ತ ವರ್ಷಗಳ ಹಿಂದೆ. ಇದ್ದ ಗಂಡ ಯಾವದೋ ಜಡ್ಡ ಬಂದು ತೀರಿ ಹೋಗಿದ್ದ, ಮತ್ತ ವರ್ಷ ಒಪ್ಪತ್ತಿನಾಗ್ಯ ಮದುವಿ ಮಾಡಿಕೊಟ್ಟ ತನ್ನ ಮಗಳೂ ಈ ಕೂಸ ಕೊಟ್ಟ ಅವಳೂ ಶಿವನ ಪಾದ ಸೇರಿದ್ದಳು. ಈಗ ದೊಡ್ಡ ಮನೆಯಲ್ಲಿ ತಾನೊಬ್ಬಳೆ. ಗಂಡ ನೂರಾರು ಕುರಿ ಸಾಕಿ , ಮೇಯಿಸಿಕೊಂಡು ಬಂದು ಪ್ರತಿ ಉಗಾದಿಗೆ ತೊಲಿಗಟ್ಟಲೇ ಬಂಗಾರ ಮಾಡಿ ತನ್ನ ಹೆಂಡತಿಗೆ ಆಭರಣ ಮಾಡಿಸತಿದ್ದ, ಹೀಂಗ ಮಾಡಿಸಿದ್ದ ಆಭರಣಗಳೇ ಡಜನಗಟ್ಟಲೆ ಆಗಿದ್ದವು. ಮುದುಕಿ ಹರೆದಾಗ ಇದ್ದಾಗ ಮಂದಿಗಿ ಕಣ್ಣಿಗಿ ಬೀಳಬಾರದಂತ ಮನಿಯಾಗ ಒಂದ ಕಡೆ ಮುಚ್ಚಿಟ್ಟಿದ್ದಳು. ಇದ್ದ ಗಂಡ, ಮಗಳು ಹ್ವಾದ ಮ್ಯಾಲೆ ಈ ಬಂಗಾರ ತನ್ನ ಮೊಮ್ಮಗಳಿಗಿ ಬರಲಿ ಅಂತಾ ಆಸೆ ಇಟಗೊಂಡು, ಇಷ್ಟ ಬಂಗಾರ ನಮ್ಮೂರಾಗ ಇಟಗೊಂಡ ಮತ್ತ ಮರಳಿ ಕೊಡೋ ನಂಬಿಗಸ್ಥ ಮನಿಷ್ಯಾ ಈ ಊರಾಗ ಯಾರ ಅದಾರ ಅಂತಾ ಹುಡಕತ್ತಿದ್ದಳು. ಇಂಥಾ ವ್ಯಾಳೆದಾಗ ಹುಡುಕುತ್ತಿರುವ ಬಳ್ಳಿ ಕಾಲ್ತೊಡಕಿದಂತೆ ಈ ಮಲ್ಲಪ್ಪ ಮಾಸ್ತರು ಸಿಕ್ಕಿದ್ದರು.

