Friday, January 14, 2022

ಮೊಗವೀರ ಕಥಾ ಪ್ರಶಸ್ತಿ

 




ಬಾಗಲಕೋಟೆ: ಜ 12 : ನಗರದ ಕಥೆಗಾರ ಡಾ.ಪ್ರಕಾಶ ಖಾಡೆ ಅವರ ಸಧ್ಯಕಿದು ಜಮಖಂಡಿ ಸಂತಿ' ಕಥೆಗೆ ಮುಂಬಯಿಯ ಪ್ರತಿಷ್ಠಿತ ಮೊಗವೀರ ಕಥಾ ಪ್ರಶಸ್ತಿ ಲಭಿಸಿದೆ. ಮುಂಬಯಿಯಲ್ಲಿ 1939 ರಲ್ಲಿ ಪ್ರಾರಂಭವಾದ ಮೊಗವೀರ ಕನ್ನಡ ಮಾಸಿಕವು ಕಳೆದ 82 ವರ್ಷಗಳಿಂದ ನಿರಂತರ ಪ್ರಕಟವಾಗುತ್ತಿದ್ದು, ಪ್ರತಿ 4 ವರ್ಷಕ್ಕೊಮ್ಮೆ ಸಾಹಿತ್ಯ ಸ್ಪರ್ಧೆ ಆಯೋಜಿಸಿ ಪ್ರೋತ್ಸಾಹಿಸುತ್ತಾ ಬಂದಿದೆ. ಪತ್ರಿಕೆಯ 82 ನೇ ವರ್ಷದ ಸಂಭ್ರಮಕ್ಕಾಗಿ ಅಖಿಲ ಭಾರತ ಮಟ್ಟದಲ್ಲಿ ಕಥಾ ಸ್ಪರ್ಧೆ ಆಯೋಜಿಸಿತ್ತು. ಕನ್ನಡದ ಒಟ್ಟು 59 ಕಥೆಗಾರರು ಪಾಲ್ಗೊಂಡಿದ್ದ ಈ ಸ್ಪರ್ಧೆಯಲ್ಲಿ ಡಾ.ಪ್ರಕಾಶ ಖಾಡೆ ಅವರ ಕಥೆ 5000 ರೂ. ನಗದು ಬಹುಮಾನದೊಂದಿಗೆ ದ್ವಿತೀಯ ಸ್ಥಾನ ಪಡೆದಿದೆ. ಕಥೆಗೆ ಸಂಬಂಧಪಟ್ಟಂತೆ ವಸ್ತು, ಶೈಲಿ, ನಿರೂಪಣೆ ಹಾಗೂ ಭಾಷೆಯನ್ನು ಪರಿಗಣಿಸಿ ಕಥೆಯನ್ನು ಬಹುಮಾನಕ್ಕೆ ಆಯ್ಕೆ ಮಾಡಿಕೊಂಡಿದ್ದು , ವಿಜೇತ ಕಥೆಗಾರ ಡಾ.ಖಾಡೆಯವರಿಗೆ ಮೊಗವೀರ ಸಂಪಾದಕರಾದ ಅಶೋಕ ಸುವರ್ಣ ಅಭಿನಂದಿಸಿದ್ದಾರೆ. ಕಳೆದ ವರ್ಷವಷ್ಟೇ ಡಾ.ಪ್ರಕಾಶ ಖಾಡೆಯವರಚೆಲುವಿ ಚಂದ್ರಿ’ ಕಥಾ ಸಂಕಲನ ಲೋಕಾರ್ಪಣವಾಗಿದೆ. ನಾಡಿನ ಗಣ್ಯ ಪತ್ರಿಕೆಗಳಲ್ಲಿ ಇವರ ಕಥೆಗಳು ಪ್ರಕಟಗೊಂಡಿವೆ.

No comments:

Post a Comment

Shivaratri -Dr.Prakash Khade

 ಶಿವರಾತ್ರಿ ವಿಶೇಷ ಲೇಖನ   : ಜನಪದರ ಹಾಡುಗಳಲ್ಲಿ ಶಿವರಾತ್ರಿ :  -ಡಾ.ಪ್ರಕಾಶ ಗ. ಖಾಡೆ,    ಬಾಗಲಕೋಟ ಮೊ. 9845500890    ಭಾರತೀಯ ಸಂಸ್ಕøತಿಯ ಬೇರುಗಳು ನಮ್ಮ ಜನಪದರ...