Tuesday, July 11, 2023

ಬಾಳುಕುನ ಪುರಾಣ ಲೋಕಾರ್ಪಣೆ

 ಜಮಖಂಡಿ #ಕಥಾ_ಕಮ್ಮಟ

ಡಾ.ಪ್ರಕಾಶ ಖಾಡೆ ರಚಿತ '#ಬಾಳುಕುನ_ಪುರಾಣ ' ಲೋಕಾರ್ಪಣೆ.

ಜಮಖಂಡಿ ಕಥಾ ಕಮ್ಮಟ

ಬಾಳುಕುನ ಪುರಾಣ ಲೋಕಾರ್ಪಣೆ.


ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಮಂಗಳವಾರ 11.7.2023 ರಂದು ಒಂದು ದಿನದ ಕಥಾ ಕಮ್ಮಟ ಹಾಗೂ ಡಾ.ಪ್ರಕಾಶ ಗ.ಖಾಡೆಯವರ 'ಬಾಳುಕುನ ಪುರಾಣ' ಕಥಾ ಸಂಕಲನದ ಲೋಕಾರ್ಪಣೆ ಮತ್ತು ಪುಸ್ತಕ ಓದು ಅಭಿಯಾನ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಕಥಾ ಕಮ್ಮಟದ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಕಥೆಗಾರ ಡಾ.ಪ್ರಕಾಶ ಖಾಡೆ ' ಕಥೆಗಳು ಎಲ್ಲ ಕಡೆಗೂ ಇವೆ.ನಾವು ನೋಡುವ ಕಣ್ಣಿರಬೇಕು.ಪ್ರತಿ ಸಂದರ್ಭ, ವಸ್ತು, ಘಟನೆಯನ್ನು ಕುತೂಹಲ,ಪ್ರೀತಿ ಮತ್ತು ಅನುಭೂತಿಯಿಂದ ಕಾಣಬೇಕು.ತನ್ನ ಪರಿಸರದ ಭಾಷೆ,ಜನರ ಮನೋಭಾವ ಹಾಗೂ ಸಂಪ್ರದಾಯ,ಆಚರಣೆಗಳನ್ನು ತೆರೆದ ಕಣ್ಣಿನಿಂದ ಗಮನಿಸಬೇಕು.ಹಿಂದಿನವರ ಮಾದರಿಗಳನ್ನು ಹೊಸ ಕಥೆಗಾರರು ಓದಿಕೊಂಡಿರಬೇಕು.ಇವೆಲ್ಲವು ಕಥಾ ರಚನೆಗೆ ಮೊದಲ ಮೆಟ್ಟಿಲು' ಎಂದು ಡಾ.ಖಾಡೆ ಹೇಳಿದರು.ಮೊದಲ ಗೋಷ್ಠಿಯಲ್ಲಿ ಮಾತನಾಡಿದ ಡಾ.ವೈ.ವೈ.ಕೊಕ್ಕನವರ 'ಕನ್ನಡ ಕಥಾ ಪರಂಪರೆ ಶ್ರೀಮಂತವಾಗಿದೆ,ಶಿವಕೋಟಾಚಾರ್ಯನಿಂದ ಹಿಡಿದು ಇವತ್ತಿನ ಕುಂವೀ,ಖಾಡೆ ವರೆಗೆ ಕನ್ನಡ ಕಥೆಗಳು ಸಮೃದ್ಧವಾಗಿ ಬಂದಿವೆ.ವಿದ್ಯಾರ್ಥಿಗಳು ಇವುಗಳ ಓದು, ಅಧ್ಯಯನಕ್ಕೆ ತೊಡಗಬೇಕು'ಎಂದರು.ಇದೇ ಸಂದರ್ಭದಲ್ಲಿ ಡಾ.ಪ್ರಕಾಶ ಖಾಡೆಯವರ ಕಥಾ ಸಂಕಲನ 'ಬಾಳುಕುನ ಪುರಾಣ ' ಕೃತಿ ಲೋಕಾರ್ಪಣೆ ಮಾಡಲಾಯಿತು.ಪ್ರೊ.ಸುಮಾ ಕೃತಿ ಪರಿಚಯ ಮಾಡಿದರು.ಪುಸ್ತಕ ಓದು ಅಭಿಯಾನದ ಅಂಗವಾಗಿ ಬಾಳುಕುನ ಪುರಾಣ ಕೃತಿಯ ಐವತ್ತೊಂದು ಪುಸ್ತಕಗಳನ್ನು ಖರೀದಿಸಿದ ಗ್ರಂಥದಾನಿ ಪ್ರೊ.ಎಸ್.ಕೆ.ಡೇಂಬ್ರೆ ಅವರು ಕಮ್ಮಟದಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿ ಶಿಬಿರಾರ್ಥಿಗಳಿಗೆ ಉಚಿತವಾಗಿ ವಿತರಿಸಿದರು.ಐಸಿಎಸಿ ಮುಖ್ಯಸ್ಥ ಪ್ರೊ.ದಳವಾಯಿ ಪ್ರಸ್ತಾವಿಕ ಮಾತನಾಡಿದರು.ಡಾ.ಅಶ್ವಿನಿ ಬಬಲಿ ಹಾಗೂ ಕನ್ನಡ ವಿಭಾಗದ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲ ಡಾ.ಜೆ.ಪಿ.ದೊಡಮನಿ ಅಧ್ಯಕ್ಷತೆ ವಹಿಸಿ  ಮಾತನಾಡಿ ವಿದ್ಯಾರ್ಥಿದೆಸೆಯಲ್ಲಿಯೇ ಸಾಹಿತ್ಯದ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು.ಸಣ್ಣ ಸಣ್ಣ ರಚನೆಗಳ ಮೂಲಕ ಬರವಣಿಗೆ ಆರಂಭಿಸಿ, ಮುಂದೆ ದೊಡ್ಡ ಲೇಖಕರಾಗಿ ಬೆಳೆಯಬಹುದು'ಎಂದರು.ಹೀನಾ ಸಾರವಾನ, ಅಶ್ವಿನಿ ತಳವಾರ ನಿರ್ವಹಣೆ ಮಾಡಿದರು.ವಿದ್ಯಾರ್ಥಿನಿ ಪ್ರತಿನಿಧಿ ಪ್ರಭಾವತಿ ಖೋಷ್ಟಿ ವಂದಿಸಿದರು.

No comments:

Post a Comment

Shivaratri -Dr.Prakash Khade

 ಶಿವರಾತ್ರಿ ವಿಶೇಷ ಲೇಖನ   : ಜನಪದರ ಹಾಡುಗಳಲ್ಲಿ ಶಿವರಾತ್ರಿ :  -ಡಾ.ಪ್ರಕಾಶ ಗ. ಖಾಡೆ,    ಬಾಗಲಕೋಟ ಮೊ. 9845500890    ಭಾರತೀಯ ಸಂಸ್ಕøತಿಯ ಬೇರುಗಳು ನಮ್ಮ ಜನಪದರ...