         ಮೊಮ್ಮಗಳು ಮಲ್ಲಪ್ಪ ಮಾಸ್ತರ ಸಾಲಿಗಿ ಕಲಿಯಲಿಕ್ಕೆ ಹೋಗತಿತ್ತು, ಒಂದನೇ ಈಯತ್ತೆ ಕಲಿಯುವಾಗ  ಈ ಹುಡುಗಿ ರೂಪ, ಲವಲವಿಕೆ ನೋಡಿ ಮುದ್ದು ಮಾಡಿದ್ದರು, ಅಷ್ಟ ಅಲ್ಲಾ ಈ ಮಗುವಿಗೆ ಚೆಂದಾಗಿ ಪಾಠ ಹೇಳಿದ್ದರು, ದಿನಾ ಮನಿಗಿ ಬಂದ ಮೊಮ್ಮಗಳು ಮಾಸ್ತರ ಗುಣಗಾನ ಮಾಡತಿತ್ತು. ಒಂದ ದಿನಾ ಸಾಲಿಗಿ ಹೋಗಿ ಮಾಸ್ತರ ನೋಡಿ ತನ್ನ ತಾಯಿ ಇಲ್ಲದ ಮೊಮ್ಮಗಳನ್ನು ಪ್ರೀತಿಯಿಂದ ಕಾಣುವುದಕ್ಕಾಗಿ ಅವರನ್ನು ಕಂಡು ಅಕ್ಕರೆಯಿಂದ ಮಾತಾಡಿಸಿ, ‘ನಾಳಿ ಶನಿವಾರ ಸಾಲಿ ಬಿಟ್ಟ ಮ್ಯಾಲ ನಮ್ಮ ಮನಿಗಿ ಬಂದ ಊಟಾ ಮಾಡಿ ಹೋಗ್ರಿ’ ಅಂತಾ ವಿನಂತಿಸಿಕೊಂಡಳು. ಅದರಂತೆ ಸಿದ್ದಪ್ಪ ಮಾಸ್ತರು ಮುದುಕಿಯ ಮನೆಗೆ ಬಂದ್ರು, ಮುದುಕಿ ಬಿಸಿ ರೊಟ್ಟಿ, ತುಂಬಗಾಯಿ ಬದನಿಕಾಯಿ, ಬಳ್ಳೊಳ್ಳಿ ಚಟ್ನಿ, ಮೊಸರಾ, ಅಗಸಿ, ಗುರೆಳ್ಳ ಹಿಂಡಿ, ಶೇಂಗಾ ಹೋಳಿಗಿ, ತುಪ್ಪಾ ಹೀಂಗ ಬಗಿ ಬಗಿ ಅಡುಗೆ ಮಾಡಿ ಉಣಿಸಿದಳು. ಮೊಮ್ಮಗಳನ್ನ ಕರಕೊಂಡ ಊಟಾ ಮಾಡಿದರು, ಮೊಮ್ಮಗಳು ಆಟಾ ಆಡಾಕ ಹೊರಗ ಹೋಯಿತು.

   ಊಟ ಆದಮ್ಯಾಲ ಮುದುಕಿ ಒಳಗ ಹೋಗಿ ಗುಳೇದಗುಡ್ಡ ಖನದಾಗ ಕಟ್ಟಿದ್ದ ಒಂದ ಗಂಟ ತಂದಳು. ಮಾಸ್ತರ ಮುಂದ ಇಟ್ಟಳು. ‘ಮಲ್ಲಪ್ಪ ಮಾಸ್ತರ ನನ್ನದೊಂದು ವಿನಂತಿ ಐತಿ, ಈ ಗಂಟಿನ್ಯಾಗ ಬರೋಬ್ಬರಿ ಒಂದ ಡಜನ್ನ ಬಂಗಾರದ ಆಭರಣ ಅದಾವು, ನಮ್ಮ ಹಿರ್ಯಾ ಮಾಡಿಟ್ಟಿದ್ದು, ಮಗಳಿಗಿ ಕೊಡಬೇಕಂದ್ರ ಅವಳು ಈ ಕೂಸಿನ ಕೊಟ್ಟ ಮ್ಯಾಲ ಹ್ವಾದಳು, ಇವು ಈ ಮೊಮ್ಮಗಳಿಗಿ ಸೇರಿದ್ದು, ಇವೆಲ್ಲಾ ಇವತ್ತು ನಿಮಗ ಒಪ್ಪಸತಿನಿ, ಆಕಿ ದೊಡ್ಡಾಕಿ ಆಗಿ ಸಾಲಿ ಕಲಿತು, ಆಕಿ ಲಗ್ನದ ವ್ಯಾಳೆದಾಗ ನಿಮ್ಮ ಕೈಯಾರ ಆಕಿ ಕೈಗೆ ಒಪ್ಪಿಸಬೇಕ, ಮತ್ತ ನಾ ಅಲ್ಲಿತನಾ ಇರತನೋ ಇಲ್ಲೋ ಗೊತ್ತಿಲ್ಲ, ಆದ್ರ ಒಂದ ಸಾಮಾನ ಕಡಿಮಿ ಇಲ್ಲದಾಂಗ ನೀವು ಅವಳಿಗೆ ಒಪ್ಪಿಸ್ತಿನಿ ಅಂತಾ ವಚನಾ ಕೊಡ್ರಿ ಅಂದ್ಲು,’ ಆಗ ಮಲ್ಲಪ್ಪ ಮಾಸ್ತರು ಯಾರೋ ಪರಿಚಿತರಲ್ಲದ ಈ ಮುದುಕಿ ಇವತ್ತು ಈ ಸಾಲಿ ಮಾಸ್ತರ ಮ್ಯಾಲ ನಂಬಿಗಿ ಇಟ್ಟು ಈ ಇಪ್ಪತ್ತ ಮೂವತ್ತ ತೊಲಿ ಬಂಗಾರ ಒಪ್ಪಸತಾಳ ಅಂದ್ರ ನಾನು ಮಾಸ್ತರ ಆಗಿದ್ದಕ್ಕೂ ಹೆಮ್ಮೆ ಆಗತೈತಿ ಅಂತಾ ಅನಿಸಿ ಮುದುಕಿಗಿ ಹೇಳಿದರು, ‘ನೋಡವಾ ತಾಯಿ, ನಾನು ಸೌಂದತ್ತಿ ಎಲ್ಲವ್ವನ ಮ್ಯಾಲ ಆಣಿ ಮಾಡಿ ಹೇಳ್ತಿನಿ, ಇದರಾಂದ ಒಂದ ಗುಂಜಿ ಕಡಿಮಿ ಇಲ್ಲದ ನಿನ್ನ ಮೊಮ್ಮಗಳಿಗಿ ಒಪ್ಪಸತೀನಿ, ನೀ ಏನು ಕಾಳಜಿ ಮಾಡಬ್ಯಾಡ’ ಅಂದ್ರು. ಆ ಮ್ಯಾಲ ಮುದುಕಿ ಒಳಗ ಹೋಗಿ ನೋಟಿನ ಪುಡಕಾ ಹಿಡಕೊಂಡ ಬಂದ್ಲು, ‘ಎಪ್ಪಾ ಇವೇನ ಭಾಳ ಇಲ್ಲಾ, ಇವನ್ನು ನಿನ್ನ ಕಡೆ ಇಟಗೋ, ನಿನಗೂ ಅಡಚಣಿ ಇದ್ದರ ಖರ್ಚ ಮಾಡ, ಆದ್ರ ಹಬ್ಬ ಹುಣ್ಣಿವಿಗಿ ನನಗ ಯಾವಾಗರೇ ಹರಕತ್ತ ಬಿದ್ದಾಗ ಏಟ ಬೇಕ ಅಷ್ಟ ಕೊಡುವಿ’ ಅಂತಾ ಹೇಳಿ ಕೊಟ್ಟಿದ್ದಳು. ಮಾಸ್ತರರ ಆನಂದದ ಕಣ್ಣೀರು ಉದುರಿದವು,

*

       ಈ ಹಳ್ಳಿಯ ಮುಗ್ದ ಜನಾ ಮಾಸ್ತರ ಮೇಲೆ ಇಟ್ಟ ನಂಬುಗೆಗೆ ಶರಣು ಎಂದು ಊರಿಗೆ ಬಂದು ರಾತ್ರಿ ತಮ್ಮ ಹೆಂಡತಿ ತುಳಜಾಬಾಯಿಗೆ ಈ ಗಂಟು ತೋರಿಸಿದ್ದರು, ತುಳಜಾಬಾಯಿಯೂ ಅಷ್ಟೇ ಅನ್ಯರ ದುಡ್ಡು ಹಾವಿನ ಬಾಯಾನ ದುಡ್ಡು ಇದ್ದಾಂಗ ಅವನ್ನ ಬಳಸಬಾರದು ಅಂತಾ ಗೊತ್ತಿತ್ತು, ಹೀಂಗಾಗಿ ಅವಳು ಯಾವ ಆಸೆಯನ್ನೂ ಈ ಸಂಪತ್ತಿನ ಮೇಲೆ ಇಟ್ಟುಕೊಂಡಿರಲಿಲ್ಲ. ಬಾಡಿಗೆ ಮನೆಯಲ್ಲಿದ್ದಾಗ ಒಂದೆರಡು ಬಾರಿ ತುಳಜವ್ವ ಈ ಮುದುಕಿಯನ್ನು ಕಂಡಿದ್ದಳು, ಆಗಾಗ ದುಡ್ಡು ಕಡಮಿ ಬಿದ್ದಾಗ ಮಾಸ್ತರ ಕಡೆ ಇಸಿದುಕೊಂಡು ಹೋಗುತ್ತಿದ್ದಳು, ಈಗ ಜಮಖಂಡಿಯಲ್ಲಿ ಹೊಸ ಮನಿ ಕಟ್ಟಿಸದ ಮ್ಯಾಲ ಮುದುಕಿ ಎಲ್ಲಿ ಮಾಸ್ತರ ತನ್ನ ಬಂಗಾರ ಮಾರಿ ಮನಿ ಮಾಡ್ಯಾನ ಅಂತಾ ತಿಳಿಕೊಂಡು ಊರಾನು ಒಂದೆರಡು ಉಡಾಳ ಹುಡುಗರನ್ನು ಕರೆದುಕೊಂಡು ಎರಡು ವರ್ಷಗಳ ಹಿಂದೆ ಬಂದು ರಂಪಾಟ ಮಾಡಿದ್ದಳು, ಯಾಕೆಂದರೆ ಬಂಗಾರ ಇಟ್ಟುಕೊಳ್ಳುವಾಗ ಒಂದ ಮಾತಾಗಿತ್ತು ಈ ವಿಷಯ ನಮಗ ಬಿಟ್ಟು ಬ್ಯಾರೆ ಯಾರಿಗೂ ಹೇಳಬಾರದೆಂದು,ಅದರಂತೆ ಮುದುಕಿ ಊರಾನ ಹುಡುಗರಿಗೆ ಬಂಗಾರದ ವಿಷಯ ಹೇಳಿರಲಿಲ್ಲ, ಮಾಸ್ತರ ರೊಕ್ಕಾ ಕೊಡಾವ ಅದಾನ ಬರ್ರೀ ಅಂತಾ ಕರಕೊಂಡ ಬಂದಿದ್ದಳು, ಈ ಹುಡುಗರು ಕಲಿಸಿದ ಗುರುಗಳ ಅನಲಾರದ ಯಾಸಿ ಟೀಸಿ ಮಾತಾಡಿದ್ದಕ್ಕೆ ಸಿಟ್ಟು ಬಂದು ಒದರಾಡಿ ಬೈದು ಮುದುಕಿಯ ಸಮೇತ ಓಡಿಸಿದ್ದರು, ಇದಾಗಿ ಎರಡಮೂರು ವರ್ಷ ಕಳೆದ ಮೇಲೆ ಈ ಬಾರಿ ಸ್ಕೂಟಿಯ ಮೇಲೆ ಮೊಮ್ಮಗಳನ್ನು ಕರೆದುಕೊಂಡು ಮಾಸ್ತರ ಮನಿಗೆ ಬಂದಿದ್ದಳು, ಈ ಪ್ರಸಂಗವೂ ಸುಖಾಂತ್ಯವಾಗದೇ ಇದ್ದಾಗ ಬಂಗಾರದ ವಿಷಯ ಪಬ್ಲಿಕ್ ಆಗುತ್ತದೆಂದು ಹೆದರಿ ಮೊಮ್ಮಗಳು ಅಜ್ಜಿಯನ್ನು ಮಂಗಮಾಯ ಮಾಡುವರಂತೆ ತನ್ನ ಊರಿಗೆ ಕರೆದುಕೊಂಡು ಬಂದಿದ್ದಳು.

*

     ಅಜ್ಜಿಯ ತೊಡೆಯ ಮೇಲೆ ಮಲಗಿದ್ದ ಮೊಮ್ಮಗಳು ಈಗ ಎದ್ದು ಕುಳಿತಳು, ‘ಅಜ್ಜಿ ನಾಳಿ ಸ್ವಾಮಾರ ಮಲ್ಲಪ್ಪ ಮಾಸ್ತರು ಮತ್ತ ತುಳಜಕ್ಕ ಅಕ್ಕೊರು ಮನಿಗಿ ಬರಾಕ ಹೇಳ್ಯಾರ’ ಎಂದು ಖುಷಿಯ ಸಂಗತಿ ತಿಳಿಸಿದಳು, ಅಜ್ಜಿಗೆ ಒಳಗೊಳಗೆ ಖುಷಿಯಾಯ್ತು, ಈವರೆಗೂ ತಾನು ಅವರ ಬಳಿಯಲ್ಲಿ ಬಂಗಾರದ ಆಭರಣಗಳನ್ನು ಇಟ್ಟುಕೊಳ್ಳಲು ಕೊಟ್ಟ ಸಂಗತಿ ಮೊಮ್ಮಗಳಿಗೆ ತಿಳಿಸಿರಲಿಲ್ಲ ಇತ್ತ ಈ ಹುಡುಗಿ ಮುದುಕಿಯ ಮೊಮ್ಮಗಳು ಎಂಬ ಸಂಗತಿ ಮಾಸ್ತರರಿಗೂ ಮತ್ತು ತುಳಜವ್ವನವರಿಗೂ ತಿಳಿದಿರಲಿಲ್ಲ. 

       ಇಂದು ಸೋಮವಾರ ಮಾಸ್ತರ ಮನಿ ಮುಂದೆ ಸ್ಕೂಟಿಯ ಮ್ಯಾಲಿಂದ ಈ ಹುಡುಗಿಯೂ ಮತ್ತು ಆ ಮುದುಕಿಯೂ ಇಳಿದರು. ಕಿಡಕಿಯಿಂದ ಸೊಸ್ತ್ಯಾರು ನೋಡಿ, ಅಯ್ಯೋ ಮತ್ತ ಈ ಮುದುಕಿ ಬಂತಲ್ಲಾ ಎಂದು ಗಾಬರಿಯಾಗಿ ಈ ಸಲಾ ಮಾವಾರ ಹೆಣಾ ಬಿತ್ತು ಎಂದು ಉರಿದುಕೊಂಡರು, ಆದರೆ ಆಗಿದ್ದೇ ಬೇರೆ ಮನೆಗೆ ಬರುವಾಗ ತನ್ನ ಅಜ್ಜಿಯನ್ನು ಕರೆದುಕೊಂಡು ಬರುವದಾಗಿ ನರ್ಸ ತಿಳಿಸಿದಂತೆ ಮನೆಗೆ ಬಂದಿದ್ದಳು. ಮಲ್ಲಪ್ಪ ಮಾಸ್ತರು, ತುಳಜವ್ವ ಮತ್ತ ಕಿರಿಯ ಮಗಾ ಗೇಟಿನವರೆಗೂ ಬಂದು ಅತ್ಯಂತ ಪ್ರೀತಿಯಿಂದ ಅಜ್ಜಿ ಮೊಮ್ಮಗಳನ್ನು ಒಳಗೆ ಕರೆದುಕೊಂಡು ಹೋದರು, 

      ಮಂಜಾನೆ ಅತ್ಯಂತ ಖುಷಿಯಿಂದ ಓಡಾಡಿಕೊಂಡು ಸಂಭ್ರಮಿಸಿದರು, ಹತ್ತುವರೆ ಸುಮಾರು ಮಲ್ಲಪ್ಪ ಮಾಸ್ತರು ಬ್ಯಾಂಕಿನ ಕಡೆ ಹೋಗಿ ಲಾಕರ್‍ದಲ್ಲಿದ್ದ ಎಲ್ಲ ಆಭರಣಗಳನ್ನು ಬಿಡಿಸಿಕೊಂಡು ಬಂದರು. ಮನೆಯ ಟ್ರಂಕದಲ್ಲಿದ್ದ ಗುಳೇದಗುಡ್ಡ ಖಣ ತೆಗೆದುಕೊಂಡು ಅದರಲ್ಲಿ ಎಲ್ಲ ಆಭರಣಗಳನ್ನು ಕಟ್ಟಿ, ಊಟದ ಹೊತ್ತಿಗೆ ತಮ್ಮ  ಇಬ್ಬರು ಸೊಸೆಯಂದಿರನ್ನು ಮತ್ತು ಮೂರೂ ಮಕ್ಕಳನ್ನು ಕರೆದು ಎಲ್ಲರ ಉಪಸ್ಥಿತಿಯಲ್ಲಿ ‘ನಾನು ಆ ಹಳ್ಯಾಗ  ನೌಕರಿ ಮಾಡುವಾಗ ಈ ಮಾಸ್ತರ ಮ್ಯಾಲ ವಿಶ್ವಾಸವಿಟ್ಟು ಈ ಆಭರಣಗಳನ್ನೆಲ್ಲಾ , ಈ ಎಮ್ಮಾ ನನ್ನ ಕಡೆ ಇಟ್ಟುಕೊಳ್ಳಲು ಕೊಟ್ಟಿದ್ದಳು, ಮತ್ತ ಮೊಮ್ಮಗಳು ದೊಡ್ಡವಳಾದ ಮೇಲೆ ಅವಳಿಗೆ ಒಪ್ಪಿಸಲು ತಿಳಿಸಿದ್ದಳು. ಅದರಂತೆ ಈ ದಿನ ಶುಭ ದಿನ ಇವತ್ತು ಕೂಡಿ ಬಂದಿದೆ. ನಿಮ್ಮೆಲ್ಲರ ಸಮ್ಮಖದಲ್ಲಿ ನಾನು ಈ ತಾಯಿಗೆ ಬಂಗಾರ ಒಪ್ಪಿಸುತ್ತಿದ್ದೇನೆ’ ಎಂದು ಗಂಟು ಬಿಚ್ಚಿ ‘ನೋಡ ಎಮ್ಮಾ ಒಂದ ಗುಂಜಿ ಕಡಮಿ ಇಲ್ಲದ ನೀ ಕೊಟ್ಟ ಒಂದ ಡಜನ್ ಆಭರಣ ಎಲ್ಲಾ ಅದಾವು’ ಎಂದು ಎಣಿಸಿ ಮತ್ತೆ ಗಂಟು ಕಟ್ಟಿ ಮುದುಕಿಯ ಉಡಿಯಲ್ಲಿಟ್ಟರು. 

       ಮುಗ್ದ ಮುದುಕಿಗೆ ಮಾತು ಬರಲಿಲ್ಲ, ಮಾಸ್ತರ ಅಂದ್ರ ಸ್ವತಃ ನಡೆದಾಡೋ ದೇವರಂತ ಕೇಳಿನಿ ಇವತ್ತ ಸಾರ್ಥಕವಾಯ್ತು ಎಂದು ಬಂಗಾರದ ಗಂಟನ್ನು ಮತ್ತು ತನ್ನ ಮೊಮ್ಮಗಳನ್ನು ಮುದುಕಿ ಒಂದೇ ತೆಕ್ಕೆಯಲ್ಲಿ ತೆಗೆದುಕೊಂಡು ಮಲ್ಲಪ್ಪ ಮಾಸ್ತರ ಮತ್ತು ತುಳಜವ್ವನವರ ಕಾಲಿಗೆ ನಮಸ್ಕರಿಸಿ ‘ನನ್ನದೊಂದ ಮಾತ ನಡೆಸಿಕೊಡ್ರಿ ,ಈ ಬಂಗಾರ ಈ ಬಂಗಾರದಂಥ ಮೊಮ್ಮಗಳನ್ನ ನಿಮಗ ಒಪ್ಪಿಸ್ತೀನಿ, ನಿಮ್ಮ ಮನಿ ಸೊಸಿಯಾಗಿ ಮಾಡಿಕೊಂಡು ಮನಿ ತುಂಬಿಸಿಕೊಳ್ಳಿರಿ’ ಅಂತಾ ಕೈ ಮುಗಿದಳು. ಈ ಅಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾದ ಇಬ್ಬರು ಸೊಸೆಯಂದಿರು ತನ್ನ ಮಾವನವರ ದೊಡ್ಡಸ್ತಿಕೆ ಮುಂದೆ ಕುಬ್ಜರಾಗಿ ನಿಂತರು, ಮಾವಾರ ನಮ್ಮನ ಕ್ಷಮಿಸಿ ಬಿಡ್ರಿ, ಈ ಬಂಗಾರದ ಮೇಲೆ ಆಸೆ ಮಾಡಿ ನಾವು ಬಂಗಾರಂಥ ಮಾವ , ಅತ್ತಿಗೆ ಸರಿಯಾಗಿ ನಡಿಸಿಕೊಳ್ಳಲಿಲ್ಲ, ಬಂಗಾರಕ್ಕಿಂತ ಬದಕ ಮುಖ್ಯ ಅನ್ನೋದು ಕಲಿಸಿಕೊಟ್ಟಿರಿ, ಇನ್ನ ಮ್ಯಾಲ ನಾವು ಎಲ್ಲರೂ ಕೂಡಿ ಇರೋಣ ,ಮದುವಿ ಚೆಂದ ಮಾಡಿ ಈ ಹುಡುಗಿ ಮನಿ ತುಂಬಿಸಿಕೊಳ್ಳೋಣ’ ಎಂದು ಅತ್ತೆ, ಮಾವರ ನಮಸ್ಕರಿಸಿ ಒಂದಾದರು. ಎಲ್ಲರಲ್ಲೂ ಕವಿದ ಕಾರ್ಮೋಡ ಬಯಲಾಗಿ ಹೊಸ ಬೆಳಕು ಬಿದ್ದಿತ್ತು. 

#

ಡಾ. ಪ್ರಕಾಶ ಗ ಖಾಡೆ

*

ಕುತೂಹಲದ  ಬೆನ್ನೇರಿ  ಹೊರಟ  ಕತೆ.  ಮತ್ತೆ ಮತ್ತೆ  ಫ್ಲ್ಯಾಶ್ ಬ್ಯಾಕಿಗೆ  ಹೋಗ್ಹೋಗಿ  ವರ್ತಮಾನಕ್ಕೆ  ಮರಳುವ  ಕತೆಯ  ನಾಯಕ  ಮಲ್ಲಪ್ಪ  ಮಾಸ್ತರರು.ಕತೆಯಲ್ಲಿ  ನನಗೆ  ಹಿಡಿಸಿದ  ಅಂಶಗಳು  ಎರಡು.  ಒಂದು- ಮಾಸ್ತರರನ್ನು  ಎಲ್ಲಿಯೂ  ಅತಿಯಾಗಿ  ಆದರ್ಶದ  ಚೌಕಟ್ಟಿನಲ್ಲಿಟ್ಟು  ಬಿಂಬಿಸಹೋಗಿಲ್ಲ.  ಆಗೀಗ  ಎಣ್ಣೆಹೊಡೆಯುವ, ಇಸ್ಪೀಟು  ಆಡುವ  ಮಾಸ್ತರರು 'ಸಾಲಿಗಾಗಿ  ನಾನು  ಏನಾದರೂ  ಅನ್ಯಾಯ  ಮಾಡಿದರೆ  ಆವತ್ತೇ  ನನಗೆ  ಸಾವು  ಬರಲಿ' ಎಂದು  ಹೇಳಬಲ್ಲವರಾಗಿದ್ದಾರೆ. ಅಷ್ಟಿಷ್ಟು  ಒಳ  ದೌರ್ಬಲ್ಯಗಳೊಂದಿಗೇ  ಮೌಲ್ಯಗಳನ್ನು  ಅನುಸರಿಸುವ  ಅನೇಕ  ಜನ  ನಮ್ಮೊಂದಿಗಿದ್ದಾರೆ. ಇಂಥವರನ್ನು  ಈ  ಪಾತ್ರ  ಪ್ರತಿನಿಧಿಸುತ್ತದೆ.  ಅಷ್ಟೊಂದು  ಸಹಜತೆ  ಈ ಪಾತ್ರಕ್ಕಿದೆ. 

ಎರಡನೆಯದಾಗಿ -ಕಥೆಯ  ಭಾಷೆ. ಉತ್ತರ  ಕರ್ನಾಟಕದ  ಅದರಲ್ಲೂ  ಜಮಖಂಡಿ  ಭಾಗದ  ಆಡು ಭಾಷೆಯನ್ನು  ಯಥಾವತ್ತಾಗಿ  ಬಳಸಿ  ಕಥೆಗೆ  ಮೆರಗು  ತುಂಬಲಾಗಿದೆ. 


ಕಥೆಗೆ  ಪ್ರಶಸ್ತಿ  ಬಂದಿದೆ 

 ಮತ್ತೊಮ್ಮೆ  ಅಭಿನಂದಿಸುತ್ತೇನೆ. 

- ಡಾ.ಶ್ರೀರಾಮ ಇಟ್ಟಣ್ಣವರ

Shivaratri -Dr.Prakash Khade

 ಶಿವರಾತ್ರಿ ವಿಶೇಷ ಲೇಖನ   : ಜನಪದರ ಹಾಡುಗಳಲ್ಲಿ ಶಿವರಾತ್ರಿ :  -ಡಾ.ಪ್ರಕಾಶ ಗ. ಖಾಡೆ,    ಬಾಗಲಕೋಟ ಮೊ. 9845500890    ಭಾರತೀಯ ಸಂಸ್ಕøತಿಯ ಬೇರುಗಳು ನಮ್ಮ ಜನಪದರ...